ಲಾಕ್‌ಡೌನ್ ಸಂಕಷ್ಟ: ಊರು ತಲುಪಲು ಸೈಕಲ್ ಕದ್ದ ಕಾರ್ಮಿಕ, ಮುಂದೆ ಆಗಿದ್ದೇನು?

ಹಳ್ಳಿಗಳ ಜನರು ಉದ್ಯೋಗವನ್ನು ಅರಸಿ ಹಳ್ಳಿಗಳನ್ನು ತೊರೆದು ನಗರಗಳಲ್ಲಿ ವಾಸಿಸುವುದು ಸಹಜ. ಆದರೆ ಕರೋನಾ ವೈರಸ್ ಎಲ್ಲರ ಜೀವನವನ್ನು ತಲೆಕೆಳಗು ಮಾಡಿದೆ. ಕರೋನಾ ವೈರಸ್ ಎಲ್ಲರ ಜೀವನ, ಲೆಕ್ಕಾಚಾರಗಳನ್ನು ಬದಲಿಸಿ, ಹಲವು ಹೊಸ ಹೊಸ ಘಟನೆಗಳಿಗೆ ಸಾಕ್ಷಿಯಾಗುತ್ತಿದೆ.

ಲಾಕ್‌ಡೌನ್ ಸಂಕಷ್ಟ: ಊರು ತಲುಪಲು ಸೈಕಲ್ ಕದ್ದ ಕಾರ್ಮಿಕ, ಮುಂದೆ ಆಗಿದ್ದೇನು?

ನಗರಗಳಿಗೆ ವಲಸೆ ಹೋಗಿದ್ದ ಲಕ್ಷಾಂತರ ಕಾರ್ಮಿಕರು ಈಗ ತಮ್ಮ ತಮ್ಮ ಊರುಗಳಿಗೆ ವಾಪಸ್ ಆಗುತ್ತಿದ್ದಾರೆ. ಕರೋನಾ ವೈರಸ್ ಹರಡದಂತೆ ತಡೆಯುವ ಉದ್ದೇಶದಿಂದ ಜಾರಿಗೊಳಿಸಲಾಗಿದ್ದ ಲಾಕ್‌ಡೌನ್ ಅನೇಕ ಕಾರ್ಮಿಕರ ಕೆಲಸವನ್ನು ಕಸಿದುಕೊಂಡಿದೆ. ಕರೋನಾ ವೈರಸ್ ಕಟ್ಟಡ ನಿರ್ಮಾಣ, ಕಾರ್ಖಾನೆ, ಹೋಟೆಲ್‌, ಬೇಕರಿ ಹಾಗೂ ಚಹಾ ಅಂಗಡಿಗಳ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ.

ಲಾಕ್‌ಡೌನ್ ಸಂಕಷ್ಟ: ಊರು ತಲುಪಲು ಸೈಕಲ್ ಕದ್ದ ಕಾರ್ಮಿಕ, ಮುಂದೆ ಆಗಿದ್ದೇನು?

ಇದರಿಂದಾಗಿ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ವಾಪಸ್ ಆಗಲು ಮುಂದಾದರು. ಆದರೆ ಲಾಕ್‌ಡೌನ್ ಕಾರಣದಿಂದಾಗಿ ಮಾರ್ಚ್ 24ರಿಂದ ಸಾರ್ವಜನಿಕ ಸಾರಿಗೆಗಳನ್ನು ರದ್ದುಪಡಿಸಲಾಗಿದೆ. ಸಾರ್ವಜನಿಕ ಸಾರಿಗೆ ವಾಹನಗಳಾದ ಬಸ್, ರೈಲು, ವಿಮಾನ, ಆಟೋ, ಟ್ಯಾಕ್ಸಿಗಳ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಸಂಕಷ್ಟ: ಊರು ತಲುಪಲು ಸೈಕಲ್ ಕದ್ದ ಕಾರ್ಮಿಕ, ಮುಂದೆ ಆಗಿದ್ದೇನು?

ಈ ಕಾರಣಕ್ಕೆ ಹಲವಾರು ಜನರು ತಮ್ಮ ಬಳಿಯಿರುವ ಸೈಕಲ್‌ಗಳಲ್ಲಿಯೇ ಸಾವಿರಾರು ಕಿಲೋಮೀಟರ್‌ ದೂರದಲ್ಲಿರುವ ಊರುಗಳನ್ನು ತಲುಪುತ್ತಿದ್ದಾರೆ. ಲಾಕ್‌ಡೌನ್ ಕಾರಣಕ್ಕೆ ಕಾರು ಹಾಗೂ ಬೈಕುಗಳಲ್ಲಿ ಪ್ರಯಾಣ ಮಾಡುವುದಕ್ಕೆ ವಿಶೇಷ ಅನುಮತಿ ಪಡೆಯಬೇಕಾಗುತ್ತದೆ.

ಲಾಕ್‌ಡೌನ್ ಸಂಕಷ್ಟ: ಊರು ತಲುಪಲು ಸೈಕಲ್ ಕದ್ದ ಕಾರ್ಮಿಕ, ಮುಂದೆ ಆಗಿದ್ದೇನು?

ಇಲ್ಲದಿದ್ದರೆ, ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಆದರೆ ಬಡ ಕಾರ್ಮಿಕರ ಬಳಿ ಕಾರ್ ಆಗಲಿ ಅಥವಾ ಬೈಕ್ ಆಗಲಿ ಇಲ್ಲದಿರುವುದರಿಂದ, ಅವರು ಸೈಕಲ್ ಮೂಲಕವೇ ಪ್ರಯಾಣಿಸುತ್ತಿದ್ದಾರೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಸಂಕಷ್ಟ: ಊರು ತಲುಪಲು ಸೈಕಲ್ ಕದ್ದ ಕಾರ್ಮಿಕ, ಮುಂದೆ ಆಗಿದ್ದೇನು?

ಆದರೆ ಸ್ವಂತ ಸೈಕಲ್ ಸಹ ಹೊಂದಿರದ ಕೂಲಿ ಕಾರ್ಮಿಕನೊಬ್ಬ ತನ್ನ ಊರು ತಲುಪಲು ಬೇರೆಯವರ ಸೈಕಲ್ ಕದ್ದಿದ್ದಾನೆ. ರಾಜಸ್ಥಾನದ ಭರತ್‌ಪುರದಲ್ಲಿ ಕೂಲಿ ಕಾರ್ಮಿಕನಾಗಿರುವ ಮುಹಮ್ಮದ್ ಇಕ್ಬಾಲ್ ಎಂಬಾತನೇ ಸೈಕಲ್ ಕದ್ದವನು. ಆತನ ಹುಟ್ಟೂರು ಉತ್ತರ ಪ್ರದೇಶದ ಬರೇಲಿ.

ಲಾಕ್‌ಡೌನ್ ಸಂಕಷ್ಟ: ಊರು ತಲುಪಲು ಸೈಕಲ್ ಕದ್ದ ಕಾರ್ಮಿಕ, ಮುಂದೆ ಆಗಿದ್ದೇನು?

ಲಾಕ್‌ಡೌನ್ ಕಾರಣದಿಂದಾಗಿ ಆತ ಭರತ್‌ಪುರದಲ್ಲಿ ಸಂಕಷ್ಟವನ್ನು ಎದುರಿಸಬೇಕಾಯಿತು. ಬರೇಲಿಗೆ ಹೋಗಲು ನಿರ್ಧರಿಸಿದ ಆತನ ಬಳಿ ಯಾವುದೇ ವಾಹನವಿರಲಿಲ್ಲ. ತನ್ನ ಮಗನೊಂದಿಗೆಬರೇಲಿಗೆ ಹೊರಟ, ಮೊಹಮ್ಮದ್ ಇಕ್ಬಾಲ್ ಭರತ್‌ಪುರದ ರಾರಾ ಗ್ರಾಮದ ಸಹಾಬ್ ಸಿಂಗ್ ಅವರ ಮನೆಯಲ್ಲಿ ನಿಲ್ಲಿಸಿದ್ದ ಸೈಕಲ್ ಅನ್ನು ಕದ್ದಿದ್ದಾನೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಸಂಕಷ್ಟ: ಊರು ತಲುಪಲು ಸೈಕಲ್ ಕದ್ದ ಕಾರ್ಮಿಕ, ಮುಂದೆ ಆಗಿದ್ದೇನು?

