ಬೆಡ್‌ ರೂಂನಲ್ಲಿ ಮಾಡುವುದನ್ನು ಸ್ಕೂಟರ್‌ನಲ್ಲಿ ಮಾಡಿ ವೈರಲ್ ಆದ ಜೋಡಿ... ಕೊನೆಗೂ ಸಿಕ್ಕಿಬಿದ್ದರು!

ನಾಲ್ಕು ಗೋಡೆಯ ಮಧ್ಯೆ ಮಾಡುವ ಕೆಲಸವನ್ನು ಸಾರ್ವಜನಿಕ ರಸ್ತೆಗಳಲ್ಲಿ ಮಾಡುವ ಮೂಲಕ ಪ್ರೇಮಿಗಳ ಜೊತೆಗೆ ಅವರಿಗೆ ಸಹಕರಿಸಿದ ಯುವಕ ಕೂಡ ಜೈಲು ಸೇರಿದ್ದಾನೆ. ಇತ್ತೀಚೆಗೆ ಮೂವರು ಸ್ಕೂಟರ್‌ನಲ್ಲಿ ಸವಾರಿ ಮಾಡುತ್ತಾ, ಒಬ್ಬ ಸ್ಕೂಟರ್ ಓಡಿಸುತ್ತಿದ್ದರೆ ಹಿಂದಿನ ಸೀಟಿನಲ್ಲಿ ಪ್ರೇಮಿಗಳು ಪರಸ್ಪರ ಎದುರು ಬದುರಾಗಿ ಕುಳಿತು ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಇವರು ಮಾಡಿರುವ ಕೃತ್ಯ ಅಪಾಯಕಾರಿ ಹಾಗೂ ಕಾನೂನು ಬಾಹಿರವಾಗಿದ್ದು, ಪೊಲೀಸರು ಮೂವರ ವಿರುದ್ಧ ಕ್ರಮ ಕೈಗೊಂಡು ಕೃತ್ಯಕ್ಕೆ ಬಳಸಿದ ಸ್ಕೂಟರ್ ಅನ್ನು ವಶಕ್ಕೆ ಪಡೆದಿದ್ದಾರೆ.

ವಾಹನ ಚಾಲಕರು ಸಂಚಾರ ನಿಯಮಗಳನ್ನು ಉಲ್ಲಂಘಿಸುವುದು ಭಾರತದಲ್ಲಿ ಹೆಚ್ಚಿನ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಸಂಚಾರ ನಿಯಮಗಳನ್ನು ಈಗಾಗಲೇ ಗಾಳಿಗೆ ತೂರಲಾಗುತ್ತಿದ್ದರೂ, ಇತ್ತೀಚಿನ ದಿನಗಳಲ್ಲಿ ಹೊಸ ಪ್ರವೃತ್ತಿ ಬಹಳ ವೇಗವಾಗಿ ಹರಡುತ್ತಿದೆ. ಅನೇಕ ಯುವ ಜೋಡಿಗಳು ದ್ವಿಚಕ್ರ ವಾಹನಗಳಲ್ಲಿ ರೊಮ್ಯಾನ್ಸ್ ಮಾಡುವುದು ಟ್ರೆಂಡ್ ಆಗುತ್ತಿದೆ.

couple-romance-on-moving-scooter-in-gujarat

ಆದ್ರೆ ಈಗ ವೈರಲ್ ಆಗಿರುವ ವೀಡಿಯೊದಲ್ಲಿ ಈ ಜೋಡಿಯ ಜೊತೆಗೆ ಮತ್ತೊಬ್ಬ ಯುವಕ ಕೂಡ ಇರುವುದೇ ಎಲ್ಲರ ಗಮನ ಸೆಳೆದಿದೆ. ಸುಜುಕಿ ಬರ್ಗ್ ಮ್ಯಾನ್ ಸ್ಕೂಟರ್ ಒಬ್ಬ ಓಡಿಸುತ್ತಿದ್ದರೇ ಹಿಂದಿನ ಸೀಟಿನಲ್ಲಿ ಯುವತಿ ಹಾಗೂ ಯುವಕ ಎದುರು ಬದರಾಗಿ ಕುಳಿತಿದ್ದಾರೆ. ಇವರಿಬ್ಬರನ್ನು ಅವರ ಸ್ನೇಹಿತ ಸ್ಕೂಟರ್ ಸವಾರಿ ಮಾಡುತ್ತಾ ಎಲ್ಲೋ ಕರೆದೊಯ್ಯುತ್ತಿದ್ದ. ವರದಿಗಳ ಪ್ರಕಾರ, ಈ ವೀಡಿಯೊವನ್ನು ಅಹಮದಾಬಾದ್‌ನ ಹಟ್ಕೇಶ್ವರದಲ್ಲಿ ಚಿತ್ರೀಕರಿಸಲಾಗಿದೆ.

ಈ ವೀಡಿಯೊ ಭಾರಿ ವೈರಲ್ ಆದ ನಂತರ, ಪೊಲೀಸ್ ಅಧಿಕಾರಿಗಳು ತಮ್ಮ ತನಿಖೆಯನ್ನು ಪ್ರಾರಂಭಿಸಿ, ವೀಡಿಯೊದಲ್ಲಿ ಕಂಡುಬರುವ ಸುಜುಕಿ ಬರ್ಗ್ಮನ್ ಸ್ಕೂಟರ್ ಮಾಲೀಕರನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಡಿಯೋದಲ್ಲಿ ಕಾಣಿಸಿಕೊಂಡ ಸ್ಕೂಟರ್ ಅಹ್ಮದಾಬಾದ್‌ನ ವತ್ವಾ ಮೂಲದ ವ್ಯಕ್ತಿಗೆ ಸೇರಿದ್ದಾಗಿದೆ. ಸದ್ಯ ಸ್ಕೂಟರ್ ಮಾಲೀಕರನ್ನು ಬಂಧಿಸಲಾಗಿದ್ದು, ಯುವತಿ ಹಾಗೂ ಯುವಕನ ವಿವರಗಳನ್ನು ಬಹಿರಂಗಪಡಿಸಿಲ್ಲ.

couple-romance-on-moving-scooter-in-gujarat

ಇದೇ ಮೊದಲಲ್ಲ: ಕಳೆದ ಮಾರ್ಚ್‌ನಲ್ಲಿ ಜೋಡಿಯೊಂದು ರಸ್ತೆಯಲ್ಲಿ ಸಾರ್ವಜನಿಕರಿಗೆ ತಮ್ಮ ರೊಮ್ಯಾನ್ಸ್ ತೋರಿಸುವ ಇದೇ ರೀತಿಯ ಘಟನೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿತ್ತು. ಬೈಕಿನಲ್ಲಿ ಸವಾರಿ ಮಾಡುತ್ತಾ ಅವರು ಕೂಡ ಪರಸ್ಪರ ತಬ್ಬಿಕೊಂಡು ಪ್ರಯಾಣಿಸಿದ್ದರು. ಈ ಘಟನೆ ಅಹ್ಮದಾಬಾದ್ ನಲ್ಲಿ ನಡೆದಿತ್ತು. ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಜೋಡಿಯನ್ನು ಬಂಧಿಸಿ ಠಾಣೆಯ ಮುಂದೆ ಕುಳ್ಳಿರಿಸಿ ವೀಡಿಯೊವನ್ನು ಹಂಚಿಕೊಂಡಿದ್ದರು.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ, ಮತ್ತೊಂದು ಜೋಡಿ ಬೈಕ್‌ನಲ್ಲಿ ಸವಾರಿ ಮಾಡುವಾಗ ಸಾರ್ವಜನಿಕವಾಗಿ ಚುಂಬಿಸಿದ್ದರು. ಈ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿತ್ತು. ಈ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿರುವುದಾಗಿ ವರದಿಯಾಗಿತ್ತು. ವೀಡಿಯೊದಲ್ಲಿ, ಬೈಕ್ ಓಡಿಸುತ್ತಿದ್ದ ವ್ಯಕ್ತಿ ಮುಂದೆ ಮುಖ ಮಾಡಿರಲಿಲ್ಲ ಬದಲಾಗಿ, ಅವನ ಮುಖವನ್ನು ಹಿಂದಕ್ಕೆ ತಿರುಗಿಸಿ ಪ್ರೇಯಸಿಗೆ ಚುಂಬಿಸುತ್ತಿದ್ದ.

ಸಾರ್ವಜನಿಕ ರಸ್ತೆಯಲ್ಲಿ ಈ ಮೂರ್ಖ ಕೃತ್ಯವನ್ನು ಮಾಡಿದ್ದಕ್ಕಾಗಿ ಬಹಳಷ್ಟು ಜನರು ಈ ಜೋಡಿಯನ್ನು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದರು. ಈ ಜೋಡಿಯ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೇ ಅಥವಾ ಇಲ್ಲವೇ ಎಂಬುದರ ಬಗ್ಗೆ ವರದಿಯಾಗಿಲ್ಲ. ಇಂತಹ ಕೃತ್ಯಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, June 12, 2024, 8:30 [IST]
English summary
Couple romance on moving scooter in gujarat
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+