ಸ್ಕ್ರಾಪ್ ಮೆಟಿರಿಯಲ್​ಗಳಿಂದ ಬೈಕ್ ತಯಾರಿಸಿದ 10ನೇ ತರಗತಿ ವಿದ್ಯಾರ್ಥಿ

ಭಾರತದಲ್ಲಿ ಕರೋನಾ ವೈರಸ್ ಹಬ್ಬಿದ ನಂತರ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಮನೆಯಲ್ಲಿ ಉಳಿದಿರುವ ವಿದ್ಯಾರ್ಥಿಗಳು ಹೊಸ ಹೊಸ ಪ್ರಯೋಗಗಳನ್ನು ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ.

ಸ್ಕ್ರಾಪ್ ಮೆಟಿರಿಯಲ್​ಗಳಿಂದ ಬೈಕ್ ತಯಾರಿಸಿದ 10ನೇ ತರಗತಿ ವಿದ್ಯಾರ್ಥಿ

ಹೆಚ್ಚಿನ ಆವಿಷ್ಕಾರಗಳು ವಾಹನ ಆಧಾರಿತವಾದುವು ಎಂಬುದು ವಿಶೇಷ. ಕೆಲವು ದಿನಗಳ ಹಿಂದೆ ಕೇರಳದ ವಿದ್ಯಾರ್ಥಿಯೊಬ್ಬ ಸ್ಕ್ರಾಪ್ ಮೆಟಿರಿಯಲ್​ಗಳಿಂದ ಬೈಕ್ ತಯಾರಿಸಿದ್ದ. ಈಗ ಚಂಡೀಗಢದ 10ನೇ ತರಗತಿ ವಿದ್ಯಾರ್ಥಿ ಗೌರವ್ ತನ್ನದೇ ಆದ ಬೈಕ್ ಅನ್ನು ಅಭಿವೃದ್ಧಿಪಡಿಸಿದ್ದಾನೆ. ಗೌರವ್ ಈ ಬೈಕ್ ಅನ್ನು ಇತರ ಬೈಕುಗಳ ಬಿಡಿಭಾಗಗಳನ್ನು ಬಳಸಿ ತಯಾರಿಸಿದ್ದಾನೆ.

ಸ್ಕ್ರಾಪ್ ಮೆಟಿರಿಯಲ್​ಗಳಿಂದ ಬೈಕ್ ತಯಾರಿಸಿದ 10ನೇ ತರಗತಿ ವಿದ್ಯಾರ್ಥಿ

ಭಾರತೀಯರು ನಿಷ್ಪ್ರಯೋಜಕ ಬಿಡಿಭಾಗಗಳನ್ನು ಬಳಸಿ ಹೊಸ ಹೊಸ ವಾಹನಗಳನ್ನು ಅಭಿವೃದ್ಧಿಪಡಿಸುವಲ್ಲಿ ನಿಪುಣರು. ಅದನ್ನು ಗೌರವ್ ಮತ್ತೊಮ್ಮೆ ಸಾಬೀತುಪಡಿಸಿದ್ದಾನೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಸ್ಕ್ರಾಪ್ ಮೆಟಿರಿಯಲ್​ಗಳಿಂದ ಬೈಕ್ ತಯಾರಿಸಿದ 10ನೇ ತರಗತಿ ವಿದ್ಯಾರ್ಥಿ

ವಿದ್ಯಾರ್ಥಿ ಗೌರವ್ ಅಭಿವೃದ್ಧಿಪಡಿಸಿರುವ ಬೈಕ್ ಪೆಟ್ರೋಲ್‌ ಮೂಲಕ ಸಾಗುತ್ತದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ ಈ ಬೈಕ್ ಸುಮಾರು 80 ಕಿ.ಮೀಗಳವರೆಗೆ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.

ಸ್ಕ್ರಾಪ್ ಮೆಟಿರಿಯಲ್​ಗಳಿಂದ ಬೈಕ್ ತಯಾರಿಸಿದ 10ನೇ ತರಗತಿ ವಿದ್ಯಾರ್ಥಿ

10ನೇ ತರಗತಿ ವಿದ್ಯಾರ್ಥಿ ಗೌರವ್ ಇತರ ಬೈಕ್‌ಗಳ ನಿಷ್ಪ್ರಯೋಜಕ ಬಿಡಿಭಾಗಗಳನ್ನು ಬಳಸಿ ಬೈಕ್ ಅನ್ನು ಅಭಿವೃದ್ಧಿಪಡಿಸುತ್ತಿರುವುದು ಇದೇ ಮೊದಲ ಸಲವಲ್ಲ ಎಂಬುದನ್ನು ಗಮನಿಸಬೇಕು.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಸ್ಕ್ರಾಪ್ ಮೆಟಿರಿಯಲ್​ಗಳಿಂದ ಬೈಕ್ ತಯಾರಿಸಿದ 10ನೇ ತರಗತಿ ವಿದ್ಯಾರ್ಥಿ

ಕಳೆದ ಮೂರು ವರ್ಷಗಳಲ್ಲಿ ಗೌರವ್ ಬಳಕೆಯಾಗದ ಬಿಡಿಭಾಗಗಳನ್ನು ಬಳಸಿ ಎಲೆಕ್ಟ್ರಿಕ್ ಬೈಕ್ ಒಂದನ್ನು ಅಭಿವೃದ್ಧಿಪಡಿಸಿದ್ದ. ಆದರೆ ಆ ಎಲೆಕ್ಟ್ರಿಕ್ ಬೈಕ್ ವೇಗವಾಗಿ ಚಲಿಸುತ್ತಿರಲಿಲ್ಲ.

