ವೆಂಟಿಲೇಟರ್‌ ಉತ್ಪಾದನೆ ಶುರು ಮಾಡಿದ ಜನರಲ್ ಮೋಟಾರ್ಸ್

ಕರೋನಾ ವೈರಸ್ ಪ್ರಪಂಚದಾದ್ಯಂತ ವೇಗವಾಗಿ ಹರಡುತ್ತಿದೆ. ಚೀನಾದ ವುಹಾನ್‌ನಿಂದ ಆರಂಭವಾದ ಈ ವೈರಸ್ ವಿಶ್ವದ ಹಲವು ದೇಶಗಳಲ್ಲಿ ಗಂಭೀರ ಪ್ರಮಾಣದ ಹಾನಿಯನ್ನುಂಟು ಮಾಡಿದೆ. ಇಟಲಿ, ಸ್ಪೇನ್, ಫ್ರಾನ್ಸ್‌ನಂತಹ ದೇಶಗಳು ಕರೋನಾ ವೈರಸ್‌ಗೆ ತುತ್ತಾಗಿವೆ.

ವೆಂಟಿಲೇಟರ್‌ ಉತ್ಪಾದನೆ ಶುರು ಮಾಡಿದ ಜನರಲ್ ಮೋಟಾರ್ಸ್

ವಿಶ್ವದ ಸೂಪರ್ ಪವರ್ ಎಂದು ಕರೆಯಲಾಗುವ ಅಮೆರಿಕಾ ಸಹ ಕರೋನಾ ವೈರಸ್‌ನ ಹಿಡಿತದಿಂದ ಪಾರಾಗಿಲ್ಲ. ಅಮೆರಿಕಾ ಕರೋನಾ ವೈರಸ್‌ನಿಂದ ಹೆಚ್ಚು ಹಾನಿಗೊಳಗಾಗಿದೆ. ಕರೋನಾ ವೈರಸ್ ಹರಡುವುದನ್ನು ತಡೆಗಟ್ಟಲು ವಿಶ್ವದ ವಿವಿಧ ದೇಶಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.

ವೆಂಟಿಲೇಟರ್‌ ಉತ್ಪಾದನೆ ಶುರು ಮಾಡಿದ ಜನರಲ್ ಮೋಟಾರ್ಸ್

ಇದರಿಂದಾಗಿ ಕೈಗಾರಿಕೆಗಳು ಕುಂಠಿತಗೊಂಡಿದ್ದು, ಉತ್ಪಾದನೆಯನ್ನು ಸ್ಥಗಿತಗೊಳಿಸಲಾಗಿದೆ. ಅದರಲ್ಲೂ ಆಟೋ ಮೊಬೈಲ್ ಉದ್ಯಮವು ಹೆಚ್ಚಿನ ತೊಂದರೆಗೊಳಗಾಗಿದೆ. ಆಟೋ ಮೊಬೈಲ್ ಕಂಪನಿಗಳು ವಾಹನಗಳ ಬದಲಿಗೆ ವೆಂಟಿಲೇಟರ್‌ಗಳ ಉತ್ಪಾದನೆಯನ್ನು ಆರಂಭಿಸಿವೆ. ಕರೋನಾ ವೈರಸ್ ಅನ್ನು ಎದುರಿಸಲು ವೆಂಟಿಲೇಟರ್‌ಗಳಿಗೆ ಹೆಚ್ಚಿನ ಬೇಡಿಕೆ ಉಂಟಾಗಿದೆ.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ವೆಂಟಿಲೇಟರ್‌ ಉತ್ಪಾದನೆ ಶುರು ಮಾಡಿದ ಜನರಲ್ ಮೋಟಾರ್ಸ್

ಈ ಕಾರಣಕ್ಕೆ ವಿವಿಧ ದೇಶಗಳು ವೆಂಟಿಲೇಟರ್‌ಗಳನ್ನು ಉತ್ಪಾದಿಸಲು ಹಾಗೂ ಪೂರೈಸಲು ಆಟೋಮೊಬೈಲ್ ಕಂಪನಿಗಳಿಗೆ ಮನವಿ ಮಾಡಿಕೊಂಡಿವೆ. ಆಟೋಮೊಬೈಲ್ ಕಂಪನಿಗಳು ಸಹ ಇದಕ್ಕೆ ಸ್ಪಂದಿಸಿ ವೆಂಟಿಲೇಟರ್ ಉತ್ಪಾದನೆಯನ್ನು ಆರಂಭಿಸಿವೆ. ಇವುಗಳಲ್ಲಿ ಜನರಲ್ ಮೋಟಾರ್ಸ್ ಸಹ ಒಂದು.

