ನಿನಗೆ ಜೀವ ಇಲ್ಲದಿದ್ದರೇನು ನನ್ನಪ್ಪನ ಜೀವ ಉಳಿಸಿ ನನಗೆ ಅಣ್ಣನಾದೆ! ಆನಂದ್ ಮಹೀಂದ್ರಾ ವಿಡಿಯೋ ನೋಡಿ..
ಭಾರತದಲ್ಲಿ ಸದ್ಯ ದೇಶಿಯ ಗರಿಷ್ಠ ಗುಣಮಟ್ಟದ ಕಾರು ಬ್ರಾಂಡ್‌ಗಳೆಂದರೆ ಟಾಟಾ ಹಗೂ ಮಹೀಂದ್ರಾ. ಈ ಎರಡು ಬ್ರಾಂಡ್‌ಗಳ ಕಾರುಗಳು ಅಪಘಾತಕ್ಕೀಡಾಗಿ ಪ್ರಯಾಣಿಕರ ಜೀವ ಉಳಿಸಿದ ಹಲವು ಉದಾಹರಣೆಗಳಿವೆ. ಅಂತೆಯೇ ಇತ್ತೀಚೆಗೆ ಮಹೀಂದ್ರಾ XUV700 ಮೇಲೆ ಟ್ರಕ್ ಕೈಂಟೈನರ್ ಉರುಳಿ ಭೀಕರ ಅಪಘಾತವಾಗಿತ್ತು. ಆದ್ರೆ ಕಾರಿನಲ್ಲಿದ್ದವರು ಪ್ರಾಣಪಾಯದಿಂದ ಹೊರಬಂದಿದ್ದರು.
ಆದ್ರೆ ಬೃಹತ್ ಕಂಟೈನರ್ ಟ್ರಕ್ ಮಹೀಂದ್ರಾ XUV700 ಮೇಲೆ ಬಿದ್ದ ಪರಿಣಾಮ ಕಾರಿನ ಮೇಲ್ಛಾವಣಿ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಈ ಮಟ್ಟದ ಅಪಘಾತದಲ್ಲೂ ವಾಹನದಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿ ಹೊರಬಂದಿದ್ದರು. ಈ ಕುರಿತು ಕೆಲ ದಿನಗಳ ಹಿಂದೆ ಡ್ರೈವ್‌ಸ್ಪಾರ್ಕ್‌ನಲ್ಲೂ ಸುದ್ದಿ ಮಾಡಲಾಗಿತ್ತು. ಇದೀಗ ಇದೇ ಅಪಘಾತದಲ್ಲಿ ತನ್ನ ಅಪ್ಪನ ಜೀವ ಉಳಿಸಿದ ಕಾರಿಗೆ ಮಗುವೊಂದು ರಾಖಿ ಕಟ್ಟಿದ ವಿಡಿಯೋ ಸಖತ್ ವೈರಲ್ ಆಗಿದೆ.

ಈ ವಿಡಿಯೋವನ್ನು ನೋಡಿ ಎಂದು ನೆಟ್ಟಿಗರು ಆನಂದ್ ಮಹೀಂದ್ರಾ ಅವರನ್ನು ಟ್ಯಾಗ್ ಮಾಡಿದ್ದಾರೆ. ವಿಷಯಕ್ಕೆ ಬಂದರೆ ಸಣ್ಣ ಮಗು ಮಹೀಂದ್ರಾ XUV700 ನ ಗ್ರಿಲ್‌ಗೆ ರಾಖಿ ಕಟ್ಟುತ್ತಿದ್ದರೆ ಆಕೆಯ ತಂದೆ ಹಿಂದೆ ನಿಂತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅಪಘಾತದ ಸಮಯದಲ್ಲಿ XUV700 ನಲ್ಲಿ ಯಾರೂ ಇರಲಿಲ್ಲ. ಕಾರಿನ ಮಾಲೀಕ ಮಾತ್ರ ಇದ್ದು, ಹೆಚ್ಚಿನ ಗಾಯಗಳಿಲ್ಲದೆ ವಾಹನದಿಂದ ಹೊರಬಂದಿದ್ದರು.
ಕೆಲ ದಿನಗಳ ಹಿಂದೆ, ಸರ್ವಿಸ್ ಸೆಂಟರ್‌ಗೆ ಅಪಘಾತವಾಗಿದ್ದ ಮಹೀಂದ್ರಾ XUV700 ಅನ್ನು ಕೊಂಡೊಯ್ಯುವ ವಿಡಿಯೋ ಕೂಡ ವೈರಲ್ ಆಗಿತ್ತು. ಕಾರಿನ ಮೇಲ್ಛಾವಣಿಯು ಟ್ರಕ್‌ನ ಬೃಹತ್ ತೂಕವನ್ನು ತಡೆದು ಪ್ರಯಾಣಿಕರನ್ನು ಉಳಿಸಿದೆ ಎಂದು ವಿಡಿಯೋದಲ್ಲಿ ಹೇಳಲಾಗಿತ್ತು. ಇಷ್ಟಾದರೂ ಕಾರಿನ ಎಂಜಿನ್, ಸ್ಟೀರಿಂಗ್ ಮತ್ತು ಟ್ರಾನ್ಸಮಿಷನ್ ಚಾಲನೆಯಲ್ಲಿರುವುದು ಅಚ್ಚರಿಗೊಳಿಸಿದೆ. ಆದ್ರೂ ಕಾರಣಾಂತರಗಳಿಂದ ವಾಹನವನ್ನು ಟೋವ್ ಟ್ರಕ್‌ನಲ್ಲಿ ಶೋರೂಮ್ ತಲುಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮಹೀಂದ್ರಾ XUV700 5-ಸ್ಟಾರ್ ರೇಟಿಂಗ್: ಕ್ರ್ಯಾಶ್ ಟೆಸ್ಟ್‌ಗಳಲ್ಲಿನ ಅಸಾಧಾರಣ ಕಾರ್ಯಕ್ಷಮತೆಯಿಂದಾಗಿ ಮಹೀಂದ್ರಾದ ಹೊಸ ಎಸ್‌ಯುವಿ ಗ್ಲೋಬಲ್ ಎನ್‌ಸಿಎಪಿಯಿಂದ 'ಸೇಫರ್ ಚಾಯ್ಸ್' ಪ್ರಶಸ್ತಿಯನ್ನು ಪಡೆದುಕೊಂಡಿದೆ. ಮಹೀಂದ್ರಾ XUV700 ಸಂಪೂರ್ಣ 5 ರೇಟಿಂಗ್ ಗಳಿಸಿದ ಮಹೀಂದ್ರಾದ ಇತಿಹಾಸದಲ್ಲಿ ಎರಡನೇ ಕಾರು ಎನಿಸಿಕೊಂಡಿದೆ. ಮಹೀಂದ್ರಾ XUV700 ನ ಬಾಡಿಶೆಲ್ ಮತ್ತು ಫುಟ್‌ವೆಲ್ ಪ್ರದೇಶವನ್ನು ಸ್ಥಿರವೆಂದು ನಿರ್ಣಯಿಸಲಾಗಿದೆ.
ವಿವರವಾಗಿ ಹೇಳುವುದಾದ್ರೆ ಮಹೀಂದ್ರಾ XUV700 ಗ್ಲೋಬಲ್ NCAP ಪರೀಕ್ಷೆಯಲ್ಲಿ 17 ಅಂಕಗಳಲ್ಲಿ 16.03 ಅಂಕಗಳನ್ನು ಗಳಿಸಿದೆ. ಕ್ರಾಷ್ ಟೆಸ್ಟ್‌ನಲ್ಲಿ ಮುಂಭಾಗದ ಪ್ರಯಾಣಿಕರಿಗೆ ಸಂಭವನೀಯ ಗಾಯಗಳು ಕಡಿಮೆ ಎಂದು ಸೂಚಿಸಿದೆ. ಗಮನಾರ್ಹವಾಗಿ, ಮಕ್ಕಳ ಸುರಕ್ಷತಾ ಪರೀಕ್ಷೆಗಳಿಗೆ ಒಳಪಡಿಸಿದಾಗ, ಕಾರು ಯಾವುದೇ ಮೇಡ್-ಇನ್-ಇಂಡಿಯಾ ಕಾರಿಗೆ ಇದುವರೆಗೆ ನೀಡದ ಅತ್ಯಧಿಕ ಅಂಕಗಳನ್ನು ನೀಡಲಾಗಿದೆ.

ಅಪಘಾತ ಆಗಿದ್ದು ಹೇಗೆ?: ವರದಿಗಳ ಪ್ರಕಾರ, ಕಂಟೈನರ್ ಟ್ರಕ್ ಉದ್ದೇಶಪೂರ್ವಕವಾಗಿ ಲೋಡ್ ಅನ್ನು ಸಾಗಿಸುತ್ತಿತ್ತು. ಈ ವೇಳೆ ಮಾರ್ಗಮಧ್ಯೆ ಟ್ರಕ್ ಕೆಟ್ಟು ನಿಂತಿದ್ದರಿಂದ ರಸ್ತೆಬದಿಯಲ್ಲಿ ರಿಪೇರಿ ಮಾಡಲಾಗುತ್ತಿತ್ತು. ಹೈಡ್ರಾಲಿಕ್ ಜಾಕ್ ಅನ್ನು ಇಟ್ಟು ತುಸು ಮೇಲಕ್ಕೆ ಟ್ರಕ್ ಅನ್ನು ಎತ್ತಲಾಗಿತ್ತು ಎನ್ನಲಾಗಿದೆ. ಇದೇ ವೇಳೆ ಹೈಡ್ರಾಲಿಕ್ ಜಾಕ್ ಕೈಕೊಟ್ಟಿದ್ದು ಪಕ್ಕದಲ್ಲಿ ಹಾದುಹೋಗುತ್ತಿದ್ದ ಮಹೀಂದ್ರಾ XUV700 ಮೇಲೆ ಟ್ರಕ್ ಕಂಟೈನರ್ ಉರುಳಿದೆ.
XUV700 ಪಿಲ್ಲರ್‌ಗಳು ಸ್ವಲ್ಪ ಮಟ್ಟಕ್ಕೆ ಕುಸಿದು ಟ್ರಕ್‌ನ ತೂಕವನ್ನು ತಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದವು. ಹಾಗಾಗಿಯೇ ಕಾರಿನಲ್ಲಿದ್ದಾತ ಸುರಕ್ಷಿತವಾಗಿ ಹೊರಬಂದಿದ್ದಾನೆ. ಒಂದಂಥೂ ಸತ್ಯ ಅಪಘಾತದಲ್ಲಿ ಕಾರಿನ ಗುಣಮಟ್ಟವೇ ಈತನನ್ನು ರಕ್ಷಿಸಿದೆ ಎಂದು ಹೇಳಬಹುದು. ಏಕೆಂದರೆ ಸದ್ಯ ಭಾರತದಲ್ಲಿ ಮಹೀಂದ್ರಾ XUV700 ಎಸ್‌ಯುವಿ 5-ಸ್ಟಾರ್ ರೇಟಿಂಗ್ ಪಡೆದ ಭಾರತದ ಕೆಲವೇ ಸುರಕ್ಷಿತ ಕಾರುಗಲ್ಲಿ ಒಂದಾಗಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್‌ನಲ್ಲಿ ತಿಳಿಸಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications