ಲಾಕ್‌ಡೌನ್ ನಡುವೆಯೂ ಬುದ್ದಿ ಕಲಿಯದ ಜನ, ಅತಿ ವೇಗದಿಂದ ಹೆಚ್ಚಾದ ರಸ್ತೆ ಅಪಘಾತಗಳು..!

ರಸ್ತೆ ಅಪಘಾತಗಳಿಂದಾಗಿ ನಮ್ಮ ದೇಶದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ಸಾವು ನೋವುಗಳು ಸಂಭವಿಸುತ್ತವೆ. ಭಾರತದಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳಿಂದ 1.50 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ. ರಸ್ತೆ ಅಪಘಾತಗಳನ್ನು ಕಡಿಮೆಗೊಳಿಸಲು ಸರ್ಕಾರವು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿದೆ.

ಲಾಕ್‌ಡೌನ್ ನಡುವೆಯೂ ಬುದ್ದಿ ಕಲಿಯದ ಜನ, ಅತಿ ವೇಗದಿಂದ ಹೆಚ್ಚಾದ ರಸ್ತೆ ಅಪಘಾತಗಳು..!

ರಸ್ತೆ ಅಪಘಾತಗಳಿಗೆ ಸಂಚಾರ ನಿಯಮಗಳ ಉಲ್ಲಂಘನೆಯು ಪ್ರಮುಖ ಕಾರಣವಾಗಿದೆ. ಸಂಚಾರ ನಿಯಮಗಳ ಉಲ್ಲಂಘನೆಯನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ದಂಡದ ಪ್ರಮಾಣವನ್ನು ಹೆಚ್ಚಿಸಿ ಹೊಸ ಮೋಟಾರು ವಾಹನ ಕಾಯ್ದೆಯನ್ನು 2019ರ ಸೆಪ್ಟೆಂಬರ್ 1ರಿಂದ ಜಾರಿಗೆ ತಂದಿದೆ. ತೀವ್ರ ವಿರೋಧದ ನಡುವೆಯೂ ದಂಡದ ಪ್ರಮಾಣವನ್ನು ಹಲವಾರು ಪಟ್ಟು ಹೆಚ್ಚಿಸಲಾಗಿದೆ.

ಲಾಕ್‌ಡೌನ್ ನಡುವೆಯೂ ಬುದ್ದಿ ಕಲಿಯದ ಜನ, ಅತಿ ವೇಗದಿಂದ ಹೆಚ್ಚಾದ ರಸ್ತೆ ಅಪಘಾತಗಳು..!

ರಸ್ತೆ ಅಪಘಾತಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಲಾಕ್‌ಡೌನ್ ಅವಧಿಯಲ್ಲಿ ಸಂಭವಿಸಿದ ಅಪಘಾತಗಳ ಅಂಕಿಅಂಶಗಳನ್ನು ಈಗ ಬಿಡುಗಡೆಗೊಳಿಸಲಾಗಿದೆ. ಮಾರಣಾಂತಿಕ ಕರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಭಾರತದಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ನಡುವೆಯೂ ಬುದ್ದಿ ಕಲಿಯದ ಜನ, ಅತಿ ವೇಗದಿಂದ ಹೆಚ್ಚಾದ ರಸ್ತೆ ಅಪಘಾತಗಳು..!

ಮೊದಲ ಹಂತದ ಲಾಕ್‌ಡೌನ್ ಅನ್ನು ಮಾರ್ಚ್ 24ರಿಂದ ಏಪ್ರಿಲ್ 14ರವರೆಗೆ ಜಾರಿಗೊಳಿಸಲಾಗಿತ್ತು. ಕೋವಿಡ್ -19 ವೈರಸ್ ಹರಡುವಿಕೆ ನಿಯಂತ್ರಣಕ್ಕೆ ಬಾರದ ಕಾರಣ ಮೇ 3ರವರೆಗೆ ವಿಸ್ತರಿಸಲಾಯಿತು. ಮೂರನೇ ಹಂತದ ಲಾಕ್‌ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ.

ಲಾಕ್‌ಡೌನ್ ನಡುವೆಯೂ ಬುದ್ದಿ ಕಲಿಯದ ಜನ, ಅತಿ ವೇಗದಿಂದ ಹೆಚ್ಚಾದ ರಸ್ತೆ ಅಪಘಾತಗಳು..!

ಸೇವ್‌ಲೈಫ್ ಫೌಂಡೇಶನ್ 2 ಹಂತದ ಲಾಕ್‌ಡೌನ್ ವೇಳೆಯಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿಅಂಶಗಳನ್ನು ಬಿಡುಗಡೆಗೊಳಿಸಿದೆ. ಈ ವರದಿಯ ಪ್ರಕಾರ, ಮಾರ್ಚ್ 24 ರಿಂದ ಮೇ 3ರವರೆಗೆ ಭಾರತದಲ್ಲಿ 600ಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿವೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ನಡುವೆಯೂ ಬುದ್ದಿ ಕಲಿಯದ ಜನ, ಅತಿ ವೇಗದಿಂದ ಹೆಚ್ಚಾದ ರಸ್ತೆ ಅಪಘಾತಗಳು..!

ಲಾಕ್‌ಡೌನ್‌ನ ಮೊದಲ 40 ದಿನಗಳ ಅವಧಿಯಲ್ಲಿ ಭಾರತವು 600ಕ್ಕೂ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಲ್ಲಿ 30%ನಷ್ಟು ಜನರು ಮನೆಗೆ ಮರಳುತ್ತಿದ್ದವರು. ಲಾಕ್‌ಡೌನ್‌ ಸಮಯದಲ್ಲಿ ನಡೆದ ಈ ರಸ್ತೆ ಅಪಘಾತಗಳಲ್ಲಿ 57%ನಷ್ಟು ಜನರು ವೇಗವಾಗಿ ವಾಹನ ಚಾಲನೆ ಮಾಡಿ ಸಾವನ್ನಪ್ಪಿದ್ದಾರೆ.

ಲಾಕ್‌ಡೌನ್ ನಡುವೆಯೂ ಬುದ್ದಿ ಕಲಿಯದ ಜನ, ಅತಿ ವೇಗದಿಂದ ಹೆಚ್ಚಾದ ರಸ್ತೆ ಅಪಘಾತಗಳು..!

ಭಾರತದಲ್ಲಿ ನಡೆಯುವ ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣ ವಾಹನ ಚಾಲಕರ ಹೆಚ್ಚಿನ ವೇಗ. ಲಾಕ್‌ಡೌನ್‌ ಅವಧಿಯಲ್ಲಿ ಬಸ್ಸು, ಆಟೋ, ಟ್ಯಾಕ್ಸಿ ಸೇರಿದಂತೆ ಎಲ್ಲಾ ರೀತಿಯ ಸಾರಿಗೆ ಸೇವೆಗಳನ್ನು ರದ್ದುಪಡಿಸಲಾಗಿತ್ತು. ಇದರ ಜೊತೆಗೆ ಖಾಸಗಿ ಕಾರು ಹಾಗೂ ದ್ವಿಚಕ್ರ ವಾಹನಗಳ ಸಂಚಾರವನ್ನು ಸಹ ನಿರ್ಬಂಧಿಸಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ನಡುವೆಯೂ ಬುದ್ದಿ ಕಲಿಯದ ಜನ, ಅತಿ ವೇಗದಿಂದ ಹೆಚ್ಚಾದ ರಸ್ತೆ ಅಪಘಾತಗಳು..!

ವಿನಾಕಾರಣ ಹೊರ ಬರುವ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ. ವಾಹನಗಳ ಸಂಚಾರವನ್ನು ನಿಷೇಧಿಸಿದ್ದ ಕಾರಣಕ್ಕೆ ವಾಹನ ಚಾಲಕರು ಅತಿ ವೇಗವಾಗಿ ವಾಹನ ಚಾಲನೆ ಮಾಡಿದ್ದಾರೆ. ಇದರಿಂದಾಗಿ ಸಾವುನೋವುಗಳ ಸಂಖ್ಯೆ ಹೆಚ್ಚಾಗಿದೆ.

ಲಾಕ್‌ಡೌನ್ ನಡುವೆಯೂ ಬುದ್ದಿ ಕಲಿಯದ ಜನ, ಅತಿ ವೇಗದಿಂದ ಹೆಚ್ಚಾದ ರಸ್ತೆ ಅಪಘಾತಗಳು..!

ಭಾರತದಲ್ಲಿ ಕಳೆದ ಐದು ವಾರಗಳಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ 140 ಜನರು ಸಾವನ್ನಪ್ಪಿದ್ದಾರೆ. ದೆಹಲಿ, ಮಹಾರಾಷ್ಟ್ರ, ಗುಜರಾತ್, ಅಸ್ಸಾಂ, ಕೇರಳ, ಕರ್ನಾಟಕ, ರಾಜಸ್ಥಾನ, ಪಂಜಾಬ್ ಮತ್ತು ತಮಿಳುನಾಡಿನ ಒಂಬತ್ತು ರಾಜ್ಯಗಳಲ್ಲಿ ನಡೆದ ಅಪಘಾತಗಳಲ್ಲಿ 100 ಜನರು ಸಾವನ್ನಪ್ಪಿದ್ದಾರೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ನಡುವೆಯೂ ಬುದ್ದಿ ಕಲಿಯದ ಜನ, ಅತಿ ವೇಗದಿಂದ ಹೆಚ್ಚಾದ ರಸ್ತೆ ಅಪಘಾತಗಳು..!

ಈ ರಸ್ತೆ ಅಪಘಾತಗಳಿಂದಾಗಿ ವೈದ್ಯಕೀಯ ಸೇವೆಯಲ್ಲಿರುವವರ ಮೇಲೆ ಪರಿಣಾಮ ಉಂಟಾಗಿದೆ. ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದರ ಜೊತೆಗೆ ಗಾಯಾಳುಗಳಿಗೂ ಸಹ ಚಿಕಿತ್ಸೆ ನೀಡುವ ಹೊಣೆಗಾರಿಕೆ ಎದುರಾಗಿದೆ. ವಾಹನ ಚಾಲಕರು ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಿದರೆ ಅಪಘಾತಗಳನ್ನು ತಪ್ಪಿಸಬಹುದು.

ಲಾಕ್‌ಡೌನ್ ನಡುವೆಯೂ ಬುದ್ದಿ ಕಲಿಯದ ಜನ, ಅತಿ ವೇಗದಿಂದ ಹೆಚ್ಚಾದ ರಸ್ತೆ ಅಪಘಾತಗಳು..!

ದ್ವಿಚಕ್ರ ವಾಹನ ಚಾಲನೆ ಮಾಡುವಾಗ ಹೆಲ್ಮೆಟ್ ಧರಿಸಿವುದು, ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸುವುದನ್ನು ಪಾಲಿಸುವುದು ಒಳಿತು. ಜೊತೆಗೆ ಸಂಚಾರ ನಿಯಮಗಳನ್ನು ಪಾಲಿಸಿದರೆ ಅಪಘಾತಗಳ ಸಾಧ್ಯತೆಯನ್ನು ಕಡಿಮೆ ಮಾಡಬಹುದು.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.

Most Read Articles

Kannada
English summary
Road accidents increased amidst Covid 19 lockdown. Read in Kannada.
Story first published: Friday, May 8, 2020, 10:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X