ಮಗನ ಹುಟ್ಟುಹಬ್ಬಕ್ಕಾಗಿ 1,400 ಕಿ.ಮೀ ದೂರ ಸ್ಕೂಟರ್ ಪ್ರಯಾಣ ಮಾಡಿದ ದಂಪತಿ

ಭಾರತದಲ್ಲಿ ಕರೋನಾ ವೈರಸ್ ಹರಡುವುದನ್ನು ತಡೆಯಲು ಲಾಕ್‌ಡೌನ್ ಜಾರಿಗೊಳಿಸಿದ ನಂತರ ಎಲ್ಲಾ ಸಾರ್ವಜನಿಕ ಸಾರಿಗೆ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು. ಇದರಿಂದಾಗಿ ತುರ್ತು ಕಾರಣಗಳಿಗಾಗಿ ಹೊರ ಹೋಗಬೇಕಾದವರಿಗೆ ಸಂಕಷ್ಟ ಎದುರಾಗಿತ್ತು.

ಮಗನ ಹುಟ್ಟುಹಬ್ಬಕ್ಕಾಗಿ 1,400 ಕಿ.ಮೀ ದೂರ ಸ್ಕೂಟರ್ ಪ್ರಯಾಣ ಮಾಡಿದ ದಂಪತಿ

ಹೊರ ಊರುಗಳಲ್ಲಿದ್ದವರು ಹಾಗೂ ಲಾಕ್‌ಡೌನ್ ಕಾರಣದಿಂದಾಗಿ ಕೆಲಸ ಕಳೆದುಕೊಂಡವರು ಸಂಕಷ್ಟಕ್ಕೆ ಸಿಲುಕಿದರು. ಕೆಲವರು ಸೈಕಲ್ ಮೂಲಕವೇ ಸಾವಿರಾರು ಕಿಲೋಮೀಟರ್ ಪ್ರಯಾಣಿಸಿ ತಮ್ಮ ಊರುಗಳನ್ನು ಸೇರಿಕೊಂಡರು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹಂತ ಹಂತವಾಗಿ ಲಾಕ್‌ಡೌನ್ ಸಡಿಲಗೊಳಿಸಿದವು.

ಮಗನ ಹುಟ್ಟುಹಬ್ಬಕ್ಕಾಗಿ 1,400 ಕಿ.ಮೀ ದೂರ ಸ್ಕೂಟರ್ ಪ್ರಯಾಣ ಮಾಡಿದ ದಂಪತಿ

ಇದರಿಂದಾಗಿ ಸಾರ್ವಜನಿಕ ಸಾರಿಗೆ ವಾಹನಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಸಾರಿಗೆ ಸೇವೆಗಳು ಇನ್ನೂ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಬಂದಿಲ್ಲ. ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸುವವರಿಗೆ ಇನ್ನೂ ಹಲವಾರು ಸಮಸ್ಯೆಗಳಿವೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮಗನ ಹುಟ್ಟುಹಬ್ಬಕ್ಕಾಗಿ 1,400 ಕಿ.ಮೀ ದೂರ ಸ್ಕೂಟರ್ ಪ್ರಯಾಣ ಮಾಡಿದ ದಂಪತಿ

ಈ ಎಲ್ಲಾ ಸಮಸ್ಯೆಗಳನ್ನು ನಿವಾರಿಸಿಕೊಂಡ ದಂಪತಿಗಳು ಮಹಾರಾಷ್ಟ್ರದಿಂದ ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಕರಂಬಕುಡಿಗೆ ಬಂದಿದ್ದಾರೆ. ತಮ್ಮ ದ್ವಿಚಕ್ರ ವಾಹನದಲ್ಲಿ ಅವರು ಇಷ್ಟು ದೂರ ಪ್ರಯಾಣಿಸಿದಕ್ಕೆ ವಿಶೇಷ ಕಾರಣವೂ ಇದೆ.

ಮಗನ ಹುಟ್ಟುಹಬ್ಬಕ್ಕಾಗಿ 1,400 ಕಿ.ಮೀ ದೂರ ಸ್ಕೂಟರ್ ಪ್ರಯಾಣ ಮಾಡಿದ ದಂಪತಿ

41 ವರ್ಷದ ಸೆಲ್ವಂ ಪುದುಕ್ಕೋಟೈ ಜಿಲ್ಲೆಯ ಕೀರನೂರ್ ಪ್ರದೇಶಕ್ಕೆ ಸೇರಿದವರು. ಅವರು ತಮ್ಮ ಪತ್ನಿ ಸಂಗಿತಾ ಜೊತೆಗೆ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಅವರು ಅಲ್ಲಿ ಚಿಕ್ಕ ಅಂಗಡಿಯೊಂದನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮಗನ ಹುಟ್ಟುಹಬ್ಬಕ್ಕಾಗಿ 1,400 ಕಿ.ಮೀ ದೂರ ಸ್ಕೂಟರ್ ಪ್ರಯಾಣ ಮಾಡಿದ ದಂಪತಿ

ಸೆಲ್ವಂ-ಸಂಗೀತ ದಂಪತಿಗೆ 13 ವರ್ಷದ ಮಗಳು ಹಾಗೂ 6 ವರ್ಷದ ಮಗ ಇದ್ದಾನೆ. ಅವರ ಮಕ್ಕಳು ಪಿಲ್ಲಕುರಿಚಿಯಲ್ಲಿರುವ ಸಂಗೀತಾ ಅವರ ತಾಯಿಯ ಮನೆಯಲ್ಲಿದ್ದಾರೆ. ಲಾಕ್‌ಡೌನ್ ಜಾರಿಯಾಗುತ್ತಿದ್ದಂತೆ ದಂಪತಿ ತಮ್ಮ ಮಕ್ಕಳನ್ನು ಕಾಣಲು ಕಾತುರರಾಗಿದ್ದಾರೆ.

