ಕರೋನಾ ವೈರಸ್ ಹರಡುವ ಭೀತಿ, ಕ್ಯಾಬ್ ಸೇವೆ ಶುರುವಾದರೂ ಎಸಿ ಆನ್ ಆಗಲ್ಲ

ಕರೋನಾ ವೈರಸ್ ಜನಜೀವನವನ್ನು ತಲೆಕೆಳಗು ಮಾಡಿದೆ. ಮಾರ್ಚ್ 24ರಂದು ಭಾರತದಲ್ಲಿ ಲಾಕ್‌ಡೌನ್ ಜಾರಿಯಾದ ನಂತರ ಜನರು ಜನರು ಮನೆಗಳಲ್ಲಿಯೇ ಇರುವಂತಾಗಿದೆ. ಈಗ ಜಾರಿಯಲ್ಲಿರುವ ಮೂರನೇ ಹಂತದ ಲಾಕ್‌ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ.

ಕರೋನಾ ವೈರಸ್ ಹರಡುವ ಭೀತಿ, ಕ್ಯಾಬ್ ಸೇವೆ ಶುರುವಾದರೂ ಎಸಿ ಆನ್ ಆಗಲ್ಲ

ಕರೋನಾ ವೈರಸ್ ಸೋಂಕಿಗೆ ಒಳಗಾದವರ ಸಂಖ್ಯೆ ಹೆಚ್ಚುತ್ತಿದ್ದರೂ ಕೇಂದ್ರ ಸರ್ಕಾರವು ಆರ್ಥಿಕ ವ್ಯವಸ್ಥೆಯನ್ನು ಸರಿದಾರಿಗೆ ತರಲು ಲಾಕ್‌ಡೌನ್ ಅನ್ನು ಸಡಿಲಗೊಳಿಸಿದೆ. ಈ ಹಿನ್ನೆಲೆಯಲ್ಲಿ ಹಲವು ನಗರಗಳಲ್ಲಿ ಕ್ಯಾಬ್ ಸಂಚಾರವನ್ನು ಪುನರಾರಂಭಿಸಲಾಗಿದೆ.

ಕರೋನಾ ವೈರಸ್ ಹರಡುವ ಭೀತಿ, ಕ್ಯಾಬ್ ಸೇವೆ ಶುರುವಾದರೂ ಎಸಿ ಆನ್ ಆಗಲ್ಲ

ಪಶ್ಚಿಮ ಬಂಗಾಳದ ಕೋಲ್ಕತಾ ನಗರದ ಕೆಲವು ಭಾಗಗಳಲ್ಲಿ ಟ್ಯಾಕ್ಸಿ ಸೇವೆಗಳನ್ನು ಪುನರಾರಂಭಿಸಲಾಗಿದೆ. ಎಲ್ಲಾ ಟ್ಯಾಕ್ಸಿ ಚಾಲಕರಿಗೆ ಕಠಿಣ ಸುರಕ್ಷತಾ ನಿಯಮಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಇವುಗಳಲ್ಲಿ ಕ್ಯಾಬ್ ಚಾಲನೆ ವೇಳೆಯಲ್ಲಿ ಎಸಿಗಳನ್ನು ಸ್ವಿಚ್ ಆಫ್ ಮಾಡುವುದು ಸಹ ಸೇರಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್ ಹರಡುವ ಭೀತಿ, ಕ್ಯಾಬ್ ಸೇವೆ ಶುರುವಾದರೂ ಎಸಿ ಆನ್ ಆಗಲ್ಲ

ಕ್ಯಾಬ್ ಆಪರೇಟರ್‌ಗಳು ಹಾಗೂ ಆನ್‌ಲೈನ್ ಕ್ಯಾಬ್ ಕಂಪನಿಗಳು ಕ್ಯಾಬ್‌ಗಳಲ್ಲಿ ಎಸಿ ಆಫ್ ಮಾಡಲು ನಿರ್ಧರಿಸಿವೆ. ಜೊತೆಗೆ ವಿಂಡೋಗಳನ್ನು ಕೆಳಗಿಳಿಸಿ ಚಾಲನೆ ಮಾಡಲು ನಿರ್ಧರಿಸಲಾಗಿದೆ.ಕ್ಯಾಬ್ ಆಪರೇಟರ್‌ಗಳು ಪ್ರಯಾಣಿಕರ ಅನುಮತಿಯೊಂದಿಗೆ ಕ್ಯಾಬ್‌ಗಳಲ್ಲಿರುವ ಎಸಿಗಳನ್ನು ಆಫ್ ಮಾಡುತ್ತಿದ್ದಾರೆ. ಎಸಿಯ ಕಾರಣಕ್ಕೆ ಕೋವಿಡ್ -19 ವೈರಸ್ ವೇಗವಾಗಿ ಹರಡುವ ಸಾಧ್ಯತೆಗಳಿರುತ್ತವೆ.

