ಚಲಿಸುತ್ತಿರವ ಕಾರಿನ ಸನ್‌ರೂಪ್‌ ತೆಗೆದು ಫೋಟೋಶೂಟ್‌: ಈ ಜೋಡಿಗಳ ಮೂರ್ಖತನಕ್ಕೆ ಕೊನೆ ಎಂದು?

ಕಳೆದ ಕೆಲವು ವರ್ಷಗಳಿಂದ ಈಚೆ ಪ್ರೀ - ವೆಡ್ಡಿಂಗ್‌ ಫೋಟೋ ಶೂಟ್‌ ತುಂಬಾನೇ ಟ್ರೆಂಡಿಂಗ್‌ನಲ್ಲಿದೆ. ಈ ಶೂಟ್‌ ಚೆನ್ನಾಗಿ ಕಾಣಿಸಿಕೊಳ್ಳುವುದಕ್ಕಾಗಿ ಫೋಟೋಗ್ರಾಫರ್‌ಗಳು ಜೋಡಿಗಳ ಜೊತೆ ಸೇರಿ ಹಲವಾರು ಕಸರತ್ತುಗಳನ್ನು ಮಾಡುತ್ತಾರೆ. ಇಲ್ಲೊಂದು ಕಡೆ ಜೋಡಿಯೊಂದು ಫೋಟೋಶೂಟ್‌ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಹೌದು, ಜೋಡಿಯೊಂದು ಕಾರಿನ ಮೇಲೆ ಸರ್ಕಸ್ ಮಾಡಿಕೊಂಡು ಪೋಟೋ ಶೂಟ್‌ ಮಾಡಿಕೊಂಡಿದ್ದಾರೆ. ಹಳೆಯ ದಿನಗಳಲ್ಲಿ ದುಬಾರಿ ಕಾರುಗಳಲ್ಲಿ ಮಾತ್ರ ಕಂಡು ಬರುತ್ತಿದ್ದ ಸನ್‌ ರೂಫ್‌ ಫೀಚರ್‌ ಇತ್ತೀಚಿನ ದಿನಗಳಲ್ಲಿ ಹಲವಾರು ಫೇಸ್‌ಲಿಫ್ಟ್‌ ವಾಹನಗಳಲ್ಲಿ ಈ ಫೀಚರ್‌ ಕಾಣ ಸಿಗುತ್ತಿದೆ. ಈ ಫೀಚರ್‌ಗಳನ್ನು ಉಪಯೋಗಿಸಿಕೊಂಡು ಇದೀಗ ಜೋಡಿ ಪೋಟೋ ಶೂಟ್‌ ಮಾಡಿದೆ.

Couple Photoshoot While Opening Hyundai Verna Sunroof

ವೈರಲ್‌ ಆಗಿರುವ ವಿಡಿಯೋದಲ್ಲಿ ಫೋಟೊಗ್ರಾಫರ್‌ ಮತ್ತು ಜೋಡಿ ಇಬ್ಬರೂ ಸಹ ಎರಡು ಹ್ಯುಂಡೈ ವರ್ನಾ ಕಾರಿನಲ್ಲಿ ವಿಡಿಯೋ ಶೂಟ್‌ ಮಾಡಿದ್ದು, ಇದನ್ನು ನೊಡಿದರೆ ಅಪಾಯಕಾರಿ ರೀತಿಯಲ್ಲಿ ಶೂಟ್‌ ಮಾಡಿರುವುದನ್ನು ಕಾಣಬಹುದಾಗಿದೆ. ಜೋಡಿಗಳಿಬ್ಬರೂ ಹ್ಯುಂಡೈ ವರ್ನಾ ಕಾರಿನ ಸನ್‌ರೂಫ್ ಓಪನ್‌ ಮಾಡಿಕೊಂಡು ಹೊರ ಬಂದು ಪೋಟೋಗ್ರಾಫರ್‌ಗೆ ಪೋಸ್‌ ನೀಡುವುದನ್ನು ಕಾಣಬಹುದು.

