ಗಾಂಜಾ ಮತ್ತಿನಲ್ಲಿ ಹತ್ತಾರು ಕಾರುಗಳಿಗೆ ಗುದ್ದಿದ ಜೊಡಿ: ಕ್ರೇನ್ ತರಿಸಿ ಗಂಡ-ಹೆಂಡತಿ ಸೆರೆ!
ರಸ್ತೆ ಎಂದರೆ ಅಪಘಾತಗಳು ಸರ್ವೇ ಸಾಮಾನ್ಯ. ಆದರೆ ಈ ರೀತಿಯ ಅಪಘಾತದಿಂದ ಯಾರೋ ಮಾಡಿದ ತಪ್ಪಿಗೆ, ಇನ್ಯಾರೋ ಶಿಕ್ಷೆ ಅನುಭವಿಸುವುದೇ ಹೆಚ್ಚು. ಅದರಲ್ಲೂ ಕೆಲವವೊಮ್ಮೆ ಬೇಕು ಬೇಕಂತಲೇ ಅಪಘಾತ ಮಾಡಿ ಇತರರನ್ನು ಕಷ್ಟಕ್ಕೆ ತಳ್ಳುವವರನ್ನೂ ನಾವು ಕಂಡಿದ್ದೇವೆ. ಇದೀಗ ಇಲ್ಲೊಂದು ಕಡೆ ಅದೇ ರೀತಿಯಾದ ಘಟನೆಯೊಂದು ವರದಿಯಾಗಿದೆ.
ಹೌದು, ಕೇರಳ ಮೂಲದ ಜೋಡಿಯೊಂದು ಮಾದಕ ವಸ್ತುಗಳನ್ನು ಉಪಯೋಗಿಸಿ ವಾಹನ ಚಲಾಯಿಸಿ ಹಲವಾರು ಕಾರುಗಳಿಗೆ ಗುದ್ದಿ, ಕೊನೆಗೆ ಅವರ ಕಾರನ್ನು ತಡೆಹಿಡಿಯಲು ಪೊಲೀಸರು ಕ್ರೇನ್ ಅನ್ನು ಬಳಸುವ ತನಕ ಹೋದ ವಿಲಕ್ಷಣಕಾರಿ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಈಗಾಗಲೇ ಈ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ.

ಕೇರಳದ ಕೋಟ್ಟಯಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು ಮಾಹಿತಿಗಳ ಪ್ರಕಾರ ಜೋಡಿಯೊಂದು ಮಾದಕ ವಸ್ತುಗಳ ಸೇವನೆ ಮಾಡಿ, ಅಲ್ಲಿನ ಮರಿಯ ಪಳ್ಳಿಯಿಂದ ಚಿಂಗವನಂ ಎನ್ನುವ ತನಕ ಹಲವು ವಾಹನಗಳಿಗೆ ಗುದ್ದಿ, ಅಡ್ಡಾದಿಡ್ಡಿಯಾಗಿ ವಾಹನಗಳನ್ನು ಓಡಿಸಿದ್ದಾರೆ. ಇತರ ವಾಹನಗಳಿಗೆ ಗುದ್ದಿದರೂ, ಎಲ್ಲಿಯೂ ನಿಲ್ಲಿಸದೇ ಕಾರನ್ನು ಚಲಾಯಿಸಿಕೊಂಡು ಅಲ್ಲಿಂದ ಪಾರಾಗಲು ಪ್ರಯತ್ನಿಸಿದ್ದಾರೆ. ಇವರು ಚಲಾಯಿಸುತ್ತಿದ್ದ ವಾಹನವನ್ನು ಟಾಟಾದ ನೆಕ್ಸಾನ್ ಎಲೆಕ್ಟ್ರಿಕ್ ಎಂದು ಗುರುತಿಸಲಾಗಿದೆ.
ಅಪಾಯಕಾರಿ ರೀತಿಯಲ್ಲಿ ಚಲಾಯಿಸುತ್ತಿದ್ದ ಈ ಕಾರನ್ನು ಗಮನಿಸಿದ ಅಲ್ಲಿನ ಸಾರ್ವಜನಿಕರು ಕೊನೆಗೆ ಪೊಲೀಸರಿಗೆ ಸುದ್ದಿಯನ್ನು ತಿಳಿಸಿದ್ದಾರೆ. ಕೂಡಲೇ ಕಾರ್ಯಪೃವೃತ್ತರಾದ ಪೊಲೀಸರು ರಸ್ತೆಯಲ್ಲಿ ದಾಂಧಲೆ ಎಬ್ಬಿಸಿಕೊಂಡು ಕಾರು ಚಲಾಯಿಸುತ್ತಿದ್ದ ಈ ಜೋಡಿಯನ್ನು ತಡೆಯುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಅಷ್ಟರಲ್ಲಾಗಲೇ ತುಂಬಾ ಜನರಿಗೆ ಇವರು ತೊಂದರೆಯನ್ನು ನೀಡಿದ್ದರು.

