ಕದ್ದ ಬೈಕ್ ಅನ್ನು ಪಾರ್ಸೆಲ್ ಮೂಲಕ ಮರಳಿಸಿದ ವಲಸೆ ಕಾರ್ಮಿಕ

ಕರೋನಾ ವೈರಸ್ ಪ್ರಪಂಚದಾದ್ಯಂತ ಜನ ಜೀವನವನ್ನು ತತ್ತರಿಸುವಂತೆ ಮಾಡಿದೆ. ಕರೋನಾ ವೈರಸ್ ಹರಡುವುದನ್ನು ತಡೆಯಲು ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದಾಗಿ ಲಕ್ಷಾಂತರ ಜನರು ನಿರುದ್ಯೋಗಿಗಳಾಗಿದ್ದಾರೆ.

ಕದ್ದ ಬೈಕ್ ಅನ್ನು ಪಾರ್ಸೆಲ್ ಮೂಲಕ ಮರಳಿಸಿದ ವಲಸೆ ಕಾರ್ಮಿಕ

ಮುಂಬರುವ ದಿನಗಳಲ್ಲಿ ಆರ್ಥಿಕ ಸ್ಥಿತಿಯು ಚೇತರಿಸಿಕೊಳ್ಳದಿದ್ದರೆ ಇನ್ನೂ ಅನೇಕ ಜನರು ಕೆಲಸ ಕಳೆದುಕೊಳ್ಳುವ ನಿರೀಕ್ಷೆಗಳಿವೆ. ಲಾಕ್‌ಡೌನ್‌ನಿಂದ ಎಲ್ಲಾ ರೀತಿಯ ಸಾರಿಗೆ ಸೇವೆಗಳನ್ನು ರದ್ದುಪಡಿಸಿದ ಕಾರಣಕ್ಕೆ ಬೇರೆ ಊರುಗಳಲ್ಲಿ ಸಿಲುಕಿದ್ದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ವಾಪಸಾಗಲು ಮುಂದಾದರು.

ಕದ್ದ ಬೈಕ್ ಅನ್ನು ಪಾರ್ಸೆಲ್ ಮೂಲಕ ಮರಳಿಸಿದ ವಲಸೆ ಕಾರ್ಮಿಕ

ಕೆಲವರು ಕಾಲ್ನಡಿಗೆಯಲ್ಲಿಯೇ ಸಾವಿರಾರು ಕಿಲೋಮೀಟರ್ ದೂರ ನಡೆದರೆ, ಇನ್ನೂ ಕೆಲವರು ಸೈಕಲ್ ಹಾಗೂ ಬೈಕ್‌ಗಳಲ್ಲಿ ತಮ್ಮ ತಮ್ಮ ಊರುಗಳಿಗೆ ವಾಪಸಾದರು. ಯಾವುದೇ ರೀತಿಯ ವಾಹನಗಳನ್ನು ಹೊಂದಿಲ್ಲದವರು ಬೇರೆಯವರ ವಾಹನಗಳನ್ನು ಕದ್ದು ಊರುಗಳಿಗೆ ಮರಳಿದರು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕದ್ದ ಬೈಕ್ ಅನ್ನು ಪಾರ್ಸೆಲ್ ಮೂಲಕ ಮರಳಿಸಿದ ವಲಸೆ ಕಾರ್ಮಿಕ

ಕೆಲ ದಿನಗಳ ಹಿಂದೆ ಉತ್ತರ ಭಾರತದಲ್ಲಿ ಕಾರ್ಮಿಕನೊಬ್ಬ ಉದ್ಯಮಿಯೊಬ್ಬರ ಮನೆಯಿಂದ ಸೈಕಲ್ ಕದ್ದು ತನ್ನ ಊರು ತಲುಪಿದ್ದ. ಊರು ತಲುಪಿದ ನಂತರ ಆ ಉದ್ಯಮಿಯವರಿಗೆ ಕ್ಷಮಾಯಾಚನೆ ಪತ್ರ ಬರೆದಿದ್ದ. ಇದೇ ರೀತಿಯ ಮತ್ತೊಂದು ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಕದ್ದ ಬೈಕ್ ಅನ್ನು ಪಾರ್ಸೆಲ್ ಮೂಲಕ ಮರಳಿಸಿದ ವಲಸೆ ಕಾರ್ಮಿಕ

ಆದರೆ ಈ ಕಾರ್ಮಿಕ ಕ್ಷಮಾಯಾಚನೆ ಪತ್ರಕ್ಕೆ ಬದಲು ಬೈಕ್‌ ಅನ್ನು ಪಾರ್ಸಲ್‌ ಮೂಲಕ ಹಿಂದಿರುಗಿಸಿದ್ದಾನೆ. ಕೊಯಮತ್ತೂರಿನ ಸುಲೂರಿನಲ್ಲಿ ಲೆಥ್ ನಡೆಸುತ್ತಿರುವ ಸುರೇಶ್ ಕುಮಾರ್‌ರವರ ಬೈಕ್ ಮೇ 18ರಂದು ಕಳುವಾಗಿತ್ತು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಕದ್ದ ಬೈಕ್ ಅನ್ನು ಪಾರ್ಸೆಲ್ ಮೂಲಕ ಮರಳಿಸಿದ ವಲಸೆ ಕಾರ್ಮಿಕ