ವೆಂಟಿಲೇಟರ್‌ ಉತ್ಪಾದನೆ ಶುರು ಮಾಡಿದ ಜನರಲ್ ಮೋಟಾರ್ಸ್

ಜನರಲ್ ಮೋಟಾರ್ಸ್ ಅಮೆರಿಕಾ ಸರ್ಕಾರಕ್ಕೆ ಸರಬರಾಜು ಮಾಡಲು ವೆಂಟಿಲೇಟರ್ ಉತ್ಪಾದನೆಯನ್ನು ಆರಂಭಿಸಿದೆ. ಕೋವಿಡ್ -19ನಿಂದ ಬಾಧಿತರಾದ ರೋಗಿಗಳಿಗೆ ಚಿಕಿತ್ಸೆ ನೀಡಲು ವೆಂಟಿಲೇಟರ್‌ಗಳ ಉತ್ಪಾದನೆಯನ್ನು ಆರಂಭಿಸಲಾಗಿದೆ ಎಂದು ಜನರಲ್ ಮೋಟಾರ್ಸ್ ನಿನ್ನೆ ಪ್ರಕಟಿಸಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ವೆಂಟಿಲೇಟರ್‌ ಉತ್ಪಾದನೆ ಶುರು ಮಾಡಿದ ಜನರಲ್ ಮೋಟಾರ್ಸ್

ವೆಂಟಿಲೇಟರ್‌ಗಳ ಮೊದಲ ಬ್ಯಾಡ್ಜ್ ಅನ್ನು ಏಪ್ರಿಲ್‌ನಲ್ಲಿ ಅಮೆರಿಕಾ ಸರ್ಕಾರಕ್ಕೆ ಪೂರೈಸಲಾಗುವುದು ಎಂದು ಜನರಲ್ ಮೋಟಾರ್ಸ್ ತಿಳಿಸಿದೆ. ಅಮೆರಿಕಾದ ಆರೋಗ್ಯ ಹಾಗೂ ಮಾನವ ಸೇವೆಗಳ ಇಲಾಖೆ 1.37 ಲಕ್ಷ ವೆಂಟಿಲೇಟರ್‌ಗಳನ್ನು ಉತ್ಪಾದಿಸಲು 2.6 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ 9 ಒಪ್ಪಂದಗಳನ್ನು ಮಾಡಿಕೊಂಡಿದೆ.

ವೆಂಟಿಲೇಟರ್‌ ಉತ್ಪಾದನೆ ಶುರು ಮಾಡಿದ ಜನರಲ್ ಮೋಟಾರ್ಸ್

ಇದರಲ್ಲಿ ಜನರಲ್ ಮೋಟಾರ್ಸ್ ಕಂಪನಿಯೊಂದಿಗೆ ಮಾಡಿಕೊಂಡ 489.4 ಮಿಲಿಯನ್ ಡಾಲರ್ ಒಪ್ಪಂದ ಸಹ ಸೇರಿದೆ. ಈ ಒಪ್ಪಂದದ ಪ್ರಕಾರ, ಜನರಲ್ ಮೋಟಾರ್ಸ್ ಆಗಸ್ಟ್ ಅಂತ್ಯದ ವೇಳೆಗೆ 30 ಸಾವಿರ ವೆಂಟಿಲೇಟರ್‌ಗಳನ್ನು ಉತ್ಪಾದಿಸಲಿದೆ. ಸದ್ಯಕ್ಕೆ ಜಿಎಂ ಮೋಟಾರ್ಸ್ ತನ್ನ ಕೆಲಸವನ್ನು ಆರಂಭಿಸಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ವೆಂಟಿಲೇಟರ್‌ ಉತ್ಪಾದನೆ ಶುರು ಮಾಡಿದ ಜನರಲ್ ಮೋಟಾರ್ಸ್

ಜನರಲ್ ಮೋಟಾರ್ಸ್ ವೆಂಟಿಕ್ ಲೈಫ್ ಸಿಸ್ಟಮ್ಸ್ ಎಂಬ ವೆಂಟಿಲೇಟರ್‌ಗಳನ್ನು ಉತ್ಪಾದಿಸುತ್ತಿದೆ. ಏಪ್ರಿಲ್‌ನಿಂದ 600ಕ್ಕೂ ಹೆಚ್ಚು ವೆಂಟಿಲೇಟರ್‌ಗಳನ್ನು ಬ್ಯಾಡ್ಜ್‌ನಂತೆ ಪೂರೈಸಲಾಗುವುದೆಂದು ಜನರಲ್ ಮೋಟಾರ್ಸ್ ತಿಳಿಸಿದೆ.

ವೆಂಟಿಲೇಟರ್‌ ಉತ್ಪಾದನೆ ಶುರು ಮಾಡಿದ ಜನರಲ್ ಮೋಟಾರ್ಸ್

ಜೂನ್ ಅಂತ್ಯದ ವೇಳೆಗೆ ಅರ್ಧದಷ್ಟು ವೆಂಟಿಲೇಟರ್‌ಗಳನ್ನು ಪೂರೈಸಲಾಗುವುದೆಂದು ಜನರಲ್ ಮೋಟಾರ್ಸ್ ಹೇಳಿದೆ. ಆಗಸ್ಟ್ ಅಂತ್ಯದ ವೇಳೆಗೆ ಜನರಲ್ ಮೋಟಾರ್ಸ್ಒಪ್ಪಂದದಂತೆ ಎಲ್ಲಾ ವೆಂಟಿಲೇಟರ್‌ಗಳನ್ನು ಪೂರೈಸಲಿದೆ. ಅಮೇರಿಕಾದಲ್ಲಿ ಕರೋನಾ ಸೋಂಕಿನ ಪ್ರಕರಣಗಳು ಹೆಚ್ಚಾದಂತೆ, ವೆಂಟಿಲೇಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ವೆಂಟಿಲೇಟರ್‌ ಉತ್ಪಾದನೆ ಶುರು ಮಾಡಿದ ಜನರಲ್ ಮೋಟಾರ್ಸ್

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರವರು ಈ ಮೊದಲು ವೆಂಟಿಲೇಟರ್ ತಯಾರಿಸುವ ವಿಷಯದ ಬಗ್ಗೆ ಜನರಲ್ ಮೋಟಾರ್ಸ್ ಅನ್ನು ಟೀಕಿಸಿದ್ದರು. ಜನರಲ್ ಮೋಟಾರ್ಸ್ ಟೈಮ್ ಪಾಸ್ ಮಾಡುತ್ತಿದೆ ಎಂದು ಹೇಳಿದ್ದರು.

ವೆಂಟಿಲೇಟರ್‌ ಉತ್ಪಾದನೆ ಶುರು ಮಾಡಿದ ಜನರಲ್ ಮೋಟಾರ್ಸ್

ಅದಾದ ನಂತರ ಜನರಲ್ ಮೋಟಾರ್ಸ್ ವೆಂಟಿಲೇಟರ್ ಉತ್ಪಾದನೆಯನ್ನು ವೇಗಗೊಳಿಸಿದೆ. ಟ್ರಂಪ್‌ರವರು ಜನರಲ್ ಮೋಟಾರ್ಸ್‌ನ ಈ ಕಾರ್ಯವನ್ನು ಶ್ಲಾಘಿಸಿದ್ದಾರೆ. ಜನರಲ್ ಮೋಟಾರ್ಸ್ ಮಾತ್ರವಲ್ಲದೇ, ವಿಶ್ವದ ಇತರ ಪ್ರಮುಖ ವಾಹನ ತಯಾರಕ ಕಂಪನಿಗಳು ಸಹ ವೆಂಟಿಲೇಟರ್ ಉತ್ಪಾದನೆಯಲ್ಲಿ ತೊಡಗಿವೆ.

ವೆಂಟಿಲೇಟರ್‌ ಉತ್ಪಾದನೆ ಶುರು ಮಾಡಿದ ಜನರಲ್ ಮೋಟಾರ್ಸ್

ಅವುಗಳಲ್ಲಿ ಟೆಸ್ಲಾ, ಫೋರ್ಡ್ ಹಾಗೂ ಭಾರತದ ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಗಳು ಸೇರಿವೆ. ಕರೋನಾ ವೈರಸ್ ಭಾರತದಲ್ಲಿ ವೇಗವಾಗಿ ಹರಡುತ್ತಿದ್ದು, ಇದನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ಕೈಗೊಳ್ಳುತ್ತಿವೆ. ಭಾರತದ ವಿವಿಧ ವಾಹನ ತಯಾರಕ ಕಂಪನಿಗಳು ಈ ಕಾರ್ಯದಲ್ಲಿ ನೆರವಾಗುತ್ತಿರುವುದು ಗಮನಾರ್ಹ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್‌ಗಾಗಿ ಬಳಸಲಾಗಿದೆ.

Most Read Articles

Kannada
English summary
General Motors begins production of ventilators for US government. Read in Kannada.
Story first published: Wednesday, April 15, 2020, 17:08 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X