ಕರೋನಾ ವೈರಸ್ ಎಫೆಕ್ಟ್: ದಿಢೀರ್ ಏರಿಕೆ ಕಂಡ ಸೈಕಲ್ ಮಾರಾಟ

ಇಂದು ಭಾರತೀಯ ರಸ್ತೆಗಳಲ್ಲಿ ಸೈಕಲ್‌ಗಳನ್ನು ಕಾಣುವುದು ಅಪರೂಪದ ಸಂಗತಿಯಾಗಿದೆ. ಫಿಟ್ ನೆಸ್ ಕಾಪಾಡಿಕೊಳ್ಳಲು ಬಯಸುವ ಬೆರಳೆಣಿಕೆಯಷ್ಟು ಮಂದಿ ಮಾತ್ರ ಆಧುನಿಕ ಸೈಕಲ್‌ಗಳನ್ನು ಚಾಲನೆ ಮಾಡುತ್ತಾರೆ. ಇವರನ್ನು ಹೊರತುಪಡಿಸಿದರೆ ಸೈಕ್ಲಿಸ್ಟ್‌ಗಳ ಸಂಖ್ಯೆ ಭಾರತದಲ್ಲಿ ತೀರಾ ಕಡಿಮೆ ಎಂದೇ ಹೇಳಬಹುದು.

ಕರೋನಾ ವೈರಸ್ ಎಫೆಕ್ಟ್: ದಿಢೀರ್ ಏರಿಕೆ ಕಂಡ ಸೈಕಲ್ ಮಾರಾಟ

ಭಾರತೀಯ ರಸ್ತೆಗಳಲ್ಲಿ ಬೈಕ್ ಹಾಗೂ ಸ್ಕೂಟರ್ ಗಳದೇ ದರ್ಬಾರು. ಸೈಕಲ್‌ ಬಳಸುವ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಖರ್ಚು ಮಾಡುವ ಹಣವನ್ನು ಉಳಿಸಬಹುದು. ಜೊತೆಗೆ ಆರೋಗ್ಯ ಕಾಪಾಡಿಕೊಂಡು ಆಸ್ಪತ್ರೆಗಳನ್ನು ದೂರವೇ ಇಡಬಹುದು. ಇಂದಿನ ವೇಗದ ಜಗತ್ತಿನಲ್ಲಿ ಯಾರೂ ಸೈಕಲ್‌ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಬಯಸುವುದಿಲ್ಲ.

ಕರೋನಾ ವೈರಸ್ ಎಫೆಕ್ಟ್: ದಿಢೀರ್ ಏರಿಕೆ ಕಂಡ ಸೈಕಲ್ ಮಾರಾಟ

ಇದು ಭಾರತದ ಪರಿಸ್ಥಿತಿಯಾದರೆ, ಯುರೋಪಿನ ಹಲವು ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಸೈಕಲ್‌ ಬಳಕೆಯನ್ನು ಉತ್ತೇಜಿಸಲಾಗುತ್ತಿದೆ. ಸೈಕಲ್ ಗಳಿಂದ ಪರಿಸರ ಮಾಲಿನ್ಯ ಉಂಟಾಗುವುದಿಲ್ಲವೆಂಬುದೇ ಇದಕ್ಕೆ ಪ್ರಮುಖ ಕಾರಣ. ಭಾರತದಲ್ಲಿ, ಸೈಕಲ್ ಸವಾರರನ್ನು ತುಚ್ಛವಾಗಿ ಕಾಣಲಾಗುತ್ತದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಕಾರಿಗೂ ಬಂತು ಪೋರ್ಟಬಲ್ ಟಾಯ್ಲೆಟ್

ಕರೋನಾ ವೈರಸ್ ಎಫೆಕ್ಟ್: ದಿಢೀರ್ ಏರಿಕೆ ಕಂಡ ಸೈಕಲ್ ಮಾರಾಟ

ಆದರೆ ಸದ್ಯಕ್ಕೆ ಭಾರತದಲ್ಲಿಯೂ ಸೈಕಲ್ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಬೇಡಿಕೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾತ್ರವಲ್ಲದೇ ಕರೋನಾ ವೈರಸ್ ಭಯವೂ ಕಾರಣವಾಗಿದೆ. ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸಿದರೆ ಕರೋನಾ ವೈರಸ್ ಸೋಂಕು ತಗುಲಲಿದೆ ಎಂಬ ಭಯವೇ ಇದಕ್ಕೆ ಮುಖ್ಯ ಕಾರಣ.

