ಮ್ಯಾಗ್ನೆಟಿಕ್ ತಂತ್ರಜ್ಞಾನದಲ್ಲಿ 'ಹಾರುವ' ಕಾರನ್ನು ಪರೀಕ್ಷಿಸಿದ ಚೀನಾ: ಯಶಸ್ವಿಯಾಗಲಿದೆಯೇ ಮೇಡ್ ಇನ್ ಚೀನಾ!

ಆಕಾಶಕ್ಕೆ ಕೊಂಡೊಯ್ಯಬಹುದಾದ ಕಾರುಗಳು ಕೇವಲ ಕಥೆ, ಕಾದಂಬರಿಗಳಿಗೆ ಮಾತ್ರ ಸೀಮಿತವಾಗಿವೆ. ವಾಸ್ತವದಲ್ಲಿ ಇಂತಹ ಅದ್ಬುತಗಳನ್ನು ಸೃಷ್ಟಿಸಲು ಹಲವುರು ಪ್ರಯತ್ನಿಸಿದ್ದರಾದರೂ ಇಲ್ಲಿಯವರೆಗೆ ಅದು ಸಾಧ್ಯವಾಗಿಲ್ಲ. ಆದರೆ ಇತ್ತೀಚೆಗೆ ಈ ಹಾರುವ ಕಾರುಗಳು ವಿಶ್ವದ ಹಲವೆಡೆ ಭಾರೀ ಚರ್ಚೆಯಾಗುತ್ತಿವೆ.

ಮ್ಯಾಗ್ನೆಟಿಕ್ ತಂತ್ರಜ್ಞಾನದಲ್ಲಿ 'ಹಾರುವ' ಕಾರನ್ನು ಪರೀಕ್ಷಿಸಿದ ಚೀನಾ: ಯಶಸ್ವಿಯಾಗಲಿದೆಯೇ ಮೇಡ್ ಇನ್ ಚೀನಾ!

ಪ್ರಪಂಚದಾದ್ಯಂತ ಅನೇಕ ಕಂಪನಿಗಳು ತಮ್ಮ ಹಾರುವ ಕಾರುಗಳನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ಸಜ್ಜಾಗುತ್ತಿದ್ದರೇ, ಕೆಲವು ಕಂಪನಿಗಳು ಈ ಕಾರುಗಳ ತಂತ್ರಜ್ಞಾನವನ್ನು ಸುಧಾರಿಸುವಲ್ಲಿ ತೊಡಗಿವೆ. ಇಟಲಿಯ ಟಸ್ಕನಿ ಮೂಲದ ಸ್ಟಾರ್ಟ್‌ಅಪ್ ಕಂಪನಿಯಾದ ಜೆಟ್‌ಸನ್ ತನ್ನ ಫ್ಲೈಯಿಂಗ್ ಕಾರ್ ಜೆಟ್‌ಸನ್ ಒನ್ ಅನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ.

ಮ್ಯಾಗ್ನೆಟಿಕ್ ತಂತ್ರಜ್ಞಾನದಲ್ಲಿ 'ಹಾರುವ' ಕಾರನ್ನು ಪರೀಕ್ಷಿಸಿದ ಚೀನಾ: ಯಶಸ್ವಿಯಾಗಲಿದೆಯೇ ಮೇಡ್ ಇನ್ ಚೀನಾ!

ಇದೀಗ ಚೀನಾ ಕೂಡ ಪ್ಲೈಯಿಂಗ್ ಕಾರ್ ರೇಸ್‌ನಲ್ಲಿ ಭಾಗವಹಿಸಲು ಸಜ್ಜಾಗಿದೆ. ಇತ್ತೀಚೆಗೆ ಚೀನಾದಲ್ಲಿನ ಸಿಚುವಾನ್ ಪ್ರಾಂತ್ಯದ ಚೆಂಗ್ಡುವಿನಲ್ಲಿರುವ ನೈಋತ್ಯ ಜಿಯಾಟೊಂಗ್ ವಿಶ್ವವಿದ್ಯಾಲಯದ ಸಂಶೋಧಕರು, ಇತ್ತೀಚೆಗೆ ಕಂಡಕ್ಟರ್ ರೈಲಿನ ಮೇಲೆ 35 ಮಿ.ಮೀ ತೇಲುವಂತೆ ಮ್ಯಾಗ್ನೆಟ್‌ಗಳನ್ನು ಅಳವಡಿಸಿದ ಪ್ರಯಾಣಿಕ ವಾಹನಗಳನ್ನು ಪರೀಕ್ಷಿಸಿದ್ದಾರೆ ಎಂದು ವರದಿಯಾಗಿದೆ.

