Siddaramaiah: ಸಿದ್ದು ಸಹೋದ್ಯೋಗಿಗಳಿಗೆ ದುಬಾರಿ ಬೆಲೆಯ ಟೊಯೊಟಾ ಇನ್ನೋವಾ, ಖುಷಿ ಹಂಚಿಕೊಂಡ ಸಚಿವ!

ಸಿಎಂ ಸಿದ್ದರಾಮಯ್ಯ (Cm Siddaramaiah) ನೇತೃತ್ವದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ, ತನ್ನ ಸಂಪುಟ ಸಚಿವರಿಗೆ ಹೊಸ ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova HyCross) ಎಂಪಿವಿಯನ್ನು ನೀಡಿದೆ. ಇತ್ತೀಚೆಗೆ, ಸುಮಾರು 9.9 ಕೋಟಿ ರೂಪಾಯಿ ವೆಚ್ಚದಲ್ಲಿ 33 ನೂತನ ಕಾರುಗಳನ್ನು ಸರ್ಕಾರ ಬುಕ್ ಮಾಡಿದೆ ಎಂದು ವರದಿಯಾಗಿತ್ತು.

ಸದ್ಯ, ಕೆಲವು ಸಚಿವರು ಹೊಸ ಕಾರುಗಳನ್ನು ಬಳಸಲು ಆರಂಭಿಸಿದ್ದು, ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸಂತಸವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರು, 'ಎಕ್ಸ್ ಟಿಂಗ್ ನ್ಯೂಸ್! ಕರ್ನಾಟಕ ಸರ್ಕಾರಕ್ಕೆ ಹೊಸ ಸೇರ್ಪಡೆ. ಪರಿಸರ ಸ್ನೇಹಿ, ಟೊಯೊಟಾ ಇನ್ನೋವಾ ಹೈಕ್ರಾಸ್ ಗೆ ಸ್ವಾಗತ' ಎಂದು ಬರೆದುಕೊಂಡಿದ್ದಾರೆ.

Siddaramaiah: ಸಿದ್ದು ಸಹೋದ್ಯೋಗಿಗಳಿಗೆ ದುಬಾರಿ ಬೆಲೆಯ ಟೊಯೊಟಾ ಇನ್ನೋವಾ, ಖುಷಿ ಹಂಚಿಕೊಂಡ ಸಚಿವ!

ಸಚಿವರ ಈ ಪೋಸ್ಟ್‌ಗೆ ನೆಟ್ಟಿಗರಿಂದ ಹಲವು ಟೀಕೆಗಳು ವ್ಯಕ್ತವಾಗಿವೆ. 'ಜನರ ತೆರಿಗೆಯ ಈ ಹಣದಲ್ಲಿ.. ನೀರಾವರಿ ಇಲಾಖೆಯ ಅನೇಕ ಗುತ್ತಿಗೆ ನೌಕರರಿಗೆ ಹಲವು ತಿಂಗಳಿಂದ ವೇತನ ಪಾವತಿಯಾಗಿಲ್ಲ. ವೇತನಕ್ಕಾಗಿ ಪರದಾಡುತ್ತಿರುವ ಆ ನೌಕರರಿಗೆ ಈ ಐಷಾರಾಮಿ ಕಾರಿನ ಬೆಲೆ ಕೇವಲ ನಲವತ್ತು ಲಕ್ಷ ಎಂದು ತಿಳಿದರೆ, ನಾರಾಯಣಪುರ ಬಲದಂಡೆ ಖಾಲಿ ನಾಲೆಗೆ ಬಿದ್ದು ಸಾಯಬಹುದು!' ಎಂದು ಕಾಮೆಂಟ್ ಮಾಡಿದ್ದಾರೆ.

ಮತ್ತೊಬ್ಬರು, 'ಬರಗಾಲದ ಕಾರಣ, ಈ ಬಾರಿ ಹಂಪಿ ಉತ್ಸವ ನಡೆಯುತ್ತಿಲ್ಲ.. ನಮ್ಮ ನಾಡ ಹಬ್ಬ ದಸರಾ ಸರಳಾಚರಣೆ .. ಆದರೆ, ನಮ್ಮ ಜನಪ್ರತಿನಿಧಿಗಳಿಗೆ ಈ ರೀತಿಯ ಶೋಕಿ ಮಾಡೋದಿಕ್ಕೆ ಯಾವುದೇ ಕುಂದು ಕೊರತೆ ಇಲ್ಲ..' ಎಂದು ಟೀಕಿಸಿದ್ದಾರೆ. ಇನ್ನೊಬ್ಬರು, 'ರಸ್ತೆ ಗುಂಡಿಗಳನ್ನು ಸರಿಪಡಿಸಲು ಹಣವಿಲ್ಲ. ಆದರೆ, ಇದಕ್ಕಾಗಿ ನಿಮ್ಮ ಬಳಿ ಹಣವಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟೊಯೊಟಾ ಇನ್ನೋವಾ ಹೈಕ್ರಾಸ್ (Toyota Innova HyCross) ಎಂಪಿವಿ ಬಗ್ಗೆ ಹೇಳುವುದಾದರೆ, ಇದು, ನಮ್ಮ ಕರ್ನಾಟಕದ ಬಿಡದಿಯಲ್ಲಿ ತಯಾರಾಗಲಿದ್ದು, ರೂ.18.82 ಲಕ್ಷದಿಂದ ರೂ.30.26 ಲಕ್ಷ ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಕೆಲವು ರೂಪಾಂತರಗಳು ವಿತರಣೆಯಾಗಲು 15 ತಿಂಗಳು ಹಿಡಿಯುತ್ತದೆ. ಈ ಹಿಂದೆ, ಪೂರೈಕೆ ಸಮಸ್ಯೆ ಕಾರಣ, ಟಾಪ್ ಎಂಡ್ ಮಾದರಿಗಳಾದ ಝಡ್ಎಕ್ಸ್ ಮತ್ತು ಝಡ್ಎಕ್ಸ್(ಒ) ಬುಕ್ಕಿಂಗ್ ಅನ್ನು ಸ್ಥಗಿತಗೊಳಿಸಲಾಗಿತ್ತು.

7- 8 ಆಸನ ಆಯ್ಕೆಯಲ್ಲಿ ದೊರೆಯುವ ಈ ಎಂಪಿವಿ, 2 ಎಂಜಿನ್ ಆಯ್ಕೆಯಲ್ಲಿ ದೊರೆಯುತ್ತದೆ. ಅವುಗಳೆಂದರೆ, 2.0 ಲೀಟರ್, 4 ಸಿಲಿಂಡರ್ ನ್ಯಾಚುರಲ್ ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಹಾಗೂ ಪವರ್ ಫುಲ್ 2.0 ಲೀಟರ್, 4 ಸಿಲಿಂಡರ್ ಹೈಬ್ರಿಡ್ ಪೆಟ್ರೋಲ್ ಎಂಜಿನ್. ಜೊತೆಗೆ ಸಿವಿಟಿ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದ್ದು, 21 kmpl ಇಂಧನ ದಕ್ಷತೆಯನ್ನು ಹೊಂದಿದೆ.

ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ 10 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಡ್ಯುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್, ಆಕರ್ಷಕ ಸನ್‌ರೂಫ್, ವೈರ್‌ಲೆಸ್ ಫೋನ್ ಚಾರ್ಜಿಂಗ್ ಮತ್ತು 360 ಡಿಗ್ರಿ ಕ್ಯಾಮೆರಾ ಸೇರಿದಂತೆ ಹತ್ತಾರು ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಪಡೆದಿದೆ. ಗ್ಲಾಸ್ ಫ್ಲೇಕ್, ಸೂಪರ್ ವೈಟ್, ಪ್ಲಾಟಿನಂ ವೈಟ್ ಪರ್ಲ್, ಸಿಲ್ವರ್ ಮೆಟಾಲಿಕ್ ಸೇರಿದಂತೆ ವಿವಿಧ ಬಣ್ಣಗಳ ಆಯ್ಕೆಯಲ್ಲಿ ಸಿಗುತ್ತದೆ.

ಸುರಕ್ಷತೆಯ ದೃಷ್ಟಿಯಿಂದಲ್ಲೂ ಟೊಯೊಟಾ ಇನ್ನೋವಾ ಹೈಕ್ರಾಸ್ ಎಂಪಿವಿ ಅತ್ಯಾಧುನಿಕವಾಗಿದೆ. 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), EBD (ಎಲೆಕ್ಟ್ರಾನಿಕ್ ಬ್ರೇಕಿಂಗ್ ಸಿಸ್ಟಮ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ADAS (ಅಡ್ವಾನ್ಸ್ಡ್ ಡ್ರೈವರ್ ಅಸಿಸ್ಟೆಂಟ್ ಸಿಸ್ಟಮ್), VSC (ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್) ಸೇರಿದಂತೆ ಹಲವು ಫೀಚರ್ಸ್ ಒಳಗೊಂಡಿದ್ದು, ಮಾರುತಿ ಸುಜುಕಿ ಇನ್ವಿಕ್ಟೊ, ಕಿಯಾ ಕ್ಯಾರೆನ್ಸ್‌ ಪ್ರತಿಸ್ಪರ್ಧಿಯಾಗಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Thursday, October 12, 2023, 12:46 [IST]
English summary
Cm siddaramaiah govt buy new toyota innova hycross for cabinet ministers
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+