ಕರೋನಾ ವೈರಸ್ ಎಫೆಕ್ಟ್: ದಿಢೀರ್ ಏರಿಕೆ ಕಂಡ ಸೈಕಲ್ ಮಾರಾಟ

ಈ ಕಾರಣಕ್ಕೆ ಜನ ಬೈಕ್‌, ಸ್ಕೂಟರ್ ಸೇರಿದಂತೆ ತಮ್ಮ ಸ್ವಂತ ವಾಹನಗಳಲ್ಲಿ ಸಂಚರಿಸುವುದೇ ಕ್ಷೇಮವೆಂದು ಭಾವಿಸಿದ್ದಾರೆ. ಆದರೆ ಸಾಕಷ್ಟು ಜನರಿಗೆ ಸ್ವಂತ ಕಾರು ಅಥವಾ ಬೈಕ್ ಹೊಂದುವಷ್ಟು ಆರ್ಥಿಕ ಶಕ್ತಿ ಇರುವುದಿಲ್ಲ. ಇದರ ಜೊತೆಗೆ ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆಯು ಸಹ ಕಾರು ಹಾಗೂ ಬೈಕ್ ಮಾಲೀಕರನ್ನು ಕಂಗಾಲಾಗಿಸಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ದಿಢೀರ್ ಏರಿಕೆ ಕಂಡ ಸೈಕಲ್ ಮಾರಾಟ

ಯಾವುದೇ ಖರ್ಚಿಲ್ಲದ ಸೈಕಲ್ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ. ಈ ಕಾರಣಕ್ಕೆ ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದ ಜನ ಹೆಚ್ಚಿನ ಸಂಖ್ಯೆಯಲ್ಲಿ ಸೈಕಲ್ ಖರೀದಿಗೆ ಮುಂದಾಗಿದ್ದಾರೆ. ಇದರಿಂದಾಗಿ ಅಲ್ಲಿ ಸೈಕಲ್‌ ಮಾರಾಟವು ಹೆಚ್ಚಾಗಿದೆ.

ಕರೋನಾ ವೈರಸ್ ಎಫೆಕ್ಟ್: ದಿಢೀರ್ ಏರಿಕೆ ಕಂಡ ಸೈಕಲ್ ಮಾರಾಟ

ಈ ವಿಷಯವನ್ನು ಸೈಕಲ್ ಕಾರ್ಯಕರ್ತರ ಸಂಘದ ಹಿರಿಯ ಕಾರ್ಯನಿರ್ವಾಹಕರೇ ಖಚಿತ ಪಡಿಸಿದ್ದಾರೆ. ಜೂನ್ ತಿಂಗಳ ಮೊದಲ ಎರಡು ವಾರಗಳಲ್ಲಿ ಸೈಕಲ್‌ಗಳ ಬೇಡಿಕೆ ಮೂರು ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದ್ದಾರೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಕರೋನಾ ವೈರಸ್ ಎಫೆಕ್ಟ್: ದಿಢೀರ್ ಏರಿಕೆ ಕಂಡ ಸೈಕಲ್ ಮಾರಾಟ

ಕೋಲ್ಕತಾದಲ್ಲಿ ಸದ್ಯಕ್ಕೆ ಹೆಚ್ಚಿನ ಸಂಖ್ಯೆಯ ಸಾರಿಗೆ ಸೌಲಭ್ಯಗಳಿಲ್ಲ. ಈ ಕಾರಣಕ್ಕೆ ಜನರು ಕೆಲವು ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಸೈಕಲ್ ಗಳನ್ನು ರೂ.8,000ದಿಂದ ರೂ.15,000ಗಳ ಬೆಲೆಯಲ್ಲಿ ಈ ಸೈಕಲ್‌ಗಳನ್ನು ದೂರದ ಪ್ರಯಾಣಕ್ಕೂ ಬಳಸಬಹುದು.

ಕರೋನಾ ವೈರಸ್ ಎಫೆಕ್ಟ್: ದಿಢೀರ್ ಏರಿಕೆ ಕಂಡ ಸೈಕಲ್ ಮಾರಾಟ

ಜೋಧ್‌ಪುರದ ಮಾಡರ್ನ್ ಸೈಕಲ್‌ ಮಾರ್ಟ್‌ನ ಮಾಲೀಕರು ಮಾತನಾಡಿ ಕರೋನಾ ವೈರಸ್ ಹರಡುವ ಮೊದಲು ದಿನಕ್ಕೆ 7ರಿಂದ 10 ಸೈಕಲ್‌ಗಳನ್ನು ಮಾತ್ರ ಮಾರಾಟ ಮಾಡುತ್ತಿದ್ದೆವು. ಜೂನ್ 1ರಂದು ಅಂಗಡಿಯನ್ನು ಪುನರಾರಂಭಿಸಿದ ನಂತರ ದಿನ ಮೊದಲಿಗಿಂತ ಎರಡು ಪಟ್ಟು ಹೆಚ್ಚು ಸೈಕಲ್‌ಗಳನ್ನು ಮಾರಾಟ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಕರೋನಾ ವೈರಸ್ ಎಫೆಕ್ಟ್: ದಿಢೀರ್ ಏರಿಕೆ ಕಂಡ ಸೈಕಲ್ ಮಾರಾಟ

ಮಧ್ಯವಯಸ್ಕರು ಮಾತ್ರವಲ್ಲದೆ ಹದಿಹರೆಯದವರು ಕೂಡ ಸೈಕಲ್‌ ಖರೀದಿಸಲು ಹೆಚ್ಚು ಆಸಕ್ತಿ ತೋರುತ್ತಿದ್ದಾರೆಂದು ವರದಿಯಾಗಿದೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Article Published On: Tuesday, July 14, 2020, 10:55 [IST]
English summary
Covid 19 and petrol diesel price hike results in more bicycle sales. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+