ಲಾಕ್‌ಡೌನ್ ಎಫೆಕ್ಟ್: ನಾನ್ ಎಮರ್ಜೆನ್ಸಿ ರೋಗಿಗಳಿಗೆ ದೊರೆಯಲಿದೆ ಉಚಿತ ಕ್ಯಾಬ್ ಸೇವೆ

ಕೋವಿಡ್ -19 ವೈರಸ್ ಹರಡುವುದನ್ನು ತಡೆಯಲು ಎಲ್ಲಾ ದೇಶಗಳು ಹೆಣಗಾಡುತ್ತಿವೆ. ಈ ಮಾರಣಾಂತಿಕ ವೈರಸ್‌ನಿಂದ ಸಾವುನೋವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಭಾರತದಲ್ಲಿ ವೈರಸ್ ಹರಡುವುದನ್ನು ತಡೆಗಟ್ಟಲು ಮೇ 3ರವರೆಗೆ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ಲಾಕ್‌ಡೌನ್ ಎಫೆಕ್ಟ್: ನಾನ್ ಎಮರ್ಜೆನ್ಸಿ ರೋಗಿಗಳಿಗೆ ದೊರೆಯಲಿದೆ ಉಚಿತ ಕ್ಯಾಬ್ ಸೇವೆ

ಲಾಕ್‌ಡೌನ್ ಕಾರಣಕ್ಕೆ ಬಸ್ ಹಾಗೂ ರೈಲು ಸೇವೆಗಳನ್ನು ರದ್ದುಪಡಿಸಲಾಗಿದೆ. ಟ್ಯಾಕ್ಸಿ ಹಾಗೂ ಆಟೋಗಳು ಸಹ ಸಂಚರಿಸುತ್ತಿಲ್ಲ. ಜನರು ಅನಗತ್ಯವಾಗಿ ಹೊರಗೆ ಬರದಂತೆ ಸೂಚನೆ ನೀಡಲಾಗಿದೆ. ಅನುಮತಿ ಪಡೆದಿರುವವರು ಆಸ್ಪತ್ರೆ ಸೇರಿದಂತೆ ಅಗತ್ಯವಿರುವ ಕೆಲಸಗಳಿಗೆ ಹೊರಬರಬಹುದು.

ಲಾಕ್‌ಡೌನ್ ಎಫೆಕ್ಟ್: ನಾನ್ ಎಮರ್ಜೆನ್ಸಿ ರೋಗಿಗಳಿಗೆ ದೊರೆಯಲಿದೆ ಉಚಿತ ಕ್ಯಾಬ್ ಸೇವೆ

ಆದರೆ ಆಸ್ಪತ್ರೆಗಳಿಗೆ ಹೋಗಬೇಕಾದವರು ಪಾಸ್‌ಗಳನ್ನು ಪಡೆಯುವುದು ಅವಶ್ಯಕವಾಗಿದೆ. ಆದರೆ ಈ ಪಾಸ್‌ಗಳನ್ನು ಪಡೆಯಲು ಹಲವಾರು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ನೋಯ್ಡಾ-ದೆಹಲಿ ಗಡಿ ದಾಟಲು ಬೇಕಾಗಿರುವ ವಿಶೇಷ ಪಾಸ್ ಪಡೆಯಲು ನಾನಾ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಎಫೆಕ್ಟ್: ನಾನ್ ಎಮರ್ಜೆನ್ಸಿ ರೋಗಿಗಳಿಗೆ ದೊರೆಯಲಿದೆ ಉಚಿತ ಕ್ಯಾಬ್ ಸೇವೆ

ಕರೋನಾ ವೈರಸ್ ಹರಡುವುದನ್ನು ತಡೆಯಲು ನೋಯ್ಡಾ-ದೆಹಲಿ ಗಡಿಯನ್ನು ಬಂದ್ ಮಾಡಲಾಗಿದೆ. ರೋಗಿಗಳ ದೂರಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗೌತಮ ಬುದ್ಧನಗರ ಜಿಲ್ಲಾಡಳಿತವು ವಿಶೇಷ ವ್ಯವಸ್ಥೆಯನ್ನು ಮಾಡಿದೆ.

ಲಾಕ್‌ಡೌನ್ ಎಫೆಕ್ಟ್: ನಾನ್ ಎಮರ್ಜೆನ್ಸಿ ರೋಗಿಗಳಿಗೆ ದೊರೆಯಲಿದೆ ಉಚಿತ ಕ್ಯಾಬ್ ಸೇವೆ

ನಾನ್ ಎಮರ್ಜೆನ್ಸಿ ರೋಗಿಗಳಿಗೆ ನೋಯ್ಡಾದಿಂದ ದೆಹಲಿಗೆ ಪ್ರಯಾಣಿಸಲು ಉಚಿತ ಕ್ಯಾಬ್ ಸೇವೆಯನ್ನು ಒದಗಿಸಿದೆ. ಡಯಾಲಿಸಿಸ್ ಹಾಗೂ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ದೆಹಲಿಗೆ ತಲುಪಬೇಕಾದವರಿಗೆ ಉಚಿತ ಕ್ಯಾಬ್ ಸೇವೆಯನ್ನು ನೀಡಲಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಎಫೆಕ್ಟ್: ನಾನ್ ಎಮರ್ಜೆನ್ಸಿ ರೋಗಿಗಳಿಗೆ ದೊರೆಯಲಿದೆ ಉಚಿತ ಕ್ಯಾಬ್ ಸೇವೆ

ಗೌತಮ ಬುದ್ಧ ನಗರ ಜಿಲ್ಲಾಡಳಿತವು ಉಬರ್ ಕಂಪನಿಯ ಜೊತೆಗೆ ಮೈತ್ರಿ ಮಾಡಿಕೊಂಡಿದೆ. ಈ ಸೇವೆ ನೀಡಲು ಸಹಾಯವಾಣಿ ಸಂಖ್ಯೆಯನ್ನು ಸಹ ನೀಡಲಾಗಿದೆ. ರೋಗಿಗಳು 18004192211 ನಂಬರ್‌ಗೆ ಕರೆ ಮಾಡುವ ಮೂಲಕ ಈ ವಿಶೇಷ ಸೇವೆಯನ್ನು ಪಡೆಯಬಹುದು. ಈ ಸೇವೆಯನ್ನು ಪಡೆಯಲು ಬಯಸುವವರಿಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ.

