ಕರೋನಾದಿಂದ ತತ್ತರಿಸಿರುವ ಜನರ ಮೇಲೆ ಬೀಳಲಿದೆ ಮತ್ತೊಂದು ಬರೆ..!

ಕರೋನಾ ವೈರಸ್ ಭೀತಿ ವಿಶ್ವಾದ್ಯಂತ ಹರಡುತ್ತಿದೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಈ ವೈರಸ್ ಈಗ ಸುಮಾರು 120 ದೇಶಗಳನ್ನು ವ್ಯಾಪಿಸಿದೆ. ಕರೋನಾ ವೈರಸ್‌ನಿಂದಾಗಿ 4 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ.

ಕರೋನಾದಿಂದ ತತ್ತರಿಸಿರುವ ಜನರ ಮೇಲೆ ಬಿತ್ತು ಮತ್ತೊಂದು ಬರೆ..!

ಕರೋನಾ ವೈರಸ್ ಭಾರತಕ್ಕೂ ಕಾಲಿಟ್ಟಿದ್ದು ಈಗಾಗಲೇ ಅನೇಕ ಜನರಿಗೆ ಸೋಂಕು ತಗುಲಿದೆ. ಚೀನಾ, ಇಟಲಿ ಹಾಗೂ ಅಮೆರಿಕಾ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆ. ಭಾರತದಲ್ಲಿ ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ.

ಕರೋನಾದಿಂದ ತತ್ತರಿಸಿರುವ ಜನರ ಮೇಲೆ ಬಿತ್ತು ಮತ್ತೊಂದು ಬರೆ..!

ಕರೋನಾ ವೈರಸ್ ಜನರ ಸಾವಿಗೆ ಕಾರಣವಾಗುವುದಲ್ಲದೆ ಅಂತರರಾಷ್ಟ್ರೀಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಕುಸಿಯುತ್ತಿವೆ. ಭಾರತದಂತಹ ದೇಶಗಳಿಗೆ ಇದು ನಿಜಕ್ಕೂ ಒಳ್ಳೆಯ ಸುದ್ದಿ.

ಕರೋನಾದಿಂದ ತತ್ತರಿಸಿರುವ ಜನರ ಮೇಲೆ ಬಿತ್ತು ಮತ್ತೊಂದು ಬರೆ..!

ಭಾರತವು ತನ್ನ ಕಚ್ಚಾ ತೈಲ ಬೇಡಿಕೆಯ 85%ನಷ್ಟು ಆಮದಿನ ಮೂಲಕ ಹೊಂದಿದೆ. ಇಂತಹ ಸಂದರ್ಭದಲ್ಲಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿನ ಕಡಿತವು ಭಾರತಕ್ಕೆ ಪ್ರಯೋಜನಕಾರಿಯಾಗಿದೆ. ಕೇಂದ್ರ ಸರ್ಕಾರವು ವಾಹನ ಸವಾರರಿಗೆ ಇದರ ಸಂಪೂರ್ಣ ಲಾಭವನ್ನು ನೀಡುತ್ತದೆಯೇ ಎಂಬುದು ಇಲ್ಲಿರುವ ಪ್ರಶ್ನೆಯಾಗಿದೆ.

ಕರೋನಾದಿಂದ ತತ್ತರಿಸಿರುವ ಜನರ ಮೇಲೆ ಬಿತ್ತು ಮತ್ತೊಂದು ಬರೆ..!

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಕುಸಿಯುತ್ತಿರುವುದರಿಂದ ಭಾರತದಲ್ಲಿ ಇಟ್ಟಿಕಿನ ದಿನಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಇಳಿಕೆಯುಂಟಾಗುತ್ತಿದೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕಡಿಮೆ ಮಾಡಿಲ್ಲ ಎಂಬುದು ವಾಹನ ಚಾಲಕ ದೂರು.

ಕರೋನಾದಿಂದ ತತ್ತರಿಸಿರುವ ಜನರ ಮೇಲೆ ಬಿತ್ತು ಮತ್ತೊಂದು ಬರೆ..!

ಕಚ್ಚಾ ತೈಲ ಬೆಲೆ ಕುಸಿತದ ಸಂಪೂರ್ಣ ಲಾಭವು ಸಿಗುತ್ತಿಲ್ಲವೆಂಬುದು ವಾಹನ ಚಾಲಕರು ಹಾಗೂ ವಿರೋಧ ಪಕ್ಷಗಳ ವಾದ. ಈ ಹಿನ್ನೆಲೆಯಲ್ಲಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಕುಸಿದರೂ

ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ತೀವ್ರವಾದ ಹೆಚ್ಚಳವಾಗುವ ಸಂಭವವಿದೆ. ಇದರಿಂದ ವಾಹನ ಚಾಲಕರು ಆಘಾತಕ್ಕೊಳಗಾಗಿದ್ದಾರೆ.

ಕರೋನಾದಿಂದ ತತ್ತರಿಸಿರುವ ಜನರ ಮೇಲೆ ಬಿತ್ತು ಮತ್ತೊಂದು ಬರೆ..!

ಇದಕ್ಕೆ ಕಾರಣ ಕೇಂದ್ರ ಸರ್ಕಾರದ ಕ್ರಮ. ಕೇಂದ್ರ ಸರ್ಕಾರವು ಮಾರ್ಚ್ 14 ಶಾಕ್ ನೀಡಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 3 ರೂ. ತೆರಿಗೆ ಹೆಚ್ಚಳ ಮಾಡಲಿದೆ ಎಂದು ವರದಿಯಾಗಿದೆ.

ಕರೋನಾದಿಂದ ತತ್ತರಿಸಿರುವ ಜನರ ಮೇಲೆ ಬಿತ್ತು ಮತ್ತೊಂದು ಬರೆ..!

ಇದರಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಲಿದೆ. ಬೆಲೆ ಕಡಿಮೆಯಾಗಲಿದೆ ಎಂದು ಎದುರು ನೋಡುತ್ತಿದ್ದ ವಾಹನ ಸವಾರರಿಗೆ ಕೇಂದ್ರ ಸರ್ಕಾರವು ಅಬಕಾರಿ ತೆರಿಗೆಯನ್ನು ಹೆಚ್ಚಿಸಿ ಶಾಕ್ ನೀಡಿದೆ. ವಾಹನ ಸವಾರರು ಮಾತ್ರವಲ್ಲದೇ ಗೃಹಿಣಿಯರೂ ಸಹ ಇದರಿಂದಾಗಿ ತೊಂದರೆಗೊಳಗಾಗಲಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಾದ ನಂತರ ಅಗತ್ಯ ವಸ್ತುಗಳ ಬೆಲೆ ಸಹ ಏರಿಕೆಯಾಗಲಿದೆ.

Article Published On: Saturday, March 14, 2020, 17:07 [IST]
English summary
Central Government to increase crude oil excise duty by 3 rupees. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+