ಲಾಕ್‌ಡೌನ್ ಸಂಕಷ್ಟ: 47 ದಿನಗಳಿಂದ ಕಾರಿನಲ್ಲೇ ಇವರ ವನವಾಸ

ದೇಶದಲ್ಲಿ ಲಾಕ್‌ಡೌನ್‌ ಜಾರಿಯಾದ ನಂತರ ಅನೇಕ ಜನರು ಮತ್ತೊಂದು ರಾಜ್ಯದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಎಲ್ಲಾ ರಾಜ್ಯಗಳ ಗಡಿಗಳನ್ನು ಬಂದ್ ಮಾಡಿರುವುದರಿಂದ ಅವರು ಇರುವ ಜಾಗದಲ್ಲಿಯೇ ಉಳಿದುಕೊಳ್ಳಬೇಕಾಗಿದೆ. ಲಾಕ್‌ಡೌನ್‌ ಕಾರಣಕ್ಕೆ ಕಳೆದ 47 ದಿನಗಳಿಂದ ಕಾರಿನಲ್ಲಿಯೇ ಉಳಿದುಕೊಂಡಿರುವ ವ್ಯಕ್ತಿಯೊಬ್ಬರ ಘಟನೆ ಬೆಳಕಿಗೆ ಬಂದಿದೆ.

ಲಾಕ್‌ಡೌನ್ ಸಂಕಷ್ಟ: 47 ದಿನಗಳಿಂದ ಕಾರಿನಲ್ಲೇ ಇವರ ವನವಾಸ

ಕೆಲವು ದಿನಗಳ ಹಿಂದೆ, ಗುಜರಾತ್‌ನಲ್ಲಿ 20 ದಿನಗಳ ಕಾಲ ಸಿಲುಕಿದ್ದ ಕರ್ನಾಟಕ ಮೂಲದವರ ಬಗ್ಗೆ ವರದಿಯಾಗಿತ್ತು. ಇದೇ ರೀತಿಯ ಘಟನೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ ಟಾಟಾ ನ್ಯಾನೋ ಕಾರಿನಲ್ಲಿ 47 ದಿನಗಳಿಂದ ವಾಸಿಸುತ್ತಿದ್ದಾರೆ. ಆ ಕಾರಿನಲ್ಲಿಯೇ ಊಟ ಮಾಡಿ ಅಲ್ಲಿಯೇ ಮಲಗುತ್ತಿದ್ದಾರೆ. ಕಾರಿನ ಸೀಟುಗಳನ್ನು ಬೆಂಚ್ ಹಾಗೂ ಹಾಸಿಗೆಯನ್ನಾಗಿ ಮಾಡಿಕೊಂಡಿದ್ದಾರೆ.

ಲಾಕ್‌ಡೌನ್ ಸಂಕಷ್ಟ: 47 ದಿನಗಳಿಂದ ಕಾರಿನಲ್ಲೇ ಇವರ ವನವಾಸ

47 ದಿನಗಳಿಂದ ಕಾರಿನಲ್ಲಿಯೇ ಇರುವ ಈ ವ್ಯಕ್ತಿಯ ಹೆಸರು ಪರಸ್ ದ್ವಿವೇದಿ. ಮಧ್ಯಪ್ರದೇಶದ ಇವರು ಮಾರ್ಚ್ 22ರಂದು ಅಂದರೆ ಲಾಕ್‌ಡೌನ್‌ಗೆ ಮುನ್ನ ಮಧ್ಯಪ್ರದೇಶದ ಸಾಗರ್‌ನಿಂದ ಅಸ್ಸಾಂಗೆ ಹೊರಟಿದ್ದರು. ಮಾರ್ಚ್ 24ರಂದು ಅವರು ಜಾರ್ಖಂಡ್‌ನ ಹಜಾರಿಬಾಗ್‌ನಲ್ಲಿರುವ ಚೌಪರನ್ ತಲುಪಿದಾಗ ಅವರ ಕಾರು ಕೆಟ್ಟು ನಿಂತಿತು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಸಂಕಷ್ಟ: 47 ದಿನಗಳಿಂದ ಕಾರಿನಲ್ಲೇ ಇವರ ವನವಾಸ

ಲಾಕ್‌ಡೌನ್ ಕಾರಣಕ್ಕೆ ಅವರಿಗೆ ತಮ್ಮ ಕಾರನ್ನು ರಿಪೇರಿ ಮಾಡಿಸಲು ಸಾಧ್ಯವಾಗಲಿಲ್ಲ. ಲಾಕ್‌ಡೌನ್ ಆರಂಭದಿಂದಲೂ ಅಲ್ಲಿಯೇ ಸಿಲುಕಿಕೊಂಡ ಕಾರಣಕ್ಕೆ ಅವರ ಬಳಿಯಿದ್ದ ಹಣವೆಲ್ಲಾ ಖಾಲಿಯಾಗಿದೆ. ಇದರಿಂದಾಗಿ ತಮ್ಮ ಕಾರ್ ಅನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ.

ಲಾಕ್‌ಡೌನ್ ಸಂಕಷ್ಟ: 47 ದಿನಗಳಿಂದ ಕಾರಿನಲ್ಲೇ ಇವರ ವನವಾಸ

ಕಾರಿನಲ್ಲಿಯೇ ಸಿಲುಕಿರುವ ಅವರಿಗೆ ಸರಿಯಾಗಿ ತಿನ್ನಲು, ಕುಡಿಯಲು ಸಾಧ್ಯವಾಗುತ್ತಿಲ್ಲ. ಮ್ಯಾಗಿ ರೀತಿಯ ತಿಂಡಿಗಳನ್ನು ತಿನ್ನುತ್ತಿದ್ದಾರೆ. ಮಧ್ಯಪ್ರದೇಶದ ಜಬಲ್ಪುರಕ್ಕೆ ಸೇರಿದ ಅವರು ಅಸ್ಸಾಂನಲ್ಲಿರುವ ಚಿಕ್ಕಪ್ಪನ ಮನೆಗೆ ಹೋಗಿ, ಅಲ್ಲಿಂದ ಕಾಮಾಕ್ಯ ದೇವಸ್ಥಾನಕ್ಕೆ ಹೋಗಲು ಬಯಸಿದ್ದರು.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಸಂಕಷ್ಟ: 47 ದಿನಗಳಿಂದ ಕಾರಿನಲ್ಲೇ ಇವರ ವನವಾಸ

ಕಾರು ಕೆಟ್ಟು ನಿಂತಾಗ ರಿಪೇರಿ ಮಾಡಲು ಪ್ರಯತ್ನಿಸಿದರು. ಆದರೆ ಮೆಕ್ಯಾನಿಕ್ ರೂ.10,000 ಬೇಡಿಕೆಯಿಟ್ಟಾಗ ರಿಪೇರಿ ಮಾಡಿಸದೇ ಸುಮ್ಮನಾದರು. ಕೆಟ್ಟಿರುವ ಕಾರ್ ಅನ್ನು ಬಿಟ್ಟು ಬರಲು ಮನಸಾಗದೇ ಅಲ್ಲಿಯೇ ಉಳಿದರು.

ಲಾಕ್‌ಡೌನ್ ಸಂಕಷ್ಟ: 47 ದಿನಗಳಿಂದ ಕಾರಿನಲ್ಲೇ ಇವರ ವನವಾಸ

ಇದುವರೆಗೂ ಕಾರಿನಲ್ಲಿಯೇ ಸಿಲುಕಿರುವ ಅವರು ಸಹಾಯದ ನಿರೀಕ್ಷೆಯಲ್ಲಿದ್ದಾರೆ. ಕಾರು ರಿಪೇರಿಗಾಗಿ ಲಾಕ್‌ಡೌನ್ ತೆರೆವಾಗುವುದನ್ನು ಕಾಯುತ್ತಿದ್ದಾರೆ. ಮೇ 17ರವರೆಗೆ ಮೂರನೇ ಹಂತದ ಲಾಕ್‌ಡೌನ್ ಮುಂದುವರೆಯಲಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಸಂಕಷ್ಟ: 47 ದಿನಗಳಿಂದ ಕಾರಿನಲ್ಲೇ ಇವರ ವನವಾಸ

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿರವರು ಲಾಕ್‌ಡೌನ್ 4.0 ಬಗ್ಗೆ ತಿಳಿಸಿದ್ದು, ಶೀಘ್ರದಲ್ಲೇ ಅದರ ಬಗ್ಗೆ ಘೋಷಿಸಲಿದ್ದಾರೆ. ಲಾಕ್‌ಡೌನ್ ನಡುವೆ ಸಿಲುಕಿರುವ ಪರಸ್ ದ್ವಿವೇದಿರವರು ಸಾಧ್ಯವಾದಷ್ಟು ಬೇಗ ಸಹಾಯ ಪಡೆದು ಅಲ್ಲಿಂದ ಹೊರಬರುವ ನಿರೀಕ್ಷೆಯಲ್ಲಿದ್ದಾರೆ.

Most Read Articles

Kannada
English summary
Man living in a car from 47 days in Jharkhand. Read in Kannada.
Story first published: Thursday, May 14, 2020, 17:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X