ಮಾಹಿತಿ ತಿಳಿದ ಪೊಲೀಸರು ಈ ಜೋಡಿಯನ್ನು ತಮ್ಮ ವಾಹನದಲ್ಲಿ ಬೆನ್ನತ್ತಿ ಹೋದರೂ ಜಾಂಜಾ ಸೇವನೆ ಮಾಡಿದ್ದ ಜೋಡಿ ಕಾರನ್ನು ನಿಲ್ಲಿಸಲೇ ಇಲ್ಲ. ಇದರಿಂದ ಕೊನೆಗೆ ಪೊಲೀಸರು ಕ್ರೇನ್ ಗೆ ಕರೆ ಮಾಡಿ ಕರೆಸಿ ಆ ಕಾರು ಬರುತ್ತಿದ್ದ ಜಾಗದಲ್ಲಿ ತಡೆ ಹಿಡಿಯುವಂತೆ ಮಾಡಿದ್ದಾರೆ. ಪೊಲೀಸರ ಸೂಚನೆಯಂತೆ ಕ್ರೇನ್ ಆಪರೇಟರ್ ಜೋಡಿ ಬರುತ್ತಿದ್ದ ರಸ್ತೆಯಲ್ಲಿ ಕ್ರೇನ್ ಇಟ್ಟು ತಡೆ ರಸ್ತೆಯನ್ನು ಬ್ಲಾಕ್ ಮಾಡಿ ಪೊಲೀಸರು ಆ ಜೋಡಿಯನ್ನು ಸೆರೆ ಹಿಡಿಯುವಲ್ಲಿ ಸಫಲವಾಗಿದ್ದಾರೆ.
ಇನ್ನು ಇವರು ಚಲಾಯಿಸುತ್ತಿದ್ದ ವಾಹನದತ್ತ ಗಮನಿಸುವುದಾದರೆ, ಈ ಮೇಲೆ ತಿಳಿಸಿದಂತೆ ಟಾಟಾ ಮೋಟಾರ್ಸ್‌ನ ನೆಕ್ಸಾನ್ ಇವಿ ಯನ್ನು ಚಲಾಯಿಸುತ್ತಿದ್ದರು. ಟಾಟಾ ಕಂಪನಿಯ ಎಲೆಕ್ಟ್ರಿಕ್ ವಾಹನದಲ್ಲಿ ಹೆಚ್ಚು ಪ್ರಸಿದ್ದವಾಗಿರುವ ಕಾರು ಈ ನೆಕ್ಸಾನ್ ಇವಿ ಆಗಿದ್ದು ಗ್ರಾಹಕರ ನೆಚ್ಚಿನ ಕಾರಾಗಿದೆ. ಇತ್ತೀಚೆಗಷ್ಟೇ ಟಾಟಾ ಮೋಟಾರ್ಸ್ ಈ ಕಾರಿನ ಫೇಸ್‌ಲಿಫ್ಟ್ ಅನ್ನು ಸಹ ಮಾರುಕಟ್ಟೆಗೆ ಬಿಟ್ಟಿದ್ದರು.

ಹೊಸ ನೆಕ್ಸಾನ್ ಇವಿ (Nexon EV) ಬ್ಯಾಟರಿ ಪ್ಯಾಕ್ ಅನುಗುಣವಾಗಿ, ಮೀಡಿಯಂ ರೇಂಜ್ (ಎಂಆರ್) ಹಾಗೂ ಲಾಂಗ್ ರೇಂಜ್ (ಎಲ್ಆರ್) ರೂಪಾಂತರ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಎಂಆರ್ ರೂಪಾಂತರ 30kWh ಹಾಗೂ ಎಲ್ಆರ್ ರೂಪಾಂತರ 40.5kWh ಬ್ಯಾಟರಿ ಪ್ಯಾಕ್ ಹೊಂದಿದೆ. ಜನರೇಷನ್ 2 ಮೋಟಾರ್ ಸಹಾಯದಿಂದ ಕಾರ್ಯನಿರ್ವಹಿಸಲಿದ್ದು, ಕ್ರಮವಾಗಿ, 127 bhp, 143 bhp ಪವರ್, 215 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.
ಈ ಕಾರು, ಇಕೋ, ಸಿಟಿ ಹಾಗೂ ಸ್ಪೋರ್ಟ್ಸ್ ಎಂಬ ಡ್ರೈವಿಂಗ್ ಮೋಡ್ ಆಯ್ಕೆಯನ್ನು ಹೊಂದಿದ್ದು, ಎಂಆರ್ ರೂಪಾಂತರ ಸಂಪೂರ್ಣ ಚಾರ್ಜಿನಲ್ಲಿ 325 km ಮತ್ತು ಎಲ್ಆರ್ ರೂಪಾಂತರ 465 km ರೇಂಜ್ ನೀಡುತ್ತದೆ. ಡಿಸಿ ಫಾಸ್ಟ್ ಚಾರ್ಜರ್ ಆಯ್ಕೆಯಲ್ಲಿ ಇವೆರೆಡು ಕಾರುಗಳ ಬ್ಯಾಟರಿ ಪ್ಯಾಕ್, 10-80% ಚಾರ್ಜ್ ಆಗಲು 56 ನಿಮಿಷ ಬೇಕಾಗುತ್ತದೆ. ಅದೇ ಮನೆಯ ವಿದ್ಯುತ್ ಬಳಕೆಯಲ್ಲಿ 10 ಗಂಟೆಗೂ ಹೆಚ್ಚಿನ ಕಾಲಾವಕಾಶ ಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications