ಲಾಕ್‌ಡೌನ್ ಎಫೆಕ್ಟ್: ಊಟ, ನೀರಿಲ್ಲದೇ 2,300 ಕಿ.ಮೀ ಪ್ರಯಾಣ ಮಾಡಿದ ಎಂಜಿನಿಯರ್
ಕರೋನಾ ವೈರಸ್‌ಗೆ ಯಾವುದೇ ಲಸಿಕೆಯಾಗಲಿ ಅಥವಾ ಔಷಧವಾಗಲಿ ಇಲ್ಲ. ಈ ವೈರಸ್ ಹರಡದಂತೆ ತಡೆಯುವುದೇ ಈ ಮಹಾಮಾರಿ ಖಾಯಿಲೆಗೆ ಇರುವ ಮದ್ದು. ಕರೋನಾ ವೈರಸ್ ಅಮೆರಿಕಾ, ಇಟಲಿ, ಸ್ಪೇನ್ ಹಾಗೂ ಫ್ರಾನ್ಸ್ ದೇಶಗಳಲ್ಲಿ ಸಾವಿರಾರು ಜನರನ್ನು ಬಳಿ ಪಡೆದಿದೆ.

ಕರೋನಾ ವೈರಸ್ ಭಾರತವನ್ನು ಸಹ ಬಿಟ್ಟಿಲ್ಲ. ಭಾರತದಲ್ಲಿ ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ಕೋವಿಡ್ -19 ವೈರಸ್‌ನ ಆರ್ಭಟ ಹೆಚ್ಚಾಗಿದೆ. ಭಾರತದ ವಾಣಿಜ್ಯ ರಾಜಧಾನಿಯಾದ ಮುಂಬೈ ಕೋವಿಡ್ -19 ವೈರಸ್‌ನ ಹಾಟ್‌ಸ್ಪಾಟ್ ಆಗಿದೆ.

ಕರೋನಾ ವೈರಸ್ ಹರಡುವುದನ್ನು ತಡೆಯಲು ಭಾರತದಲ್ಲಿ ಮೇ 3ರವರೆಗೆ ಎರಡನೇ ಹಂತದ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಈ ಕಾರಣಕ್ಕೆ ಜನರಿಗೆ ವಿನಾಕಾರಣ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿದೆ. ಇದರ ಹೊರತಾಗಿಯೂ, ಕರೋನಾ ವೈರಸ್‌ನ ತೀವ್ರತೆಯನ್ನು ಅರ್ಥಮಾಡಿಕೊಳ್ಳದ ಜನರು ಓಡಾಡುತ್ತಲೇ ಇದ್ದಾರೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಪೊಲೀಸರು ವಿನಾಕಾರಣ ಮನೆಗಳಿಂದ ಹೊರಬರುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದರ ಜೊತೆಗೆ ದಂಡ ವಿಧಿಸುವಂತಹ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಇನ್ನೂ ಕೆಲ ಜನರು ತೀರಾ ಅಗತ್ಯವಿರುವ ಕಾರಣಗಳಿಗಾಗಿ ದೂರದ ಪ್ರಯಾಣ ಮಾಡುತ್ತಿದ್ದಾರೆ.

ಕೆಲ ದಿನಗಳ ಹಿಂದೆ, ಯುವಕನೊಬ್ಬ ಥೇಣಿಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ತಂಗಿಯನ್ನು ಕರೆದುಕೊಂಡು ಬರಲು ಮಧುರೈನಿಂದ ಥೇಣಿಗೆ ಸೈಕಲ್‌ನಲ್ಲಿ 80 ಕಿ.ಮೀ ದೂರ ಪ್ರಯಾಣ ಬೆಳೆಸಿದ್ದ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ಸಾರಿಗೆ ಸೇವೆಗಳನ್ನು ರದ್ದುಪಡಿಸಿದ್ದ ಕಾರಣಕ್ಕೆ ಆ ಯುವಕ ಈ ರೀತಿಯ ರಿಸ್ಕ್ ತೆಗೆದುಕೊಂಡಿದ್ದ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಈಗ ಇದೇ ರೀತಿಯ ಮತ್ತೊಂದು ಘಟನೆ ನಡೆದಿದೆ. ಎಂಜಿನಿಯರ್ ಒಬ್ಬರು ತಮ್ಮ ತಾಯಿ ಮೇಲಿನ ಪ್ರೀತಿಯಿಂದಾಗಿ ತಮ್ಮ ಬೈಕ್‌ನಲ್ಲಿ ಸುಮಾರು 2,300 ಕಿ.ಮೀ ಪ್ರಯಾಣಿಸಿದ್ದಾರೆ. ಅಂದ ಹಾಗೆ ಈ ಎಂಜಿನಿಯರ್ ಹೆಸರು ಚಂದ್ರಮೋಹನ್. ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ಖಾಸಗಿ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಅವರ ಕುಟುಂಬದವರೆಲ್ಲರೂ ಶ್ರೀವಿಲ್ಲಿಪುಥೂರು ಬಳಿಯ ವಟ್ಟೈರಪುರಂ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ತಾಯಿ, ತಂದೆ, ಹೆಂಡತಿ, ಮಕ್ಕಳು ಎಲ್ಲರೂ ತಮಿಳುನಾಡಿನಲ್ಲಿ ವಾಸವಾಗಿದ್ದಾರೆ. ಲಾಕ್‌ಡೌನ್ ಘೋಷಿಸುವ ವೇಳೆಗೆ, ಬಸ್, ರೈಲು, ವಿಮಾನ ವಾಯು ಸೇವೆಗಳೆಲ್ಲವೂ ರದ್ದಾಗಿದ್ದವು.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಈ ಕಾರಣಕ್ಕೆ ಚಂದ್ರಮೋಹನ್‌ರವರಿಗೆ ತಮ್ಮ ಊರಿಗೆ ಮರಳಲು ಸಾಧ್ಯವಾಗಲಿಲ್ಲ. ಅವರು ಗುಜರಾತ್‌ನಲ್ಲಿಯೇ ಇರುವಂತಾಯಿತು. ಈ ನಡುವೆ ಚಂದ್ರಮೋಹನ್‌ರವರ ತಾಯಿ ಅನಾರೋಗ್ಯಕ್ಕೀಡಾದರು. ಈ ಬಗ್ಗೆ ಚಂದ್ರಮೋಹನ್‌ರವರಿಗೆ ಮಾಹಿತಿ ನೀಡಲಾಯಿತು.

ತಮ್ಮ ತಾಯಿಯನ್ನು ಕಾಣಲು ಚಂದ್ರಮೋಹನ್ ಬೈಕ್‌ನಲ್ಲಿಯೇ ತಮಿಳುನಾಡಿಗೆ ಹೋಗಲು ನಿರ್ಧರಿಸಿದರು. ಈ ಕಾರಣಕ್ಕೆ ಅನುಮತಿ ಕೋರಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದರು. ಅನುಮತಿ ಪಡೆದ ನಂತರ, ಏಪ್ರಿಲ್ 22ರಂದು ಬೆಳಿಗ್ಗೆ ದ್ವಿಚಕ್ರ ವಾಹನದಲ್ಲಿ ಅಹಮದಾಬಾದ್‌ನಿಂದ ಹೊರಟರು. ಗುಜರಾತ್‌ನಿಂದ ಮಹಾರಾಷ್ಟ್ರ, ಕರ್ನಾಟಕದ ಮೂಲಕ ಶ್ರೀವಿಲ್ಲಿಪುಥೂರ್ ತಲುಪಿದರು.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಬಗ್ಗೆ ಕರೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್‌ಡೌನ್ ಘೋಷಿಸಿದ ನಂತರ ನಾನು ಗುಜರಾತ್‌ನಲ್ಲಿ ಒಂದು ತಿಂಗಳು ಇದ್ದೆ. ನನಗೆ ಚಾರಿಟಿಯೊಂದು ಎರಡು ಹೊತ್ತು ಊಟ ನೀಡುತ್ತಿತ್ತು. ಇದೇ ವೇಳೆ ನನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿರುವ ಮಾಹಿತಿ ಸಿಕ್ಕಿತು.

ಹಾಗಾಗಿ ಬೈಕಿನಲ್ಲಿಯೇ ಪ್ರಯಾಣ ಬೆಳೆಸಿದೆ. ನಾನು ಪ್ರಯಾಣಿಸುತ್ತಿದ್ದ ಮಾರ್ಗವು ಅರಣ್ಯದಿಂದ ಕೂಡಿತ್ತು. ಈ ಕಾರಣಕ್ಕೆ ಹಗಲಿನಲ್ಲಿ ಮಾತ್ರ ಬೈಕು ಓಡಿಸುತ್ತಿದ್ದೆ. ರಾತ್ರಿ ವೇಳೆಯಲ್ಲಿ ಯಾವುದಾದರೂ ಪೆಟ್ರೋಲ್ ಬಂಕ್‌ನಲ್ಲಿ ತಂಗುತ್ತಿದ್ದೆ. ಪ್ರಯಾಣದ ವೇಳೆ ಯಾವುದೇ ಆಹಾರ ಸಿಗಲಿಲ್ಲ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಬಿಸ್ಕತ್ತು ತಿಂದು, ನೀರು ಕುಡಿಯುತ್ತಿದ್ದೆ. ಏಪ್ರಿಲ್ 22ರಂದು ಹೊರಟು ಏಪ್ರಿಲ್ 25ರಂದು ತಮಿಳುನಾಡನ್ನು ತಲುಪಿದ್ದೇನೆ. ತಮಿಳುನಾಡಿಗೆ ಬಂದ ನಂತರ ಆಹಾರ ಸೇವಿಸಿದೆ ಎಂದು ಹೇಳಿದರು. ಅಂದ ಹಾಗೆ ಎಂಜಿನಿಯರ್ ಚಂದ್ರಮೋಹನ್‌ರವರು ತಮ್ಮ ಬೈಕಿನಲ್ಲಿ ಸುಮಾರು 2,300 ಕಿ.ಮೀ ಪ್ರಯಾಣಿಸಿದ್ದಾರೆ.

ತಾಯಿಯ ಅನಾರೋಗ್ಯದ ಹಿನ್ನೆಲೆಯಲ್ಲಿ 2,300 ಕಿ.ಮೀ ದೂರ ಬೈಕ್‌ನಲ್ಲಿ ಪ್ರಯಾಣಿಸಿದ ಎಂಜಿನಿಯರ್ ಚಂದ್ರಮೋಹನ್‌ರವರ ಕಥೆ ತಮಿಳುನಾಡಿನ ಜನರನ್ನು ಅಚ್ಚರಿಗೊಳಿಸಿದೆ. ಅದೂ ಸಹ ಲಾಕ್‌ಡೌನ್ ಇರುವ ಈ ಸಂದರ್ಭದಲ್ಲಿ ಇಷ್ಟು ದೂರ ಪ್ರಯಾಣ ಮಾಡುವುದು ನಿಜಕ್ಕೂ ಸಾಹಸವೇ ಹೌದು.
ಮೂಲ: ಪುತಿಯಥಲೈಮುರಾಯ್


Click it and Unblock the Notifications