ಟೆಸ್ಲಾ ಕಾರು ಮಾಲೀಕರಲ್ಲಿ ಅನುಮಾನ ಮೂಡಿಸಿದ ಪೊಲೀಸರ ನಡೆ

ಟೆಸ್ಲಾ ಕಂಪನಿಯ ಎಲೆಕ್ಟ್ರಿಕ್ ಕಾರುಗಳು ವಿಶ್ವದೆಲ್ಲೆಡೆ ಜನಪ್ರಿಯವಾಗಿವೆ. ಟೆಸ್ಲಾ ಕಾರುಗಳು ಇತ್ತೀಚಿಗೆ ಹೆಚ್ಚು ಸುದ್ದಿಯಾಗುತ್ತಿವೆ. ಈಗ ಟೆಸ್ಲಾ ಕಾರುಗಳ ಬಗ್ಗೆ ಚೀನಾದಿಂದ ಹೊಸ ಸುದ್ದಿಯೊಂದು ವರದಿಯಾಗಿದೆ.

ಟೆಸ್ಲಾ ಕಾರು ಮಾಲೀಕರಲ್ಲಿ ಅನುಮಾನ ಮೂಡಿಸಿದ ಪೊಲೀಸರ ನಡೆ

ಇತ್ತೀಚಿಗೆ ಚೀನಾದಲ್ಲಿ ಮುಂದೆ ಸಾಗುತ್ತಿದ್ದ ಕಾರನ್ನು ಓವರ್ ಟೇಕ್ ಮಾಡಲು ಪ್ರಯತ್ನಿಸಿದ ಟೆಸ್ಲಾ ಕಾರೊಂದು ರಸ್ತೆ ಬದಿಯಲ್ಲಿರುವ ತಡೆಗೋಡೆಗೆ ಗುದ್ದಿ ಬೆಂಕಿಗಾಹುತಿಯಾದ ಘಟನೆ ವರದಿಯಾಗಿತ್ತು. ಈ ಘಟನೆಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದ.

ಟೆಸ್ಲಾ ಕಾರು ಮಾಲೀಕರಲ್ಲಿ ಅನುಮಾನ ಮೂಡಿಸಿದ ಪೊಲೀಸರ ನಡೆ

ಚೀನಾದಲ್ಲಿ ಮಾತ್ರವಲ್ಲದೇ ಕೆಲವು ದಿನಗಳ ಹಿಂದೆ ಅಮೆರಿಕಾದಲ್ಲಿಯೂ ಟೆಸ್ಲಾ ಕಾರು ಅಪಘಾತಕ್ಕೀಡಾಗಿತ್ತು. ಈ ಚಾಲಕ ರಹಿತ ಟೆಸ್ಲಾ ಕಾರು ರಸ್ತೆ ಬದಿಯಲ್ಲಿದ್ದ ಮರಕ್ಕೆ ಗುದ್ದಿ ಕಾರಿನಲ್ಲಿದ್ದ ಇಬ್ಬರು ಪ್ರಯಾಣಿಕರು ಮೃತಪಟ್ಟಿದ್ದರು.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಟೆಸ್ಲಾ ಕಾರು ಮಾಲೀಕರಲ್ಲಿ ಅನುಮಾನ ಮೂಡಿಸಿದ ಪೊಲೀಸರ ನಡೆ

ಈಗ ಚೀನಾದಲ್ಲಿರುವ ಕೆಲವು ಟೆಸ್ಲಾ ಕಾರುಗಳ ಮಾಲೀಕರು ತಮ್ಮ ಕಾರುಗಳನ್ನು ಗುವಾಂಗ್‌ ಝು ನಗರದ ಸುತ್ತಮುತ್ತಲಿನ ಹೆದ್ದಾರಿಗಳಲ್ಲಿ ಪೊಲೀಸರು ತಡೆದು ನಿಲ್ಲಿಸುತ್ತಿರುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಟೆಸ್ಲಾ ಕಾರು ಮಾಲೀಕರಲ್ಲಿ ಅನುಮಾನ ಮೂಡಿಸಿದ ಪೊಲೀಸರ ನಡೆ

ಗುವಾಂಗ್‌ ಝುದಲ್ಲಿ ಇತ್ತೀಚಿಗೆ ಟೆಸ್ಲಾ ಕಾರೊಂದು ರಸ್ತೆ ಬದಿಯ ತಡೆ ಗೋಡೆಗೆ ಡಿಕ್ಕಿ ಹೊಡೆದಿತ್ತು. ಈ ಕಾರಣಕ್ಕೆ ಈ ನಗರದಲ್ಲಿ ಸಂಚರಿಸುತ್ತಿರುವ ಟೆಸ್ಲಾ ಎಲೆಕ್ಟ್ರಿಕ್ ಕಾರುಗಳನ್ನು ಪೊಲೀಸರು ತಡೆದು ನಿಲ್ಲಿಸುತ್ತಿದ್ದಾರೆ ಎಂದು ವರದಿಯಾಗಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಟೆಸ್ಲಾ ಕಾರು ಮಾಲೀಕರಲ್ಲಿ ಅನುಮಾನ ಮೂಡಿಸಿದ ಪೊಲೀಸರ ನಡೆ

ಪೊಲೀಸರ ಈ ಕ್ರಮವು ಟೆಸ್ಲಾ ಕಾರು ಮಾಲೀಕರಲ್ಲಿ ತಮ್ಮ ಎಲೆಕ್ಟ್ರಿಕ್ ಕಾರಿನ ಸುರಕ್ಷತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕಿದೆ. ತಕ್ಷಣವೇ ಎಚ್ಚೆತ್ತ ಟೆಸ್ಲಾ ಕಂಪನಿಯು ಈ ವಿಷಯದ ಬಗ್ಗೆ ತನ್ನ ನಿಲುವನ್ನು ಪ್ರಕಟಿಸಿದೆ.

