15 ಕೆ.ಜಿ ತೂಕದ ಸ್ಕೂಟರ್ ಟೋಯಿಂಗ್'ಗಾಗಿ 7,500 ಕೆ.ಜಿ ತೂಕದ ಟ್ರಕ್ ಬಳಸಿ ಟ್ರೋಲ್ ಆದ ಪೊಲೀಸರು

ಇಂಗ್ಲೆಂಡಿನ ವೆಸ್ಟ್ ಮರ್ಸಿಯಾ ಪೊಲೀಸರು 15 ಕೆ.ಜಿ ತೂಕದ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಟೋಯಿಂಗ್ ಮಾಡಲು ಸುಮಾರು 7,500 ಕೆ.ಜಿ ತೂಕದ ಟ್ರಕ್ ಬಳಸಿದ್ದಾರೆ. ಇದರಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಇಂಗ್ಲೆಂಡ್ ಪೊಲೀಸರನ್ನು ಟ್ರೋಲ್ ಮಾಡಲಾಗುತ್ತಿದೆ.

15 ಕೆ.ಜಿ ತೂಕದ ಸ್ಕೂಟರ್ ಟೋಯಿಂಗ್'ಗಾಗಿ 7,500 ಕೆ.ಜಿ ತೂಕದ ಟ್ರಕ್ ಬಳಸಿದ ಪೊಲೀಸರು

ಈ ಘಟನೆ ಜೂನ್ 4ರಂದು ನಡೆದಿದೆ ಎಂದು ವರದಿಯಾಗಿದೆ. ಭಾರೀ ಗಾತ್ರದ ಟ್ರಕ್'ನಲ್ಲಿ ಸಣ್ಣ ಎಲೆಕ್ಟ್ರಿಕ್ ಸ್ಕೂಟರ್ ಹೊತ್ತೊಯ್ಯುತ್ತಿರುವ ಫೋಟೋವನ್ನು ಹರ್ ಫೋರ್ಡ್ ನಗರ ಪೊಲೀಸ್ ಇಲಾಖೆ ತಮ್ಮ ಫೇಸ್ ಬುಕ್ ಪೇಜ್'ನಲ್ಲಿ ಶೇರ್ ಮಾಡಿದೆ. ಇಷ್ಟು ದೊಡ್ಡ ಗಾತ್ರದ ಟ್ರಕ್'ನಲ್ಲಿ ಒಂದೇ ಬಾರಿಗೆ 20-30 ಸ್ಕೂಟರ್‌ಗಳನ್ನು ಸಾಗಿಸಬಹುದು.

15 ಕೆ.ಜಿ ತೂಕದ ಸ್ಕೂಟರ್ ಟೋಯಿಂಗ್'ಗಾಗಿ 7,500 ಕೆ.ಜಿ ತೂಕದ ಟ್ರಕ್ ಬಳಸಿದ ಪೊಲೀಸರು

ಪೊಲೀಸರು ಈ ಸಣ್ಣ ಸ್ಕೂಟರ್ ಸಾಗಿಸಲು ಇಷ್ಟು ದೊಡ್ಡ ಟ್ರಕ್ ಅನ್ನು ಏಕೆ ಬಳಸಿದರು ಎಂದು ಅಲ್ಲಿನ ಪೊಲೀಸರನ್ನು ನೆಟಿಜನ್‌ಗಳು ಪ್ರಶ್ನಿಸುತ್ತಿದ್ದಾರೆ. ಗಮನಿಸಬೇಕಾದ ಸಂಗತಿಯೆಂದರೆ ಈ ಸ್ಕೂಟರ್ ಅನ್ನು ಒಬ್ಬನೇ ವ್ಯಕ್ತಿ ಸಾಗಿಸಬಹುದು.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

15 ಕೆ.ಜಿ ತೂಕದ ಸ್ಕೂಟರ್ ಟೋಯಿಂಗ್'ಗಾಗಿ 7,500 ಕೆ.ಜಿ ತೂಕದ ಟ್ರಕ್ ಬಳಸಿದ ಪೊಲೀಸರು

ಪ್ಯಾಟ್ರೋಲ್ ಕಾರಿನ ಬೂಟ್'ನಲ್ಲಿಯೇ ಈ ಸ್ಕೂಟರ್ ಅನ್ನು ಸಾಗಿಸಬಹುದಿತ್ತು. ಅದನ್ನು ಬಿಟ್ಟು ಈ ಸಣ್ಣ ಸ್ಕೂಟರ್ ಸಾಗಿಸಲು ಇಷ್ಟು ದೊಡ್ಡ ಟ್ರಕ್ ಬಳಸುವುದು ಎಷ್ಟು ಸರಿ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

