ಸಿಟಿ ಸೈಲರ್ - ಈ ದ್ವಿಚಕ್ರ ವಾಹನಕ್ಕೆ ಹೆಲ್ಮೆಟ್‌ನ ಅಗತ್ಯವಿಲ್ಲ!

ನಗರ ಪ್ರದೇಶ ವಾಹನ ದಟ್ಟಣೆ ನಿಭಾಯಿಸುವುದು ಕಷ್ಟ ತಾನೇ? ಈ ಕುರಿತು ಯೋಚಿಸಿದರಂತೂ ತಲೆ ಕೆಟ್ಟು ಹೋಗುತ್ತದೆ. ಆದರೆ ನಿರಂತರ ಅಧ್ಯಯನದಲ್ಲಿ ತೊಡಗಿರುವ ಆಟೋ ಮೊಬೈಲ್ ಎಂಜಿನಿಯರ್‌ಗಳು ಮಾತ್ರ ಜನ ಸಾಮಾನ್ಯರಿಗೆ ಉಪಯೋಗವಾಗುವಂತಹ ಅನೇಕ ಆಧುನಿಕ ವಾಹನಗಳನ್ನು ಹೊರತರುವ ಪ್ರಯತ್ನ ಮಾಡುತ್ತಿದ್ದಾರೆ.

ಇಂತಹದೊಂದು ಪ್ರಯತ್ನದ ಫಲವೇ ನಿಮ್ಮ ಮುಂದಿರುವ ಸಿಟಿ ಸೈಲರ್ (CitySailer). ಈ ಎರಡು ಚಕ್ರಗಳ ಕ್ರೂಸ್ ವಾಹನದಲ್ಲಿ ಪಯಣಿಸುವುದಕ್ಕೆ ಯಾವುದೇ ಹೆಲ್ಮೆಟ್‌ನ ಅಗತ್ಯವಿಲ್ಲ ಎಂಬುದು ಉಲ್ಲೇಖನೀಯ.

ವರ್ಧಿಸುತ್ತಿರುವ ಜಾಗತಿಕ ತಾಪಮಾನ ತಡೆಗಟ್ಟುವುದು ಅತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಎನರ್ಜಿ ಸೇವಿಂಗ್ ವೆಹಿಕಲ್ ನೂತನ ಆವಿಷ್ಕಾರವೇ ಸಿಟಿ ಸೈಲರ್. ಹಾಗಿದ್ದರೆ ಸಿಟಿಸೈಲರ್ ಬಗ್ಗೆ ಫೋಟೊ ಫೀಚರ್ ಮೂಲಕ ಹೆಚ್ಚು ತಿಳಿದುಕೊಳ್ಳೋಣ ಬನ್ನಿ...

CitySailer

CitySailer

ಟ್ರಾಫಿಕ್‌ಗಳಲ್ಲಿ ಗಂಟೆಗಳಷ್ಟು ಹೊತ್ತು ತೊಂದರೆ ಅನುಭವಿಸುತ್ತಿರುವ ಜನರಿಗೆ ಸಿಟಿ ಸೈಲರ್ ಉತ್ತಮ ಬದಲಿ ವ್ಯವಸ್ಥೆ ಆಗಿರಲಿದೆ.

CitySailer

CitySailer

ಸ್ಲೀಕ್ ಸ್ಲಿಮ್ ಡಿಸೈನ್ ಹೊಂದಿರುವ ಸಿಟಿ ಸೈಲರ್ ಸುಲಭವಾಗಿ ಡ್ರೈವಿಂಗ್ ಮಾಡಬಹುದಾಗಿದೆ. ವಾಹನ ದಟ್ಟಣೆ ಇದಕ್ಕೊಂದು ಸಮಸ್ಯೆಯೇ ಆಗಲಾರದು. ಹಾಗೆಯೇ ಪಾರ್ಕಿಂಗ್ ಕೂಡಾ ಸುಲಭ.

CitySailer

CitySailer

ಅಷ್ಟಕ್ಕೂ ಸುರಕ್ಷಾ ಮಾನದಂಡಗಳ ಬಗ್ಗೆ ಹಲವಾರು ಅನುಮಾನಗಳಿವೆ. ಆದರೆ ವಿನ್ಯಾಸಕಾರ ಕ್ಟ್ರಿಸ್ಟೊಫರ್ ಕುಹ್ (christopher kuh) ಸೇಫ್ಟಿಗಾಗಿ ಹೆಚ್ಚಿನ ಪ್ರಾಧಾನ್ಯತೆ ಕಲ್ಪಿಸಿದ್ದಾರೆ.

CitySailer

CitySailer

ಸಿಟಿ ಸೈಲರ್‌ನಲ್ಲಿ ಆಳವಡಿಸಲಾಗಿರುವ ಸೀಟ್ ಬೆಲ್ಟ್ ನಿಮ್ಮ ದೇಹ ನೆಟ್ಟಗಿರುವಂತೆ ನೆರವು ಮಾಡಲಿದೆ. ಪ್ರಸ್ತುತ ದ್ವಿಚಕ್ರ ವಾಹನದಲ್ಲಿ ಏರ್ ಬ್ಯಾಗ್ ಸೌಲಭ್ಯವಿದೆ.

CitySailer

CitySailer

ಇದರ ಪ್ರಮುಖ ಆಕರ್ಷಣೆ ಏನೆಂದರೆ ಸಿಟಿ ಸೈಲರ್ ಚಾಲನೆಗಾಗಿ ಯಾವುದೇ ಹೆಲ್ಮೆಟ್ ಧರಿಸುವುದರ ಅಗತ್ಯವಿರುವುದಿಲ್ಲ. ಇದರಿಂದ ಹೆಲ್ಮೆಟ್ ಕಿರಿಕಿರಿಯನ್ನು ತಪ್ಪಿಸಬಹುದಾಗಿದೆ.

CitySailer

CitySailer

ಈ ಸಿಟಿಸೈಲರ್ ಗಾಡಿ, 'ಡ್ರೈವ್ ಬೈ ವೈರ್' ತಂತ್ರಜ್ಞಾನದಲ್ಲೂ ಪಯಣಿಸುತ್ತದೆ. ಹಾಗೆಯೇ ಅಗತ್ಯ ವಸ್ತುಗಳನ್ನಿಡುವುದಕ್ಕಾಗಿ ಸ್ಟೋರೇಜ್ ಸ್ಪೇಸ್ ಕೂಡಾ ಕಲ್ಪಿಸಲಾಗಿದೆ.

CitySailer

CitySailer

ಪ್ರಸ್ತುತ ಕಾನ್ಸೆಪ್ಟ್ ಹಂತದಲ್ಲಿರುವ ಈ ದ್ವಿಚಕ್ರ ವಾಹನವು ಉತ್ಪಾದಕ ವರ್ಷನ್ ಪಡೆದುಕೊಂಡಲ್ಲಿ ಖಂಡಿತವಾಗಿಯೂ ಭವಿಷ್ಯದ ಸಂಚಾರ ವಾಹನ ಎನಿಸಿಕೊಳ್ಳಲಿದೆ. ಏತನ್ಮಧ್ಯೆ ದರದ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.

More from DriveSpark

Article Published On: Tuesday, May 28, 2013, 9:37 [IST]
English summary
Now, there has been different new innovations for transportation and one of them is the CitiSailer. There are a lot of issues with regards to safety in two-wheeled vehicles. That is why the designer Christopher Kuh took keen note of this and created a safe vehicle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+