ಲಾಕ್‌ಡೌನ್ ನಡುವೆಯೂ ಮದುವೆಯಾಗಲು 100 ಕಿ.ಮೀ ಸೈಕಲ್ ತುಳಿದ ಭೂಪ..!

ಲಾಕ್‌ಡೌನ್‌ ಅವಧಿಯಲ್ಲಿ ಕೆಲವು ಸ್ಥಳಗಳಲ್ಲಿ ವಿನಾಯಿತಿಗಳನ್ನು ನೀಡಲಾಗಿದೆ. ಆದರೆ ಈ ಅವಧಿಯಲ್ಲಿ ಯಾವುದೇ ಸಾರ್ವಜನಿಕ ಕಾರ್ಯಗಳನ್ನು ನಡೆಸಲು ಅನುಮೋದನೆ ನೀಡಿಲ್ಲ. ಮದುವೆಯಂತಹ ಕಾರ್ಯಗಳನ್ನು ನಡೆಸಲು ನಿಷೇಧಿಸಲಾಗಿದ್ದರೂ ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ಮದುವೆಯಾಗಿದ್ದಾನೆ.

ಲಾಕ್‌ಡೌನ್ ನಡುವೆಯೂ ಮದುವೆಯಾಗಲು 100 ಕಿ.ಮೀ ಸೈಕಲ್ ತುಳಿದ ಭೂಪ..!

ಲಾಕ್‌ಡೌನ್‌ ಜಾರಿಗೊಳಿಸಿದ ನಂತರ ಉತ್ತರ ಪ್ರದೇಶದ 23 ವರ್ಷದ ಈ ಯುವಕ ನಿಗದಿಯಾಗಿದ್ದ ತನ್ನ ಮದುವೆಯ ದಿನಾಂಕವನ್ನು ಮುಂದೂಡಿಲ್ಲ. ಈತನ ಮದುವೆಯಾಗುವ ಸ್ಥಳವಿದ್ದಿದ್ದು 100 ಕಿ.ಮೀ ದೂರದಲ್ಲಿ. ಅಷ್ಟು ದೂರ ಚಲಿಸಲು ಈತನ ಬಳಿ ಯಾವುದೇ ಬೈಕ್ ಇರಲಿಲ್ಲ. ಈತನ ಬಳಿಯಿದ್ದ ಸೈಕಲ್‌ನಲ್ಲಿಯೇ 100 ಕಿ.ಮೀ ಪ್ರಯಾಣಿಸಬೇಕಾಗಿತ್ತು.

ಲಾಕ್‌ಡೌನ್ ನಡುವೆಯೂ ಮದುವೆಯಾಗಲು 100 ಕಿ.ಮೀ ಸೈಕಲ್ ತುಳಿದ ಭೂಪ..!

ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯವನಾದ ಕಲ್ಕು ಪ್ರಜಾಪತಿ ಏಪ್ರಿಲ್ 25ರಂದು ನಡೆಯಲಿದ್ದ ತನ್ನ ಮದುವೆಗೆ ಹೋಗಲು ಪೊಲೀಸರ ಅನುಮತಿಗಾಗಿ ಕಾಯುತ್ತಿದ್ದನು. ಆದರೆ ಅನುಮತಿ ದೊರೆಯದಿದ್ದ ಕಾರಣಕ್ಕೆ ಏಕಾಂಗಿಯಾಗಿ ಸೈಕಲ್‌ನಲ್ಲಿಯೇ ಹೋಗಲು ನಿರ್ಧರಿಸಿದನು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ನಡುವೆಯೂ ಮದುವೆಯಾಗಲು 100 ಕಿ.ಮೀ ಸೈಕಲ್ ತುಳಿದ ಭೂಪ..!

ಮಹೋಬಾ ಜಿಲ್ಲೆಯ ಪುನಿಯಾ ಗ್ರಾಮಕ್ಕೆ ಸೈಕಲ್‌ ಮೂಲಕ ಹೋಗಲು ನಿರ್ಧರಿಸಿದ್ದಾನೆ. ಈ ಬಗ್ಗೆ ಮಾತನಾಡಿರುವ ಕಲ್ಕು ಪ್ರಜಾಪತಿ ಮದುವೆಗೆ ಸ್ಥಳೀಯ ಪೊಲೀಸರಿಂದ ಅನುಮತಿ ಸಿಗಲಿಲ್ಲ. ಈ ಪರಿಸ್ಥಿತಿಯಲ್ಲಿ ಸೈಕಲ್‌‌ನಲ್ಲಿಯೇ ಹೋಗುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ ಎಂದು ಹೇಳಿದ್ದಾನೆ.

ಲಾಕ್‌ಡೌನ್ ನಡುವೆಯೂ ಮದುವೆಯಾಗಲು 100 ಕಿ.ಮೀ ಸೈಕಲ್ ತುಳಿದ ಭೂಪ..!

ಆತ ಮದುವೆಯಾಗುತ್ತಿದ್ದ ಹುಡುಗಿ ಮದುವೆಯ ಕಾರ್ಡ್ ಮುದ್ರಿಸಿದ್ದರು. ನಿಗದಿಯಾಗಿದ್ದ ದಿನದಂದೇ ಮದುವೆಯಾಗಲು ನಿರ್ಧರಿಸಿದ್ದರು. ಈ ಮದುವೆಯನ್ನು ನಾಲ್ಕೈದು ತಿಂಗಳ ಹಿಂದೆಯೇ ನಿಗದಿಪಡಿಸಲಾಗಿತ್ತು. ಆತನ ಅತ್ತೆ ಮಾವ ಕರೆ ಮಾಡಿ ಮದುವೆಯಾಗಲೇ ಬೇಕೆಂದು ಹೇಳಿದ್ದಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ನಡುವೆಯೂ ಮದುವೆಯಾಗಲು 100 ಕಿ.ಮೀ ಸೈಕಲ್ ತುಳಿದ ಭೂಪ..!

ನನ್ನ ಬಳಿ ಬೈಕ್ ಇದ್ದರೂ ಡ್ರೈವಿಂಗ್ ಲೈಸೆನ್ಸ್ ಇರಲಿಲ್ಲ. ವೈರಸ್ ಸೋಂಕು ಹರಡದಂತೆ ತಡೆಯಲು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಜೀನ್ಸ್ ಹಾಗೂ ಟೀ ಶರ್ಟ್ ಧರಿಸಿ ಬೆಳಿಗ್ಗೆಯೇ ಮನೆಯಿಂದ ಹೊರಟೆ ಎಂದು ಹೇಳಿದ್ದಾನೆ. ನಂತರ ಪುನಿಯಾ ಗ್ರಾಮದ ದೇವಾಲಯದಲ್ಲಿ ಮದುವೆ ನೆರವೇರಿದೆ.

ಲಾಕ್‌ಡೌನ್ ನಡುವೆಯೂ ಮದುವೆಯಾಗಲು 100 ಕಿ.ಮೀ ಸೈಕಲ್ ತುಳಿದ ಭೂಪ..!

ಮದುವೆಯಲ್ಲಿ ಕೆಲವು ಸಂಪ್ರದಾಯಗಳನ್ನು ಮಾತ್ರ ನಡೆಸಲಾಯಿತು. ಲಾಕ್‌ಡೌನ್ ತೆರೆವಾದ ನಂತರ ಉಳಿದ ಸಂಪ್ರದಾಯಗಳನ್ನು ಆಚರಿಸಲಾಗುವುದು ಎಂದು ತಿಳಿಸಿದ್ದಾನೆ. ಮದುವೆಗೆ ಹೋಗುವಾಗ ಆರಾಮವಾಗಿ ಹೋಗಿದ್ದ ಕಲ್ಕು ಪ್ರಜಾಪತಿ ಬರುವಾಗ ಆಯಾಸದಿಂದ ಬಂದಿದ್ದಾನೆ. ಇದಕ್ಕೆ ಕಾರಣ ಸೈಕಲ್‌ನ ಹಿಂಬದಿಯಲ್ಲಿ ಆತನ ಹೆಂಡತಿ ಕುಳಿತಿದ್ದಳು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ನಡುವೆಯೂ ಮದುವೆಯಾಗಲು 100 ಕಿ.ಮೀ ಸೈಕಲ್ ತುಳಿದ ಭೂಪ..!

ಈ ರೀತಿಯಾಗುತ್ತದೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲವೆಂದು ಎಂದು ಕಲ್ಕು ಪ್ರಜಾಪತಿ ಹೇಳಿದ್ದಾನೆ. ಸುಮಾರು 100 ಕಿ.ಮೀ ದೂರ ಸೈಕಲ್ ತಿಳಿದು ಮೈ ಕೈ ನೋವು ಬಂದ ಕಾರಣ ನೋವು ಶಮನಕ್ಕೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದಾನೆ. ಹಸಿರು ವಲಯದ ಜಿಲ್ಲೆಗಳಲ್ಲಿ ಸೀಮಿತ ಸಂಖ್ಯೆಯ ಜನರ ಮುಂದೆ ಮದುವೆಯಾಗಲು ಸರ್ಕಾರವು ಮಾರ್ಗಸೂಚಿಯನ್ನು ರೂಪಿಸಿದೆ.

More from DriveSpark

Article Published On: Saturday, May 2, 2020, 19:06 [IST]
English summary
Uttar Pradesh man cycles 100 km to get married. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+