ವೆಂಟಿಲೇಟರ್ ಉತ್ಪಾದನೆಗೆ ಅನುಮೋದನೆ ನೀಡಿದ ಡೊನಾಲ್ಡ್ ಟ್ರಂಪ್

ಕರೋನಾ ವೈರಸ್ ನಿಂದಾಗಿ ಇಡೀ ಜಗತ್ತು ತತ್ತರಿಸುತ್ತಿದೆ. ಚೀನಾದ ವುಹಾನ್‌ ನಗರದಲ್ಲಿ ಮೊದಲಿಗೆ ಕಾಣಿಸಿಕೊಂಡ ಕೋವಿಡ್ -19 ವೈರಸ್ ಈಗ ವಿಶ್ವದಾದ್ಯಂತ ಹರಡಿದೆ. ಈ ವೈರಸ್ ನಿಂದಾಗಿ ಚೀನಾ, ಇಟಲಿ, ಇರಾನ್ ಹಾಗೂ ಅಮೇರಿಕಾದಲ್ಲಿ ಹೆಚ್ಚಿನ ಪ್ರಾಣ ಹಾನಿಯಾಗಿದೆ.

ವೆಂಟಿಲೇಟರ್ ಉತ್ಪಾದನೆಗೆ ಅನುಮೋದನೆ ನೀಡಿದ ಡೊನಾಲ್ಡ್ ಟ್ರಂಪ್

ಕಣ್ಣಿಗೆ ಕಾಣದ ಈ ಶತ್ರುವಿನ ವಿರುದ್ಧ ವಿಶ್ವದ ಎಲ್ಲಾ ರಾಷ್ಟ್ರಗಳು ಹೋರಾಡುತ್ತಿವೆ. ಕೋವಿಡ್ -19 ವೈರಸ್ ವಿಶ್ವದಾದ್ಯಂತ 16,000ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. 3 ಲಕ್ಷಕ್ಕೂ ಹೆಚ್ಚು ಜನರು ಕೋವಿಡ್ -19 ವೈರಸ್ ಸೋಂಕಿಗೆ ಒಳಗಾಗಿದ್ದಾರೆ. ಈ ಸಂಖ್ಯೆಯು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

ವೆಂಟಿಲೇಟರ್ ಉತ್ಪಾದನೆಗೆ ಅನುಮೋದನೆ ನೀಡಿದ ಡೊನಾಲ್ಡ್ ಟ್ರಂಪ್

ಕೋವಿಡ್ -19 ವೈರಸ್ ವೇಗವಾಗಿ ಹರಡುತ್ತಿದ್ದು, ಈ ವೈರಸ್ ಗೆ ಯಾವುದೇ ಅಧಿಕೃತ ಔಷಧಿ ಇಲ್ಲ. ಇದರಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗಬಹುದೆಂಬ ಆತಂಕ ಎದುರಾಗಿದೆ. ಕೋವಿಡ್ -19 ವೈರಸ್ ಹರಡುವುದನ್ನು ತಡೆಯಲು ಜನರು ಮನೆಯಿಂದ ಹೊರಬರದಂತೆ ನಿರ್ಭಂಧ ಹೇರಲಾಗಿದೆ.

ವೆಂಟಿಲೇಟರ್ ಉತ್ಪಾದನೆಗೆ ಅನುಮೋದನೆ ನೀಡಿದ ಡೊನಾಲ್ಡ್ ಟ್ರಂಪ್

ವಿಮಾನಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಇದರಿಂದಾಗಿ ವಿಮಾನಯಾನ ಉದ್ಯಮದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಉದ್ಯೋಗ ಕಳೆದುಕೊಳ್ಳಬಹುದೆಂಬ ಆತಂಕ ಎದುರಾಗಿದೆ. ಜೊತೆಗೆ ಆಟೋ ಮೊಬೈಲ್ ಉದ್ಯಮವು ಕುಸಿತವನ್ನು ಎದುರಿಸುತ್ತಿದೆ.

ವೆಂಟಿಲೇಟರ್ ಉತ್ಪಾದನೆಗೆ ಅನುಮೋದನೆ ನೀಡಿದ ಡೊನಾಲ್ಡ್ ಟ್ರಂಪ್

ಆಟೋಮೊಬೈಲ್ ಮಾರಾಟವು ಕುಸಿತವಾಗುತ್ತಿರುವುದರಿಂದ, ಜಗತ್ತಿನ ಪ್ರಮುಖ ವಾಹನ ತಯಾರಕ ಕಂಪನಿಗಳು ತಮ್ಮ ಉತ್ಪಾದನಾ ಘಟಕಗಳಲ್ಲಿ ವಾಹನಗಳ ಉತ್ಪಾದನೆಯನ್ನು ನಿಲ್ಲಿಸಿವೆ. ಆದರೆ ಈ ಉತ್ಪಾದನಾ ಘಟಕಗಳಲ್ಲಿ ವೈದ್ಯಕೀಯ ಉಪಕರಣಗಳನ್ನು ತಯಾರಿಸಲು ನಿರ್ಧರಿಸಲಾಗಿದೆ.

ವೆಂಟಿಲೇಟರ್ ಉತ್ಪಾದನೆಗೆ ಅನುಮೋದನೆ ನೀಡಿದ ಡೊನಾಲ್ಡ್ ಟ್ರಂಪ್

ವೈದ್ಯಕೀಯ ಉಪಕರಣಗಳಿಗೆ ವಿಶ್ವದ ಎಲ್ಲಾ ದೇಶಗಳಲ್ಲಿಯೂ ಬೇಡಿಕೆ ಹೆಚ್ಚಾಗುತ್ತಿದೆ. ಕೆನಡಾದಲ್ಲಿ ವಾಹನ ತಯಾರಕ ಕಂಪನಿಗಳ ಉತ್ಪಾದನಾ ಘಟಕಗಳಲ್ಲಿ ವೈದ್ಯಕೀಯ ಉಪಕರಣಗಳನ್ನು ತಯಾರಿಸುವ ಕಂಪನಿಗಳಿಗೆ ಕೆನಡಾ ಸರ್ಕಾರವು ಸಹಾಯ ಮಾಡಲಿದೆ ಎಂದು ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರುಡೊ ಹೇಳಿದ್ದಾರೆ.

ವೆಂಟಿಲೇಟರ್ ಉತ್ಪಾದನೆಗೆ ಅನುಮೋದನೆ ನೀಡಿದ ಡೊನಾಲ್ಡ್ ಟ್ರಂಪ್

ಭಾರತದಲ್ಲಿ ಮಹೀಂದ್ರಾ ಕಂಪನಿಯ ಉತ್ಪಾದನಾ ಘಟಕಗಳಲ್ಲಿಯೂ ವೆಂಟಿಲೇಟರ್‌ಗಳ ಉತ್ಪಾದನೆ ಆರಂಭವಾಗಲಿದೆ. ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ ಈ ಬಗ್ಗೆ ಘೋಷಿಸಿದ್ದಾರೆ. ಫೋರ್ಡ್, ಜಿಎಂ ಹಾಗೂ ಟೆಸ್ಲಾ ಸೇರಿದಂತೆ ಬಹುತೇಕ ಎಲ್ಲ ವಾಹನ ತಯಾರಕ ಕಂಪನಿಗಳು ವೆಂಟಿಲೇಟರ್‌ಗಳನ್ನು ಉತ್ಪಾದಿಸಲಿವೆ. ಇದಕ್ಕೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನುಮೋದನೆ ನೀಡಿದ್ದಾರೆ.

ವೆಂಟಿಲೇಟರ್ ಉತ್ಪಾದನೆಗೆ ಅನುಮೋದನೆ ನೀಡಿದ ಡೊನಾಲ್ಡ್ ಟ್ರಂಪ್

ವಿಶ್ವ ಆರೋಗ್ಯ ಸಂಸ್ಥೆಯು ವೈದ್ಯಕೀಯ ಉಪಕರಣಗಳ ಪೂರೈಕೆಯನ್ನು ಹೆಚ್ಚಿಸಲು ಚೀನಾ ಹಾಗೂ ಇತರ ದೇಶಗಳೊಂದಿಗೆ ಮಾತುಕತೆ ನಡೆಸಿದೆ. ಜನರಲ್ ಮೋಟಾರ್ಸ್ ಹಾಗೂ ಫೋರ್ಡ್ ಸೇರಿದಂತೆ ಹಲವು ಕಂಪನಿಗಳು ಶ್ವೇತಭವನದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿವೆ ಎಂದು ಹೇಳಲಾಗಿದೆ.

ವೆಂಟಿಲೇಟರ್ ಉತ್ಪಾದನೆಗೆ ಅನುಮೋದನೆ ನೀಡಿದ ಡೊನಾಲ್ಡ್ ಟ್ರಂಪ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು ವೆಂಟಿಲೇಟರ್ ಹಾಗೂ ಇತರ ವೈದ್ಯಕೀಯ ಉಪಕರಣಗಳನ್ನು ತಯಾರಿಸಲು ಫೋರ್ಡ್, ಜನರಲ್ ಮೋಟಾರ್ಸ್ ಹಾಗೂ ಟೆಸ್ಲಾ ಕಂಪನಿಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ವೆಂಟಿಲೇಟರ್ ಉತ್ಪಾದನೆಗೆ ಅನುಮೋದನೆ ನೀಡಿದ ಡೊನಾಲ್ಡ್ ಟ್ರಂಪ್

ಕೋವಿಡ್ -19 ವೈರಸ್ ಅನ್ನು ನಿಯಂತ್ರಿಸಲು ಅಮೆರಿಕಾ ಹೆಣಗಾಡುತ್ತಿದ್ದು, ವೈದ್ಯಕೀಯ ಉಪಕರಣಗಳ ಕೊರತೆ ಎದುರಾಗಿದೆ. ಕರೋನಾ ವೈರಸ್ ಈಗ ಭಾರತದಲ್ಲಿಯೂ ವೇಗವಾಗಿ ಹರಡುತ್ತಿದೆ.

ವೆಂಟಿಲೇಟರ್ ಉತ್ಪಾದನೆಗೆ ಅನುಮೋದನೆ ನೀಡಿದ ಡೊನಾಲ್ಡ್ ಟ್ರಂಪ್

ಇದನ್ನು ತಡೆಯಲು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳೂ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಈ ಕಾರ್ಯಗಳಿಗೆ ಜನರು ಸಂಪೂರ್ಣ ಬೆಂಬಲ ನೀಡುವುದು ಅತ್ಯಗತ್ಯ. ಆಗ ಮಾತ್ರ ಕರೋನಾ ವೈರಸ್ ಅನ್ನು ನಿರ್ಮೂಲನೆ ಮಾಡಲು ಸಾಧ್ಯ.

Article Published On: Wednesday, March 25, 2020, 11:16 [IST]
English summary
Corona virus outbreak, US President Donald Trump gives nod to Tesla, GM and Ford to make ventilators. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+