ಇನ್ನೊಂದು ಕಾರಿನಲ್ಲಿ ಫೋಟೋಗ್ರಾಫರ್‌ಗಳು ಇವರ ಕಾರಿನ ಮುಂದೆ ಇನ್ನೊಂದು ಹ್ಯಂಡೈ ವರ್ನಾ ಕಾರಿನಲ್ಲಿ ಚಲಿಸುತ್ತಾ ಅವರೂ ಸಹ ಕಾರಿನ ಸನ್‌ರೂಫ್‌ ಅನ್ನು ಓಪನ್‌ ಮಾಡಿ ಅದರ ಮೂಲಕ ಶೂಟ್‌ ಮಾಡುವುದನ್ನು ಕಾಣಬಹುದಾಗಿದೆ. ದೂರದಿಂದ ನೋಡಿದರೆ ಅಪಾಯಕಾರಿಯಾಗಿ ಕಾಣಿಸುತ್ತಿದ್ದು ಈ ರೀತಿ ಯಾವುದೇ ಸುರಕ್ಷತಾ ಮುಂಜಾಗ್ರತೆಗಳಿಲ್ಲದೇ ಸನ್‌ರೂಫ್‌ ಮೂಲಕ ಶೂಟ್‌ ಮಾಡುವುದು ಅಪರಾಧ.

Couple Photoshoot While Opening Hyundai Verna Sunroof

ರಾಜಸ್ಥಾನದ ಜೈಪುರದಲ್ಲಿ ಈ ವಿಡಿಯೋ ಸೆರೆ ಹಿಡಿಯಲಾಗಿದೆ ಎಂದು ತಿಳಿದು ಬಂದಿದ್ದು, ಈ ವಿಡಿಯೋವನ್ನು ಶೂಟ್‌ ಮಾಡಿರುವ ವ್ಯಕ್ತಿ ಜೈಪುರದಿಂದ ಗುರುಗಾವ್‌ ಕಡೆ ಹೋಗವಾಗ ಈ ದೃಶ್ಯ ಕಂಡು ಬಂದಿದ್ದು, ಕೂಡಲೇ ತನ್ನ ಮೊಬೈಲ್‌ ಫೋನ್‌ನಲ್ಲಿ ಸೆರೆ ಹಿಡಿದಿದ್ದಾರೆ. ನಂತರದಲ್ಲಿ ತನ್ನ ಯ್ಯೂಟ್ಯೂಬ್‌ ಚಾನಲ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋಗೆ ನೆಟ್ಟಿಗರು ಭಾರೀ ಪ್ರಮಾಣದಲ್ಲಿ ಸಕಾರಾತ್ಮಕ ಮತ್ತು ನಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ ಮಾಡಿ ಹೆಚ್ಚಿನ ಲೈಕ್‌ ಗಿಟ್ಟಿಸಿಕೊಂಡು ವೈರಲ್‌ ಆಗುವ ಉದ್ದೇಶದಿಂದ ಈ ರೀತಿಯ ಕೆಲಸಕ್ಕೆ ಕೈ ಹಾಕುತ್ತಾರೆ. ಈ ವೈರಲ್‌ ಆಗುವ ಉದ್ದೇಶದಿಂದ ಈ ಹಿಂದೆಯೂ ಸಹ ಹಲವರು ಈ ರೀತಿಯ ದುಸ್ಸಾಹಸಕ್ಕೆ ಕೈ ಹಾಕಿ, ಕೈ ಸುಟ್ಟಿಕೊಂಡಿದ್ದಾರೆ. ಹಲವು ಘಟನೆಗಳಲ್ಲಿ ಸಾಕಷ್ಟು ಸಲ ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.

Couple Photoshoot While Opening Hyundai Verna Sunroof

ಇನ್ನು ಘಟನೆಗೆ ಸಂಭಂಧಿಸಿದ ಕಾರು ಹ್ಯುಂಡೈ ಕಂಪನಿಯ ವರ್ನಾ ಆಗಿದ್ದು, ಕಳೆದ ವರ್ಷ ಹ್ಯುಂಡೈ ಕಂಪನಿ ಇದರ ಫೇಸ್‌ಲಿಫ್ಟ್‌ ಮಾದರಿಯನ್ನು ಸಹ ಬಿಡುಗಡೆ ಮಾಡಿತ್ತು. ಈ ಕಾರು, ಎರಡು ಪವರ್‌ಟ್ರೇನ್ ನೊಂದಿಗೆ ಸಿಗುತ್ತದೆ. ಇದರ 1.5 - ಲೀಟರ್ ಟರ್ಬೊಚಾರ್ಜ್ಡ್ ಪೆಟ್ರೋಲ್ ಎಂಜಿನ್, 160 PS ಗರಿಷ್ಠ ಪವರ್ ಹಾಗೂ 253 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, February 16, 2024, 12:03 [IST]
English summary
Couple photoshoot while opening hyundai verna sunroof
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+