ಏಕಾಂಗಿಯಾಗಿ ಸಂಚರಿಸುವ ವಾಹನ ಸವಾರರೇ ಎಚ್ಚರ, ನಿಯಮ ಉಲ್ಲಂಘಿಸಿದರೆ ಬೀಳಲಿದೆ ದಂಡ

ಕರೋನಾ ವೈರಸ್ ಭಾರತವೂ ಸೇರಿದಂತೆ ವಿಶ್ವದೆಲ್ಲೆಡೆ ತನ್ನ ಅಟ್ಟಹಾಸವನ್ನು ಮೆರೆಯುತ್ತಿದೆ. ಕರೋನಾ ವೈರಸ್ ಸಾಂಕ್ರಾಮಿಕ ರೋಗಕ್ಕೆ ಯಾವುದೇ ಲಸಿಕೆ ಇಲ್ಲ. ಈ ಮಹಾಮಾರಿ ಹರಡದಂತೆ ತಡೆಯುವುದೇ ಇದಕ್ಕಿರುವ ಮದ್ದು.

ಏಕಾಂಗಿಯಾಗಿ ಸಂಚರಿಸುವ ವಾಹನ ಸವಾರರೇ ಎಚ್ಚರ, ನಿಯಮ ಉಲ್ಲಂಘಿಸಿದರೆ ಬೀಳಲಿದೆ ದಂಡ

ಜನರು ಕರೋನಾ ವೈರಸ್ ನೊಂದಿಗೆ ಬದುಕುವುದನ್ನು ಕಲಿಯಬೇಕೆಂದು ಸರ್ಕಾರವೇ ಮನವಿ ಮಾಡಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಜರ್ ಬಳಕೆ ಹಾಗೂ ಫೇಸ್ ಮಾಸ್ಕ್ ಧರಿಸುವುದರಿಂದ ಕರೋನಾ ವೈರಸ್ ಹರಡುವುದನ್ನು ತಡೆಯಬಹುದು ಎಂದು ಹೇಳಲಾಗಿದೆ. ಫೇಸ್ ಮಾಸ್ಕ್ ಧರಿಸುವುದರಿಂದ ಕರೋನಾ ಸೋಂಕು ಹರಡುವ ಸಾಧ್ಯತೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆಗೊಳಿಸಬಹುದು.

ಏಕಾಂಗಿಯಾಗಿ ಸಂಚರಿಸುವ ವಾಹನ ಸವಾರರೇ ಎಚ್ಚರ, ನಿಯಮ ಉಲ್ಲಂಘಿಸಿದರೆ ಬೀಳಲಿದೆ ದಂಡ

ಈ ಕಾರಣಕ್ಕೆ ಫೇಸ್ ಮಾಸ್ಕ್ ಬಳಕೆಯನ್ನು ಸರ್ಕಾರವು ಕಡ್ಡಾಯಗೊಳಿಸಿದೆ. ಈ ಆದೇಶವು ವಾಹನ ಸವಾರರಿಗೂ ಸಹ ಅನ್ವಯಿಸುತ್ತದೆ. ದ್ವಿಚಕ್ರ ವಾಹನ ಹಾಗೂ ನಾಲ್ಕು ಚಕ್ರ ವಾಹನ ಸವಾರರು ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಏಕಾಂಗಿಯಾಗಿ ಸಂಚರಿಸುವ ವಾಹನ ಸವಾರರೇ ಎಚ್ಚರ, ನಿಯಮ ಉಲ್ಲಂಘಿಸಿದರೆ ಬೀಳಲಿದೆ ದಂಡ

ಆದರೆ ಕೇವಲ ಬೆರಳೆಣಿಕೆಯಷ್ಟು ಕಾರು ಮಾಲೀಕರು ಮಾತ್ರ ಫೇಸ್ ಮಾಸ್ಕ್ ಗಳನ್ನು ಧರಿಸುತ್ತಿದ್ದಾರೆ. ಉಳಿದವರು ಫೇಸ್ ಮಾಸ್ಕ್ ಧರಿಸುವ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಕಾರಿನಲ್ಲಿ ಒಬ್ಬರೇ ಹೋಗುವಾಗ ಫೇಸ್ ಮಾಸ್ಕ್ ಧರಿಸುವ ಅವಶ್ಯಕತೆಯಿಲ್ಲ ಎಂಬುದು ಅವರ ಅನಿಸಿಕೆ.

ಏಕಾಂಗಿಯಾಗಿ ಸಂಚರಿಸುವ ವಾಹನ ಸವಾರರೇ ಎಚ್ಚರ, ನಿಯಮ ಉಲ್ಲಂಘಿಸಿದರೆ ಬೀಳಲಿದೆ ದಂಡ

ಕಾರಿನಲ್ಲಿ ಒಬ್ಬರೇ ಸಂಚರಿಸುವಾಗ ಫೇಸ್ ಮಾಸ್ಕ್ ಧರಿಸದಿದ್ದರೂ ಸಹ ದಂಡ ವಿಧಿಸಲಾಗುತ್ತದೆ. ದೆಹಲಿ ಪೊಲೀಸರು ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲು ಈ ನಿಯಮವನ್ನು ಜಾರಿಗೆ ತಂದಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಏಕಾಂಗಿಯಾಗಿ ಸಂಚರಿಸುವ ವಾಹನ ಸವಾರರೇ ಎಚ್ಚರ, ನಿಯಮ ಉಲ್ಲಂಘಿಸಿದರೆ ಬೀಳಲಿದೆ ದಂಡ

