ಯಮರೂಪಿ ಟ್ರಕ್‍ನಿಂದ ಬಾಲಕನ ಪ್ರಾಣ ಉಳಿಸಿದ ಪೊಲೀಸಪ್ಪ..!
ಹೊಸ ಮೋಟಾರು ವಾಹನ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ಜಾರಿಗೆ ತರಲಾಗಿದೆ. ಜಾರಿಗೆ ಬಂದಾಗಿನಿಂದ ಈ ಕಾಯ್ದೆಯು ಹಲವು ಟೀಕೆಗಳನ್ನು ಎದುರಿಸುತ್ತಿದೆ. ಭಾರೀ ಪ್ರಮಾಣದ ದಂಡವನ್ನು ವಿಧಿಸುತ್ತಿರುವುದರಿಂದ ಈ ಹೊಸ ಕಾಯ್ದೆಯ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.

ಭಾರೀ ಪ್ರಮಾಣದ ದಂಡಕ್ಕೆ ಹೆದರಿ ಜನರು ಸಂಚಾರಿ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಆದರೂ ಅಲ್ಲೊಂದು ಇಲ್ಲೊಂದು ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗುತ್ತಲೇ ಇರುತ್ತವೆ. ಇತ್ತೀಚಿಗೆ ತಮಿಳುನಾಡು ಪೊಲೀಸರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ವೀಡಿಯೊವೊಂದು ವೈರಲ್ ಆಗಿದೆ.
ಈ ವೀಡಿಯೊದಲ್ಲಿ ಸಂಚಾರಿ ಪೊಲೀಸ್ ಒಬ್ಬರು ಟ್ರಕ್‍ಗೆ ಸಿಕ್ಕಿ ಕೊಳ್ಳಲಿದ್ದ ಬಾಲಕನ ಪ್ರಾಣವನ್ನು ಉಳಿಸಿದ್ದಾರೆ. ಸಂಚಾರಿ ಪೊಲೀಸ್ ತಮ್ಮ ಸಮಯ ಪ್ರಜ್ಞೆಯಿಂದ ಬಾಲಕನ ಪ್ರಾಣ ಉಳಿಸಿದ್ದಾರೆ. ಇಲ್ಲದಿದ್ದರೆ ಬಾಲಕನ ಪ್ರಾಣಕ್ಕೆ ಸಂಚಕಾರ ಬಂದು ದೊಡ್ಡ ದುರಂತ ನಡೆಯುವ ಸಾಧ್ಯತೆಗಳಿದ್ದವು.

ಈ ವೀಡಿಯೊದಲ್ಲಿ ಕಾಣುತ್ತಿರುವಂತೆ ಸಂಚಾರಿ ಪೊಲೀಸ್ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಅದೇ ಸಮಯಕ್ಕೆ ಹಳೆಯ ಹಳದಿ ಬಣ್ಣದ ಟಾಟಾ ಟ್ರಕ್‍ವೊಂದು ಬರುತ್ತದೆ. ಇದೇ ವೇಳೆ ಬಾಲಕನೊಬ್ಬ ಸೈಕಲ್‍ನಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಪ್ರಯತ್ನಿಸುತ್ತಿದ್ದಾನೆ.

ಬಹುಶಃ ಬಾಲಕನು ಟ್ರಕ್ ಅನ್ನು ಗಮನಿಸದೇ ಇರಬಹುದು ಅಥವಾ ಟ್ರಕ್ ಬರುವುದಕ್ಕೆ ಮುಂಚೆಯೇ ರಸ್ತೆ ದಾಟಿಬಿಡೋಣ ಎಂಬ ಕಾರಣಕ್ಕೆ ವೇಗವಾಗಿ ಸೈಕಲ್ ಪೆಡಲ್ ತುಳಿದಿದ್ದಾನೆ. ಮುಂದೆ ಎದುರಾಗುವ ಅಪಾಯವನ್ನು ಗ್ರಹಿಸಿರುವ ಪೊಲೀಸ್ ಸೈಕಲ್‍ನಲ್ಲಿ ಮುಂದೆ ಹೋಗುತ್ತಿದ್ದ ಬಾಲಕನನ್ನು ತಡೆದು ನಿಲ್ಲಿಸಿದ್ದಾರೆ.

ಬಾಲಕನನ್ನು ತಮ್ಮ ಕೈನಿಂದ ತಡೆದು ನಿಲ್ಲಿಸಿ ಟ್ರಕ್ ಮುಂದೆ ಹೋದ ನಂತರ ಬಾಲಕನನ್ನು ಮುಂದೆ ಹೋಗಲು ಹೇಳಿದ್ದಾರೆ. ಟ್ರಕ್ ಚಾಲಕನು ಟ್ರಕ್ ಅನ್ನು ನಿಧಾನ ಮಾಡಿದಂತೆ ಕಂಡು ಬಂದರೂ ಗಾಬರಿಯಲ್ಲಿ ಟ್ರಕ್ ನಿಯಂತ್ರಣಕ್ಕೆ ಸಿಗದೇ ಬಾಲಕನ ದುರಂತ ಅಂತ್ಯಕ್ಕೆ ಕಾರಣವಾಗುವ ಸಾಧ್ಯತೆಗಳಿದ್ದವು.

ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ತಮ್ಮ ಕರ್ತವ್ಯ ಪ್ರಜ್ಞೆಯಿಂದ ಬಾಲಕನ ಪ್ರಾಣ ಉಳಿಸಿದ್ದಾರೆ. ಅಂದ ಹಾಗೆ ಈ ಘಟನೆ ನಡೆದಿರುವುದು ತಮಿಳುನಾಡಿನಲ್ಲಿರುವ ಕಡಲೂರಿನಲ್ಲಿ. ಪೊಲೀಸಪ್ಪನ ಕಾರ್ಯಕ್ಕೆ ಪೊಲೀಸ್ ಇಲಾಖೆಯು ಸೇರಿದಂತೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಈ ಘಟನೆಯಿಂದ ಭಾರತದ ರಸ್ತೆಗಳಲ್ಲಿ ಸಂಚಾರಿ ನಿಯಮಗಳನ್ನು ಪಾಲಿಸದೇ ಬೇಕಾಬಿಟ್ಟಿಯಾಗಿ ವಾಹನಗಳನ್ನು ಚಲಾಯಿಸುವ ಭಾರತೀಯರ ಕೆಟ್ಟ ಗುಣ ಮತ್ತೆ ಬೆಳಕಿಗೆ ಬಂದಿದೆ. ಆ ಸ್ಥಳದಲ್ಲಿ ಪೊಲೀಸ್ ಇಲ್ಲದೇ ಹೋಗಿದ್ದರೆ, ಅಥವಾ ಆ ಪೊಲೀಸ್ ತಮ್ಮ ಸಮಯ ಪ್ರಜ್ಞೆಯನ್ನು ತೋರದಿದ್ದರೇ, ಪರಿಸ್ಥಿತಿಯು ಬೇರೆಯದೇ ಆಗಿರುತ್ತಿತ್ತು.
MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಪ್ರಪಂಚದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಹೆಚ್ಚು ಸಾವನ್ನಪ್ಪುವವರ ಸಂಖ್ಯೆಯಲ್ಲಿ ನಮ್ಮ ದೇಶವು ಮುಂಚೂಣಿಯಲ್ಲಿದೆ. ಆದ ಕಾರಣ ಪ್ರತಿಯೊಬ್ಬರು ರಸ್ತೆ ನಿಯಮಗಳನ್ನು ಪಾಲಿಸಬೇಕೆಂದು ಕೇಳಿಕೊಳ್ಳುತ್ತೇವೆ.
MOST READ: ಜೆಸಿಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಕೆಲವು ಅಧ್ಯಯನಗಳ ಪ್ರಕಾರ, ವೇಗವಾಗಿ ವಾಹನ ಚಲಾಯಿಸುವುದು ಹಾಗೂ ನಿಧಾನವಾಗಿ ವಾಹನಗಳನ್ನು ಚಲಾಯಿಸಿಕೊಂಡು ಹೋಗುವುದರಲ್ಲಿ ಹೆಚ್ಚಿನ ಪ್ರಮಾಣದ ಬದಲಾವಣೆಗಳೇನೂ ಆಗುವುದಿಲ್ಲ. ಕೇವಲ ಕೆಲವು ಸೆಕೆಂಡುಗಳ ವ್ಯತ್ಯಾಸವಷ್ಟೇ ಆಗುತ್ತದೆ.


Click it and Unblock the Notifications