ಬುಕಿಂಗ್‌ನಲ್ಲಿ ಸಂಚಲನ ಮೂಡಿಸಿದ ಸಿಟ್ರನ್‌ನ ಬಜೆಟ್ ಇವಿ: ಬುಕಿಂಗ್ ಶುರುವಾದ 10 ಗಂಟೆಗಳಲ್ಲಿ ಸೋಲ್ಡ್ ಔಟ್
ಆನ್‌ಲೈನ್ ಬುಕಿಂಗ್ ಶುರು ಮಾಡಿದ ಕೆಲವೇ ಗಂಟೆಗಳಲ್ಲಿ ಸೋಲ್ಡ್ ಔಟ್ ಆಗಿರುವ ಘಟನೆ ನಡೆದಿದೆ. ಪ್ರಸಿದ್ಧ ಫ್ರೆಂಚ್ ಕಾರು ತಯಾರಿಕಾ ಕಂಪನಿಯಾದ ಸಿಟ್ರನ್ (Citroen) ತನ್ನ ಹೊಸ ಮೈ ಆಮಿ ಬುಗ್ಗಿ ಎಂಬ ಮೈಕ್ರೋ ಇವಿ ಯ ಆನ್ ಲೈನ್ ಬುಕಿಂಗ್ ಅನ್ನು ಆರಂಭಿಸಿತ್ತು.
ಬುಕಿಂಗ್ ಅನ್ನು ರೀ ಓಪನ್ ಮಡಿದ ಕೆಲವೇ ನಿಮಿಷಗಳಲ್ಲಿ ಈ ಕಾರು ಸಂಪೂರ್ಣವಾಗಿ ಸೋಲ್ಡ್ ಔಟ್ ಆಗಿದೆ. ಸಿಟ್ರನ್ ಕಂಪನಿಯು ಈ ಮೈ ಆಮಿ ಬುಗ್ಗಿ ಮೈಕ್ರೋ ಇವಿಯನ್ನು ಕೆಲವೇ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿಟ್ಟಿದೆ. ಭಾರತದಲ್ಲಿ ಇನ್ನೂ ಸಹ ಕಾರನ್ನು ಲಾಂಚ್ ಮಾಡಿಲ್ಲ ಎಂಬುದು ನಾವಿಲ್ಲಿ ಗಮನಿಸಬೇಕು.

ಸೀಮಿತವಾದ ಮಾರುಕಟ್ಟೆಗಳಲ್ಲಿ ಈ ಕಾರನ್ನು ಬಿಡುಗಡೆಗೊಳಿಸುವ ಸೂಚನೆಯನ್ನು ಕಂಪನಿ ನೀಡಿತ್ತು. ಇದನ್ನು ಘೋಷಿಸಿದಾಗಲೇ ಮೈ ಆಮಿ ಬುಗ್ಗಿ ಮೈಕ್ರೋ ಇವಿಯ ಬಗ್ಗೆ ಭಾರೀ ನಿರೀಕ್ಷೆಗಳೂ ಮೂಡಿದ್ದವು. ಇದೀಗ ಆನ್ ಲೈನ್ ನಲ್ಲಿ ಬುಕಿಂಗ್ ಆರಂಭಿಸಿದ ನಂತರದಲ್ಲಿ ಭಾರೀ ವೇಗದಲ್ಲಿ ಇವಿ ಗಳು ಮಾರಾಟವಾಗಿದೆ.
ಇದಕ್ಕೂ ಮೊದಲು ಸಿಟ್ರನ್ ( Citroen) ಕಾರು ಕಂಪನಿಯು ತನ್ನ ಮೈ ಆಮಿ ಬುಗ್ಗಿ ಮೈಕ್ರೋ ಇವಿಯನ್ನು ಫ್ರೆಂಚ್, ಸ್ಪೇನ್ ಮತ್ತು ಬೆಲ್ಜಿಯಂ ಮಾರುಕಟ್ಟೆಯಲ್ಲಿ ಪರಿಚಯಿಸಿತ್ತು. ಪ್ರತಿಯೊಂದು ಮಾರುಕಟ್ಟೆಯಲ್ಲಿ ಪರಿಚಯಿಸಿದಾಗಲೂ ಈ ಕಾರನ್ನು ಜನ ಮಿಂಚಿನ ವೇಗದಲ್ಲಿ ಕೊಳ್ಳುತ್ತಿದ್ದಾರೆ ಎಂದು ಕಂಪನಿ ತನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.

ಪ್ರಸ್ತುತ ಈ ಮೈ ಆಮಿ ಬುಗ್ಗಿ ಮೈಕ್ರೋ ಇವಿಯು ಫ್ರಾನ್ಸ್, ಇಟಲಿ, ಸ್ಪೈನ್, ಬೆಲ್ಜಿಯಂ, ಪೋರ್ಚುಗಲ್, ಯುಕೆ ಮತ್ತು ಗ್ರೀಸ್ ದೇಶಗಳ ಮಾರುಕಟ್ಟೆಯಲ್ಲಿ ಕಾಣಬಹುದಾಗಿದೆ. ಇನ್ನು ಈ ಕಾರನ್ನು ಸಿಟ್ರನ್ ಟರ್ಕಿ ಮತ್ತು ಮೊರಾಕೋ ದೇಶಗಳಿಗೂ ವಿಸ್ತರಿಸುವ ಯೋಜನೆಯಲ್ಲಿದೆ ಎಂದು ಕಂಪನಿ ತಿಳಿಸಿದೆ.
ಆದರೆ ಟರ್ಕಿ ಮತ್ತು ಮೊರಾಕೋ ಈ ಎರಡೂ ಕಡೆ ಇನ್ನೂರು ಅಥವಾ ಅದಕ್ಕಿಂತ ಕಮ್ಮಿ ಸಂಖ್ಯೆಯಲ್ಲಿ ಈ ಮೈ ಆಮಿ ಬುಗ್ಗಿ ಕಾರನ್ನು ಬಿಡುಗಡೆಗೊಳಿಸಲಿದೆ. ಈ ಕಾರಿಗೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಗ್ರಾಹಕರಿಂದ ಸ್ಪಂದನೆ ಸಿಗುತ್ತಿದ್ದರೂ, ಸಿಟ್ರನ್ ಮಾತ್ರ ಈ ಕಾರನ್ನು ಅತಿಯಾಗಿ ಯಾಕೆ ಉತ್ಪಾದಿಸುತ್ತಿಲ್ಲ ಎಂಬುದು ಇನ್ನೂ ತಿಳಿದು ಬಂದಿಲ್ಲ.
ಇನ್ನು ಈ ಸಿಟ್ರನ್ ಮೈ ಆಮಿ ಬುಗ್ಗಿ ಮೈಕ್ರೋ ಇವಿಯ ಬೆಲೆಯನ್ನು ಗಮನಿಸಿದರೆ ಈ ಕಾರು ಸುಮಾರು 7700 ಯೂರೋ ಯಿಂದ 10450 ಯೂರೋ ತನಕ ಇದೆ. ಅಂದರೆ ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ 7 ಲಕ್ಷದಿಂದ 9.3 ಲಕ್ಷದವರೆಗೆ ಈ ಕಾರಿನ ಬೆಲೆ ಇದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications