ಲಾಕ್‌ಡೌನ್ ನಡುವೆಯೂ ಮದುವೆಯಾದ ನವ ದಂಪತಿಗಳಿಗೆ ಎದುರಾದ ಪೊಲೀಸರು ಮಾಡಿದ್ದೇನು?
ಲಾಕ್‌ಡೌನ್ ಕಾರಣಕ್ಕೆ ಜನರು ಪ್ರತಿದಿನ ನಾನಾ ರೀತಿಯ ತೊಂದರೆಗಳನ್ನು ಎದುರಿಸುತ್ತಿರುವ ಬಗ್ಗೆ ವರದಿಗಳಾಗುತ್ತಲೇ ಇವೆ. ಲಾಕ್‌ಡೌನ್‌ನಿಂದಾಗಿ ಆಚರಣೆ, ಉತ್ಸವ ಹಾಗೂ ಹಬ್ಬಗಳನ್ನೆಲ್ಲಾ ರದ್ದುಪಡಿಸಲಾಗಿದೆ. ಮತ್ತೊಂದೆಡೆ, ಜನರ ಮದುವೆ ಕಾರ್ಯಗಳನ್ನು ಸಹ ಮುಂದೂಡಲಾಗುತ್ತಿದೆ.

ಆದರೂ ಯಾವುದೇ ಸದ್ದು ಗದ್ದಲವಿಲ್ಲದೇ ಅಲ್ಲೊಂದು ಇಲ್ಲೊಂದು ಮದುವೆಗಳಾಗುತ್ತಿವೆ. ಈ ವಿವಾಹಗಳಲ್ಲಿ ಹೆಚ್ಚು ಜನ ಹಾಗೂ ಬ್ಯಾಂಡ್‌ಗಳಿಲ್ಲದೇ ಇರುವುದು ವಿಶೇಷ. ಜನರು ಸರಳ ರೀತಿಯಲ್ಲಿ, ಸ್ನೇಹಿತರ ಹಾಗೂ ಸಂಬಂಧಿಕರ ಅನುಪಸ್ಥಿತಿಯಲ್ಲಿ ಮದುವೆಯಾಗುತ್ತಿದ್ದಾರೆ. ಪಂಜಾಬ್‌ನಲ್ಲಿಯೂ ಇದೇ ರೀತಿಯ ವಿವಾಹವೊಂದು ನಡೆದಿದೆ. ಮದುವೆಯಾದ ದಂಪತಿಗಳು ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ದೇವಾಲಯದಿಂದ ಮನೆಯ ಕಡೆಗೆ ಸವಾರಿ ಮಾಡಿದ್ದಾರೆ. ಇದರಲ್ಲೇನು ವಿಶೇಷ ಅಂತೀರಾ? ಅದರಲ್ಲೇ ಇರುವುದು ವಿಶೇಷ.

ನವ ದಂಪತಿ ಬೈಕ್‌ನಲ್ಲಿ ಬರುತ್ತಿರುವುದನ್ನು ನೋಡಿದ ಪಂಜಾಬ್ ಪೊಲೀಸರು ಬೈಕ್ ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ. ಲಾಕ್‌ಡೌನ್ ಅವಧಿಯಲ್ಲಿ ಹೊರ ಬಂದಿರುವ ಕಾರಣವನ್ನು ಕೇಳಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ದೇವಾಲಯದಲ್ಲಿ ಮದುವೆಯಾದ ನಂತರ ಮನೆಗೆ ಹಿಂದಿರುಗುತ್ತಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನು ತಿಳಿದ ಪೊಲೀಸರು ಅವರಿಗೆ ಹೂವು ಹಾಗೂ ಸಿಹಿ ನೀಡಿ ಶುಭಾಶಯ ತಿಳಿಸಿದ್ದಾರೆ.

ಸರಳ ವಿವಾಹವಾಗಲು ನಗರ ಪಾಲಿಕೆಯಿಂದ ಅಗತ್ಯವಿರುವ ಅನುಮತಿ ಪಡೆದಿರುವುದಾಗಿ ದಂಪತಿಗಳು ತಿಳಿಸಿದ್ದಾರೆ. ಅಂದ ಹಾಗೆ ಅವರ ಮದುವೆಯಲ್ಲಿ ಕೇವಲ ಐದು ಜನ ಹಾಜರಿದ್ದರು.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್
ಉತ್ತರ ಭಾರತದ ವಿವಾಹಗಳಲ್ಲಿ, ಅದರಲ್ಲೂ ವಿಶೇಷವಾಗಿ ಪಂಜಾಬಿ ಶೈಲಿಯ ಮದುವೆಗಳಲ್ಲಿ, ಹೆಚ್ಚು ಜನರು ಸೇರುತ್ತಾರೆ. ಅವರನ್ನು ನಿಭಾಯಿಸುವುದೇ ದೊಡ್ಡ ಕೆಲಸ. ಸಂಬಂಧಿಕರು ದೂರದಿಂದ ಮದುವೆಗಳಿಗೆ ಆಗಮಿಸುತ್ತಾರೆ. ಈ ಹಿನ್ನೆಲೆಯಲ್ಲಿ ಮದುವೆಯು ಹಲವು ದಿನಗಳವರೆಗೆ ನಡೆಯುತ್ತದೆ.

ನವ ದಂಪತಿಗಳು ತಮ್ಮ ಮದುವೆ ಉಡುಪಿನಲ್ಲಿದ್ದರು. ಮನೆಗೆ ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಹಿಂದಿರುಗುತ್ತಿದ್ದರು. ಪೊಲೀಸರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ ನಂತರ ಅವರಿಗೆ ಹೊರಡಲು ಅವಕಾಶ ನೀಡಲಾಯಿತು.


Click it and Unblock the Notifications