ಮ್ಯಾಗ್ನೆಟಿಕ್ ತಂತ್ರಜ್ಞಾನದಲ್ಲಿ 'ಹಾರುವ' ಕಾರನ್ನು ಪರೀಕ್ಷಿಸಿದ ಚೀನಾ: ಯಶಸ್ವಿಯಾಗಲಿದೆಯೇ ಮೇಡ್ ಇನ್ ಚೀನಾ!

ಈ ಪ್ರಯೋಗದಲ್ಲಿ 2.8-ಟನ್ ವಾಹನವು ಮ್ಯಾಗ್ಲೆವ್ ಅನ್ನು ಬಳಸಿಕೊಂಡು ಮ್ಯಾಗ್ನೆಟಿಕ್ ಲೆವಿಟೇಶನ್ ಅನ್ನು ಸೂಚಿಸುವುದನ್ನು ಕಾಣಬಹುದು. ಅಂದರೆ ಮ್ಯಾಗ್ನೆಟಿಕ್ ಪವರ್ ಬಳಿಸಿಕೊಂಡು ತುಸು ರಸ್ತೆಯಿಂದ ಮೇಲೆಕ್ಕೆ ಹಾರುತ್ತದೆ. ಈ ಕುರಿತ ವಿಡಿಯೋ ಬಿಡುಗಡೆಯಾದ ಬೆನ್ನಲ್ಲೇ ಟ್ವಿಟ್ಟರ್ ಬಳಕೆದಾರರು ತಂತ್ರಜ್ಞಾನ ಅಭಿವೃದ್ಧಿ ಪಡಿಸಿದವರನ್ನು ಪ್ರಶಂಸಿಸುತ್ತಿದ್ದಾರೆ.

ಮ್ಯಾಗ್ನೆಟಿಕ್ ತಂತ್ರಜ್ಞಾನದಲ್ಲಿ 'ಹಾರುವ' ಕಾರನ್ನು ಪರೀಕ್ಷಿಸಿದ ಚೀನಾ: ಯಶಸ್ವಿಯಾಗಲಿದೆಯೇ ಮೇಡ್ ಇನ್ ಚೀನಾ!

ಟ್ವಿಟ್ಟರ್‌ನಲ್ಲಿ ಈ ವಿಡಿಯೋವನ್ನು ಲಕ್ಷಕ್ಕೂ ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದು, ಇದನ್ನು 200 ಕ್ಕೂ ಹೆಚ್ಚು ಬಾರಿ ಹಂಚಿಕೊಳ್ಳಲಾಗಿದೆ. ಪೋಸ್ಟ್‌ನಲ್ಲಿ ಕಾರೊಂದು ಡ್ರೈವಿಂಗ್‌ನಲ್ಲಿರುವಾಗ ವಿವಿಧ ಹಂತಗಳಲ್ಲಿ ಟ್ರ್ಯಾಕ್‌ನ ಮೇಲೆ ತೇಲುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ಇದು ಸದ್ಯ ಪರಿಕ್ಷಾ ಹಂತದಲ್ಲಿದ್ದು, ಶೀಘ್ರದಲ್ಲೇ ಮಾರುಕಟ್ಟೆಗೆ ತರುವ ನಿರೀಕ್ಷೆಯಿದೆ.

ಮ್ಯಾಗ್ನೆಟಿಕ್ ತಂತ್ರಜ್ಞಾನದಲ್ಲಿ 'ಹಾರುವ' ಕಾರನ್ನು ಪರೀಕ್ಷಿಸಿದ ಚೀನಾ: ಯಶಸ್ವಿಯಾಗಲಿದೆಯೇ ಮೇಡ್ ಇನ್ ಚೀನಾ!

ಜೆಟ್‌ಸನ್ ಒನ್ ಫ್ಲೈಯಿಂಗ್ ಕಾರ್

ಇಟಲಿಯ ಟಸ್ಕನಿ ಮೂಲದ ಸ್ಟಾರ್ಟ್‌ಅಪ್ ಕಂಪನಿಯಾದ ಜೆಟ್‌ಸನ್ ಕಳೆದ ವರ್ಷ ತನ್ನ ಫ್ಲೈಯಿಂಗ್ ಕಾರ್ ಜೆಟ್‌ಸನ್ ಒನ್ ಅನ್ನು ಬಿಡುಗಡೆ ಮಾಡಿದೆ. ಅದು ಈಗ ಈ ವರ್ಷಕ್ಕೆ ಸಂಪೂರ್ಣವಾಗಿ ಮಾರಾಟವಾಗಿದೆ. ಈ ಕಾರನ್ನು ಪ್ರಪಂಚದಾದ್ಯಂತ ಜನರು ಇಷ್ಟಪಡುತ್ತಿದ್ದಾರೆ ಎಂದು ಕಂಪನಿ ಹೇಳಿದೆ.

ಮ್ಯಾಗ್ನೆಟಿಕ್ ತಂತ್ರಜ್ಞಾನದಲ್ಲಿ 'ಹಾರುವ' ಕಾರನ್ನು ಪರೀಕ್ಷಿಸಿದ ಚೀನಾ: ಯಶಸ್ವಿಯಾಗಲಿದೆಯೇ ಮೇಡ್ ಇನ್ ಚೀನಾ!

ಜೆಟ್ಸನ್ ಒನ್ ಫ್ಲೈಯಿಂಗ್ ಕಾರ್ 1,500 ಅಡಿ ಎತ್ತರದಲ್ಲಿ ಹಾರಬಲ್ಲದು. ಈ ಹಾರುವ ಕಾರು ಸಂಪೂರ್ಣ ಬ್ಯಾಟರಿ ಚಾಲಿತವಾಗಿದ್ದು, ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 32 ಕಿ.ಮೀ ದೂರದವರೆಗೆ ಹಾರಾಟ ನಡೆಸಬಹುದಾಗಿದೆ. ಇದು ಗರಿಷ್ಠ 102 ಕಿ.ಮೀ/ಗಂಟೆ ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದೆ.

ಮ್ಯಾಗ್ನೆಟಿಕ್ ತಂತ್ರಜ್ಞಾನದಲ್ಲಿ 'ಹಾರುವ' ಕಾರನ್ನು ಪರೀಕ್ಷಿಸಿದ ಚೀನಾ: ಯಶಸ್ವಿಯಾಗಲಿದೆಯೇ ಮೇಡ್ ಇನ್ ಚೀನಾ!

ಕಂಪನಿಯು ತನ್ನ ಪ್ರಾರಂಭದ ನಂತರ ಕೆಲವು ಘಟಕಗಳನ್ನು ಉತ್ಪಾದಿಸಿತ್ತು, ವರ್ಷವಿಡೀ ಮಾರಾಟ ಮಾಡುವ ಗುರಿಯನ್ನು ಕಂಪನಿ ಹೊಂದಿತ್ತು. ಆದರೆ ಭಾರೀ ಬೇಡಿಕೆಯಿಂದಾಗಿ, ಅದರ ಎಲ್ಲಾ ಘಟಕಗಳನ್ನು ಮೊದಲ ದಿನದಲ್ಲಿ ಮಾರಾಟ ಮಾಡಲಾಯಿತು. ಕಂಪನಿಯು ಹಾರುವ ಕಾರಿನ ಬೆಲೆಯನ್ನು US$ 90,000 ಎಂದು ನಿಗದಿಪಡಿಸಿದೆ.

ಮ್ಯಾಗ್ನೆಟಿಕ್ ತಂತ್ರಜ್ಞಾನದಲ್ಲಿ 'ಹಾರುವ' ಕಾರನ್ನು ಪರೀಕ್ಷಿಸಿದ ಚೀನಾ: ಯಶಸ್ವಿಯಾಗಲಿದೆಯೇ ಮೇಡ್ ಇನ್ ಚೀನಾ!