ಟೆಸ್ಲಾ ಕಾರು ಮಾಲೀಕರಲ್ಲಿ ಅನುಮಾನ ಮೂಡಿಸಿದ ಪೊಲೀಸರ ನಡೆ

ಟ್ವಿಟರ್‌ನಂತೆ ಚೀನಾದಲ್ಲಿ ಜನಪ್ರಿಯವಾಗಿರುವ ವೀಬೊ ಸೈಟ್‌ನಲ್ಲಿ ಟೆಸ್ಲಾ ಕಂಪನಿಯು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ನಮ್ಮ ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡಲು ನಮ್ಮ ವಾಹನಗಳ ಮೂಲ ಡೇಟಾವನ್ನು ಥರ್ಡ್ ಪಾರ್ಟಿ ರೇಟಿಂಗ್ ಏಜೆನ್ಸಿ ಅಥವಾ ಸರ್ಕಾರದಿಂದ ನೇಮಿಸಲ್ಪಡುವ ತಾಂತ್ರಿಕ ತಂಡಕ್ಕೆ ನೀಡಲು ಸಿದ್ಧರಿದ್ದೇವೆ ಎಂದು ತಿಳಿಸಿದೆ.

MOSTREAD: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಟೆಸ್ಲಾ ಕಾರು ಮಾಲೀಕರಲ್ಲಿ ಅನುಮಾನ ಮೂಡಿಸಿದ ಪೊಲೀಸರ ನಡೆ

ಟೆಸ್ಲಾ ಕಾರುಗಳನ್ನು ತಡೆದು ನಿಲ್ಲಿಸುತ್ತಿರುವ ಬಗ್ಗೆ ಹಲವು ವೀಡಿಯೊಗಳನ್ನು ಬಿಡುಗಡೆಗೊಳಿಸಿದ್ದರೂ, ಹೆದ್ದಾರಿಗಳಲ್ಲಿ ಟೆಸ್ಲಾ ಕಾರುಗಳನ್ನು ಮಾತ್ರ ತಡೆದು ನಿಲ್ಲಿಸುತ್ತಿರುವುದನ್ನು ಸ್ಥಳೀಯ ಪೊಲೀಸ್ ಇಲಾಖೆ ನಿರಾಕರಿಸಿದೆ.

ಟೆಸ್ಲಾ ಕಾರು ಮಾಲೀಕರಲ್ಲಿ ಅನುಮಾನ ಮೂಡಿಸಿದ ಪೊಲೀಸರ ನಡೆ

ಸಾರಿಗೆ ಇಲಾಖೆಯ ಹಿತದೃಷ್ಟಿಯಿಂದ ಈ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ. ಪೊಲೀಸ್ ಇಲಾಖೆಯ ಈ ಉತ್ತರಕ್ಕೆ ಟೆಸ್ಲಾ ಕಾರು ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

MOSTREAD: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಪೊಲೀಸರ ಈ ಕ್ರಮವು ಗುವಾಂಗ್‌ ಝು ಹೆದ್ದಾರಿಗಳಲ್ಲಿ ಸಾಗುವ ಟೆಸ್ಲಾ ಕಾರುಗಳ ಮಾಲೀಕರಲ್ಲಿ ಆಕ್ರೋಶವನ್ನುಂಟು ಮಾಡಿವೆ. ಈ ಹೆದ್ದಾರಿಯಲ್ಲಿ ಟೆಸ್ಲಾ ಕಾರುಗಳು ಸಾಲುಗಟ್ಟಿ ನಿಂತಿವೆ.

ಟೆಸ್ಲಾ ಕಾರು ಮಾಲೀಕರಲ್ಲಿ ಅನುಮಾನ ಮೂಡಿಸಿದ ಪೊಲೀಸರ ನಡೆ

ಭೀಕರ ರಸ್ತೆ ಅಪಘಾತ ಸಂಭವಿಸಿದ ಕೆಲವೇ ವಾರಗಳಲ್ಲಿ ಚೀನಾ ಸರ್ಕಾರವು ವಿಶ್ವದ ಪ್ರಮುಖ ಎಲೆಕ್ಟ್ರಿಕ್ ಕಾರು ತಯಾರಕ ಕಂಪನಿಯಾದ ಟೆಸ್ಲಾ ಕಾರುಗಳ ಸಂಚಾರವನ್ನು ಹೆದ್ದಾರಿಗಳಲ್ಲಿ ನಿಷೇಧಿಸಿದೆಯೇ ಎಂಬ ಪ್ರಶ್ನೆ ಚೀನಾದ ಟೆಸ್ಲಾ ಕಾರು ಮಾಲೀಕರಲ್ಲಿ ಉದ್ಭವಿಸಿದೆ.

Most Read Articles

Kannada
English summary
Cops action creates suspicion among Tesla car owners in China. Read in Kannada.
Story first published: Monday, April 26, 2021, 19:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X