ಆತನ ಊರು ಭರತ್‌ಪುರದಿಂದ 250 ಕಿಲೋಮೀಟರ್ ದೂರದಲ್ಲಿದೆ. ಸೈಕಲ್ ಕದ್ದ ನಂತರ ಅಷ್ಟಕ್ಕೇ ಸುಮ್ಮನಾಗದ ಮೊಹಮ್ಮದ್ ಇಕ್ಬಾಲ್ ಕ್ಷಮಾಪಣಾ ಪತ್ರವೊಂದನ್ನು ಬರೆದು ಸೈಕಲ್ ಕದ್ದ ಜಾಗದಲ್ಲಿ ಇಟ್ಟಿದ್ದಾನೆ.

ಲಾಕ್‌ಡೌನ್ ಸಂಕಷ್ಟ: ಊರು ತಲುಪಲು ಸೈಕಲ್ ಕದ್ದ ಕಾರ್ಮಿಕ, ಮುಂದೆ ಆಗಿದ್ದೇನು?

ಆ ಪತ್ರದಲ್ಲಿ, ನಾನೊಬ್ಬ ಸಾಮಾನ್ಯ ಕೂಲಿ ಕೆಲಸ ಮಾಡುವವನು. ನನ್ನ ಊರಿಗೆ ಹೋಗಲು ಬೇರೆ ದಾರಿ ಕಾಣದೇ ಅಸಹಾಯಕನಾಗಿ ನಿಮ್ಮ ಸೈಕಲ್ ಕದ್ದಿದ್ದೇನೆ. ನನ್ನ ಮಗನ ಜೊತೆಗೆ ಊರಿಗೆ ಹೋಗಬೇಕಾದ ಕಾರಣಕ್ಕೆ ಈ ಕೆಲಸಕ್ಕೆ ಇಳಿದೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಹೇಳಿದ್ದಾನೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಸಂಕಷ್ಟ: ಊರು ತಲುಪಲು ಸೈಕಲ್ ಕದ್ದ ಕಾರ್ಮಿಕ, ಮುಂದೆ ಆಗಿದ್ದೇನು?

ಕರೋನಾ ವೈರಸ್ ಹರಡದಂತೆ ಜಾರಿಗೊಳಿಸಲಾದ ಲಾಕ್‌ಡೌನ್ ಕಾರ್ಮಿಕರ ಜೀವನದ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದಕ್ಕೆ ಈ ಘಟನೆ ಒಂದು ಉದಾಹರಣೆಯಾಗಿದೆ. ಪ್ರತಿದಿನ ಇದೇ ರೀತಿಯ ಹಲವು ಘಟನೆಗಳು ನಡೆಯುತ್ತಿವೆ.

ಲಾಕ್‌ಡೌನ್ ಸಂಕಷ್ಟ: ಊರು ತಲುಪಲು ಸೈಕಲ್ ಕದ್ದ ಕಾರ್ಮಿಕ, ಮುಂದೆ ಆಗಿದ್ದೇನು?

ಲಾಕ್‌ಡೌನ್‌ನಿಂದ ಹೆಚ್ಚು ತೊಂದರೆಗೆ ಒಳಗಾಗುತ್ತಿರುವವರಲ್ಲಿ ಹೊರ ರಾಜ್ಯದ ಕಾರ್ಮಿಕರು ಸೇರಿದ್ದಾರೆ. ಈಗ ಪರಿಸ್ಥಿತಿ ಬದಲಾಗಿದ್ದು, ಕೇಂದ್ರ ಸರ್ಕಾರ ಹಾಗೂ ಆಯಾ ರಾಜ್ಯ ಸರ್ಕಾರಗಳು ಹೊರ ರಾಜ್ಯಗಳ ಕಾರ್ಮಿಕರನ್ನು ಅವರ ಊರುಗಳಿಗೆ ಕಳುಹಿಸಲು ಕ್ರಮ ಕೈಗೊಳ್ಳುತ್ತಿವೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.

Article Published On: Monday, May 18, 2020, 11:02 [IST]
English summary
Rajasthan labourer steals a cycle to reach UP, leaves a apology letter. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+