ಚೀನಾ ಮಹಾ ಸ್ಪೋಟ; ನೂರಾರು ಕಾರುಗಳು ಬೆಂಕಿಗಾಹುತಿ

By Nagaraja

ನೆರೆಯ ಚೀನಾದ ಕೈಗಾರಿಕಾ ಬಂದರು ಪ್ರದೇಶದ ಗೋದಾಮಿನಲ್ಲಿ ಸಂಭವಿಸಿರುವ ಮಹಾ ಸ್ಫೋಟದಲ್ಲಿ ಭಾರಿ ಪ್ರಮಾಣದ ಸಾವು-ನೋವಿನ ಪ್ರಕರಣ ಬೆಳಕಿಗೆ ಬಂದಿದೆ. ಬಲ್ಲ ಮೂಲಗಳ ಪ್ರಕಾರ ಭಾರಿ ದುರಂತದಲ್ಲಿ ಈಗಾಗಲೇ 44 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಉತ್ತರ ಚೀನಾದ ತೈನ್‌ಜಿನ್ (Tianjin) ಪ್ರದೇಶದಲ್ಲಿ ಬುಧವಾರ ರಾತ್ರಿ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ ನೂರಾರು ಕಾರುಗಳು ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಈ ಬಗೆಗಿನ ಎಕ್ಸ್ ಕ್ಸೂಸಿವ್ ಚಿತ್ರಗಳನ್ನು ಓದುಗರಿಗಾಗಿ ನಮ್ಮ ಚಿತ್ರಪುಟದಲ್ಲಿ ಹಂಚಿಕೊಳ್ಳಲಾಗಿದೆ.

ಚೀನಾ ಮಹಾ ಸ್ಪೋಟ; ನೂರಾರು ಕಾರುಗಳು ಬೆಂಕಿಗಾಹುತಿ

ಪ್ರತ್ಯಕ್ಷದರ್ಶಿಯ ಪ್ರಕಾರ ಸರಣಿ ಬಾಂಬ್ ಸ್ಫೋಟದ ತರಹನೇ ಬೆನ್ನು ಬೆನ್ನಿಗೆ ಸ್ಪೋಟದ ಸದ್ದು ಕೇಳಿಸತೊಡಗಿತ್ತು. ಎರಡನೇ ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಹತ್ತಿರದಲ್ಲಿದ್ದ 16 ಮಹಡಿಯ ಕಟ್ಟಡವು ಗಡಗಡ ಅಲುಗಾಡಲಾರಂಭಿಸಿತ್ತು ಎಂದು ಸ್ಪೋಟದ ಭೀಕರತೆಯನ್ನು ವರ್ಣಿಸಿದ್ದಾರೆ.

ಚೀನಾ ಮಹಾ ಸ್ಪೋಟ; ನೂರಾರು ಕಾರುಗಳು ಬೆಂಕಿಗಾಹುತಿ

ಇನ್ನೊರ್ವನ ಪ್ರಕಾರ ನಾಲ್ಕು ಕೀಲೋಮೀಟರ್ ದೂರದ ವರೆಗೂ ಸ್ಪೋಟದ ಸದ್ದು ಕೇಳಿಸಬಹುದಿತ್ತು. ಆರಂಭದಲ್ಲಿ ನಾವಿದನ್ನು ಭೂಕಂಪ ಎಂದು ಭಾವಿಸಿದ್ದೇವೆ. ನಾನು ಹಾಗೂ ನನ್ನ ಕುಟಂಬ ಸಂಪೂರ್ಣ ಭಯಭೀತರಾಗಿದ್ದೆವು ಎಂದಿದ್ದಾರೆ.