ಇದು ಭಾರತೀಯ ಕರೆನ್ಸಿಯಲ್ಲಿ ಅಂದಾಜು 71 ಲಕ್ಷ ರೂ. ಈ ಹಾರುವ ಕಾರನ್ನು ಎಲ್ಲಾ ರೀತಿಯ ಗ್ರಾಹಕರಿಗೆ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಕಂಪನಿ ಹೇಳಿದೆ. ಜಟ್ಸನ್ ಒನ್ ಲಂಬವಾದ ಟೇಕಾಫ್ ಮತ್ತು ಲ್ಯಾಂಡಿಂಗ್ (VTOL) ವಾಹನವಾಗಿದ್ದು, ಇದನ್ನು ಅಕ್ಟೋಬರ್ 2022 ರಲ್ಲಿ ಪ್ರಾರಂಭಿಸಲಾಯಿತು. ಇದು 86 ಕೆ.ಜಿ ತೂಕವಿದ್ದು, ಮತ್ತು ಗಂಟೆಗೆ 102 ಕಿ.ಮೀ ವೇಗದಲ್ಲಿ 20 ನಿಮಿಷಗಳ ಕಾಲ ಹಾರಬಲ್ಲದು. ಜೆಟ್ಸನ್ ಇದು ವಿಶ್ವದ ಮೊದಲ ಬಜೆಟ್ ಬೆಲೆಯ ಹಾರುವ ಕಾರು ಎಂದು ಕಂಪನಿ ಹೇಳಿಕೊಂಡಿದೆ.

ಮ್ಯಾಗ್ನೆಟಿಕ್ ತಂತ್ರಜ್ಞಾನದಲ್ಲಿ 'ಹಾರುವ' ಕಾರನ್ನು ಪರೀಕ್ಷಿಸಿದ ಚೀನಾ: ಯಶಸ್ವಿಯಾಗಲಿದೆಯೇ ಮೇಡ್ ಇನ್ ಚೀನಾ!

ಇದು ಕಾರ್ಯನಿರ್ವಹಿಸಲು US ನಲ್ಲಿ ವಿಶೇಷ ಹಾರುವ ಪರವಾನಗಿ ಅಗತ್ಯವಿಲ್ಲ. ಅದರಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಹಾರಲು ಸಾಧ್ಯ. ಹಾರುವ ಕಾರಿನ ತೂಕವನ್ನು ಕಡಿಮೆ ಮಾಡಲು ಅದರ ರಚನೆಯು ಸಂಪೂರ್ಣವಾಗಿ ಕಾರ್ಬನ್ ಫೈಬರ್‌ನಿಂದ ಮಾಡಲ್ಪಟ್ಟಿದೆ. ಇದು ನಾಲ್ಕು ರೋಟರ್‌ಗಳನ್ನು ಹೊಂದಿದ್ದು, ಹಗುರವಾದ ಮತ್ತು ಹೆಚ್ಚಿನ ಸಾಂದ್ರತೆಯ ಲಿಥಿಯಂ-ಐಯಾನ್ ಬ್ಯಾಟರಿಯಿಂದ ಚಾಲಿತವಾಗಿದೆ.

ಮ್ಯಾಗ್ನೆಟಿಕ್ ತಂತ್ರಜ್ಞಾನದಲ್ಲಿ 'ಹಾರುವ' ಕಾರನ್ನು ಪರೀಕ್ಷಿಸಿದ ಚೀನಾ: ಯಶಸ್ವಿಯಾಗಲಿದೆಯೇ ಮೇಡ್ ಇನ್ ಚೀನಾ!

ಈ ಹಾರುವ ಕಾರಿನ ಕ್ಯಾಬಿನ್ ಪಂಜರದಂತಿದೆ. ಪ್ರಯಾಣಿಕರ ಸುರಕ್ಷತೆಗಾಗಿ ಕ್ಯಾಬಿನ್ ಸುತ್ತಲೂ ಪೈಪ್ ಆಕಾರದ ಭದ್ರತಾ ಆವರಣವನ್ನು ನಿರ್ಮಿಸಲಾಗಿದೆ. ಈ ಹಾರುವ ಕಾರಿನಲ್ಲಿ ಬಳಸಲಾದ ಮೋಟಾರ್‌ಗಳು ಸಾಕಷ್ಟು ಶಕ್ತಿಶಾಲಿಯಾಗಿವೆ ಎಂದು ಜೆಟ್ಸನ್ ಹೇಳಿಕೊಂಡಿದೆ. ಮೋಟಾರು ವಿಫಲವಾದರೂ ಈ ಕಾರು ಹಾರುತ್ತಲೇ ಇರುವಂತೆ ಈ ಕಾರಿನ ಎಲೆಕ್ಟ್ರಾನಿಕ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ.

ಮ್ಯಾಗ್ನೆಟಿಕ್ ತಂತ್ರಜ್ಞಾನದಲ್ಲಿ 'ಹಾರುವ' ಕಾರನ್ನು ಪರೀಕ್ಷಿಸಿದ ಚೀನಾ: ಯಶಸ್ವಿಯಾಗಲಿದೆಯೇ ಮೇಡ್ ಇನ್ ಚೀನಾ!

ಭಾರತವೂ ಹಾರುವ ಕಾರನ್ನು ಸಿದ್ಧಪಡಿಸುತ್ತಿದೆ

ಭಾರತದಲ್ಲಿಯೂ ಅನೇಕ ಕಂಪನಿಗಳು ಹಾರುವ ಕಾರಿನ ಮಾದರಿಯಲ್ಲಿ ಕೆಲಸ ಮಾಡುತ್ತಿವೆ. ಇತ್ತೀಚೆಗೆ ಚೆನ್ನೈ ಮೂಲದ ಸ್ಟಾರ್ಟಪ್ ಕಂಪನಿ 'ವಿನತಾ ಏರೋಮೊಬಿಲಿಟಿ' ಲಂಡನ್‌ನಲ್ಲಿ ನಡೆದ ಸಮಾರಂಭದಲ್ಲಿ ತನ್ನ ಮೊದಲ ಹಾರುವ ಕಾರನ್ನು ಬಹಿರಂಗಪಡಿಸಿದೆ.

ಮ್ಯಾಗ್ನೆಟಿಕ್ ತಂತ್ರಜ್ಞಾನದಲ್ಲಿ 'ಹಾರುವ' ಕಾರನ್ನು ಪರೀಕ್ಷಿಸಿದ ಚೀನಾ: ಯಶಸ್ವಿಯಾಗಲಿದೆಯೇ ಮೇಡ್ ಇನ್ ಚೀನಾ!

ಈ ಹಾರುವ ಕಾರು ಇಂಧನ ಮತ್ತು ಬ್ಯಾಟರಿ ಎರಡರಲ್ಲೂ ಚಲಿಸಬಲ್ಲದು. ಈ ಕಾರು ಲಂಬವಾದ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಅನ್ನು ಮಾಡಬಹುದು, ಇದರಿಂದಾಗಿ ವಿಮಾನದಂತಹ ರನ್ವೇ ಅಗತ್ಯವಿಲ್ಲ. ಈ ಹಾರುವ ಕಾರು ಗಂಟೆಗೆ 120 ಕಿ.ಮೀ ವೇಗದಲ್ಲಿ ಹಾರಬಲ್ಲದು.

ಮ್ಯಾಗ್ನೆಟಿಕ್ ತಂತ್ರಜ್ಞಾನದಲ್ಲಿ 'ಹಾರುವ' ಕಾರನ್ನು ಪರೀಕ್ಷಿಸಿದ ಚೀನಾ: ಯಶಸ್ವಿಯಾಗಲಿದೆಯೇ ಮೇಡ್ ಇನ್ ಚೀನಾ!

ಇಂಧನ ತುಂಬಿದ ನಂತರ, ಅದನ್ನು 60 ನಿಮಿಷಗಳ ಕಾಲ ಹಾರಿಸಬಹುದು. ಇದು 3,000 ಅಡಿ ಎತ್ತರದವರೆಗೆ ಹಾರುವ ಸಾಮರ್ಥ್ಯ ಹೊಂದಿದೆ. ಪ್ರಸ್ತುತ, ಈ ಹಾರುವ ಕಾರನ್ನು ಎರಡು ಜನರಿಗೆ ಹಿಡಿಯುವಂತೆ ವಿನ್ಯಾಸಗೊಳಿಸಲಾಗಿದೆ. ಆದರೆ ಹೊಸ ಮಾದರಿಗಳಲ್ಲಿ ಪ್ರಯಾಣಿಕರ ಸಾಮರ್ಥ್ಯವನ್ನು ಹೆಚ್ಚಿಸಬಹುದು. ಕಂಪನಿಯು ಇನ್ನೂ ಮಾರಾಟವನ್ನು ಪ್ರಾರಂಭಿಸಿಲ್ಲ.

Article Published On: Saturday, September 24, 2022, 13:15 [IST]
English summary
China tested a flying car in magnetic technology Made in China will be successful
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+