ಕಾಪಿಕ್ಯಾಟ್ ಬೇಬಿ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿ ತಯಾರಿಸಿದ ಚೀನಾ ಕಂಪನಿ

ಚೀನಾ ಮೊದಲಿನಿಂದಲೂ ಒರಿಜಿನಲ್ ವಸ್ತುಗಳನ್ನು ಕಾಪಿ ಮಾಡುವುದರಲ್ಲಿ ಎತ್ತಿದ ಕೈ. ಒರಿಜಿನಲ್ ವಸ್ತುಗಳು ಥೇಟ್ ಅದೇ ರೀತಿ ಉತ್ಪಾದಿಸುವುದರಲ್ಲಿ ಅವರು ನಿಸ್ಸಿಮರು. ಅದೇ ರೀತಿ ಹಲವಾರು ಜನಪ್ರಿಯ ವಾಹನಗಳ ಡಿಸೈನ್ ಕದ್ದು ಮಾರುಕಟ್ಟೆಗೆ ಪರಿಚಯಿಸುತ್ತಾರೆ. ಒರಿಜನಲ್ ಮಾದರಿಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಚೀನಾ ಡೂಪ್ಲಿಕೇಟ್ ಅನ್ನು ತಯಾರಿಸುತ್ತಾರೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಜನಪ್ರಿಯವಾದ ಹಲವು ಕಾರು ಮತ್ತು ಬೈಕುಗಳ ಡಿಸೈನ್ ಕದ್ದು ಹಲವು ಬಾರಿ ಛೀಮಾರಿ ಹಾಕಿಸಿಕೊಂಡರು ಕೂಡ ಚೀನಾ ಮಾತ್ರ ಕಾಪಿ ಮಾಡುವ ಕುತಂತ್ರ ಬುದ್ದಿಯನ್ನು ಮಾತ ಬಿಟ್ಟಿಲ್ಲ. ಚೀನಾ ಜನಪ್ರಿಯ ಮಾದರಿಗಳ ಡಿಸೈನ್ ಕದ್ದು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದನ್ನು ಒಂದು ಹವ್ಯಾಸ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು. ಇತ್ತೀಚೆಗೆ ಜನಪ್ರಿಯ ಟೊಯೊಟಾ ಲ್ಯಾಂಡ್ ಕ್ರೂಸರ್ LC300 ಎಸ್‍ಯುವಿಯನ್ನು ಕಾಪಿ ಮಾಡಿ ಹೊಸ ಮಾದರಿಯನ್ನು ತಯಾರಿಸಿದ್ದಾರೆ.

ಕಾಪಿಕ್ಯಾಟ್ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿ ತಯಾರಿಸಿದ ಚೀನಾ

ಬೇಬಿ ಟೊಯೊಟಾ ಲ್ಯಾಂಡ್ ಕ್ರೂಸರ್ LC300 ಎಸ್‍ಯುವಿಯ ರೀತಿಯಲ್ಲಿ ಕಾಣುತ್ತದೆ. ಟೊಯೊಟಾ ಲ್ಯಾಂಡ್ ಕ್ರೂಸರ್ LC300 ಎಸ್‍ಯುವಿಯನ್ನು ನಕಲಿ ಮಾಡಿ ಹೊಸ ಮಾದರಿಯನ್ನು ತಯಾರಿಸಿದ ಚೀನಾ ಕಂಪನಿಯ ಹೆಸರು ಬಹಿರಂಗವಾಗಿಲ್ಲ. ಬೇಬಿ ಎಸ್‍ಯುವಿ ಅದರ ಹಿಂದಿನ ಪ್ರೊಫೈಲ್ ಕತ್ತರಿಸಿದಂತೆ ಕಾಣುತ್ತದೆ. ಚೀನೀ ವೆಬ್‌ಸೈಟ್ ವೈಬೊದಲ್ಲಿ ಕಾಣಿಸಿಕೊಂಡ ಚಿತ್ರಗಳು ಕಾರನ್ನು ಒಂದೇ ರೀತಿಯ ಮುಂಭಾಗದ ಪ್ರೊಫೈಲ್ ದೊಡ್ಡ ಬೆಳ್ಳಿಯ ಸ್ಲ್ಯಾಟ್‌ಗಳೊಂದಿಗೆ ರೇಡಿಯೇಟರ್ ಗ್ರಿಲ್ ಅನ್ನು ಹೊಂದಿದೆ.

ಇದರೊಂದಿಗೆ ಹೆಡ್‌ಲ್ಯಾಂಪ್‌ಗಳೊಂದಿಗೆ ತೋರಿಸುತ್ತವೆ. ಆದರೆ ಒಂದೇ ರೀತಿಯ ಮುಂಭಾಗದ ಪ್ರೊಫೈಲ್ ಮೂಲ ಲ್ಯಾಂಡ್ ಕ್ರೂಸರ್ LC300 ಎಸ್‍ಯುವಿಗೆ ಹೋಲಿಸಿದರೆ ಎಸ್‍ಯುವಿಯ ಸಣ್ಣ ಗಾತ್ರವನ್ನು ಪರಿಗಣಿಸಿ ಸಣ್ಣ ಪ್ರಮಾಣದಲ್ಲಿ ಬರುತ್ತದೆ. ಈ ಬೇಬಿ ಎಸ್‍ಯುವಿಯ ಅಲಾಯ್ ವ್ಹೀಲ್ ಗಳು ಮತ್ತು ವಿಂಗ್ ಮೀರರ್ಸ್ ವಿಭಿನ್ನವಾಗಿ ಕಾಣುತ್ತವೆ. ಟೊಯೊಟಾ ಲ್ಯಾಂಡ್ ಕ್ರೂಸರ್ LC30 ಎಸ್‍ಯುವಿಗೆ ಹೋಲಿಸಿದರೆ ಈ ಬೇಬಿ ಎಸ್‍ಯುವಿಯ ಸೈಡ್ ಪ್ರೊಫೈಲ್ ವಿಶೇಷವಾಗಿ ವಿಭಿನ್ನವಾಗಿದೆ.

