ಕಾರುಗಳ ಮೇಲಿಂದ ಬಸ್ ಸಂಚಾರ ಹೇಗೆ, ಎತ್ತ?

By Nagaraja

ನಾವು ಈ ಮೊದಲೇ ವರದಿ ಮಾಡಿರುವಂತೆಯೇ ಚೀನಾದಲ್ಲಿ ಪರ್ಯಾಯ ಸಂಚಾರ ವ್ಯವಸ್ಥೆಯನ್ನು ಹುಡುಕುತ್ತಿರುವ ಬೀಜಿಂಗ್ ತಳಹದಿಯ ಟ್ರಾನ್ಸಿಸ್ಟ್ ಸಂಸ್ಥೆಯು ಕಾರುಗಳ ಮೇಲಿಂದಾಗಿ ಸಾಗುವ ಮೊತ್ತ ಮೊದಲ ಬಸ್ಸನ್ನು ನಿರ್ಮಿಸಿದೆ.

ಬೀಜಿಂಗ್ ಇಂಟರ್ ನ್ಯಾಷನಲ್ ಹೈ-ಟೆಕ್ ಎಕ್ಸ್ ಪೋದಲ್ಲಿ ಟ್ರಾನ್ಸಿಸ್ಟ್ ಎಲೇವೇಟಡ್ ಬಸ್ (ಟಿಇಬಿ) ಮೊತ್ತ ಮೊದಲ ಬಾರಿಗೆ ಪ್ರದರ್ಶನ ಕಂಡಿತ್ತು. ಈ ಮಹತ್ತರ ಯೋಜನೆಯಿಂದ ಇನ್ನು ಮುಂದೆ ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಳ್ಳುವ ಯಾವುದೇ ಭಯ ಕಾಡದು. ಅಲ್ಲದೆ ವಾಯು ಮಾಲಿನ್ಯ ಕಡಿಮೆ ಮಾಡುವುದರೊಂದಿಗೆ ಪರಿಸರ ಸ್ನೇಹಿ ಎನಿಸಿಕೊಳ್ಳಲಿದೆ.

ಕಾರುಗಳ ಮೇಲಿಂದ ಬಸ್ ಸಂಚಾರ ಹೇಗೆ, ಎತ್ತ?

22 ಮೀಟರ್ ಉದ್ದ, 7.8 ಮೀಟರ್ ಅಗಲ ಮತ್ತು 4.8 ಮೀಟರ್ ಎತ್ತರವನ್ನು ಹೊಂದಿರುವ ಟ್ರಾನ್ಸಿಫ್ಟ್ ಎಲೇವೇಟಡ್ ಬಸ್, ಒಂದೇ ಕಾಲದಲ್ಲಿ 300ರಷ್ಟು ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಪಡೆದಿದೆ.

ಕಾರುಗಳ ಮೇಲಿಂದ ಬಸ್ ಸಂಚಾರ ಹೇಗೆ, ಎತ್ತ?

ಇನ್ನು ಭವಿಷ್ಯದ ಆವೃತ್ತಿಗಳು 1400 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿರಲಿದ್ದು, ಗಂಟೆಗೆ 60 ಕೀ.ಮೀ. ವೇಗದಲ್ಲಿ ಸಂಚರಿಸಲಿದೆ.

ಕಾರುಗಳ ಮೇಲಿಂದ ಬಸ್ ಸಂಚಾರ ಹೇಗೆ, ಎತ್ತ?

ರಸ್ತೆಯಲ್ಲಿ ನಿರ್ಮಿಸಲಾಗಿರುವ ವಿಶೇಷ ಟ್ರ್ಯಾಕ್ ಗಳ ಮೇಲೆ ಟ್ರಾನ್ಸಿಸ್ಟ್ ಬಸ್ಸುಗಳು ಸಂಚರಿಸಲಿದ್ದು, ಇದರ ಕೆಳಗಡಿಯಿಂದಾಗಿ ಕಾರುಗಳು ಸುಗಮವಾಗಿ ಸಂಚರಿಸಲಿದೆ.

ಕಾರುಗಳ ಮೇಲಿಂದ ಬಸ್ ಸಂಚಾರ ಹೇಗೆ, ಎತ್ತ?

ಉತ್ತರ ಚೀನಾದ ಹೆಬೆ ಪ್ರಾಂತ್ಯದ ಕಿನ್ ಹುವಾಂಗ್ದಾವೆ ನಗರದಲ್ಲಿ ಟ್ರಾನ್ಸಿಸ್ಟ್ ಬಸ್ಸುಗಳ ಪರೀಕ್ಷಾರ್ಥ ಸಂಚಾರ ಪರೀಕ್ಷೆಯು ಇದೇ ಸಾಲಿನ ದ್ವಿತಿಯಾರ್ಧದಲ್ಲಿ ನೆರವೇರಲಿದೆ. ಇಲ್ಲಿ ಬ್ರೇಕಿಂಗ್ ನಿಖರತೆ, ಸಾಮರ್ಥ್ ಮುಂತಾದ ಪರೀಕ್ಷೆಗಳು ನೆರವೇರಲಿದೆ ಎಂದು ಟೆಬ್ ಟೆಕ್ ಸಂಸ್ಥೆಯು ತಿಳಿಸಿದೆ.

ಕಾರುಗಳ ಮೇಲಿಂದ ಬಸ್ ಸಂಚಾರ ಹೇಗೆ, ಎತ್ತ?

ಆಗಲೇ ಇದೇ ಮಾದರಿಯ ಟ್ರಾನ್ಸಿಸ್ಟ್ ಇಲೇವೇಟಡ್ ಬಸ್ ವ್ಯವಸ್ಥೆಯನ್ನು ತಮ್ಮ ದೇಶದಲ್ಲೂ ರೂಪಿಸಲು ನಮ್ಮ ಭಾರತ ಸೇರಿದಂತೆ ಬ್ರೆಜಿಲ್, ಫ್ರಾನ್ಸ್, ಇಂಡೋನೇಷ್ಯಾ ಸರಕಾರಗಳು ಉತ್ಸುಕತೆಯನ್ನು ತೋರಿದೆ.

ಕಾರುಗಳ ಮೇಲಿಂದ ಬಸ್ ಸಂಚಾರ ಹೇಗೆ, ಎತ್ತ?

ಸಾಮಾನ್ಯ ರಸ್ತೆ ಪರಿಸ್ಥಿತಿಯಲ್ಲಿ ಬಸ್ಸುಗಳಿಂದಾಗಿ ಭಾರಿ ವಾಹನ ದಟ್ಟಣೆ ಸೃಷ್ಟಿಯಾಗುತ್ತದೆ. ಆದರೆ ಇಂತಹದೊಂದು ಯೋಜನೆ ನನಸಾಗುವುದರೊಂದಿಗೆ ಬಸ್ಸಿನಡಿಯಿಂದಲೇ ಕಾರುಗಳು ಸಂಚರಿಸಲಿದೆ.

ಕಾರುಗಳ ಮೇಲಿಂದ ಬಸ್ ಸಂಚಾರ ಹೇಗೆ, ಎತ್ತ?

ಇತರೆ ಸಬ್ ವೇ ಯೋಜನೆಗಳಿಗೆ ಹೋಲಿಸಿದಾಗ ಟ್ರಾನ್ಸಿಸ್ಟ್ ಇಲೇವೇಟಡ್ ಬಸ್ಸುಗಳ ನಿರ್ಮಾಣ ವೆಚ್ಚವು ಬಹಳ ಕಡಿಮೆಯಾಗಿದೆ ಎಂಬುದನ್ನು ಸಂಸ್ಥೆಯು ತಿಳಿಸಿದೆ. ಅಲ್ಲದೆ ಒಂದು ವರ್ಷದ ಅವಧಿಯಲ್ಲಿ ಯೋಜನೆ ಪೂರ್ಣಗೊಳಿಸಲಾಗುವುದು ಎಂಬ ಭರವಸೆಯನ್ನಿತ್ತಿದೆ.

ಕಾರುಗಳ ಮೇಲಿಂದ ಬಸ್ ಸಂಚಾರ ಹೇಗೆ, ಎತ್ತ?

ಚೀನಾ ಸಾರಿಗೆ ವ್ಯವಸ್ಥೆಯಲ್ಲಿ ನೂತನ ಲ್ಯಾಂಡ್ ಏರ್ ಬಸ್ ಕಾನ್ಸೆಪ್ಟ್ ಹೊಸ ಮೈಲುಗಲ್ಲನ್ನು ಬರೆಯಲಿದೆ. ಇದು ರಸ್ತೆಯಿಂದ ಎರಡು ಮೀಟರ್ ಗಳಷ್ಟು ಅಂತರವನ್ನು ಕಾಪಾಡಿಕೊಳ್ಳಲಿದೆ.

ಕಾರುಗಳ ಮೇಲಿಂದ ಬಸ್ ಸಂಚಾರ ಹೇಗೆ, ಎತ್ತ?

ಲ್ಯಾಂಡ್ ಏರ್ ಬಸ್ ವ್ಯವಸ್ಥೆಯು 40ರಷ್ಟು ಸಾಂಪ್ರದಾಯಿಕ ಬಸ್ಸುಗಳಿಗೆ ಬದಲಿ ವ್ಯವಸ್ಥೆಯಾಗಿರಲಿದೆ. ಇವೆಲ್ಲದರ ಮುಖಾಂತರ 800 ಟನ್ ಗಳಷ್ಟು ಇಂಧನ ಉಳಿತಾಯದೊಂದಿಗೆ ವರ್ಷಂಪ್ರತಿ 2,480 ಟನ್ ಕಾರ್ಬನ್ ಎಮಿಷನ್ ತಡೆಗಟ್ಟಬಹುದಾಗಿದೆ.

ವಿಡಿಯೋ ವೀಕ್ಷಿಸಿ


More from DriveSpark

Article Published On: Wednesday, August 3, 2016, 13:12 [IST]
English summary
China Builds World's First Transit Elevated Bus — Photos & Video
Read more on ಚೀನಾ china
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+