ಕರೋನಾ ವೈರಸ್ ಹರಡುವ ಭೀತಿ, ಕ್ಯಾಬ್ ಸೇವೆ ಶುರುವಾದರೂ ಎಸಿ ಆನ್ ಆಗಲ್ಲ

ಚೀನಾದಲ್ಲಿ ನಡೆಸಿದ ಅಧ್ಯಯನದಲ್ಲಿ ಎಸಿ ರೆಸ್ಟೋರೆಂಟ್‌ನಿಂದ ಕೋವಿಡ್ -19 ವೈರಸ್ ಹರಡಿದೆ ಎಂದು ಹೇಳಲಾಗಿದೆ. ಆಟೋಮೊಬೈಲ್ ತಜ್ಞರಾದ ಪ್ರೊಫೆಸರ್ ಪ್ರಭೀರ್ ಬಸುರವರ ಪ್ರಕಾರ,ಈ ಅಧ್ಯಯನವನ್ನು ನಿರಾಕರಿಸುವಂತಿಲ್ಲ. ಇದರ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲವೆಂದು ಹೇಳಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕರೋನಾ ವೈರಸ್ ಹರಡುವ ಭೀತಿ, ಕ್ಯಾಬ್ ಸೇವೆ ಶುರುವಾದರೂ ಎಸಿ ಆನ್ ಆಗಲ್ಲ

ಎರಡು ಪ್ರಮುಖ ಕ್ಯಾಬ್ ಸೇವಾ ಕಂಪನಿಗಳಾದ ಓಲಾ ಹಾಗೂ ಉಬರ್ ಸುರಕ್ಷಾ ಕ್ರಮಗಳ ಮಾರ್ಗಸೂಚಿಗಳನ್ನು ಹೊರಡಿಸಿವೆ. ಈ ಮಾರ್ಗಸೂಚಿಗಳಲ್ಲಿ ಕ್ಯಾಬ್ ಚಾಲನೆ ವೇಳೆಯಲ್ಲಿ ವಿಂಡೊಗಳನ್ನು ಕೆಳಕ್ಕಿಳಿಸುವಂತೆ ಹಾಗೂ ಎಸಿಯನ್ನು ಸ್ವಿಚ್ ಆಫ್ ಮಾಡುವಂತೆ ಹೇಳಲಾಗಿದೆ.

ಕರೋನಾ ವೈರಸ್ ಹರಡುವ ಭೀತಿ, ಕ್ಯಾಬ್ ಸೇವೆ ಶುರುವಾದರೂ ಎಸಿ ಆನ್ ಆಗಲ್ಲ

ಓಲಾ ಹಾಗೂ ಉಬರ್ ಕಂಪನಿಗಳು ಪ್ರಯಾಣಿಕರ ಹಾಗೂ ಚಾಲಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಹೇಳಿವೆ. ಕ್ಯಾಬ್‌ಗಳ ವಿಂಡೊಗಳನ್ನು ಕೆಳಗಿಳಿಸುವುದು ಸುರಕ್ಷಿತವೆಂದು ವೈದ್ಯರು ಹೇಳಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ಹರಡುವ ಭೀತಿ, ಕ್ಯಾಬ್ ಸೇವೆ ಶುರುವಾದರೂ ಎಸಿ ಆನ್ ಆಗಲ್ಲ

ಈ ಬಗ್ಗೆ ಮಾತನಾಡಿರುವ ಆರ್‌ಎನ್ ಟ್ಯಾಗೋರ್ ಇಂಟರ್‌ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯಾಕ್ ಸೈನ್ಸಸ್ ಸಲಹೆಗಾರರಾದ ಅರಿಂದಮ್ ಬಿಸ್ವಾಸ್‌ರವರು ಮುಚ್ಚಿರುವ ವಾತಾವರಣದಲ್ಲಿ ಎಸಿ ಆನ್ ಮಾಡಿದಾಗ ವೈರಸ್ ಬದುಕುಳಿಯುವ ಹಾಗೂ ಹರಡುವ ಸಾಧ್ಯತೆಗಳು ಹೆಚ್ಚು ಎಂದು ಹೇಳಿದ್ದಾರೆ.

ಕರೋನಾ ವೈರಸ್ ಹರಡುವ ಭೀತಿ, ಕ್ಯಾಬ್ ಸೇವೆ ಶುರುವಾದರೂ ಎಸಿ ಆನ್ ಆಗಲ್ಲ

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕ್ಯಾಬ್ ಚಾಲಕರು ಸೆಖೆಯ ಕಾರಣಕ್ಕೆ ಪ್ರಯಾಣಿಕರು ಎಸಿ ಆನ್ ಮಾಡುವಂತೆ ಕೇಳಿಕೊಳ್ಳಬಹುದು. ಆನ್ ಮಾಡದೇ ಇದ್ದಾಗ ಮಾತಿಗೆ ಮಾತು ಬೆಳೆದು ಇನ್ನೂ ಮುಂದೆ ಗ್ರಾಹಕರು ಕ್ಯಾಬ್‌ಗಳಿಂದ ದೂರ ಉಳಿಯಬಹುದು ಎಂದು ಹೇಳಿದ್ದಾರೆ. ಇನ್ನೂ ಕೆಲವರು ಅಪಾಯ ಎದುರಾದರೂ ಎಸಿ ಆನ್ ಮಾಡಲು ಒತ್ತಾಯಿಸಬಹುದು ಎಂದು ಹೇಳಿದ್ದಾರೆ.

Most Read Articles

Kannada
English summary
Cabs to switch off AC during rides. Read in Kannada.
Story first published: Friday, May 15, 2020, 10:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X