ಪಾರ್ಕಿಂಗ್ ಶುಲ್ಕ ಪಾವತಿಸುವಂತೆ ವಕೀಲರಿಗೆ ಆದೇಶ ನೀಡಿದ ಗ್ರಾಹಕ ನ್ಯಾಯಾಲಯ

ದುರಸ್ತಿಗಾಗಿ ನೀಡಲಾದ ಕಾರನ್ನು ವಾಪಸ್ ಪಡೆಯದ ಕಾರಣಕ್ಕೆ ರೂ.91,000ಗಳ ಪಾರ್ಕಿಂಗ್ ಶುಲ್ಕವನ್ನು ಪಾವತಿಸುವಂತೆ ಗುಜರಾತ್'ನ ಗಾಂಧಿನಗರದ ಗ್ರಾಹಕ ನ್ಯಾಯಾಲಯವು ವಕೀಲರೊಬ್ಬರಿಗೆ ಆದೇಶ ನೀಡಿದೆ.

ಪಾರ್ಕಿಂಗ್ ಶುಲ್ಕ ಪಾವತಿಸುವಂತೆ ವಕೀಲರಿಗೆ ಆದೇಶ ನೀಡಿದ ಗ್ರಾಹಕ ನ್ಯಾಯಾಲಯ

910 ದಿನಗಳವರೆಗೆ ಕಾರನ್ನು ಪಾರ್ಕ್ ಮಾಡಿರುವ ಕಾರಣಕ್ಕೆ ಪಾರ್ಕಿಂಗ್ ಶುಲ್ಕವನ್ನು ಕೊಡಿಸುವಂತೆ ಕಾರ್ ವರ್ಕ್‌ಶಾಪ್ ಮಾಲೀಕರು ಕೋರಿದ್ದರು.ವಕೀಲರು ತಮ್ಮ ಟಾಟಾ ನ್ಯಾನೊ ಕಾರನ್ನು 2018ರ ಜೂನ್‌ನಲ್ಲಿ ಗಾಂಧಿನಗರದ ಕಾರು ದುರಸ್ತಿ ಕೇಂದ್ರದಲ್ಲಿ ದುರಸ್ತಿಗಾಗಿ ನೀಡಿದ್ದರು.

ಪಾರ್ಕಿಂಗ್ ಶುಲ್ಕ ಪಾವತಿಸುವಂತೆ ವಕೀಲರಿಗೆ ಆದೇಶ ನೀಡಿದ ಗ್ರಾಹಕ ನ್ಯಾಯಾಲಯ

ಆದರೆ ರಿಪೇರಿ ಕೇಂದ್ರದ ಮಾಲೀಕರು ಕಾರನ್ನು ತೆಗೆದುಕೊಳ್ಳುವಂತೆ ಹೇಳಿದಾಗ, ಕಾರನ್ನು ಸರಿಯಾಗಿ ರಿಪೇರಿ ಮಾಡಿಲ್ಲ. ಹಾಗೂ ಕಾರಿನ ಹಲವು ಬಿಡಿಭಾಗಗಳು ಕಾಣೆಯಾಗಿವೆ ಎಂದು ವಕೀಲರು ಆರೋಪಿಸಿದರು.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಪಾರ್ಕಿಂಗ್ ಶುಲ್ಕ ಪಾವತಿಸುವಂತೆ ವಕೀಲರಿಗೆ ಆದೇಶ ನೀಡಿದ ಗ್ರಾಹಕ ನ್ಯಾಯಾಲಯ

ಜೊತೆಗೆ ಕಾರನ್ನು ದುರಸ್ತಿ ಕೇಂದ್ರದಲ್ಲಿಯೇ ಬಿಟ್ಟಿದ್ದರು. ಅಂದಿನಿಂದ ಕಾರು ದುರಸ್ತಿ ಕೇಂದ್ರದ ಗ್ಯಾರೇಜ್‌ನಲ್ಲಿದೆ. ವಂಚನೆ ಹಾಗೂ ನಿರ್ಲಕ್ಷ್ಯಕ್ಕಾಗಿ 2019ರಲ್ಲಿವಕೀಲರು ಗಾಂಧಿನಗರದ ಗ್ರಾಹಕ ನ್ಯಾಯಾಲಯದಲ್ಲಿ ದುರಸ್ತಿ ಕೇಂದ್ರದ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದರು.

ಪಾರ್ಕಿಂಗ್ ಶುಲ್ಕ ಪಾವತಿಸುವಂತೆ ವಕೀಲರಿಗೆ ಆದೇಶ ನೀಡಿದ ಗ್ರಾಹಕ ನ್ಯಾಯಾಲಯ

ಆದರೆ ತಮ್ಮಿಂದ ಯಾವುದೇ ರೀತಿಯ ವಂಚನೆ ನಡೆದಿಲ್ಲವೆಂದು ದುರಸ್ತಿ ಕೇಂದ್ರದ ಮಾಲೀಕರು ತಿಳಿಸಿದ್ದಾರೆ. ಅವರು ಕಾರನ್ನು ದುರಸ್ತಿ ಕೇಂದ್ರದಿಂದ ಕೊಂಡೊಯ್ಯುವಂತೆ ವಕೀಲರಿಗೆ 58 ಬಾರಿ ಮೇಲ್ ಮಾಡಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಪಾರ್ಕಿಂಗ್ ಶುಲ್ಕ ಪಾವತಿಸುವಂತೆ ವಕೀಲರಿಗೆ ಆದೇಶ ನೀಡಿದ ಗ್ರಾಹಕ ನ್ಯಾಯಾಲಯ

ಜೊತೆಗೆ ರಿಪೇರಿ ಕೇಂದ್ರದ ಮಾಲೀಕರು ಹಲವಾರು ಬಾರಿ ವಕೀಲರಿಗೆ ನೋಟಿಸ್ ಕಳುಹಿಸಿದ್ದಾರೆ. ಆದರೆ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ವಕೀಲರ ಟಾಟಾ ನ್ಯಾನೊ ಕಾರು ದುರಸ್ತಿ ಕೇಂದ್ರದ ಗ್ಯಾರೇಜ್‌ನಲ್ಲಿದೆ.

ಪಾರ್ಕಿಂಗ್ ಶುಲ್ಕ ಪಾವತಿಸುವಂತೆ ವಕೀಲರಿಗೆ ಆದೇಶ ನೀಡಿದ ಗ್ರಾಹಕ ನ್ಯಾಯಾಲಯ

ಈ ದುರಸ್ತಿ ಕೇಂದ್ರದ ಮಾಲೀಕರು ವಕೀಲರಿಂದ 910 ದಿನಗಳ ಅವಧಿಗೆ ದಿನಕ್ಕೆ ರೂ.100ಗಳಂತೆ ಪಾರ್ಕಿಂಗ್ ಶುಲ್ಕವನ್ನು ಕೊಡಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ಮಾಡಿದಾಗ, ವಕೀಲರ ಆರೋಪಗಳು ಸುಳ್ಳು ಎಂದು ಕಂಡುಬಂದಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಪಾರ್ಕಿಂಗ್ ಶುಲ್ಕ ಪಾವತಿಸುವಂತೆ ವಕೀಲರಿಗೆ ಆದೇಶ ನೀಡಿದ ಗ್ರಾಹಕ ನ್ಯಾಯಾಲಯ

ಈ ಹಿನ್ನೆಲೆಯಲ್ಲಿ ಗ್ರಾಹಕ ನ್ಯಾಯಾಲಯವು ಆ ವಕೀಲರಿಗೆ 910 ದಿನಗಳ ಅವಧಿಗೆ ದಿನಕ್ಕೆ ರೂ.100ರಂತೆ ರೂ.91,000 ಪಾರ್ಕಿಂಗ್ ಶುಲ್ಕವನ್ನು ಪಾವತಿಸುವಂತೆ ಆದೇಶಿಸಿದೆ. ನ್ಯಾಯಾಲಯವು ತೀರ್ಪು ನೀಡುವಾಗ, ಕಾನೂನು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತದೆ. ವಕೀಲರಿಗೂ ಅನ್ವಯಿಸುತ್ತದೆ.

ಪಾರ್ಕಿಂಗ್ ಶುಲ್ಕ ಪಾವತಿಸುವಂತೆ ವಕೀಲರಿಗೆ ಆದೇಶ ನೀಡಿದ ಗ್ರಾಹಕ ನ್ಯಾಯಾಲಯ

ಸೇವಾ ಶುಲ್ಕವನ್ನು ಪಾವತಿಸದೆ ಯಾವುದೇ ವ್ಯಕ್ತಿಯನ್ನು ಗ್ರಾಹಕನೆಂದು ಕರೆಯಲಾಗುವುದಿಲ್ಲ ಎಂದು ನ್ಯಾಯಾಲಯವು ಹೇಳಿದೆ. ದುರಸ್ತಿಗಾಗಿ ಕೊಟ್ಟಿರುವ ಕಾರನ್ನು ಸರ್ವೀಸ್ ಸೆಂಟರ್'ನಲ್ಲಿ ಬಿಟ್ಟಿರುವುದಕ್ಕೆ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತದೆ ಎಂದು ಹೇಳಿದೆ. ಜೊತೆಗೆ ರೂ.9,900 ರಿಪೇರಿ ಶುಲ್ಕವನ್ನು ಪಾವತಿಸುವಂತೆ ನ್ಯಾಯಾಲಯವು ವಕೀಲರಿಗೆ ಆದೇಶ ನೀಡಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Consumer court orders lawyer to pay Rs.91000 as parking fees. Read in Kannada.
Story first published: Friday, January 29, 2021, 17:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X