ಸುರೇಶ್ ಕುಮಾರ್‌ರವರು ಕಳುವಾದ ಬೈಕ್ ಅನ್ನು ಹುಡುಕಿದರೂ, ಬೈಕ್ ಸಿಗದ ಕಾರಣ ದೂರು ನೀಡಲು ಪೊಲೀಸ್ ಠಾಣೆಗೆ ಹೋದರು. ಆದರೆ ಪೊಲೀಸರು ಕರೋನಾ ವೈರಸ್‌ ನಿಯಂತ್ರಿಸುವ ಕಾರ್ಯದಲ್ಲಿ ಮಗ್ನರಾಗಿದ್ದ ಕಾರಣಕ್ಕೆ ಕೈಚೆಲ್ಲಿದರು.

ಕದ್ದ ಬೈಕ್ ಅನ್ನು ಪಾರ್ಸೆಲ್ ಮೂಲಕ ಮರಳಿಸಿದ ವಲಸೆ ಕಾರ್ಮಿಕ

ಸುರೇಶ್ ಕುಮಾರ್‌ರವರೇ ಸ್ವತಃ ಕಳುವಾದ ಬೈಕ್ ಬಗ್ಗೆ ತನಿಖೆ ಮಾಡಲು ಮುಂದಾಗಿದ್ದಾರೆ. ಬೈಕ್ ಕಳುವಾದ ಪ್ರದೇಶದಲ್ಲಿದ್ದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ದೃಶ್ಯಗಳಲ್ಲಿ ತಮ್ಮ ವರ್ಕ್‌ಶಾಪ್ ಬಳಿಯಿರುವ ಚಹಾ ಅಂಗಡಿಯಲ್ಲಿ ಕೆಲಸ ಮಾಡುವ ಪ್ರಶಾಂತ್ ಎಂಬುವವನು ಬೈಕ್ ಕದ್ದಿರುವುದು ಕಂಡು ಬಂದಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕದ್ದ ಬೈಕ್ ಅನ್ನು ಪಾರ್ಸೆಲ್ ಮೂಲಕ ಮರಳಿಸಿದ ವಲಸೆ ಕಾರ್ಮಿಕ

ಚಹಾ ಅಂಗಡಿಯ ಉದ್ಯೋಗಿ ಪ್ರಶಾಂತ್ ಮನ್ನಾರ್ಗುಡಿ ಮೂಲದವನು. ಲಾಕ್‌ಡೌನ್ ಕಾರಣದಿಂದ ಕೆಲಸ ಕಳೆದುಕೊಂಡ ಪ್ರಶಾಂತ್ 300 ಕಿ.ಮೀ ದೂರದಲ್ಲಿದ್ದ ತನ್ನ ಊರಿಗೆ ವಾಪಸಾಗಲು ನಿರ್ಧರಿಸಿದ್ದಾನೆ. ಯಾವುದೇ ಸಾರಿಗೆ ಸೇವೆಗಳು ಹಾಗೂ ತನ್ನ ಬಳಿಯೂ ಯಾವುದೇ ವಾಹನವಿಲ್ಲದ ಕಾರಣಕ್ಕೆ, ಪ್ರಶಾಂತ್ ಬೈಕ್ ಕದಿಯುವ ನಿರ್ಧಾರಕ್ಕೆ ಬಂದಿದ್ದಾನೆ.

ಕದ್ದ ಬೈಕ್ ಅನ್ನು ಪಾರ್ಸೆಲ್ ಮೂಲಕ ಮರಳಿಸಿದ ವಲಸೆ ಕಾರ್ಮಿಕ

ಈ ಕಾರಣಕ್ಕೆ ಸುರೇಶ್ ಕುಮಾರ್‌ರವರ ಬೈಕ್ ಕದ್ದಿದ್ದಾನೆ. ಕದ್ದ ಬೈಕಿನಲ್ಲಿ ಪ್ರಶಾಂತ್‌ ತನ್ನ ಹೆಂಡತಿ ಹಾಗೂ ಮಗುವನ್ನು ಮನ್ನಾರ್ಗುಡಿಗೆ ಕರೆದೊಯ್ದಿದ್ದಾನೆ. ತನ್ನ ಊರು ತಲುಪಿದ ನಂತರ ಬೈಕ್‌ ಕಳ್ಳತನದ ಬಗ್ಗೆ ಸುರೇಶ್ ಕುಮಾರ್‌ ತನಿಖೆ ನಡೆಸುತ್ತಿರುವ ವಿಷಯ ಆತನ ಸಹೋದ್ಯೋಗಿಯೊಬ್ಬರಿಂದ ಪ್ರಶಾಂತ್‌ಗೆ ತಿಳಿದುಬಂದಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಕದ್ದ ಬೈಕ್ ಅನ್ನು ಪಾರ್ಸೆಲ್ ಮೂಲಕ ಮರಳಿಸಿದ ವಲಸೆ ಕಾರ್ಮಿಕ

ಆದ್ದರಿಂದ ಸುರೇಶ್ ಕುಮಾರ್‌ರವರಿಗೆ ಅವರ ಬೈಕ್ ಅನ್ನು ಹಸ್ತಾಂತರಿಸಲು ಪ್ರಶಾಂತ್ ನಿರ್ಧರಿಸಿದ್ದಾನೆ. ಪೊಲೀಸರಿಗೆ ಸಿಕ್ಕಿಹಾಕಿಕೊಳ್ಳಬಹುದೆಂಬ ಭಯದಿಂದ ಈ ನಿರ್ಧಾರಕ್ಕೆ ಬಂದನೋ ಅಥವಾ ಕದ್ದಿದ್ದು ತಪ್ಪು ಎಂಬ ಭಾವನೆಯಿಂದ ಈ ನಿರ್ಧಾರಕ್ಕೆ ಬಂದನೋ ತಿಳಿದುಬಂದಿಲ್ಲ.

ಕದ್ದ ಬೈಕ್ ಅನ್ನು ಪಾರ್ಸೆಲ್ ಮೂಲಕ ಮರಳಿಸಿದ ವಲಸೆ ಕಾರ್ಮಿಕ

ನೇರವಾಗಿ ಪಾರ್ಸೆಲ್ ಕಚೇರಿಗೆ ಹೋದ ಪ್ರಶಾಂತ್ ಕದ್ದ ಬೈಕಿನಲ್ಲಿದ್ದ ಆರ್‌ಸಿ ಬುಕ್‌ನಲ್ಲಿದ್ದ ವಿಳಾಸಕ್ಕೆ ಬೈಕ್ ಅನ್ನು ಕಳುಹಿಸಿದ್ದಾನೆ. ಮೇ 30ರಂದು ಸುರೇಶ್ ಕುಮಾರ್‌ರವರಿಗೆ ಪಾರ್ಸೆಲ್ ಏಜೆನ್ಸಿಯಿಂದ ದೂರವಾಣಿ ಕರೆ ಬಂದಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಕದ್ದ ಬೈಕ್ ಅನ್ನು ಪಾರ್ಸೆಲ್ ಮೂಲಕ ಮರಳಿಸಿದ ವಲಸೆ ಕಾರ್ಮಿಕ

ಪಾರ್ಸೆಲ್ ಕಚೇರಿಗೆ ತೆರಳಿದ ಸುರೇಶ್ ಕುಮಾರ್‌ರವರು ಲಗೇಜ್ ಹಾಗೂ ಪ್ಯಾಕೇಜಿಂಗ್ ಶುಲ್ಕವೆಂದು ರೂ.1,400 ಪಾವತಿಸಿ ಬೈಕ್ ಪಡೆದಿದ್ದಾರೆ. ಬೈಕ್ ಹಿಂಪಡೆದ ಬಗ್ಗೆ ಮಾತನಾಡಿದ ಸುರೇಶ್ ಕುಮಾರ್ ಬೈಕಿಗೆ ಯಾವುದೇ ಹಾನಿಯಾಗಿಲ್ಲ. ಪೊಲೀಸರಿಗೆ ನೀಡಿರುವ ದೂರನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಹೇಳಿದ್ದಾರೆ.

ಕದ್ದ ಬೈಕ್ ಅನ್ನು ಪಾರ್ಸೆಲ್ ಮೂಲಕ ಮರಳಿಸಿದ ವಲಸೆ ಕಾರ್ಮಿಕ

ಸುರೇಶ್ ಕುಮಾರ್‌ರವರ ಅದೃಷ್ಟಕ್ಕೆ ಅವರ ಬೈಕ್ ಅವರಿಗೆ ಮರಳಿ ಸಿಕ್ಕಿದೆ. ಎಲ್ಲರೂ ಸುರೇಶ್ ಕುಮಾರ್‌ರವರಂತೆ ಅದೃಷ್ಟವಂತರಾಗಿರುವುದಿಲ್ಲ. ತಮ್ಮ ವಾಹನಗಳನ್ನು ಪಾರ್ಕ್ ಮಾಡುವಾಗ ವಾಹನ ಮಾಲೀಕರು ಸಾಕಷ್ಟು ಮುಂಜಾಗೃತೆ ವಹಿಸುವುದು ಅವಶ್ಯಕ.

Article Published On: Tuesday, June 2, 2020, 9:40 [IST]
English summary
Covid 19 Lockdown migrant worker steals bike to reach home travels 300 km and returns bike. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+