15 ಕೆ.ಜಿ ತೂಕದ ಸ್ಕೂಟರ್ ಟೋಯಿಂಗ್'ಗಾಗಿ 7,500 ಕೆ.ಜಿ ತೂಕದ ಟ್ರಕ್ ಬಳಸಿದ ಪೊಲೀಸರು

ಸಣ್ಣ ಸ್ಕೂಟರ್ ಸಾಗಿಸಲು ಇಷ್ಟು ದೊಡ್ಡ ಟ್ರಕ್ ಬಳಸಿ ಹಣ ವ್ಯರ್ಥ ಮಾಡಲಾಗಿದೆ ಎಂದು ಕೆಲವರು ಹೇಳಿದ್ದಾರೆ. ಸಣ್ಣ ಸ್ಕೂಟರ್ ಸಾಗಿಸಲು ಇಷ್ಟು ದೊಡ್ಡ ಟ್ರಕ್ ಬಳಸಿರುವುದನ್ನು ಸಾಧನೆ ಎಂದು ಭಾವಿಸುತ್ತೀರಾ ಎಂದು ಮತ್ತೊಬ್ಬರು ಪೊಲೀಸರನ್ನು ಕೇಳಿದ್ದಾರೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

15 ಕೆ.ಜಿ ತೂಕದ ಸ್ಕೂಟರ್ ಟೋಯಿಂಗ್'ಗಾಗಿ 7,500 ಕೆ.ಜಿ ತೂಕದ ಟ್ರಕ್ ಬಳಸಿದ ಪೊಲೀಸರು

ಈ ಸಣ್ಣ ಸ್ಕೂಟರ್‌ಗಾಗಿ ಇಷ್ಟು ದೊಡ್ಡ ಟ್ರಕ್‌ ಬಳಸಿರುವುದು ನಿಜಕ್ಕೂ ಆಶ್ಚರ್ಯವಾಗಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದೇ ರೀತಿ ಇನ್ನೂ ಹಲವಾರು ಜನರು ಪೊಲೀಸರನ್ನು ಟ್ರೋಲ್ ಮಾಡಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

15 ಕೆ.ಜಿ ತೂಕದ ಸ್ಕೂಟರ್ ಟೋಯಿಂಗ್'ಗಾಗಿ 7,500 ಕೆ.ಜಿ ತೂಕದ ಟ್ರಕ್ ಬಳಸಿದ ಪೊಲೀಸರು

ಇಂಗ್ಲೆಂಡಿನ ವೆಸ್ಟ್ ಮರ್ಸಿಯಾ ಪೊಲೀಸರ ಈ ಕಾರ್ಯವು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಆಗಿದ್ದು, ನಾನಾ ರೀತಿಯ ಕಾಮೆಂಟ್'ಗಳು ಬರುತ್ತಿವೆ. ಭಾರತದಲ್ಲಿಯೂ ಪ್ರತಿದಿನ ಹಲವಾರು ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

15 ಕೆ.ಜಿ ತೂಕದ ಸ್ಕೂಟರ್ ಟೋಯಿಂಗ್'ಗಾಗಿ 7,500 ಕೆ.ಜಿ ತೂಕದ ಟ್ರಕ್ ಬಳಸಿದ ಪೊಲೀಸರು

ಕರೋನಾ ವೈರಸ್‌ ಎರಡನೇ ಅಲೆಯಿಂದಾಗಿ ದೇಶದ ಹಲವು ಭಾಗಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಅನಗತ್ಯವಾಗಿ ಹೊರಗೆ ತಿರುಗಾಡುವವರ ವಾಹನಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದಾರೆ.

15 ಕೆ.ಜಿ ತೂಕದ ಸ್ಕೂಟರ್ ಟೋಯಿಂಗ್'ಗಾಗಿ 7,500 ಕೆ.ಜಿ ತೂಕದ ಟ್ರಕ್ ಬಳಸಿದ ಪೊಲೀಸರು

ಆದರೆ ಭಾರತದ ಪೊಲೀಸರು ಸಣ್ಣ ವಾಹನಗಳನ್ನು ಸಾಗಿಸಲು ಭಾರೀ ಗಾತ್ರದ ವಾಹನಗಳನ್ನು ಬಳಸಿಲ್ಲ. ಭಾರತದಲ್ಲಿ ಕರೋನಾ ವೈರಸ್ ಎರಡನೇ ಅಲೆ ಪ್ರಭಾವವು ನಿಧಾನವಾಗಿ ಕಡಿಮೆಯಾಗುತ್ತಿದೆ. ಇದರಿಂದ ದೇಶದ ಹಲವು ಭಾಗಗಳಲ್ಲಿ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಲಾಗುತ್ತಿದೆ.

ಗಮನಿಸಿ: ಮೊದಲ ಎರಡು ಚಿತ್ರಗಳನ್ನು ಹೊರತುಪಡಿಸಿ ಉಳಿದ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Cops uses huge truck to tow away 15 kg mini electric scooter. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X