ಇದು ಮೂಲ ಲ್ಯಾಂಡ್ ಕ್ರೂಸರ್‌ನಷ್ಟು ಎತ್ತರದಲ್ಲಿದೆ ಆದರೆ ಸಂಪೂರ್ಣವಾಗಿ ಚಿಕ್ಕ ವ್ಹೀಲ್ ಗಳು ಮತ್ತು ಟೈರ್‌ಗಳನ್ನು ಪಡೆಯುತ್ತದೆ. ಕಾರಿನ ಹಿಂಭಾಗದ ಪ್ರೊಫೈಲ್ LC300 ತರಹದ ಟೈಲ್‌ಲೈಟ್‌ಗಳನ್ನು ಪಡೆಯುತ್ತದೆ, ಒಂದೇ ರೀತಿಯ ಟೈಲ್‌ಗೇಟ್ ಮತ್ತು ಡುಪ್ಲಿಕೆಟ್ ಎಕ್ಸಾಸ್ಟ್ ಕಟ್‌ಔಟ್‌ಗಳೊಂದಿಗೆ ಡಿಫ್ಯೂಸರ್ ನೊಂದಿಗೆ ಬರುತ್ತದೆ. ಆದರೆ ಈ ಎಸ್‍ಯುವಿಯ ಫೀಚರ್ಸ್ ಮತ್ತು ತಾಂತ್ರಿಕ ಅಂಶಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಹೊಂದಿರುತ್ತದೆ,

ಈ ಬೇಬಿ ಎಸ್‍ಯುವಿಯು ನಿಜವಾದ ಟೊಯೋಟಾ ಲ್ಯಾಂಡ್ ಕ್ರೂಸರ್ LC300 ಅನ್ನು ಅನುಕರಿಸುವ ಉತ್ಪಾದನಾ ಮಾದರಿಯೇ ಥವಾ ಕೆಲವು ಆಫ್ಟರ್‌ಮಾರ್ಕೆಟ್ ಪ್ಲೇಯರ್‌ನಿಂದ ಮಾಡಿಫೈ ಮಾಡಿದ್ದರೆಯೇ ಎಂಬ ಮಾಹಿತಿ ಬಹಿರಂಗವಾಗಿಲ್ಲ. ಇನ್ನು ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ (Toyota) ಗ್ರೇಟರ್ ನೋಯ್ಡಾದಲ್ಲಿ ನಡೆದ 2023ರ ಆಟೋ ಎಕ್ಸ್‌ಪೋದಲ್ಲಿ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯನ್ನು ಪ್ರದರ್ಶಿಸಲಾಯಿತು.

ಭಾರತದಲ್ಲಿ ಈ ಹೊಸ ಲ್ಯಾಂಡ್ ಕ್ರೂಸರ್ 300 (Toyota Land Cruiser 300) ಗಾಗಿ ಅಧಿಕೃತ ಬುಕಿಂಗ್‌ಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ. ಈ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.2.17 ಕೋಟಿಯಾಗಿದೆ. ಲ್ಯಾಂಡ್ ಕ್ರೂಸರ್ 300 ಭಾರತದಲ್ಲಿ ಮಾರಾಟವಾಗಲಿರುವ ಅತ್ಯಂತ ದುಬಾರಿ ಟೊಯೊಟಾ ಉತ್ಪನ್ನವಾಗಿದೆ. ಟೊಯೊಟಾ ಲ್ಯಾಂಡ್ ಕ್ರೂಸರ್ 300 ಜಪಾನಿನ ಮಾರ್ಕ್ಯೂನಿಂದ ಪ್ರಮುಖ ಎಸ್‍ಯುವಿಯಾಗಿದೆ.

ಇನ್ನು ಟೊಯೊಟಾ(Toyota) ತನ್ನ ನ್ಯೂ ಜನರೇಷನ್ ಲ್ಯಾಂಡ್ ಕ್ರೂಸರ್(Land Cruiser) ಎಸ್‍ಯುವಿಯನ್ನು ಕಳೆದ ವರ್ಷ ಜಾಗತಿಕ ಮಟ್ಟದಲ್ಲಿ ಪರಿಚಯಿಸಿತು. ಈ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ ಎಸ್‍ಯುವಿಯು ಹೊಸ ಸಂಚಲವನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಈ ಹೊಸ ಟೊಯೊಟಾ ಲ್ಯಾಂಡ್ ಕ್ರೂಸರ್ 300 ಎಸ್‍ಯುವಿಗೆ ಬಿಡುಗಡೆ ಮಾಡಿದ ಪ್ರತಿಯೊಂದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲೂ ಬೇಡಿಕೆ ಹೆಚ್ಚಿದೆ.

Image Coutesy: Weibo

Article Published On: Tuesday, March 7, 2023, 11:00 [IST]
English summary
Copycat toyota land cruiser lc300 from china details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+