ಮಗನ ಹುಟ್ಟುಹಬ್ಬಕ್ಕಾಗಿ 1,400 ಕಿ.ಮೀ ದೂರ ಸ್ಕೂಟರ್ ಪ್ರಯಾಣ ಮಾಡಿದ ದಂಪತಿ

ಬಸ್ ಸೇರಿದಂತೆ ಯಾವುದೇ ಸಾರ್ವಜನಿಕ ಸೇವೆಗಳು ಲಭ್ಯವಿಲ್ಲದ ಕಾರಣ ಅವರಿಗೆ ಪಿಲ್ಲಕುರಿಚಿ ತಲುಪಲು ಸಾಧ್ಯವಾಗಲಿಲ್ಲ. ಅಕ್ಟೋಬರ್ 28 ಈ ದಂಪತಿಯ ಮಗನ ಜನ್ಮದಿನ. ಪ್ರತಿವರ್ಷ ಅವರು ತಮ್ಮ ಮಗನ ಹುಟ್ಟುಹಬ್ಬವನ್ನು ಕುಟುಂಬದೊಂದಿಗೆ ಸಂಭ್ರಮದಿಂದ ಆಚರಿಸುತ್ತಿದ್ದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮಗನ ಹುಟ್ಟುಹಬ್ಬಕ್ಕಾಗಿ 1,400 ಕಿ.ಮೀ ದೂರ ಸ್ಕೂಟರ್ ಪ್ರಯಾಣ ಮಾಡಿದ ದಂಪತಿ

ಈ ಬಾರಿಯೂ ತಮ್ಮ ಮಗನ ಹುಟ್ಟುಹಬ್ಬವನ್ನು ಆಚರಿಸಲು ನಿರ್ಧರಿಸಿದರು. ಆದರೆ ರೈಲು ಸೇವೆಗಳು ಮೊದಲಿನಂತಿಲ್ಲ. ಜೊತೆಗೆ ಬಸ್‌ಗಳಲ್ಲಿ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಪ್ರಯಾಣಿಸುವುದೂ ಸವಾಲಾಗಿದೆ.

ಮಗನ ಹುಟ್ಟುಹಬ್ಬಕ್ಕಾಗಿ 1,400 ಕಿ.ಮೀ ದೂರ ಸ್ಕೂಟರ್ ಪ್ರಯಾಣ ಮಾಡಿದ ದಂಪತಿ

ವಿಮಾನದಲ್ಲಿ ಪ್ರಯಾಣಿಸುವುದಕ್ಕೆ ಯಾವುದೇ ತೊಂದರೆಯಿಲ್ಲ. ಆದರೆ ಈ ದಂಪತಿ ವಿಮಾನದಲ್ಲಿ ಬರುವಷ್ಟು ಅನುಕೂಲಸ್ಥರಲ್ಲ. ಈ ಕಾರಣಕ್ಕೆ ಸೆಲ್ವಂ ಹಾಗೂ ಸಂಗಿತಾ ದ್ವಿಚಕ್ರ ವಾಹನದಲ್ಲಿ ಮುಂಬೈನಿಂದ ತಮಿಳುನಾಡಿಗೆ ಹೊರಟಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಮಗನ ಹುಟ್ಟುಹಬ್ಬಕ್ಕಾಗಿ 1,400 ಕಿ.ಮೀ ದೂರ ಸ್ಕೂಟರ್ ಪ್ರಯಾಣ ಮಾಡಿದ ದಂಪತಿ

ಅಕ್ಟೋಬರ್ 20ರ ಮಧ್ಯರಾತ್ರಿ ಇಬ್ಬರು ಮುಂಬೈನಿಂದ ದ್ವಿಚಕ್ರ ವಾಹನದಲ್ಲಿ ಹೊರಟಿದ್ದಾರೆ. ಅವರ ಊರು ಕರಂಬಕುಡಿ ಮುಂಬೈನಿಂದ 1,400 ಕಿ.ಮೀ ದೂರದಲ್ಲಿದೆ. ಇಷ್ಟು ದೂರ ಸಂಚರಿಸಿದ ನಂತರ ಇಬ್ಬರೂ ಅಕ್ಟೋಬರ್ 23ರಂದು ಕರಂಬಕುಡಿ ತಲುಪಿದ್ದಾರೆ.

ಮಗನ ಹುಟ್ಟುಹಬ್ಬಕ್ಕಾಗಿ 1,400 ಕಿ.ಮೀ ದೂರ ಸ್ಕೂಟರ್ ಪ್ರಯಾಣ ಮಾಡಿದ ದಂಪತಿ

ಅವರು ಕರಂಬಕುಡಿ ತಲುಪಿದ ನಂತರ ಅವರಿಬ್ಬರನ್ನೂ ಕರೋನಾ ವೈರಸ್‌ಗಳಿಗೆ ಪರೀಕ್ಷೆಗೆ ಒಳಪಡಿಸಲಾಗಿದೆ. ಜೊತೆಗೆ ಎರಡು ದಿನ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಮಗನ ಹುಟ್ಟುಹಬ್ಬಕ್ಕಾಗಿ 1,400 ಕಿ.ಮೀಗಳ ದೂರ ಪ್ರಯಾಣಿಸಿದ ದಂಪತಿ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಸೂಚನೆ: ಕೆಲವು ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Couple travels 1400 kms in scooter to celebrate son's birthday. Read in Kannada.
Story first published: Thursday, October 29, 2020, 9:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X