ಸ್ಕ್ರಾಪ್ ಮೆಟಿರಿಯಲ್​ಗಳಿಂದ ಬೈಕ್ ತಯಾರಿಸಿದ 10ನೇ ತರಗತಿ ವಿದ್ಯಾರ್ಥಿ

ಈ ಕಾರಣಕ್ಕೆ ಗೌರವ್ ಈಗ ಪೆಟ್ರೋಲ್ ನಿಂದ ಚಲಿಸುವ ಬೈಕ್ ಅಭಿವೃದ್ಧಿಪಡಿಸಿದ್ದಾನೆ. ಹಲವು ಬೈಕ್‌ಗಳ ಬಳಕೆಯಾಗದ ಬಿಡಿಭಾಗಗಳನ್ನು ಒಟ್ಟುಗೂಡಿಸಿ ಈ ಬೈಕ್ ಅನ್ನು ಸ್ವತಃ ತಾನೇ ಅಭಿವೃದ್ಧಿಪಡಿಸಿದ್ದಾನೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಸ್ಕ್ರಾಪ್ ಮೆಟಿರಿಯಲ್​ಗಳಿಂದ ಬೈಕ್ ತಯಾರಿಸಿದ 10ನೇ ತರಗತಿ ವಿದ್ಯಾರ್ಥಿ

ಗೌರವ್ ವಾಸಿಸುತ್ತಿರುವ ಪ್ರದೇಶ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಗೌರವ್ ನ ಈ ಸಾಧನೆಯನ್ನು ಪ್ರಶಂಶಿಸಲಾಗುತ್ತಿದೆ. ಗೌರವ್ ಅಭಿವೃದ್ಧಿಪಡಿಸಿರುವ ಈ ಬೈಕಿನಲ್ಲಿರುವ ರೇರ್ ವೀವ್ ಮಿರರ್ ಹಾಗೂ ಲೈಟ್ ಗಳು ಸಾಮಾನ್ಯ ಬೈಕಿನಲ್ಲಿರುವಂತೆಯೇ ಇರುವುದು ವಿಶೇಷ.

ಸ್ಕ್ರಾಪ್ ಮೆಟಿರಿಯಲ್​ಗಳಿಂದ ಬೈಕ್ ತಯಾರಿಸಿದ 10ನೇ ತರಗತಿ ವಿದ್ಯಾರ್ಥಿ

ಭಾರತದ ವಿದ್ಯಾರ್ಥಿಗಳು ಸ್ವತಃ ಬೈಕುಗಳನ್ನು ಅಭಿವೃದ್ಧಿಪಡಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ದೇಶದ ವಿವಿಧ ಭಾಗದ ವಿದ್ಯಾರ್ಥಿಗಳು ಇದೇ ರೀತಿ ಇತರ ಬೈಕ್‌ಗಳ ಬಿಡಿ ಭಾಗಗಳನ್ನು ಬಳಸಿ ಬೈಕುಗಳನ್ನು ಅಭಿವೃದ್ಧಿಪಡಿಸಿದ್ದರು.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಸ್ಕ್ರಾಪ್ ಮೆಟಿರಿಯಲ್​ಗಳಿಂದ ಬೈಕ್ ತಯಾರಿಸಿದ 10ನೇ ತರಗತಿ ವಿದ್ಯಾರ್ಥಿ

ವಾಹನಗಳ ಬಗ್ಗೆ ಆಸಕ್ತಿ ಮತ್ತು ಅವುಗಳನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿರುವ ವಿದ್ಯಾರ್ಥಿಗಳು ಪೆಟ್ರೋಲ್ ಹಾಗೂ ಡೀಸೆಲ್ ನಿಂದ ಚಲಿಸುವ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಬದಲಿಸುತ್ತಿದ್ದಾರೆ.

ಸ್ಕ್ರಾಪ್ ಮೆಟಿರಿಯಲ್​ಗಳಿಂದ ಬೈಕ್ ತಯಾರಿಸಿದ 10ನೇ ತರಗತಿ ವಿದ್ಯಾರ್ಥಿ

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಸತತವಾಗಿ ಏರಿಕೆಯಾಗುತ್ತಲೇ ಇದೆ. ಜೊತೆಗೆ ಪೆಟ್ರೋಲ್, ಡೀಸೆಲ್ ವಾಹನಗಳಿಂದ ವಾಯುಮಾಲಿನ್ಯವು ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತಕ್ಕೆ ಹೆಚ್ಚಿನ ಸಂಖ್ಯೆಯ ಎಲೆಕ್ಟ್ರಿಕ್ ವಾಹನಗಳ ಅಗತ್ಯವಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಸ್ಕ್ರಾಪ್ ಮೆಟಿರಿಯಲ್​ಗಳಿಂದ ಬೈಕ್ ತಯಾರಿಸಿದ 10ನೇ ತರಗತಿ ವಿದ್ಯಾರ್ಥಿ

ಈ ಕಾರಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸುತ್ತಿವೆ. ಪೆಟ್ರೋಲ್, ಡೀಸೆಲ್ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಾಗಿ ಬದಲಿಸುವವರು ತಮ್ಮ ಕೌಶಲ್ಯದಿಂದ ಎಲ್ಲರ ಗಮನವನ್ನು ಸೆಳೆಯುತ್ತಿದ್ದಾರೆ.

Most Read Articles

Kannada
English summary
Class 10 student from Chandigarh develops bike from scrap materials. Read in Kannada.
Story first published: Tuesday, September 15, 2020, 9:53 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X