ಭಾರತದ ವಾಹನೋದ್ಯಮಕ್ಕೆ ಕಂಟಕವಾದ ಚೀನಾ.. ಅಪರೂಪದ ಖನಿಜಗಳು ಎಂದರೇನು?, ಯಾರು ಹೇಳದ ವಿವರಗಳು!

ಭಾರತದ ವಾಹನೋದ್ಯಮಕ್ಕೆ ಕಂಟಕ ಎದುರಾಗುವ ಕಾಲ ಸನಿಹವಾಗಿದೆ. ಚೀನಾ ಅಪರೂಪದ ಅಯಸ್ಕಾಂತ ಖನಿಜಗಳನ್ನು (Rare Earth Elements) ರಫ್ತು ಮಾಡುವುದನ್ನು ಸ್ಥಗಿತಗೊಳಿಸಿದೆ. ಇದು ಎರಡು - ಮೂರು ವರ್ಷಗಳಿಂದ ಎಲೆಕ್ಟ್ರಿಕ್ ವಾಹನ ವಿಭಾಗದಲ್ಲಿ ಅಂಬೆಗಾಲು ಇಡುತ್ತಿರುವ ದೇಶೀಯ ವಾಹನ ತಯಾರಕ ಕಂಪನಿಗಳನ್ನು ತೀವ್ರ ಸಂಕಷ್ಟಕ್ಕೆ ದೂಡಲಿದೆ. ಅದರಲ್ಲೂ ಬಹುನಿರೀಕ್ಷಿತ ಮಾರುತಿ ಸುಜುಕಿಯ ಮೊದಲ ಎಲೆಕ್ಟ್ರಿಕ್ ಕಾರು ಎಂದೇ ಬಣ್ಣಿಸಲಾಗಿರುವ 'ಇ-ವಿಟಾರಾ'ದ ಉತ್ಪಾದನೆಯೂ ಕೂಡ ತಡವಾಗಬಹುದು ಎನ್ನಲಾಗಿದೆ. ಅದು ಮಾತ್ರವಲ್ಲದೆ ಎಲ್ಲ ಕಂಪನಿಗಳ ಕಾರುಗಳ ತಯಾರಿಕೆ ಮೇಲು ವಿಪರೀತ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಅಪರೂಪದ ಆಯಸ್ಕಾಂತ ಖನಿಜಗಳು ಯಾವುದು?

ಬಾಸ್ನೈಸೈಟ್, ಮೊನಾಜೈಟ್, ಸೈನೋಟೈಮ್, ಲೆಪಿಡೋಲೈಟ್ ಹಾಗೂ ಜೆನೋಟೈಮ್‌ಗಳನ್ನು ಅಪರೂಪದ ಆಯಸ್ಕಾಂತ ಖನಿಜಗಳು ಎಂದು ಗುರುತಿಸಬಹುದು. ಇವುಗಳಲ್ಲಿ ಸೆರಿಯಂ & ನಿಯೋಡಿಮಿಯಂ ಧಾತು ಹೊಂದಿರುವ ಬಾಸ್ನೈಸೈಟ್‌ನ್ನು ಎಲೆಕ್ಟ್ರಾನಿಕ್ಸ್ ಹಾಗೂ ಲಿಥಿಯಂ ಧಾತು ಒಳಗೊಂಡಿರುವ ಲೆಪಿಡೋಲೈಟ್‌ನ್ನು ಬ್ಯಾಟರಿ ತಯಾರಿಕೆಗೆ ಹೇರಳವಾಗಿ ಬಳಕೆ ಮಾಡಲಾಗುತ್ತಿದೆ.

China Stops Rare Earth Elements Export What Is That Why Important For Auto Industry

ಯಾವ ವಾಹನದಲ್ಲಿ ಎಷ್ಟು ಪ್ರಮಾಣದಲ್ಲಿ ಅಪರೂಪದ ಖನಿಜಗಳನ್ನು ಉಪಯೋಗಿಸಲಾಗುತ್ತದೆ:

ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಎಲೆಕ್ಟ್ರಿಕ್ ವಾಹನಗಳನ್ನು (Electric Vehicles) ಉತ್ಪಾದಿಸಲು ಸುಮಾರು 0.8 ಕೆಜಿ ಅಪರೂಪದ ಆಯಸ್ಕಾಂತ ಖನಿಜಗಳನ್ನು ಬಳಸಲಾಗುತ್ತದೆ. ವಿಶೇಷವಾಗಿ, ಎಲೆಕ್ಟ್ರಿಕ್ ವಾಹನಗಳು ಸಂಚರಿಸಲು ನೆರವಾಗುವ ಬ್ಯಾಟರಿ ಹಾಗೂ ಪರ್ಮನೇಟ್ ಮ್ಯಾಗ್ನೆಟ್ ಸಿಂಕ್ರೊನಸ್ ಮೋಟಾರ್‌ಗಳ ತಯಾರಿಕೆಯಲ್ಲಿ ಈ ಖನಿಜಗಳು ಮಹತ್ವದ ಪಾತ್ರ ವಹಿಸುತ್ತವೆ.

ಅದೇ ರೀತಿಯಲ್ಲಿ ಹೈಬ್ರಿಡ್ (ಪೆಟ್ರೋಲ್ + ಎಲೆಕ್ಟ್ರಿಕ್) ಚಾಲಿತ ವಾಹನಗಳಲ್ಲಿ 0.5 ಕೆಜಿ ಹಾಗೂ ಇಂಧನ ಚಾಲಿತ (ಪೆಟ್ರೋಲ್/ ಡೀಸೆಲ್/ ಸಿಎನ್‌ಜಿ) ವಾಹನಗಳ ತಯಾರಿಕೆಯಲ್ಲಿ ಅತಿ ಕಡಿಮೆ ಅಂದರೆ, 0.1 ಕೆಜಿ ಅಪರೂಪದ ಆಯಸ್ಕಾಂತ ಖನಿಜಗಳನ್ನು ಉಪಯೋಗಿಸಲಾಗುತ್ತದೆ ಎಂದು ಹೇಳಲಾಗಿದೆ.

ಭಾರತಕ್ಕೆ ಆಮದಾಗುವ ಅಪರೂಪದ ಅಯಸ್ಕಾಂತ ಖನಿಜಗಳ ಪ್ರಮಾಣವೆಷ್ಟು?

ಭಾರತವು ವಾಹನೋದ್ಯಮ ಹಾಗೂ ವಾಹನ ವಲಯವಲ್ಲದ ವಿವಿಧ ಕ್ಷೇತ್ರಗಳಿಗಾಗಿ ಒಟ್ಟು 200 ಮಿಲಿಯನ್ ಡಾಲರ್ ಮೌಲ್ಯದ ಅಪರೂಪದ ಆಯಸ್ಕಾಂತ ಖನಿಜಗಳನ್ನು ಆಮದು ಮಾಡಿಕೊಂಡಿದೆ. ಇದರಲ್ಲಿ ಶೇಕಡ 85% ಚೀನಾದಿಂದ ಬರುತ್ತದೆ. ಇತರೆ ದೇಶಗಳಿಗೆ ಉಳಿದ ಶೇಕಡ 15% ತರಿಸಿಕೊಳ್ಳಲಾಗುತ್ತದೆ.

ಅಪರೂಪದ ಅಯಸ್ಕಾಂತ ಖನಿಜ ಕೊರತೆಯಾಗದಂತೆ ಸರ್ಕಾರದ ಕ್ರಮವೇನು:

ಈ ಬಗ್ಗೆ ಸೋಮವಾರ ಕೇಂದ್ರ ವಾಣಿಜ್ಯ & ಕೈಗಾರಿಕಾ ಸಚಿವಾಲಯದ ಕಾರ್ಯದರ್ಶಿ ಸುನಿಲ್ ಬಾರ್ತ್ವಾಲ್ (Sunil Barthwal) ಅವರು ಪ್ರತಿಕ್ರಿಯೆ ನೀಡಿದ್ದಾರೆ. 'ಭಾರತವು ಚೀನಾದೊಂದಿಗೆ ಅಪರೂಪದ ಅಯಸ್ಕಾಂತ ಖನಿಜಗಳ ಪೂರೈಕೆ ಸಂಬಂಧ ಮಾತುಕತೆ ನಡೆಸುತ್ತಿದೆ. ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ' ಎಂದು ಹೇಳಿದ್ದಾರೆ.

ಸಮಸ್ಯೆಗೆ ತಾಕ್ಕಾಲಿಕ ಪರಿಹಾರವೇನು:

ಭಾರತವು ಚೀನಾ ಬಿಟ್ಟು ಬೇರೆ ದೇಶಗಳಿಂದ ಸ್ವಲ್ಪ ಹೆಚ್ಚಿನ ಮಟ್ಟಿಗೆ ಅಪರೂಪದ ಅಯಸ್ಕಾಂತ ಖನಿಜಗಳನ್ನು ಆಮದು ಮಾಡಿಕೊಳ್ಳಬೇಕು. ಇದು ಬಿಟ್ಟರೆ, 'ಮರುಬಳಕೆ'ಯ ಮಾರ್ಗವನ್ನು ಅನುಸರಿಸಬೇಕು. ಅಂದರೆ, ಹಳೆಯ ಉತ್ಪನ್ನಗಳಿಂದ ಈ ಖನಿಜಗಳನ್ನು ಹೊರತೆಗೆಯಬೇಕು. ಜೊತೆಗೆ ಅವುಗಳನ್ನೇ ಹೊಸ ಕಾರು ಅಥವಾ ವಿವಿಧ ಉತ್ಪನ್ನ ತಯಾರಿಕೆ ಬಳಕೆ ಮಾಡಬೇಕು.

ಚೀನಾ ಅಪರೂಪದ ಅಯಸ್ಕಾಂತ ಖನಿಜಗಳ ರಫ್ತನ್ನು ಪುನಾರಂಭ ಮಾಡದಿದ್ದರೆ, ದೇಶದ ಎಲೆಕ್ಟ್ರಿಕ್ ವಾಹನೋದ್ಯಮಕ್ಕೆ ದೊಡ್ಡ ಪೆಟ್ಟು ಬೀಳಲಿದೆ. ಹೀಗಾಗಿ ಕೇಂದ್ರ ಸರ್ಕಾರ ಕೂಡ ಈ ಸಮಸ್ಯೆಯನ್ನು ಆದಷ್ಟು ಬೇಗ ಪರಿಹರಿಸಬೇಕು. ಈಚೆಗೆ ಮಹತ್ವದ ಬೆಳವಣಿಗೆಯಾಗಿ ಭಾರತ ಹಾಗೂ ಮಧ್ಯ ಏಷ್ಯಾ ರಾಷ್ಟ್ರಗಳ ಸಭೆ ನಡೆದಿದೆ. ಇಲ್ಲಿ ಕಝಾಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್, ತುರ್ಕಮೆನಿಸ್ತಾನ್ ಹಾಗೂ ಉಜ್ಬೇಕಿಸ್ತಾನ್ ದೇಶಗಳು ಅಪರೂಪದ ಖನಿಜ ನಿಕ್ಷೇಪಗಳನ್ನು ಜಂಟಿಯಾಗಿ ಅನ್ವೇಷಿಸಲು ಆಸಕ್ತಿ ತೋರಿಸಿವೆ.

More from DriveSpark

Article Published On: Wednesday, June 18, 2025, 20:34 [IST]
English summary
China stops rare earth elements export what is that why important for auto industry
Read more on auto news india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+