Just In
Don't Miss!
- Sports
ಯುಎಇ ಆಟಗಾರರಿಂದ ಮ್ಯಾಚ್ ಫಿಕ್ಸಿಂಗ್; ಅಮಾನತು ಮಾಡಿದ ಐಸಿಸಿ
- Movies
'ಬೆಲ್ ಬಾಟಂ-2' ಟೈಟಲ್ ಪೋಸ್ಟರ್ ಅನಾವರಣ: ಡಿಟೆಕ್ಟಿವ್ ದಿವಾಕರ್ ಈಸ್ ಬ್ಯಾಕ್
- Lifestyle
ಗರ್ಭಾವಸ್ಥೆಯಲ್ಲಿ ಥೈರಾಯ್ಡ್ ಸಮಸ್ಯೆ: ಇದರ ಅಪಾಯಗಳೇನು, ತಡೆಗಟ್ಟುವುದು ಹೇಗೆ?
- News
ಶಶಿಕಲಾ ಈಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿ
- Finance
ಹೊಸ ಸಾರ್ವಕಾಲಿಕ ದಾಖಲೆ ಬರೆದ ಪೆಟ್ರೋಲ್- ಡೀಸೆಲ್ ದರ; ಯಾವ ನಗರದಲ್ಲಿ ಎಷ್ಟು?
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಫುಟ್ಬಾಲ್ ಆಟಗಾರನ ಡ್ರೈವಿಂಗ್ ಲೈಸೆನ್ಸ್ ಅಮಾನತು ಪಡಿಸಿದ ನ್ಯಾಯಾಲಯ
ಇಂಗ್ಲೆಂಡ್ ತಂಡದ ಜನಪ್ರಿಯ ಫುಟ್ಬಾಲ್ ಆಟಗಾರ ಜ್ಯಾಕ್ ಗ್ರೀಲಿಶ್ ಅವರನ್ನು 9 ತಿಂಗಳ ಕಾಲ ವಾಹನ ಚಲಾಯಿಸದಂತೆ ನಿಷೇಧ ಹೇರಲಾಗಿದೆ. ಅಲ್ಲಿನ ರಾಜ್ಯವೊಂದರ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ.

ಆಯ್ ಸ್ಟನ್ ವಿಲ್ಲಾ ತಂಡದ ನಾಯಕರಾದ ಜ್ಯಾಕ್ ಗ್ರೀಲಿಶ್ ಹಲವು ಸಂಚಾರ ಉಲ್ಲಂಘನೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ. ಮಾರ್ಚ್ 29ರಂದು ತಮ್ಮ ಸ್ನೇಹಿತರನ್ನು ಭೇಟಿ ಮಾಡಲು ಕಾರಿನಲ್ಲಿ ಹೋಗುತ್ತಿದ್ದಾಗ ಬೇರೆ ಕಾರುಗಳಿಗೆ ಡಿಕ್ಕಿ ಹೊಡೆದಿದ್ದರು. ಕಾರನ್ನು ಪಾರ್ಕಿಂಗ್ ಸ್ಥಳದಿಂದ ಹೊರ ತೆಗೆಯುವಾಗ ಈ ಅಪಘಾತ ಸಂಭವಿಸಿತ್ತು.

ಇದರಿಂದಾಗಿ ಎರಡು ದುಬಾರಿ ಕಾರುಗಳಿಗೆ ತೀವ್ರ ಪ್ರಮಾಣದ ಹಾನಿಯಾಗಿತ್ತು. ಅವುಗಳಲ್ಲಿ ಒಂದು ಕಾರು ಮರ್ಸಿಡಿಸ್ ಬೆಂಝ್ ಆದರೆ, ಮತ್ತೊಂದು ಸಿಟ್ರೊಯೆನ್‌ನ ವ್ಯಾನ್ ಎಂದು ಹೇಳಲಾಗಿದೆ. ಅವರ ರೇಂಜ್ ರೋವರ್ ಕಾರನ್ನು ಪಾರ್ಕಿಂಗ್ ಸ್ಥಳದಿಂದ ಹೊರಗೆ ತೆಗೆಯುವಾಗ ಈ ಘಟನೆ ಸಂಭವಿಸಿತ್ತು.
MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಈ ಕಾರಣಕ್ಕೆ ಅವರ ಡ್ರೈವಿಂಗ್ ಲೈಸೆನ್ಸ್ ಅನ್ನು 9 ತಿಂಗಳ ಕಾಲ ಅಮಾನತುಗೊಳಿಸಲಾಗಿದೆ. ಜೊತೆಗೆ ಅವರಿಗೆ 82,499 ಪೌಂಡ್ ದಂಡ ವಿಧಿಸಲಾಗಿದೆ. ಈ ದಂಡದ ಮೊತ್ತವು ಭಾರತದ ರೂಪಾಯಿ ಮೌಲ್ಯದಲ್ಲಿ ಸುಮಾರು ರೂ.82.16 ಲಕ್ಷಗಳಾಗುತ್ತದೆ. ದಂಡವನ್ನು ಒಂದು ವಾರದೊಳಗೆ ಪಾವತಿಸುವಂತೆ ನ್ಯಾಯಾಲಯವು ಜ್ಯಾಕ್ ಗ್ರೀಲಿಶ್‌ಗೆ ಆದೇಶಿಸಿದೆ.

ಅಪಘಾತದ ಕಾರಣಕ್ಕೆ ಮಾತ್ರವಲ್ಲದೇ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕಾಗಿಯೂ ಜ್ಯಾಕ್ ಗ್ರೀಲಿಶ್ ರವರಿಗೆ ಇಷ್ಟು ದೊಡ್ಡ ಮೊತ್ತದ ದಂಡವನ್ನು ವಿಧಿಸಲಾಗಿದೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ಇಂಗ್ಲೆಂಡ್ ನಲ್ಲಿ ಮಾರ್ಚ್ ತಿಂಗಳಿನಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು.
MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಲಾಕ್‌ಡೌನ್ ಅವಧಿಯಲ್ಲಿ ಕಾರನ್ನು ಅವಸರವಾಗಿ ಚಾಲನೆ ಮಾಡಿದ್ದಾರೆ. ಈ ಅಪಘಾತದಲ್ಲಿ ಅವರ ರೇಂಜ್ ರೋವರ್ ಐಷಾರಾಮಿ ಕಾರಿಗೂ ಸಾಕಷ್ಟು ಹಾನಿಯಾಗಿದೆ. ಜೊತೆಗೆ ದಂಡವನ್ನು ತೆರುವಂತಾಗಿದೆ.

ಜ್ಯಾಕ್ ಗ್ರೀಲಿಶ್ ರವರ ಈ ಕೃತ್ಯವು ದೇಶದ ಜನರನ್ನು ಹಾಗೂ ಅವರ ಅಭಿಮಾನಿಗಳನ್ನು ಕೆರಳಿಸಿದೆ. ಜ್ಯಾಕ್ ಗರ್ಲಿಶ್ ತಮ್ಮ ಈ ಕೃತ್ಯಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಅಪಘಾತದ ನಂತರ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿದೆ.
MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ಅಪಘಾತದ ಜ್ಯಾಕ್ ಗ್ರೀಲಿಶ್ ಗಲಿಬಿಲಿಗೊಂಡಿದ್ದು, ನ್ಯಾಯಾಲಯಕ್ಕೆ ಬಂದಾಗ ಬೇರೆ ಬೇರೆ ಶೂಗಳನ್ನು ಧರಿಸಿದ್ದರು. ಗಾಬರಿಯಲ್ಲಿದ್ದಾಗ ವಾಹನವನ್ನು ಚಾಲನೆ ಮಾಡಬಾರದು ಎಂಬುದಕ್ಕೆ ಈ ಘಟನೆಯು ಸ್ಪಷ್ಟ ಉದಾಹರಣೆಯಾಗಿದೆ.

ಕರೋನಾ ವೈರಸ್ ಹರಡಬಾರದು ಎಂಬ ಕಾರಣಕ್ಕೆ ಜಾರಿಗೊಳಿಸಲಾದ ಲಾಕ್‌ಡೌನ್ ಅವಧಿಯಲ್ಲಿ ಜ್ಯಾಕ್ ಗ್ರೀಲಿಶ್ ಆತುರಾತುರವಾಗಿ ಕಾರು ಚಾಲನೆ ಮಾಡಿದ್ದೇ ಈ ಅಪಘಾತಕ್ಕೆ ಕಾರಣ.
MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಅರೆನಿದ್ರೆ, ಉದ್ವೇಗ ಅಥವಾ ಕೋಪದಲ್ಲಿದ್ದಾಗ ವಾಹನ ಚಾಲನೆ ಮಾಡಿದರೆ ಅಪಘಾತಗಳು ಸಂಭವಿಸುತ್ತವೆ. ಈ ಕಾರಣಕ್ಕೆ ಇಂತಹ ಪರಿಸ್ಥಿತಿಗಳಲ್ಲಿ ಯಾವುದೇ ವಾಹನ ಚಾಲನೆ ಮಾಡದಿರುವುದು ಉತ್ತಮ. ಈ ಚಿತ್ರಗಳನ್ನು ಹ್ಯಾನ್ಸ್ ಎಲ್ಎಫ್‌ಸಿಯಿಂದ ಪಡೆಯಲಾಗಿದೆ.