Just In
- 5 min ago
ಮಿನಿ ಎಂಪಿವಿ ಕಾರು ಮಾರಾಟದಲ್ಲಿ ರೆನಾಲ್ಟ್ ಟ್ರೈಬರ್ ಹೊಸ ಮೈಲಿಗಲ್ಲು
- 1 hr ago
ಎಕ್ಸ್‌ಯುವಿ700 ಬಿಡುಗಡೆಯ ನಂತರ ತಾತ್ಕಾಲಿಕವಾಗಿ ಮಾರಾಟದಿಂದ ಸ್ಥಗಿತವಾಗಲಿದೆ ಎಕ್ಸ್‌ಯುವಿ500
- 2 hrs ago
ಭಾರತದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ ಬಹುನಿರೀಕ್ಷಿತ ರಾಯಲ್ ಎನ್ಫೀಲ್ಡ್ ಹಂಟರ್ ಬೈಕ್
- 3 hrs ago
ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮೇಲೆ ಒಟ್ಟು ರೂ.12 ಸಾವಿರ ಕೋಟಿ ಹೂಡಿಕೆ ಮಾಡಿದ ಮಹೀಂದ್ರಾ
Don't Miss!
- Finance
ಏಪ್ರಿಲ್ 13ರ ಬಿಟ್ಕಾಯಿನ್ ರೇಟ್ ಎಷ್ಟಿದೆ?
- News
ಹೆಲಿ ಟೂರಿಸಂ; 'ಸೇವ್ ಮೈಸೂರು' ಅಭಿಯಾನಕ್ಕೆ ಭಾರೀ ಬೆಂಬಲ
- Movies
ಸಾಮಾಜಿಕ ಜಾಲತಾಣಕ್ಕೆ ಅದ್ಧೂರಿಯಾಗಿ ಎಂಟ್ರಿ ಕೊಟ್ಟ ಕನಸುಗಾರ
- Sports
ಚೇತನ್ ಸಕಾರಿಯಾ ಕುಟುಂಬದ ದುರಂತ ಕತೆ ಬಿಚ್ಚಿಟ್ಟ ಸೆಹ್ವಾಗ್
- Lifestyle
ಮಂಗಳವಾರದ ದಿನ ಭವಿಷ್ಯ: ಯುಗಾದಿಯಂದು ಹೇಗಿದೆ ನಿಮ್ಮ ರಾಶಿಫಲ
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಂದೆ ತಾಯಿಯ ವಿವಾಹ ವಾರ್ಷಿಕೋತ್ಸವಕ್ಕೆ ಸರ್ಪ್ರೈಸ್ ಗಿಫ್ಟ್ ನೀಡಿದ ಮಕ್ಕಳು
ಭಾರತದಲ್ಲಿ ವಾಹನಗಳ ಮೇಲೆ ಸ್ಟಿಕ್ಕರ್ ಅಂಟಿಸುವುದು ಸಾಮಾನ್ಯ ಸಂಗತಿ. ಬಹುತೇಕ ವಾಹನ ಮಾಲೀಕರು ತಮ್ಮ ವಾಹನಗಳ ಮೇಲೆ ತಮ್ಮ ನೆಚ್ಚಿನ ವ್ಯಕ್ತಿಯ ಅಥವಾ ಇಷ್ಟದ ದೇವರುಗಳ ಫೋಟೋಗಳನ್ನು ಅಂಟಿಸುತ್ತಾರೆ. ಇನ್ನೂ ಕೆಲವರು ತಮ್ಮ ಜಾತಿ ಸೂಚಕ ಸ್ಟಿಕ್ಕರ್'ಗಳನ್ನು ಅಂಟಿಸಿರುತ್ತಾರೆ.

