ಏನ್ ಗಟ್ಟಿ ಈ ಕಾರು: ಕಂಟೈನರ್ ಬಿದ್ದರೂ ಅಲ್ಲಾಡಲಿಲ್ಲ, ಪ್ರಾಣಾಪಾಯದಿಂದ ಪಾರು.. ನಿರ್ಮಾಣ ಗುಣಮಟ್ಟಕ್ಕೆ ಜೈ!

ಜರ್ಮನಿಯ ಪ್ರಮುಖ ವಾಹನ ತಯಾರಕ ಫೋಕ್ಸ್‌ವ್ಯಾಗನ್‌ (Volkswagen), ಭಾರತದಲ್ಲಿ ಬಿಡುಗಡೆಗೊಳಿಸಿದ ಪ್ರಮುಖ ಕಾರುಗಳಲ್ಲಿ ಪೋಲೊ (Polo) ಕೂಡ ಒಂದಾಗಿದೆ. 2010ರಲ್ಲಿ ಬಂದ ಈ ಹ್ಯಾಚ್‌ಬ್ಯಾಕ್, ವಿನ್ಯಾಸ ಹಾಗೂ ವೈಶಿಷ್ಟ್ಯದಿಂದ ಭಾರೀ ಪ್ರಮಾಣದಲ್ಲಿ ಜನಪ್ರಿಯತೆ ಗಳಿಸಿತ್ತು. ಇವತ್ತಿಗೂ ನಮ್ಮಲ್ಲಿ ಹಲವಾರು ಪೋಲೊ ಕಾರನ್ನು ಬಳಕೆ ಮಾಡುತ್ತಾರೆ.

ಫೋಕ್ಸ್‌ವ್ಯಾಗನ್‌ ಕಂಪನಿ ದೇಶೀಯ ಮಾರುಕಟ್ಟೆಯಲ್ಲಿ ಪೋಲೊ ಕಾರನ್ನು ಲಾಂಚ್ ಮಾಡಿದ ಬಳಿಕ, 12 ವರ್ಷಗಳಲ್ಲಿ 3 ಲಕ್ಷ ಯುನಿಟ್‌ ಮಾರಿ ಐತಿಹಾಸಿಕ ದಾಖಲೆ ನಿರ್ಮಿಸಿತ್ತು. ಇದನ್ನು ನೋಡಿದಾಗ ಈ ಹ್ಯಾಚ್‌ಬ್ಯಾಕ್ ಖ್ಯಾತಿ ಎಷ್ಟಿದೆ ಎಂಬುದು ಸುಲಭವಾಗಿ ಅರ್ಥವಾಗುತ್ತದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ನಾನಾ ಕಾರಣಗಳಿಗೆ ಪೋಲೊ ಕಾರಿನ ಮಾರಾಟವನ್ನು ಸ್ಥಗಿತಗೊಳಿಸಲಾಯಿತು.

ಏನ್ ಗಟ್ಟಿ ಈ ಕಾರು: ಕಂಟೈನರ್ ಬಿದ್ದರೂ ಅಲ್ಲಾಡಲಿಲ್ಲ, ಪ್ರಾಣಾಪಾಯದಿಂದ ಪಾರು.. ನಿರ್ಮಾಣ ಗುಣಮಟ್ಟಕ್ಕೆ ಜೈ!

ಫೋಕ್ಸ್‌ವ್ಯಾಗನ್‌ ಪೋಲೊ ಮಾರಾಟವನ್ನು ಭಾರತದಲ್ಲಿ ನಿಲ್ಲಿಸಿದ್ದರೂ ಅದರ ನಿರ್ಮಾಣ ಗುಣಮಟ್ಟದಿಂದ ಆಗಾಗ ಸುದ್ದಿಗೆ ಬರುತ್ತಲೇ ಇರುತ್ತದೆ. ನಿಮಗೆ ಗೊತ್ತಿರಲಿ.. ಈ ಹ್ಯಾಚ್‌ಬ್ಯಾಕ್ ಅತ್ಯಂತ ಸುರಕ್ಷಿತ ಎಂದು ಹೆಸರುವಾಸಿಯಾಗಿದ್ದು, ಗ್ಲೋಬಲ್ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ 4 - ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದ ಮೊದಲ ಕಾರು ಇದಾಗಿದೆ ಎಂದು ಹೇಳಬಹುದು.

ಇತ್ತೀಚೆಗೆ, ಬೃಹದಾಕಾರದ ಟ್ರಕ್ ಕಂಟೈನರ್ ಪೋಲೊ ಹ್ಯಾಚ್‌ಬ್ಯಾಕ್ ಮೇಲೆ ಬಿದ್ದಿದೆ. ಆದರೂ, ಈ ಕಾರಿನಲ್ಲಿದ್ದವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆ ಗುಜರಾತ್ ರಾಜ್ಯದಲ್ಲಿ ವರದಿಯಾಗಿದ್ದು, ನಿಖರವಾದ ಸ್ಥಳದ ಬಗ್ಗೆ ಖಚಿತ ಮಾಹಿತಿಯಿಲ್ಲ, ಪ್ರತೀಕ್ ಸಿಂಗ್ ಎಂಬುವವರೂ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದು, ಅದರಲ್ಲಿ ನೀಡಿರುವ ವಿವರಗಳ ಅನ್ವಯ, ರಾಜ್‌ಕೋಟ್‌ನ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ.

ಏನ್ ಗಟ್ಟಿ ಈ ಕಾರು: ಕಂಟೈನರ್ ಬಿದ್ದರೂ ಅಲ್ಲಾಡಲಿಲ್ಲ, ಪ್ರಾಣಾಪಾಯದಿಂದ ಪಾರು.. ನಿರ್ಮಾಣ ಗುಣಮಟ್ಟಕ್ಕೆ ಜೈ!

ಕಂಟೈನರ್ ಸಾಗಿಸುತ್ತಿದ್ದ ಟ್ರಕ್, ಚಾಲಕ ನಿಯಂತ್ರಣ ಕಳೆದುಕೊಂಡು ಫೋಕ್ಸ್‌ವ್ಯಾಗನ್ ಪೋಲೊ ಹ್ಯಾಚ್‌ಬ್ಯಾಕ್‌ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಆದರೆ, ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಘಟನೆ ನಡೆದಾಗ ಫೋಕ್ಸ್‌ವ್ಯಾಗನ್ ಪೋಲೊ ಕಾರು ವಿರುದ್ಧ ದಿಕ್ಕಿನಲ್ಲಿ ಚಲಿಸುತ್ತಿತ್ತು ಎಂದು ಕೂಡ ಹೇಳಲಾಗಿದ್ದು, ಈ ಅಪಘಾತ ಕಾರು ಚಾಲಕ ಅಥವಾ ಟ್ರಕ್ ಚಾಲಕ ತಪ್ಪಿನಿಂದ ನಡೆಯಿತೇ ಎಂದು ತನಿಖೆಯಿಂದ ಗೊತ್ತಾಗಬೇಕಾಗಿದೆ.

ಅಪಘಾತವಾದ ಸಮಯದಲ್ಲಿ ಕಂಟೈನರ್ ಭರ್ತಿ ಅಥವಾ ಖಾಯಿಯಾಗಿತ್ತೆ ಎಂಬುದರ ಕುರಿತು ಸ್ಪಷ್ಟ ಮಾಹಿತಿಯಿಲ್ಲ. ಈ ಪರಿ ಪ್ರಮಾಣದಲ್ಲಿ ಆಕ್ಸಿಡೆಂಟ್ ಆದ್ರು, ಪೋಲೊ ಮಾತ್ರ ಜೀವ ರಕ್ಷಕವಾಗಿ ನಿಂತಿದೆ. ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಆದರೆ, ರೂಫ್ ಹಾಗೂ ಪೀಲರ್ ಗಳಿಗೆ ಯಾವುದೇ ಹಾನಿಯಾಗಿಲ್ಲ. ಜೊತೆಗೆ ವಿಂಡ್ ಶೀಲ್ಡ್ ಹಾಗೂ ವಿಂಡೋ (ಕಿಟಕಿ)ಗೂ ಕೊಂಚವೂ ಸ್ಕ್ರಾಚ್ ಆಗಿಲ್ಲ.

ಈ ಕಂಟೈನರ್ ಹಿಂಭಾಗ ಬಿದ್ದಿರುವುದರಿಂದ ಆ ಭಾಗಕ್ಕೆ ಹೆಚ್ಚು ಹಾಳಾದಂತೆ ಕಾಣುತ್ತಿದೆ. ಏನೇ ಆಗಲಿ, ಜರ್ಮನಿಯ ವಾಹನ ತಯಾರಕ ಫೋಕ್ಸ್‌ವ್ಯಾಗನ್‌, ಪೋಲೊ ಕಾರನ್ನು ಗಟ್ಟಿಮುಟ್ಟಾಗಿ ವಿನ್ಯಾಸಗೊಳಿಸಿದ್ದು, ತನ್ನ ಪ್ರಯಾಣಿಕರ ಆಪದ್ಭಾಂದವವಾಗಿದೆ. ಪ್ರಸ್ತುತ, ಭಾರತದಲ್ಲಿ ಫೋಕ್ಸ್‌ವ್ಯಾಗನ್ ಟೈಗನ್ ಕೂಡ ಅತ್ಯಂತ ಸುರಕ್ಷಿತ ಕಾರಾಗಿದೆ. ಇದು, ಗ್ಲೋಬಲ್ ಎನ್‌ಸಿಎಪಿಯಿಂದ 5 ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದಿದೆ.

ಇನ್ನು, ಮಾರಾಟದಿಂದ ಸ್ಥಗಿತಗೊಂಡಿರುವ ಫೋಕ್ಸ್‌ವ್ಯಾಗನ್‌ ಪೋಲೊ ಕಾರಿನ ಕುರಿತು ಕೆಲವೊಂದು ಆಸಕ್ತಿದಾಯಕ ವಿಚಾರಗಳನ್ನು ಹೇಳುವುದಾದರೆ, ಇದು ರೂ.5.83 ಲಕ್ಷದಿಂದ ರೂ.10.25 ಲಕ್ಷ ಬೆಲೆಯಲ್ಲಿ ಗ್ರಾಹಕರಿಗೆ ಸಿಗುತ್ತಿತ್ತು. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಹಾಗೂ ಮ್ಯಾನುವಲ್ ಹಾಗೂ ಅಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿತ್ತು. 21.49 kmpl ವರೆಗೆ ಮೈಲೇಜ್ ನೀಡುತ್ತಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, September 23, 2023, 12:01 [IST]
English summary
Container falls top of volkswagen polo car passenger safe
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+