BMTC ಬಸ್​ನಲ್ಲಿ ಸಾಮಾನ್ಯ ವ್ಯಕ್ತಿಯಂತೆ ರಾಹುಲ್ ಗಾಂಧಿ ಪ್ರಯಾಣ: ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ

ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಇಂದು ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಕೊನೆಯ ಹಂತದ ಕಸರತ್ತನ್ನು ಎಲ್ಲಾ ರಾಜಕೀಯ ಪಕ್ಷಗಳು ನಡೆಸುತ್ತಿದೆ. ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರಚಾರ ಸಂಬಂಧ ರಾಜ್ಯ ಪ್ರವಾಸದಲ್ಲಿದ್ದಾರೆ. ರಾಹುಲ್ ಗಾಂಧಿ ಬಿಎಂಟಿಸಿ ಬಸ್ ನಲ್ಲಿ ಪ್ರಯಾಣ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್​​ನ​ ಕೇಂದ್ರ ನಾಯಕರು ರಾಜ್ಯದಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ. ಬೆಂಗಳುರು ನಗರದಲ್ಲಿ ನಿನ್ನೆ ರಾಹುಲ್ ಗಾಂಧಿ ಅವರು ಫುಡ್ ಡೆಲಿವರಿ ಬಾಯ್ ಜೊತೆ ದ್ವಿಚಕ್ರ ವಾಹನದಲ್ಲಿ ಸಂಚರಿಸಿದ ವೀಡಿಯೊ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ರಾಹುಲ್ ಗಾಂಧಿ ಅವರು ಕನ್ನಿಂಗ್​​ಹ್ಯಾಮ್ ರಸ್ತೆಯ ಕೆಫೆಯಲ್ಲಿ ಗ್ರಾಹಕರ ಜೊತೆ ಕಾಫಿ ಕುಡಿದಿದ್ದಾರೆ. ಬಳಿಕ ಬಿಎಂಟಿಸಿ ಬಸ್​​ನಲ್ಲಿ ಪ್ರಯಾಣಿಕತ ಜೊತೆ ಪ್ರಯಾಣ ಮಾಡಿದ್ದಾರೆ.

Rahul Gandhi

ಇಂದು ಬೆಳಗ್ಗೆಯಿಂದಲೇ ಮತಯಾಚನೆಯಲ್ಲಿ ತೊಡಗಿರುವ ರಾಹುಲ್ ಗಾಂಧಿ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಕೆಫೆ ಕಾಫಿ ಡೇಗೆ ತೆರಳಿ ಕಾಫಿ ಕುಡಿದು ಅಲ್ಲಿದ್ದವರ ಜೊತೆಗೆ ಮಾತುಕತೆ ನಡೆಸಿದರು. ಬಳಿಕ ಪಕ್ಕದಲ್ಲಿದ್ದ ಬಸ್ ಸ್ಟಾಂಡ್ ಗೆ ಆಗಮಿಸಿದ ರಾಹುಲ್ ಬಸ್ ಗಾಗಿ ಕಾಯುತ್ತಿದ್ದವರ ಜೊತೆಗೂ ಕೆಲ ಹೊತ್ತು ಮಾತುಕತೆ ನಡೆಸಿದರು. ಇದರ ಬಳಿಕ ಬಿಎಂಟಿಸಿ ಬಸ್‌ ನಲ್ಲಿ ರಾಹುಲ್ ಗಾಂಧಿ ಪ್ರಯಾಣ ಮಾಡಿದರು.

ಕನ್ನಿಂಗ್ ಹ್ಯಾಮ್ ರಸ್ತೆಯಿಂದ ಬಸ್ ಹತ್ತಿದ ರಾಹುಲ್ ಗಾಂಧಿ ಲಿಂಗರಾಜಪುರದ ವರೆಗೆ ಬಸ್‌ ನಲ್ಲಿ ಪ್ರಯಾಣ ಮಾಡಿದರು. ಬಸ್ ಪ್ರಯಾಣ ವೇಳೆ ಪ್ರಯಾಣಿಕರ ಜೊತೆ ಮಾತುಕತೆ ನಡೆಸಿ ಜನರ ಸಮಸ್ಯೆಗಳನ್ನು ರಾಹುಲ್ ಗಾಂಧಿ ಅವರು ಆಲಿಸಿದರು. ಇದೇ ವೇಳೆ ಕಾಂಗ್ರೆಸ್ ಗ್ಯಾರಂಟಿಗಳ ಬಗ್ಗೆ ವಿವರಿಸಿ ಮತಯಾಚನೆ ಮಾಡಿದರು. ಇನ್ನು ಮಹಿಳಾ ಪ್ರಯಾಣಿಕರ ಜೊತೆ ಮಾತನಾಡಿದರು.

Rahul Gandhi

ಮಹಿಳಾ ಪ್ರಯಾಣಿಕ ಜೊತೆ ರಾಹುಲ್ ಗಾಂಧಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಉಚಿತ ಬಸ್ ಪಾಸ್ ವಿತರಣೆ ಮಾಡಲಾಗುತ್ತದೆ ಎಂದು ಹೇಳಿ ಮತಯಾಚನೆ ಕೇಳಿದರು.ಇನ್ನು ಬಸ್ ಪ್ರಯಾಣಿಕರು ರಾಹುಲ್ ಗಾಂಧಿ ಅವರು ಬಸ್ ಹತ್ತಿ ಬರುತ್ತಿದ್ದಂತೆ ಆಶ್ಚರ್ಯಗೊಂಡರು. ನಂತರ ರಾಹುಲ್ ಗಾಂಧಿ ಅವರ ಜೊತೆ ಫೋಟೊ ಕ್ಲಿಕ್ಕಿಸಿಕೊಂಡರು. ಇನ್ನು ಜಿದ್ದಾಜಿದ್ದಿನ ಕಣವಾಗಿರುವ ವಿಧಾನಸಭೆ ಚುನಾವಣೆಗೆ ಅಬ್ಬರದ ಬಹಿರಂಗ ಪ್ರಚಾರ ಇಂದು ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.

ಇನ್ನು ಕರ್ನಾಟಕದಲ್ಲಿ ಒಂಮೇ 10ರಂದು ಮತದಾನ ನಡೆಯಲಿದೆ. ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಇನ್ನು ನಿನ್ನೆ ಸ್ಕೂಟರ್​ನಲ್ಲಿ ಡೆಲಿವರಿ ಬಾಯ್ ಜೊತೆಗೆ ರಾಹುಲ್​ ಗಾಂಧಿ ಸಂಚಾರ ಮಾಡಿದ್ದಾರೆ. ಏರ್​ಲೈನ್ಸ್ ಹೊಟೇಲ್​ನಿಂದ ಶಾಂಗ್ರಿಲಾ ಹೊಟೇಲ್ ವರೆಗೂ ರಾಹುಲ್​ ಗಾಂಧಿ ಹೆಲ್ಮೆಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಸ್ಕೂಟರ್ ನಲ್ಲಿ ಸಂಚರಿಸಿದ್ದಾರೆ.

Rahul Gandhi

ಡೆಲಿವರಿ ಬಾಯ್ ಜೊತೆಗೆ ಹಿಂಬದಿ ಕುಳಿತು ಮಾತುಕತೆ ನಡೆಸುತ್ತಾ ರಾಹುಲ್ ಗಾಂಧಿ ಸಾಗಿದ್ದಾರೆ. ಇಂದು ರಾಹುಲ್ ಗಾಂಧಿ ಬೆಂಗಳೂರಿನ ಏರ್ ಲೈನ್ ಹೋಟೆಲ್​ಗೆ ಬಂದಿದ್ದ ವೇಳೆ ಡೆಲಿವರಿ ಬೈಕ್​ನಲ್ಲಿ ಬಂದಿದ್ದ. ಈ ವೇಳೆ ರಾಹುಲ್ ಗಾಂಧಿ ಭದ್ರತಾ ಪಡೆಯಿಲ್ಲದೆ ಬೈಕ್​ನಲ್ಲಿ ಸಂಚಾರ ಮಾಡಿದ್ದಾರೆ. ಇನ್ನು ಕನ್ನಿಂಗ್​​ಹ್ಯಾಮ್ ರಸ್ತೆಯ ಕೆಫೆಯಲ್ಲಿ ಸ್ವಿಗ್ಗಿ, ಝೋಮ್ಯಾಟೋ, ಬಿಲಿಂಕಿಟ್ ಹಾಗೂ ಗುತ್ತಿಗೆ ನೌಕರರ ಸಂಕಷ್ಟದ ಬಗ್ಗೆ ಚರ್ಚಿಸುತ್ತಾ ಕಾಫಿ ಕುಡಿದಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬದಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Monday, May 8, 2023, 17:26 [IST]
English summary
Congress leader rahul gandhi travels in bmtc bus details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+