ಪಾಕಿಸ್ತಾನದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತವೆ ಚೀನಾ ನಿರ್ಮಿತ ಡೂಪ್ಲಿಕೇಟ್ ಕಾರುಗಳು

ಚೀನಾ ಕಂಪನಿಗಳು ಯಾವುದೇ ಉತ್ಪನ್ನಗಳನ್ನು ಡೂಪ್ಲಿಕೇಟ್ ಮಾಡುವುದರಲ್ಲಿ ಸದಾ ಮುಂದು. ಚೀನಾ ಕಂಪನಿಗಳು ಇತರ ಜನಪ್ರಿಯ ಕಂಪನಿಗಳ ಕಾರು ಹಾಗೂ ಬೈಕುಗಳನ್ನು ಸಹ ಡೂಪ್ಲಿಕೇಟ್ ಮಾಡುತ್ತವೆ.

ಪಾಕಿಸ್ತಾನದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತವೆ ಚೀನಾ ನಿರ್ಮಿತ ಡೂಪ್ಲಿಕೇಟ್ ಕಾರುಗಳು

ನಮ್ಮ ದೇಶದಲ್ಲಿ ಚೀನಾ ವಾಹನಗಳನ್ನು ಮಾರಾಟ ಮಾಡುವುದಿಲ್ಲ. ಆದರೆ ಪಾಕಿಸ್ತಾನದಲ್ಲಿ ಚೀನಾ ಕಂಪನಿಗಳು ತಯಾರಿಸುವ ಡೂಪ್ಲಿಕೇಟ್ ವಾಹನಗಳನ್ನು ಬಳಸಲಾಗುತ್ತದೆ. ಥೇಟ್ ಅಸಲಿ ಕಾರುಗಳಂತೆಯೇ ಕಾಣುವ ಈ ಡೂಪ್ಲಿಕೇಟ್ ಕಾರುಗಳು ಅಸಲಿ ಕಾರಿಗಿಂತ ಕಡಿಮೆ ಬೆಲೆಯನ್ನು ಹೊಂದಿರುತ್ತವೆ. ಚೀನಾದಲ್ಲಿ ತಯಾರಾಗಿ ಪಾಕಿಸ್ತಾನದಲ್ಲಿ ಮಾರಾಟವಾಗುವ ಕಾರುಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಪಾಕಿಸ್ತಾನದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತವೆ ಚೀನಾ ನಿರ್ಮಿತ ಡೂಪ್ಲಿಕೇಟ್ ಕಾರುಗಳು

ಬಿ‌ಎಐ‌ಸಿ ಎಂಬ ಚೀನಾ ಕಂಪನಿಯು ದೊಡ್ಡ ದೊಡ್ಡ ವಾಹನ ತಯಾರಕ ಕಂಪನಿಗಳ ಕಾರುಗಳನ್ನು ಡೂಪ್ಲಿಕೇಟ್ ಮಾಡುವುದಕ್ಕೆ ಹೆಸರುವಾಸಿಯಾಗಿದೆ. ಈ ಕಂಪನಿಯು ಬಿಜೆ 40 ಪ್ಲಸ್ ಎಂಬ ಹೆಸರಿನ ಎಸ್‌ಯು‌ವಿಯನ್ನು ಮಾರಾಟ ಮಾಡುತ್ತದೆ.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಪಾಕಿಸ್ತಾನದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತವೆ ಚೀನಾ ನಿರ್ಮಿತ ಡೂಪ್ಲಿಕೇಟ್ ಕಾರುಗಳು

ಈ ಎಸ್‌ಯು‌ವಿಯು ಥಾರ್ ಹಾಗೂ ಬೊಲೆರೊ ಕಾರುಗಳ ಹೈಬ್ರಿಡ್ ಆವೃತ್ತಿಯಂತೆ ಕಾಣುತ್ತದೆ. ಈ ಎಸ್‌ಯು‌ವಿಯಲ್ಲಿ ಮಹೀಂದ್ರಾ ಕಂಪನಿಯ ಬಿಡಿಭಾಗಗಳನ್ನುಮಾತ್ರವಲ್ಲದೆ ಬೇರೆ ಕಂಪನಿಯ ವಾಹನಗಳಲ್ಲಿರುವಂತಹ ಬಿಡಿ ಭಾಗಗಳನ್ನು ಬಳಸಲಾಗಿದೆ.

ಪಾಕಿಸ್ತಾನದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತವೆ ಚೀನಾ ನಿರ್ಮಿತ ಡೂಪ್ಲಿಕೇಟ್ ಕಾರುಗಳು

ಬಿಜೆ 40 ಪ್ಲಸ್ ಎಸ್‌ಯು‌ವಿಯಲ್ಲಿ ಜೀಪ್‌ನಲ್ಲಿರುವಂತಹ ಗ್ರಿಲ್ ಅಳವಡಿಸಲಾಗಿದೆ. ಈ ಎಸ್‌ಯು‌ವಿಯಲ್ಲಿ ಹಳೆಯ ತಲೆಮಾರಿನ ಲ್ಯಾಂಡ್ ರೋವರ್ ಎಸ್‌ಯು‌ವಿಯಲ್ಲಿರುವಂತಹ ಹೆಡ್‌ಲ್ಯಾಂಪ್ ವಿನ್ಯಾಸವನ್ನು ನೀಡಲಾಗಿದೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಪಾಕಿಸ್ತಾನದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತವೆ ಚೀನಾ ನಿರ್ಮಿತ ಡೂಪ್ಲಿಕೇಟ್ ಕಾರುಗಳು

ಸೈಡ್ ಪ್ರೊಫೈಲ್‌ನಲ್ಲಿ ಜೀಪ್ ವ್ರಾಂಗ್ಲರ್‌ನಲ್ಲಿರುವಂತಹ ಅಲಾಯ್ ವ್ಹೀಲ್, ಫ್ಲೇರ್ಡ್ ವ್ಹೀಲ್ ಆರ್ಕ್'ಗಳನ್ನು ಅಳವಡಿಸಲಾಗಿದೆ. ಇನ್ನು ಹಳೆಯ ಮಹೀಂದ್ರಾ ಥಾರ್‌ನಲ್ಲಿರುವಂತಹ ಕ್ರೋಮ್ ಬಣ್ಣದ ರೇರ್ ವೀವ್ ಮಿರರ್ ನೀಡಲಾಗಿದೆ.

ಪಾಕಿಸ್ತಾನದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತವೆ ಚೀನಾ ನಿರ್ಮಿತ ಡೂಪ್ಲಿಕೇಟ್ ಕಾರುಗಳು

ಈ ಎಸ್‌ಯು‌ವಿಯ ಹಿಂಭಾಗದಲ್ಲಿರುವ ಟೇಲ್ ಲ್ಯಾಂಪ್‌, ಟೇಲ್‌ಗೇಟ್ ವಿನ್ಯಾಸ, ಟೇಲ್‌ಗೇಟ್ ಮೌಂಟೆಡ್ ಸ್ಪೇರ್ ವ್ಹೀಲ್ ವ್ರಾಂಗ್ಲರ್‌ಗೆ ಹೋಲುತ್ತವೆ. ಬಿ‌ಎಐ‌ಸಿ ಕಂಪನಿಯು ಬಿಜೆ 40 ಪ್ಲಸ್ ಎಸ್‌ಯು‌ವಿಯನ್ನು ಆಫ್ ರೋಡ್ ಎಸ್‌ಯು‌ವಿಯಾಗಿ ಮಾರಾಟ ಮಾಡುತ್ತದೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಪಾಕಿಸ್ತಾನದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತವೆ ಚೀನಾ ನಿರ್ಮಿತ ಡೂಪ್ಲಿಕೇಟ್ ಕಾರುಗಳು

ಬಿಜೆ 40 ಪ್ಲಸ್ ಎಸ್‌ಯು‌ವಿಯಲ್ಲಿ ಹಲವಾರು ಫೀಚರ್'ಗಳಿವೆ. ಈ ಎಸ್‌ಯು‌ವಿ ಎಲ್‌ಸಿ‌ಡಿ 12.3 ಇಂಚಿನ ಡ್ರೈವರ್ ಡಿಸ್ ಪ್ಲೇ ಹೊಂದಿದೆ. ಇದು ಚಾಲಕನಿಗೆಸಂಬಂಧಿಸಿದ ವಿವಿಧ ಮಾಹಿತಿಗಳನ್ನು ಒದಗಿಸುತ್ತದೆ.

ಪಾಕಿಸ್ತಾನದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತವೆ ಚೀನಾ ನಿರ್ಮಿತ ಡೂಪ್ಲಿಕೇಟ್ ಕಾರುಗಳು

ಈ ಎಸ್‌ಯು‌ವಿಯಲ್ಲಿರುವ 10 ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂ ಹಳೆಯ ತಲೆಮಾರಿನ ಬಿಎಂಡಬ್ಲ್ಯು ಕಾರಿನಲ್ಲಿದ್ದ ಇನ್ಫೋಟೇನ್‌ಮೆಂಟ್ ಸಿಸ್ಟಂ ಅನ್ನು ಹೋಲುತ್ತದೆ. ರೇರ್ ವೀವ್ ಹಿಂದೆ ಅಳವಡಿಸಲಾಗಿರುವ ಇಂಟರ್ನಲ್ ಡ್ಯಾಶ್‌ಕ್ಯಾಮ್ ಎಸ್‌ಯು‌ವಿ ಸ್ಟಾರ್ಟ್ ಆದ ತಕ್ಷಣ ಆರಂಭವಾಗುತ್ತದೆ.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಪಾಕಿಸ್ತಾನದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತವೆ ಚೀನಾ ನಿರ್ಮಿತ ಡೂಪ್ಲಿಕೇಟ್ ಕಾರುಗಳು

ಇನ್ನು ಈ ಎಸ್‌ಯು‌ವಿಯಲ್ಲಿ ಕ್ರೂಸ್ ಕಂಟ್ರೋಲ್, ಪವರ್ ವಿಂಡೋಸ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ರೇರ್ ಎಸಿ ವೆಂಟ್, ರೇರ್ ವೈಪರ್ ಸೇರಿದಂತೆ ಹಲವಾರು ಫೀಚರ್'ಗಳಿವೆ. ಇವುಗಳು ಮಹೀಂದ್ರಾ ಥಾರ್ ಹಾಗೂ ಜೀಪ್ ವ್ರಾಂಗ್ಲರ್‌ ಎಸ್‌ಯು‌ವಿಗಳಲ್ಲಿರುವ ಫೀಚರ್'ಗಳಂತೆ ಇವೆ.

ಪಾಕಿಸ್ತಾನದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತವೆ ಚೀನಾ ನಿರ್ಮಿತ ಡೂಪ್ಲಿಕೇಟ್ ಕಾರುಗಳು

ಈ ಎಸ್‌ಯು‌ವಿಯಲ್ಲಿ 2.3-ಲೀಟರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 247 ಬಿ‌ಹೆಚ್‌ಪಿ ಪವರ್ ಹಾಗೂ 350 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್'ನೊಂದಿಗೆ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಯುನಿಟ್ ಜೋಡಿಸಲಾಗಿದೆ.

MOST READ: ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ಪಾಕಿಸ್ತಾನದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತವೆ ಚೀನಾ ನಿರ್ಮಿತ ಡೂಪ್ಲಿಕೇಟ್ ಕಾರುಗಳು

ಈ ಎಸ್‌ಯು‌ವಿಯನ್ನು 2.0 ಲೀಟರ್ ಡೀಸೆಲ್ ಎಂಜಿನ್'ನೊಂದಿಗೂ ಮಾರಾಟ ಮಾಡಲಾಗುತ್ತದೆ. ಈ ಎಂಜಿನ್'ನೊಂದಿಗೆ 6 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಇದರಲ್ಲಿರುವ ಡಿಫರೆನ್ಷಿಯಲ್ ಲಾಕ್‌ಗಳು ಆಫ್ ರೋಡಿಂಗ್'ಗೆ ನೆರವಾಗುತ್ತವೆ.

ಚೀನಾ ಕಂಪನಿಗಳು ಈ ಮೊದಲು ಲ್ಯಾಂಬೊರ್ಗಿನಿ ಡಯಾಬ್ಲೊ, ಮರ್ಸಿಡಿಸ್ ಬೆಂಝ್ ಜಿ ವ್ಯಾಗನ್, ಲ್ಯಾಂಡ್ ರೋವರ್ ಇವೊಕ್, ಮಿನಿ ಕೂಪರ್, ಪೋರ್ಷೆ ಮಕಾನ್ ಸೇರಿದಂತೆ ಹಲವು ಕಾರುಗಳನ್ನು ಡೂಪ್ಲಿಕೇಟ್ ಮಾಡಿ ಮಾರಾಟ ಮಾಡಿದ್ದವು.

MOST READ: ಕರೋನಾ ಸೋಂಕಿತರ ಪಾಲಿಗೆ ದೇವರಾದ ಕರೋನಾ ಸೋಂಕಿನಿಂದ ಗುಣಮುಖರಾದ ವ್ಯಕ್ತಿ

ಪಾಕಿಸ್ತಾನದಲ್ಲಿ ಭರ್ಜರಿಯಾಗಿ ಮಾರಾಟವಾಗುತ್ತವೆ ಚೀನಾ ನಿರ್ಮಿತ ಡೂಪ್ಲಿಕೇಟ್ ಕಾರುಗಳು

ಚೀನಾ ಕಂಪನಿಗಳು ಜನಪ್ರಿಯ ಕಾರುಗಳನ್ನು ಮಾತ್ರವಲ್ಲದೇ ರಾಯಲ್ ಎನ್‌ಫೀಲ್ಡ್ ಹಿಮಾಲಯನ್, ಡುಕಾಟಿ ಪಾನಿಗಲೆ 959, ಕೆಟಿಎಂ ಡ್ಯೂಕ್, ಬಿಎಂಡಬ್ಲ್ಯು ಎಸ್ 1000 ಆರ್‌ಆರ್, ಹೋಂಡಾ ಸಿಬಿಆರ್ 250 ಆರ್, ಯಮಹಾ ಆರ್ 1 ಸೇರಿದಂತೆ ಹಲವು ಬೈಕುಗಳನ್ನು ಸಹ ಡೂಪ್ಲಿಕೇಟ್ ಮಾಡಿ ಮಾರಾಟ ಮಾಡಿವೆ.

Most Read Articles

Kannada
English summary
China made duplicate cars sale in Pakistan. Read in Kannada.
Story first published: Monday, May 31, 2021, 14:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X