ಈ ನಿಯಮದನ್ವಯ ಕಾರುಗಳಲ್ಲಿ ಏಕಾಂಗಿಯಾಗಿ ಸಂಚರಿಸುವ ಫೇಸ್ ಮಾಸ್ಕ್ ಧರಿಸದ ಕಾರು ಚಾಲಕರಿಗೆ ದಂಡ ವಿಧಿಸಲಾಗುತ್ತಿದೆ. ಕರೋನಾ ಸೋಂಕು ಹರಡುವುದನ್ನು ಕಡಿಮೆಗೊಳಿಸಲು ದೆಹಲಿ ಪೊಲೀಸರು ಈ ನಿಯಮವನ್ನು ಜಾರಿಗೆ ತಂದಿದ್ದಾರೆ. ಈ ಬಗ್ಗೆ ಕಾರ್ ಅಂಡ್ ಬೈಕ್ವರದಿ ಮಾಡಿದೆ.

ಏಕಾಂಗಿಯಾಗಿ ಸಂಚರಿಸುವ ವಾಹನ ಸವಾರರೇ ಎಚ್ಚರ, ನಿಯಮ ಉಲ್ಲಂಘಿಸಿದರೆ ಬೀಳಲಿದೆ ದಂಡ

ಕಾರು ಚಾಲಕರು ಕಾರಿನ ವಿಂಡೋಗಳನ್ನು ಕೆಳಗಿಳಿಸಿ ಇತರರೊಂದಿಗೆ ಮಾತನಾಡುವುದು ಸಾಮಾನ್ಯವಾಗಿದೆ. ಹೋಗುತ್ತಿರುವ ದಾರಿ ಬಗ್ಗೆ ತಿಳಿಯದೇ ಇತರರೊಂದಿಗೆ ಮಾತನಾಡುವಾಗ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಕರೋನಾ ಸೋಂಕು ಹರಡುವ ಸಾಧ್ಯತೆಗಳಿವೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಏಕಾಂಗಿಯಾಗಿ ಸಂಚರಿಸುವ ವಾಹನ ಸವಾರರೇ ಎಚ್ಚರ, ನಿಯಮ ಉಲ್ಲಂಘಿಸಿದರೆ ಬೀಳಲಿದೆ ದಂಡ

ಇವುಗಳನ್ನು ಗಮನದಲ್ಲಿರಿಸಿಕೊಂಡು ಈ ನಿಯಮವನ್ನು ಜಾರಿಗೆ ತರಲಾಗಿದೆ. ಈ ನಿಯಮವು ದ್ವಿಚಕ್ರ ವಾಹನ ಮಾಲೀಕರಿಗೂ ಸಹ ಅನ್ವಯಿಸಲಿದೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಜೊತೆಗೆ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಏಕಾಂಗಿಯಾಗಿ ಸಂಚರಿಸುವ ವಾಹನ ಸವಾರರೇ ಎಚ್ಚರ, ನಿಯಮ ಉಲ್ಲಂಘಿಸಿದರೆ ಬೀಳಲಿದೆ ದಂಡ

ದ್ವಿಚಕ್ರ ವಾಹನ ಸವಾರರು ರಸ್ತೆ ಅಪಘಾತಕ್ಕೀಡಾದರೆ ಜೀವ ರಕ್ಷಿಸಲು ಹೆಲ್ಮೆಟ್ ಸಹಕಾರಿಯಾಗಲಿದೆ. ಕರೋನಾ ವೈರಸ್ ಹಿನ್ನೆಲೆಯಲ್ಲಿ ಹೆಲ್ಮೆಟ್ ಜೊತೆಗೆ ಫೇಸ್ ಮಾಸ್ಕ್ ಧರಿಸುವುದನ್ನು ಸಹ ಕಡ್ಡಾಯಗೊಳಿಸಲಾಗಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಏಕಾಂಗಿಯಾಗಿ ಸಂಚರಿಸುವ ವಾಹನ ಸವಾರರೇ ಎಚ್ಚರ, ನಿಯಮ ಉಲ್ಲಂಘಿಸಿದರೆ ಬೀಳಲಿದೆ ದಂಡ

ಕೆಲ ವಾಹನ ಚಾಲಕರು ಕರ್ಚೀಫ್ ಗಳನ್ನು ಫೇಸ್ ಮಾಸ್ಕ್ ನಂತೆ ಧರಿಸುತ್ತಿದ್ದಾರೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ಫೇಸ್ ಮಾಸ್ಕ್ ಬದಲು ಕರ್ಚೀಫ್ ಧರಿಸಿದರೂ ದಂಡ ವಿಧಿಸುತ್ತಿದ್ದಾರೆ.

ಗಮನಿಸಿ: ಇಲ್ಲಿ ಬಳಸಲಾಗಿರುವುದು ಸಾಂದರ್ಭಿಕ ಚಿತ್ರಗಳು.

Most Read Articles

Kannada
English summary
Cops to impose fine who drive without a face mask. Read in Kannada.
Story first published: Monday, August 10, 2020, 10:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X