ಲಾಕ್‌ಡೌನ್ ಎಫೆಕ್ಟ್: ನಾನ್ ಎಮರ್ಜೆನ್ಸಿ ರೋಗಿಗಳಿಗೆ ದೊರೆಯಲಿದೆ ಉಚಿತ ಕ್ಯಾಬ್ ಸೇವೆ

ಗೌತಮ ಬುದ್ಧ ನಗರ ಜಿಲ್ಲೆಯ ಅಧಿಕಾರಿಗಳ ಪ್ರಕಾರ ಈ ಸೇವೆಯನ್ನು ಪಡೆಯಲು ಬಯಸುವವರು ಪ್ರಿಸ್ಕ್ರಿಪ್ಷನ್ ಹಾಗೂ ಚಿಕಿತ್ಸೆ ಪಡೆಯುತ್ತಿರುವ ದಾಖಲೆಗಳನ್ನು ಸಲ್ಲಿಸಬೇಕು. ಈ ಸೇವೆಯನ್ನು ಪಡೆಯುವ ಒಂದು ದಿನ ಮೊದಲು ಅರ್ಜಿ ಸಲ್ಲಿಸಬೇಕು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಎಫೆಕ್ಟ್: ನಾನ್ ಎಮರ್ಜೆನ್ಸಿ ರೋಗಿಗಳಿಗೆ ದೊರೆಯಲಿದೆ ಉಚಿತ ಕ್ಯಾಬ್ ಸೇವೆ

ಇದರಿಂದಾಗಿ ಅನಗತ್ಯ ಗೊಂದಲ ಹಾಗೂ ತೊಂದರೆಗಳು ಉಂಟಾಗುವುದು ತಪ್ಪುತ್ತದೆ. ಈ ಸೇವೆಯನ್ನು ನಾನ್ ಎಮರ್ಜೆನ್ಸಿ ರೋಗಿಗಳಿಗೆ ಮಾತ್ರ ನೀಡಲಾಗುತ್ತದೆ. ಎಮರ್ಜೆನ್ಸಿ ರೋಗಿಗಳು ಆಂಬ್ಯುಲೆನ್ಸ್‌ಗಳನ್ನು ಬಳಸಿಕೊಳ್ಳಬಹುದು. ಗೌತಮ ಬುದ್ಧ ನಗರ ಜಿಲ್ಲಾಡಳಿತದ ಈ ಕ್ರಮದಿಂದ ಹಲವು ರೋಗಿಗಳಿಗೆ ಪ್ರಯೋಜನವಾಗುವ ನಿರೀಕ್ಷೆಗಳಿವೆ.

ಲಾಕ್‌ಡೌನ್ ಎಫೆಕ್ಟ್: ನಾನ್ ಎಮರ್ಜೆನ್ಸಿ ರೋಗಿಗಳಿಗೆ ದೊರೆಯಲಿದೆ ಉಚಿತ ಕ್ಯಾಬ್ ಸೇವೆ

ಗೌತಮ ಬುದ್ಧ ನಗರ ಜಿಲ್ಲಾ ಆಡಳಿತವು ನೋಯ್ಡಾ ಹಾಗೂ ದೆಹಲಿ ನಡುವೆ ಜನರ ಓಡಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಿದೆ. ಪತ್ರಕರ್ತರು, ವೈದ್ಯರು ಹಾಗೂ ಕೋವಿಡ್ -19ರ ಅಗತ್ಯ ಕಾರ್ಯಗಳಲ್ಲಿ ತೊಡಗಿರುವವರಿಗೆ ವಿನಾಯಿತಿ ನೀಡಲಾಗಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಎಫೆಕ್ಟ್: ನಾನ್ ಎಮರ್ಜೆನ್ಸಿ ರೋಗಿಗಳಿಗೆ ದೊರೆಯಲಿದೆ ಉಚಿತ ಕ್ಯಾಬ್ ಸೇವೆ

ಇದರ ಜೊತೆಗೆ ಸರಕು ಸಾಗಣೆಗೂ ವಿನಾಯಿತಿ ನೀಡಲಾಗಿದೆ. ಕರೋನಾ ವೈರಸ್ ಹರಡುವುದನ್ನು ತಡೆಯುವುದು ಇದರ ಹಿಂದಿರುವ ಉದ್ದೇಶವಾಗಿದೆ. ಅಂದ ಹಾಗೆ ದೆಹಲಿಯು ಹೆಚ್ಚಿನ ಸಂಖ್ಯೆಯಲ್ಲಿ ಕರೋನಾ ವೈರಸ್ ಸೋಂಕಿತರನ್ನು ಹೊಂದಿದೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.

Most Read Articles

Kannada
English summary
Free taxi service from Noida to Delhi for non emergency patients. Read in Kannada.
Story first published: Wednesday, April 29, 2020, 10:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more