ಚೀನಾ ಮಹಾ ಸ್ಪೋಟ; ನೂರಾರು ಕಾರುಗಳು ಬೆಂಕಿಗಾಹುತಿ

ಮೊದಲ ಸ್ಪೋಟ ಬಂದರಿನ ಕೈಗಾರಿಕಾ ಪ್ರದೇಶದ ಲೋಜಿಸ್ಟಿಕ್ ಸಂಸ್ಥೆಯಲ್ಲಿ ಸ್ಪೋಟಿಸಿತ್ತು. ಇಲ್ಲಿನ ಗೋದಾಮಿನಲ್ಲಿ ಅತ್ಯಂತ ಅಪಾಯಕಾರಿ ರಾಸಾಯನಿಕ ಪದಾರ್ಥಗಳನ್ನು ಶೇಖರಣೆ ಮಾಡಿಡಲಾಗಿತ್ತು ಎಂದು ಕ್ಸಿನ್ಹುವಾ ಪತ್ರಿಕೆ ವರದಿ ಮಾಡಿದೆ.

ಚೀನಾ ಮಹಾ ಸ್ಪೋಟ; ನೂರಾರು ಕಾರುಗಳು ಬೆಂಕಿಗಾಹುತಿ

ತಕ್ಷಣ ಸ್ಥಳಕ್ಕೆ ಅಗ್ನಿ ಶಾಮಕ ದಳ ಆಗಮಿಸಿದರೂ ಆಗಲೇ ಅಗ್ನಿ ಕುಂಡಗಳು ವಾತಾವರಣವನ್ನು ಆವರಿಸಿತ್ತು. ಆಗ್ನಿಯ ಬೆನ್ನಲ್ಲೇ ಹೊಗೆಯು ಆಕಾಶದಲ್ಲಿ ರೌದ್ರ ನರ್ತನವನ್ನು ಆರಂಭಿಸಿತ್ತು.

ಚೀನಾ ಮಹಾ ಸ್ಪೋಟ; ನೂರಾರು ಕಾರುಗಳು ಬೆಂಕಿಗಾಹುತಿ

ಗಾಯಗೊಂಡವರ ಪೈಕಿ 66 ಮಂದಿಯ ಪರಿಸ್ಥಿತಿ ತೀವ್ರ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಪ್ರಸ್ತುತ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.

ಚೀನಾ ಮಹಾ ಸ್ಪೋಟ; ನೂರಾರು ಕಾರುಗಳು ಬೆಂಕಿಗಾಹುತಿ

ಘಟನೆಯಲ್ಲಿ ಬಂದರು ಹೊರಗಡೆ ನಿಲುಗಡೆಗೊಳಿಸಲಾಗಿದ್ದ 100ಕ್ಕೂ ಹೆಚ್ಚು ಕಾರುಗಳು ಭಸ್ಮವಾಗಿದೆ. ಅಲ್ಲದೆ ರಸ್ತೆ ಸಂಚಾರವು ಸಂಪೂರ್ಣವಾಗಿ ಮೊಟಕುಗೊಂಡಿದೆ.

ಚೀನಾ ಮಹಾ ಸ್ಪೋಟ; ನೂರಾರು ಕಾರುಗಳು ಬೆಂಕಿಗಾಹುತಿ

ಚೀನಾ ಮಹಾ ಸ್ಪೋಟದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಸುಟ್ಟು ಕರಕಲಾಗಿರುವ ಕಾರುಗಳ ದೃಶ್ಯಗಳು ಸ್ಪೋಟದ ಭೀಕರತೆಯ ನೈಜ ದರ್ಶನಕ್ಕೆ ಹೇತುವಾಗಿದೆ.

ಚೀನಾ ಮಹಾ ಸ್ಪೋಟ; ನೂರಾರು ಕಾರುಗಳು ಬೆಂಕಿಗಾಹುತಿ

ಒಟ್ಟಾರೆಯಾಗಿ ಅಗ್ನಿ ಶಾಮಕದಳದ ನಿರಂತರ ಪ್ರಯತ್ನದಿಂದಾಗಿ ಸಾವು-ಸೋವುಗಳ ಸಂಖ್ಯೆ ಕಡಿಮೆ ಮಾಡಲು ಸಾಧ್ಯವಾಗಿದೆ ಎಂಬುದು ತಿಳಿದು ಬಂದಿದೆ.


More from DriveSpark

Article Published On: Thursday, August 13, 2015, 16:00 [IST]
English summary
China Explosion: More than hundreds of cars in the port area were destroyed
Read more on ಚೀನಾ china
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+