ಕೆಲ ಯುವಕರು ಈ ವಾಹನವು ನನ್ನ ತಂದೆಯ ಉಡುಗೊರೆ, ನನ್ನ ತಾಯಿಯ ಉಡುಗೊರೆ, ಅಜ್ಜಿಯ ಉಡುಗೊರೆ ಎಂಬ ಸ್ಟಿಕ್ಕರ್'ಗಳನ್ನು ಅಂಟಿಸಿರುತ್ತಾರೆ. ಆಗಾಗ ಮಕ್ಕಳೂ ಸಹ ತಮ್ಮ ತಂದೆ, ತಾಯಿಯರಿಗೆ ವಾಹನಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಈಗ ಮಗ ಹಾಗೂ ಮಗಳು ಸೇರಿಕೊಂಡು ತಮ್ಮ ತಂದೆ, ತಾಯಿಯ 25ನೇ ವಿವಾಹ ವಾರ್ಷಿಕೋತ್ಸವಕ್ಕೆ ಕಿಯಾ ಸೊನೆಟ್ ಕಾಂಪ್ಯಾಕ್ಟ್ ಎಸ್‌ಯುವಿಯನ್ನು ಉಡುಗೊರೆಯಾಗಿ ನೀಡಿದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಅಕ್ಕ ಹಾಗೂ ತಮ್ಮ ಸೇರಿ ತಮ್ಮ ತಂದೆ ತಾಯಿಗೆ ಉಡುಗೊರೆ ನೀಡುತ್ತಿರುವ ವೀಡಿಯೊವನ್ನು ಠಾಕೂರ್ ಮೋಹನ್ ದೀಪ್ ಸಿಂಗ್ ಎಂಬ ಯೂಟ್ಯೂಬ್ ಚಾನೆಲ್'ನಲ್ಲಿ ಅಪ್ ಲೋಡ್ ಮಾಡಲಾಗಿದೆ.
MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಈ ವೀಡಿಯೊದಲ್ಲಿ ಮಕ್ಕಳು ತಮ್ಮ ತಂದೆ ತಾಯಿಯನ್ನು ಹೊರ ಕರೆದೊಯ್ದು ಸರ್ಪ್ರೈಸ್ ಗಿಫ್ಟ್ ನೀಡುವುದನ್ನು ಕಾಣಬಹುದು. ಈ ವೇಳೆ ಅವರ ಸಂಬಂಧಿಕರೂ ಸಹ ಅಲ್ಲಿ ನೆರೆದಿದ್ದರು. ಈ ವೀಡಿಯೊದಲ್ಲಿ ಮಕ್ಕಳು ತಾಯಿ ಹಾಗೂ ತಂದೆ ಇಬ್ಬರನ್ನೂ ಕಣ್ಣುಮುಚ್ಚಿ ಶೋರೂಂಗೆ ಕರೆದೊಯ್ಯುತ್ತಿರುವುದನ್ನು ಕಾಣಬಹುದು.

ನಂತರ ಅವರ ಕಣ್ಣು ತೆರೆದು ಕಾರ್ ಅನ್ನು ತೋರಿಸುವ ಮಕ್ಕಳು ತಮ್ಮ ತಾಯಿ, ತಂದೆಯನ್ನು ಆಶ್ಚರ್ಯಚಕಿತರಾಗಿಸುತ್ತಾರೆ. ಈ ಎಲ್ಲಾ ಕ್ಷಣಗಳನ್ನು ಅವರ ಸ್ನೇಹಿತ ರೆಕಾರ್ಡ್ ಮಾಡಿ ಈ ಸಂತಸದ ಕ್ಷಣಗಳನ್ನು ಸ್ಮರಣೀಯವಾಗಿಸಿದ್ದಾನೆ. ಚಿತ್ರಕೃಪೆ: ಠಾಕೂರ್ ಮೋಹನ್ ದೀಪ್ ಸಿಂಗ್
MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅಂದ ಹಾಗೆ ಕಿಯಾ ಸೊನೆಟ್ ಭಾರತದಲ್ಲಿ ವೇಗವಾಗಿ ಮಾರಾಟವಾಗುತ್ತಿರುವ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ಒಂದಾಗಿದೆ. ಈ ಎಸ್‌ಯುವಿಯು ದೇಶಿಯ ಮಾರುಕಟ್ಟೆಯಲ್ಲಿ ಹ್ಯುಂಡೈ ವೆನ್ಯೂ, ಮಾರುತಿ ವಿಟಾರಾ ಬ್ರೆಝಾ, ಟಾಟಾ ನೆಕ್ಸಾನ್, ಮಹೀಂದ್ರಾ ಎಕ್ಸ್‌ಯುವಿ 300, ಫೋರ್ಡ್ ಇಕೋಸ್ಪೋರ್ಟ್, ನಿಸ್ಸಾನ್ ಮ್ಯಾಗ್ನೈಟ್ ಹಾಗೂ ರೆನಾಲ್ಟ್ ಕಿಗರ್ ಎಸ್‌ಯುವಿಗಳಿಗೆ ಪೈಪೋಟಿ ನೀಡುತ್ತದೆ.

ಮಕ್ಕಳು ತಮ್ಮ ಹೆತ್ತವರಿಗಾಗಿ ಸೊನೆಟ್ ಎಸ್‌ಯುವಿಯ ಜಿಟಿ ಲೈನ್ ಮಾದರಿಯನ್ನು ಖರೀದಿಸಿದ್ದಾರೆ. ಈ ಮಾದರಿಯು ಸೊನೆಟ್ ಎಸ್‌ಯುವಿಯ ಟಾಪ್ ಎಂಡ್ ಮಾದರಿಯಾಗಿದೆ. ಈ ಮಾದರಿಯು ಐಷಾರಾಮಿ ಫೀಚರ್'ಗಳ ಜೊತೆಗೆ ಸುರಕ್ಷತೆಗಾಗಿಯೂ ಹೆಚ್ಚಿನ ಫೀಚರ್'ಗಳನ್ನು ಹೊಂದಿದೆ.
MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಈ ಎಸ್‌ಯುವಿಯಲ್ಲಿ ವೆಂಟೆಡ್ ಸೀಟ್, ಎಲೆಕ್ಟ್ರಿಕ್ ಸನ್‌ರೂಫ್, ಎಲ್‌ಇಡಿ ಹೆಡ್‌ಲೈಟ್, 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ, ಬೋಸ್ ಸ್ಪೀಕರ್ ಸಿಸ್ಟಂ, ರೇರ್ ಎಸಿ ವೆಂಟ್ಸ್, ಏರ್ ಪ್ಯೂರಿಫೈಯರ್, ಆಂಬಿಯೆಂಟ್ ಲೈಟ್ ಸೇರಿದಂತೆ ಹಲವಾರು ಫೀಚರ್'ಗಳನ್ನು ನೀಡಲಾಗಿದೆ.
ಕಿಯಾ ಸೊನೆಟ್ ಜಿಟಿ ಲೈನ್ ಮಾದರಿಯನ್ನು 1.0-ಲೀಟರ್, ಮೂರು ಸಿಲಿಂಡರ್ ಟರ್ಬೊ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಟರ್ಬೊ ಡೀಸೆಲ್ ಎಂಜಿನ್ಆಯ್ಕೆಗಳೊಂದಿಗೆ ಮಾರಾಟ ಮಾಡಲಾಗುತ್ತದೆ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ವೀಡಿಯೊದಲ್ಲಿರುವ ಮಕ್ಕಳು ತಮ್ಮ ತಂದೆ, ತಾಯಿಗೆ ಉಡುಗೊರೆ ನೀಡಿದ ಕಾರು ಯಾವ ಎಂಜಿನ್ ಹೊಂದಿದೆ ಎಂಬುದು ತಿಳಿದು ಬಂದಿಲ್ಲ. ಈ ಕಾರಿನ ಬೆಲೆ ರೂ.6.79 ಲಕ್ಷಗಳಿಂದ ರೂ.11.99 ಲಕ್ಷಗಳಾಗಿದೆ.