ಕಾರುಗಳಲ್ಲಿರುವ ವಿವಿಧ ಬಗೆಯ ವಾರ್ನಿಂಗ್ ಲೈಟ್'ಗಳಿವು

By Manoj Bk

ಹೊಸ ಕಾರುಗಳು ಹಲವಾರು ಫೀಚರ್'ಗಳನ್ನು ಹೊಂದಿರುತ್ತವೆ. ಕಾರುಗಳಲ್ಲಿ ಕಂಡು ಬರುವ ಸಮಸ್ಯೆಗಳನ್ನು ಮಾಲೀಕರಿಗೆ ತಿಳಿಸಲೆಂದು ಕಾರು ತಯಾರಕ ಕಂಪನಿಗಳು ಸ್ಪೀಡೋಮೀಟರ್ ಕನ್ಸೋಲ್‌ನಲ್ಲಿ ವಿವಿಧ ರೀತಿಯ ಅಲರ್ಟ್ ಲೈಟ್'ಗಳನ್ನು ನೀಡುತ್ತವೆ.

ಕಾರುಗಳಲ್ಲಿರುವ ವಿವಿಧ ಬಗೆಯ ವಾರ್ನಿಂಗ್ ಲೈಟ್'ಗಳಿವು

ಬಹುತೇಕ ಜನರಿಗೆ ಈ ಅಲರ್ಟ್ ದೀಪಗಳ ಅರ್ಥವೇನು ಎಂಬುದೇ ತಿಳಿದಿರುವುದಿಲ್ಲ. ಕಾರುಗಳಲ್ಲಿರುವ ಅಲರ್ಟ್ ಲೈಟ್'ಗಳ ಅರ್ಥವೇನು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಈ ಲೇಖನದಲ್ಲಿ ಹೆಚ್ಚಿನ ಕಾರುಗಳಲ್ಲಿ ಕಂಡುಬರುವ ಸಾಮಾನ್ಯ ಅಲರ್ಟ್ ಲೈಟ್'ಗಳ ಬಗ್ಗೆ ಮಾತ್ರ ತಿಳಿಸಲಿದ್ದೇವೆ. ನಿಮ್ಮ ಕಾರಿನಲ್ಲಿರುವ ಪ್ರತಿಯೊಂದು ಅಲರ್ಟ್ಲೈಟ್ ಬಗ್ಗೆ ನಿಖರವಾಗಿ ತಿಳಿಯಲು ಕಾರಿನ ಮ್ಯಾನುವಲ್ ನೋಡುವುದು ಒಳ್ಳೆಯದು.

ಕಾರುಗಳಲ್ಲಿರುವ ವಿವಿಧ ಬಗೆಯ ವಾರ್ನಿಂಗ್ ಲೈಟ್'ಗಳಿವು

ಡೋರ್ ಓಪನ್ ವಾರ್ನಿಂಗ್ ಲೈಟ್

ಒಂದು ಅಥವಾ ಹೆಚ್ಚಿನ ಡೋರ್'ಗಳು ಸರಿಯಾಗಿ ಮುಚ್ಚದಿದ್ದರೆ, ಈ ಅಲರ್ಟ್ ಲೈಟ್ ಬೆಳಗುತ್ತದೆ. ಕೆಲವು ಕಾರುಗಳಲ್ಲಿ ಯಾವ ಬಾಗಿಲನ್ನು ಸರಿಯಾಗಿ ಹಾಕಬೇಕು ಎಂಬುದರ ಮಾಹಿತಿಯನ್ನು ಸಹ ಪ್ರದರ್ಶಿಸಲಾಗುತ್ತದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕಾರುಗಳಲ್ಲಿರುವ ವಿವಿಧ ಬಗೆಯ ವಾರ್ನಿಂಗ್ ಲೈಟ್'ಗಳಿವು

ವಾಷರ್ ಫ್ಲೂಯಡ್ ರಿಮ್ಯಾಂಡರ್

ವೈಪರ್ ಫ್ಲೂಯಡ್ ಮಟ್ಟವು ತೀರಾ ಕಡಿಮೆಯಾದಾಗ ಈ ಲೈಟ್ ಬೆಳಗುತ್ತದೆ. ಆದರೆ ಈ ಅಲರ್ಟ್ ಲೈಟ್ ಸಾಮಾನ್ಯವಾಗಿ ಪ್ರೀಮಿಯಂ ಕಾರುಗಳಲ್ಲಿ ಮಾತ್ರ ಕಂಡುಬರುತ್ತದೆ.

ಕಾರುಗಳಲ್ಲಿರುವ ವಿವಿಧ ಬಗೆಯ ವಾರ್ನಿಂಗ್ ಲೈಟ್'ಗಳಿವು

ಎಬಿಎಸ್ ಲೈಟ್

ಕಾರಿನ ಎಬಿಎಸ್ ಬ್ರೇಕ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ದೋಷಯುಕ್ತವಾಗಿದ್ದರೆ, ಈ ಲೈಟ್ ಬೆಳಗುತ್ತದೆ. ಆದರೆ ಈ ಲೈಟ್ ಎಬಿಎಸ್ ಬ್ರೇಕ್‌ನಲ್ಲಿನ ಅಸಮರ್ಪಕ ಕಾರ್ಯಗಳನ್ನು ಮಾತ್ರ ಸೂಚಿಸುತ್ತದೆ. ಈ ಲೈಟ್ ಬೆಳಗುವುದರಿಂದ ಬ್ರೇಕಿಂಗ್ ಕೆಟ್ಟು ಹೋಗಿದೆ ಎಂದು ಅರ್ಥವಲ್ಲ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕಾರುಗಳಲ್ಲಿರುವ ವಿವಿಧ ಬಗೆಯ ವಾರ್ನಿಂಗ್ ಲೈಟ್'ಗಳಿವು

ಕ್ರೂಸ್ ಕಂಟ್ರೋಲ್ ಲೈಟ್

ಈ ಲೈಟ್ ಕಾರಿನಲ್ಲಿ ಕ್ರೂಸ್ ಕಂಟ್ರೋಲ್ ಅನ್ನು ಆಕ್ಟಿವೇಟ್ ಮಾಡಿದಾಗ ಮಿನುಗುತ್ತದೆ.

ಕಾರುಗಳಲ್ಲಿರುವ ವಿವಿಧ ಬಗೆಯ ವಾರ್ನಿಂಗ್ ಲೈಟ್'ಗಳಿವು

ಆಟೋಮ್ಯಾಟಿಕ್ ಶಿಫ್ಟ್ ಲಾಕ್

ಆಟೋಮ್ಯಾಟಿಕ್ ಕಾರುಗಳಲ್ಲಿ ನ್ಯೂಟ್ರಲ್'ನಿಂದ ಬದಲಿಸುವಾಗ ಬ್ರೇಕ್ ಹಾಕಬೇಕಾಗುತ್ತದೆ. ಆದರೆ ಬ್ರೇಕ್ ಪೆಡಲ್ ಅನ್ನು ಪ್ರೆಸ್ ಮಾಡದೇ ನ್ಯೂಟ್ರಲ್'ನಿಂದ ಗೇರ್‌ಗೆ ಬದಲಿಸಲು ಪ್ರಯತ್ನಿಸಿದರೆ, ಈ ವಾರ್ನಿಂಗ್ ಲೈಟ್ ಮಿನುಗುತ್ತದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಕಾರುಗಳಲ್ಲಿರುವ ವಿವಿಧ ಬಗೆಯ ವಾರ್ನಿಂಗ್ ಲೈಟ್'ಗಳಿವು

ಟ್ರಾಕ್ಷನ್ ಕಂಟ್ರೋಲ್ ಐಕಾನ್

ಈಗ ಬಿಡುಗಡೆಯಾಗುತ್ತಿರುವ ಬಹುತೇಕ ಕಾರುಗಳು ಟ್ರಾಕ್ಷನ್ ಕಂಟ್ರೋಲ್ ಫೀಚರ್ ಹೊಂದಿರುರುತ್ತವೆ. ಟ್ರಾಕ್ಷನ್ ಕಂಟ್ರೋಲ್ ಅನ್ನು ಡಿಆಕ್ಟಿವೇಟ್ ಮಾಡಲು ಸಹ ಈ ಕಾರುಗಳಲ್ಲಿ ಸೌಲಭ್ಯಗಳಿರುತ್ತವೆ.

ಕಾರುಗಳಲ್ಲಿರುವ ವಿವಿಧ ಬಗೆಯ ವಾರ್ನಿಂಗ್ ಲೈಟ್'ಗಳಿವು

ಸ್ನೋ ಲ್ಯಾಂಪ್ ಐಕಾನ್

ಫಾಗ್ ಲ್ಯಾಂಪ್'ಗಳನ್ನು ಬದಲಿಸಿದಾಗ ಸ್ಪೀಡೋಮೀಟರ್ ಕನ್ಸೋಲ್‌ನಲ್ಲಿ ಈ ಐಕಾನ್ ಕಾಣಿಸುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಕಾರುಗಳಲ್ಲಿರುವ ವಿವಿಧ ಬಗೆಯ ವಾರ್ನಿಂಗ್ ಲೈಟ್'ಗಳಿವು

ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ

ಈಗ ಬಿಡುಗಡೆಯಾಗುತ್ತಿರುವ ಬಹುತೇಕ ಕಾರುಗಳು ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂ ಹೊಂದಿರುತ್ತವೆ. ಕಾರಿನ ಯಾವುದೇ ಒಂದು ಟಯರ್‌ನಲ್ಲಿ ಕಡಿಮೆ ಗಾಳಿಯಿದ್ದರೆ ಅಥವಾ ಟಯರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಂನಲ್ಲಿ ಯಾವುದೇ ಅಸಮರ್ಪಕ ಕಾರ್ಯಗಳಿದ್ದಲ್ಲಿ ಈ ಲೈಟ್ ಬೆಳಗುತ್ತದೆ.

ಕಾರುಗಳಲ್ಲಿರುವ ವಿವಿಧ ಬಗೆಯ ವಾರ್ನಿಂಗ್ ಲೈಟ್'ಗಳಿವು

ಏರ್'ಬ್ಯಾಗ್ ಐಕಾನ್

ಕಾರನ್ನು ಸ್ಟಾರ್ಟ್ ಮಾಡಿದ ನಂತರವೂ ವಾರ್ನಿಂಗ್ ಲೈಟ್ ಇದ್ದರೆ, ಕಾರಿನ ಏರ್‌ಬ್ಯಾಗ್ ಸಿಸ್ಟಂನಲ್ಲಿ ಏನಾದರೂ ದೋಷವಿದೆ ಎಂದರ್ಥ. ಕಾರ್ ಅನ್ನು ಸರ್ವೀಸ್ ಸೆಂಟರಿಗೆ ಕೊಂಡೊಯ್ಯುವ ಮೂಲಕ ಈ ತೊಂದರೆಯನ್ನು ಸರಿಪಡಿಸಬಹುದು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಕಾರುಗಳಲ್ಲಿರುವ ವಿವಿಧ ಬಗೆಯ ವಾರ್ನಿಂಗ್ ಲೈಟ್'ಗಳಿವು

ಸೀಟ್ ಬೆಲ್ಟ್ ವಾರ್ನಿಂಗ್

ಬಹುತೇಕ ಕಾರುಗಳ ಸ್ಪೀಡೋಮೀಟರ್ ಕನ್ಸೋಲ್‌ನಲ್ಲಿ ಈ ವಾರ್ನಿಂಗ್ ಲೈಟ್ ಕಂಡು ಬರುತ್ತದೆ. ಚಾಲನೆ ಮಾಡುವಾಗ ಸೀಟ್‌ಬೆಲ್ಟ್ ಧರಿಸದಿದ್ದರೆ, ಈ ಲೈಟ್ ಮಿನುಗುತ್ತದೆ.

ಕಾರುಗಳಲ್ಲಿರುವ ವಿವಿಧ ಬಗೆಯ ವಾರ್ನಿಂಗ್ ಲೈಟ್'ಗಳಿವು

ಐಷಾರಾಮಿ ಕಾರುಗಳಲ್ಲಿರುವ ಡಿಸ್'ಪ್ಲೇಯಲ್ಲಿ ಹೆಚ್ಚಿನ ಐಕಾನ್‌ಗಳನ್ನು ನೀಡಲಾಗಿರುತ್ತದೆ. ಕಾರಿನಲ್ಲಿರುವ ಪ್ರತಿಯೊಂದು ವಾರ್ನಿಂಗ್ ಲೈಟ್'ಗಳ ಬಗ್ಗೆ ನಿಖರವಾಗಿ ತಿಳಿದುಕೊಳ್ಳಲು ಕಾರಿನ ಮ್ಯಾನುವಲ್ ನೋಡುವುದು ಉತ್ತಮ.

Most Read Articles

Kannada
English summary
Common warning lights found in new cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X