ಇನ್ನು ಮುಂದೆ ಹೆಲ್ಮೆಟ್ ಉಪಟಳ ಕಾಡದು
ಯಾವುದೇ ಒಂದು ಪ್ರದೇಶಕ್ಕೆ ತೆರಳಿದರೆ ಅನೇಕ ಮಂದಿ ಸವಾರರಲ್ಲಿ ಹೆಲ್ಮೆಟ್ ಎಲ್ಲಿಡುವುದೆಂಬ ಸಮಸ್ಯೆ ಶುರುವಾಗುತ್ತದೆ. ಗಾಡಿಯಲ್ಲಿ ಹೆಲ್ಮೆಟ್ ಲಾಕ್ ಬೇರೆ ಇಲ್ಲ. ಹಾಗಿರುವಾಗ ಇದನ್ನು ಹೊತ್ತುಕೊಂಡು ಸಾಗುವುದಕ್ಕಿಂತ ನಿಯಮ ಪಾಲಕರ ಕಣ್ಮಪ್ಪಿಸಿಕೊಂಡು ಹೋಗುವುದೇ ಲೇಸು ಎಂದು ಅಂದುಕೊಳ್ಳುತ್ತಾರೆ.
ಹೆಲ್ಮೆಟ್ ಸತ್ಯಾಸತ್ಯತೆ; ಇತಿಹಾಸದತ್ತ ಒಂದು ಪಯಣ
ಇವೆಲ್ಲ ಸಮಸ್ಯೆಗಳಿಗೆ ಪರಿಹಾರದ ರೂಪದಲ್ಲಿ ನಿಮ್ಮ ಬ್ಯಾಗ್ ನಲ್ಲಿಟ್ಟುಕೊಂಡು ಸಾಗಬಹುದಾದ ವಿನೂತನ ಹೆಲ್ಮೆಟ್ ವೊಂದನ್ನು ನಾವಿಂದು ಪರಿಚಯಿಸಲಿದ್ದೇವೆ. ಅದುವೇ Closca Fuga.

ಶೇಕಡಾ 50ರಷ್ಟು ಮುದುಡಿಕೊಳ್ಳುವಂತ ವಿನ್ಯಾಸ ರಚನೆಯನ್ನು ಇದು ಪಡೆದುಕೊಂಡಿದೆ. ಅಲ್ಲದೆ ನಿಮ್ಮ ಬ್ಯಾಗ್ ನಲ್ಲಿ ಸುಲಭವಾಗಿ ಹೊತ್ತೊಯ್ಯಬಹುದಾಗಿದೆ.

ಇದರಲ್ಲಿರುವ ನಾವೀನ್ಯ ವಿನ್ಯಾಸದಿಂದಲೇ 2015ರ 'ರೆಡ್ ಡಾಟ್ ಡಿಸೈನ್ ಪ್ರಶಸ್ತಿ'ಗೂ ಭಾಜನವಾಗಿದೆ.

ಇದೊಂದು ಫುಲ್ ಫೇಸ್ ಹೆಲ್ಮೆಟ್ ಅಲ್ಲ. ಹಾಗೆಯೇ ಸೈಕಲ್ ಸವಾರರಿಗೆ ಮಾತ್ರ ಸೂಕ್ತ ಎಂಬದನ್ನು ಸಂಸ್ಥೆ ಸ್ಪಷ್ಟಪಡಿಸುತ್ತದೆ. ಹಾಗಾಗಿ ಬೈಕ್ ಸವಾರರು ಇದನ್ನು ಧರಿಸುವುದು ಬೇಡ ಎಂಬುದು ನಮ್ಮ ಸಲಹೆಯಾಗಿದೆ.

ಮೂರು ಪದರುಗಳಾಗಿ ಇದನ್ನು ಮಡಚಬಹುದಾಗಿದೆ. ಅಂದರೆ ಐದು ಇಂಚು ಎತ್ತರದ ಈ ಹೆಲ್ಮೆಟ್ 2.36 ಇಂಚುಗಳಿಗೆ ಮುದುಡಿಕೊಳ್ಳುತ್ತದೆ.

ಗ್ರಾಹಕ ಉತ್ಪನ್ನ ಸುರಕ್ಷತಾ ಆಯೋಗದಿಂದ ಭದ್ರತಾ ಪರವಾನಗಿಯನ್ನು ಗಿಟ್ಟಿಸಿಕೊಂಡಿರುವ ಪ್ರಸ್ತುತ ಹೆಲ್ಮೆಟ್ 100 ಅಮೆರಿಕನ್ ಡಾಲರ್ ಗಳಷ್ಟು ದುಬಾರಿಯೆನಿಸುತ್ತದೆ.

ಹೆಣ್ಮಕ್ಕಳಿಗಾಗಿ ಡ್ರೈವಿಂಗ್ ಸಂದರ್ಭದಲ್ಲಿ ಕೇಶ ರಕ್ಷಣೆ
ಹೆಲ್ಮೆಟ್ ಆಯ್ಕೆ ಕಷ್ಟವೇ? ಬನ್ನಿ ನಮ್ಮ ಸಲಹೆ ಪಡೆಯಿರಿ
ತಲೆ ಇದ್ದವರಿಗೆ ಮಾತ್ರ ಸರಿಯಾದ ಶಿರಸ್ತ್ರಾಣ


Click it and Unblock the Notifications








