ಯಶಸ್ಸಿನ ಉತ್ತುಂಗಕ್ಕೇರಿದಾಗ ಉದ್ಯೋಗಿಗಳನ್ನು ಮರೆಯದ ಕಂಪನಿ: ಕೆಲಸಗಾರರಿಗೆ ಭರ್ಜರಿ ಕಾರುಗಳು ಗಿಫ್ಟ್
ಇತ್ತೀಚಿನ ದಿನಗಳಲ್ಲಿ ಸಣ್ಣ ಸಣ್ಣ ಸ್ಟಾರ್ಟ್‌ಅಪ್‌ಗಳನ್ನು ಶುರು ಮಾಡಿ ಮುಂದೆ ಅದು ದೊಡ್ಡ ದೊಡ್ಡ ಕಂಪನಿಯಾಗಿ ಬೆಳೆದು ನಿಂತ ಸುದ್ದಿಗಳನ್ನು ನಾವು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಇತರ ಮಾಧ್ಯಮಗಳಲ್ಲಿ ನೋಡಿದ್ದೇವೆ. ಕಳೆದ ಕೆಲವು ವರ್ಷದಿಂದ ಈಚೆಗೆ ಇದೊಂದು ಟ್ರೆಂಡ್ ಎಂಬ ರೀತಿಯಲ್ಲಿ ಮುನ್ನಡೆಯುತ್ತಿದೆ.
ಇದೇ ರೀತಿ ಸಣ್ಣದಾಗಿ ಶುರು ಮಾಡಿದ ಕಂಪನಿಯೊಂದು ಮುಂದೆ ಅದು ಯಶಸ್ಸು ಸಾಧಿಸಿ ತನ್ನ ಕೆಲಸಗಾರರಿಗೆ ಭಾರೀ ಉಡುಗೊರೆಯೊಂದನ್ನು ನೀಡಿದ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಬಿಸಿ ಬಿಸಿ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಆ ಕಂಪನಿ ತನ್ನ ಕೆಲಸಗಾರರಿಗೆ ನೀಡಿದ ಉಡುಗೊರೆ ಏನೆಂದು ತಿಳಿದರೆ ನೀವು ಆಶ್ಚರ್ಯದಿಂದ ಮೂಗಿನ ಮೇಲೆ ಬೆರಳಿಡುವುದಂತೂ ಖಂಡಿತ.

ಇಲ್ಲಿ ನಾವು ಹೇಳುತ್ತಿರುವ ಕಂಪನಿ ಒಂದು ಟೀ ಕಂಪನಿ. ಹೌದು, ಟೀ ತಯಾರಿಸುವ ಸ್ಟಾರ್ಟ್ ಅಪ್ ಕಂಪನಿಯೊಂದು ಯಶಸ್ಸು ಗಳಿಸಿದ ನಂತರ ತನ್ನ ಉದ್ಯೋಗಿಗಳಿಗೆ ಹ್ಯುಂಡೈ i10 ನಿಯೋಸ್ (Hyundai Grand i10 NIOS) ಕಾರನ್ನು ಉಡುಗೊರೆಯಾಗಿ ನೀಡಿದೆ. ತನ್ನ ಉದ್ಯೋಗಿಗಳಿಗೆ ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಕಾರು ನೀಡಿದ ಎಸ್‌ಇಒ ಹೆಸರು ಸುರೇಶ್ ಸಂಭಂಧಂ ಎಂದು ತಿಳಿದು ಬಂದಿದೆ.
ಟೀಬಾಯ್ ಸಿಇಒ ಮತ್ತು ಫೌಂಡರ್ ಜೋಸೆಫ್ ರಾಜೇಶ್ ಅವರು ೨೦೧೯ ರಲ್ಲಿ ಹೊಸ ಸ್ಟಾರ್ಟ್‌ಅಪ್ ಒಂದನ್ನು ಆರಂಭಿಸಿದ್ದರು. ಆಗಿನಿಂದಲೂ ತಮ್ಮ ಕಂಪನಿಗೆ ಹೆಗಲು ನೀಡಿ ಕೆಲಸ ಮಾಡಿದ ಮೂವರು ಉದ್ಯೋಗಿಗಳಿಗೆ ಕಂಪನಿಯು ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಕಾರನ್ನು ಉಡುಗೊರೆಯಾಗಿ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಜೋಸೆಫ್ ರಾಜೇಶ್ ಅವರು, ತಮ್ಮ ಸ್ಟಾರ್ಟಪ್ ಕಂಪನಿಯ ಕುರಿತಾಗಿ ಮಾತನಾಡಿ ಇದೀಗ ಅವರ ಕಂಪನಿಯು ದೇಶದಲ್ಲಿ ಸುಮಾರು ೪೧೦ ಔಟ್‌ಲೆಟ್‌ಗಳನ್ನು ಹೊಂದಿದ್ದು ಯಶಸ್ವಿಯಾಗಿ ಮುನ್ನಡೆಯುತ್ತಾ ಹೋಗುತ್ತಿದೆ. ಇದರಲ್ಲಿ ನಮ್ಮ ಉದ್ಯೋಗಿಗಳ ಕೊಡುಗೆ ಅಪಾರ. ಹಾಗಾಗಿ ಈ ಸಂಧರ್ಭದಲ್ಲಿ ಕೃತಜ್ಞತೆಗಳನ್ನು ಸಣ್ಣ ಉಡುಗೊರೆ ನೀಡುವ ಮೂಲಕ ಸಲ್ಲಿಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಇಲ್ಲಿನ ಕೆಲಸಗಾರರಿಗೆ ನೀಡಿರುವ ಈ ಹೊಸ ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಕಾರಿನಲ್ಲಿ ಕಳೆದ ತಲೆಮಾರಿನ i10 ನಿಯೋಸ್ ಗಿಂತ ಹಲವಾರು ವ್ಯತ್ಯಾಸಗಳಿವೆ. ಇದರಲ್ಲಿ ಪ್ರಮುಖವಾದುದು ಈ ಕಾರಿನ ಮುಂಭಾಗ. ಕಾರಿನ ಮುಂಭಾಗದಲ್ಲಿ ಹೊಸ ಪ್ರೊಜೆಕ್ಟರ್ ಹೆಡ್ ಲ್ಯಾಂಪ್‌ಗಳನ್ನು ಕಾಣಬಹುದಾಗಿದೆ, ಮಾತ್ರವಲ್ಲದೆ ಡಿಆರ್‌ಎಲ್‌ಗಳಲ್ಲೂ ಕೆಲವೊಂದು ಬದಲಾವಣೆಗಳಿದೆ.
ಹೊಸ ಹ್ಯುಂಡೈ ಗ್ರ್ಯಾಂಡ್ i10 ನಿಯೋಸ್ ಕಾರ್‌ನ ಬಂಪರ್‌ನಲ್ಲಿ ಹೊಸದಾದ ಟ್ವೀಕ್ಗಳನ್ನು ಮಾಡಿದ್ದು ಇದು ಈ ಕಾರಿಗೆ ಫ್ರೆಶ್ ಲುಕ್ ನೀಡುತ್ತದೆ. ಈ ಕಾರಿನ ಬಂಪರ್‌ನಲ್ಲಿ ತ್ರಿಭುಜಾಕಾರದ ಹೊಸ ಶೈಲಿಯ ಡಿಆರ್‌ಎಲ್‌ಗಳನ್ನು ನಾವು ಕಾಣಬಹುದಾಗಿದ್ದು ಇದು ಕಾರನ್ನು ದೂರದಿಂದ ಗುರುತಿಸುವಲ್ಲಿ ನೆರವಾಗುತ್ತದೆ.
ಇದಕ್ಕೆ ಕಾರಿನ ಮುಂಭಾಗದ ಹೊಸ ರೇಡಿಯೇಟರ್ ಗ್ರಿಲ್‌ನ ಶೈಲಿಯು ಬೋಲ್ಡ್ ಲುಕ್ ನೀಡುತ್ತಿದ್ದು, ಯುವಕರನ್ನು ಹೆಚ್ಚಾಗಿ ಆಕರ್ಷಿಸುತ್ತದೆ. ಕಾರಿನ ಹೊರಭಾಗದಲ್ಲಿ ಮಾತ್ರವಲ್ಲದೇ ಒಳ ಭಾಗದಲ್ಲೂ ಸಹ ಹಲವಾರು ಬದಲಾವಣೆಗಳನ್ನು ಹೊಂದಿದೆ. ಹೊಸ ಗ್ರೇ ಕಲರ್‌ನ ಅಪ್‌ಹೋಲ್‌ಸ್ಟ್ರೀ ಸೀಟ್‌ಗಳು, ಫ್ರೆಶ್ ಇಂಟೀರಿಯರ್‌ಗಳು ಇದರಲ್ಲಿ ಪ್ರಮುಖವಾದವು.
ಇದರಲ್ಲಿ ಲೆದರ್ ಆವರಿಸಿಕೊಂಡಿರುವ ಸ್ಟೀರಿಂಗ್ ವ್ಹೀಲ್ ಆರಾಮದಾಯಕ ಪ್ರಯಾಣಕ್ಕೆ ಮುನ್ನುಡಿ ಬರೆಯುತ್ತದೆ ಎಂದರೆ ತಪ್ಪಾಗಲಾರದು. ಇದರಲ್ಲಿ ಆಂಬಿಯನ್ಸ್ ಲೈಟ್ಸ್ ಸಹ ಇದ್ದು, ಇದು ಕಾರಿನೊಳಗೆ ಒಂದು ಪ್ರೀಮಿಯಂ ಲುಕ್ ನೀಡುತ್ತದೆ. ಇನ್ನು ಈ ಉಡುಗೊರೆಯನ್ನು ಪಡೆದ ಉದ್ಯೋಗಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ತಮ್ಮ ಕಂಪನಿಗೆ ಚಿರರುಣಿ ಎಂದು ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications