ಟಾಟಾ ಆಲ್ಟ್ರೋಜ್‌‌ ಮತ್ತು ಟೈಗನ್‌: ಎರಡು 5 ಸ್ಟಾರ್‌ ರೇಟಿಂಗ್‌ ಕಾರುಗಳ ಅಪಘಾತದಲ್ಲಿ ಯಾರು ಬಲಿಷ್ಟ?

ಇತ್ತೀಚಿನ ದಿನಗಳಲ್ಲಿ ಭಾರತೀಯ ಆಟೋಮೊಬೈಲ್‌ ಮಾರುಕಟ್ಟೆ ಮತ್ತಷ್ಟು ಬಲಿಷ್ಟವಾಗುತ್ತಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಕಾರಣ ಭಾರತೀಯ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಕಾರುಗಳು ಕಾಲಿಡುತ್ತಿರುವುದು. ಅದರಲ್ಲೂ ಗ್ಲೋಬಲ್ N-CAP ಟೆಸ್ಟ್‌ನಲ್ಲಿ 5 ಸ್ಟಾರ್‌ ಪಡೆದ ಕಾರುಗಳು ಗ್ರಾಹಕರ ಕೈ ಸೇರುತ್ತಿರುವುದು ಎನ್ನುವುದು ಗಮನಿಸಬೇಕು.

ಅದರಲ್ಲೂ ಭಾರತೀಯ ಕಾರು ನಿರ್ಮಾಣ ಕಂಪನಿ ಟಾಟಾ 5 ಸ್ಟಾರ್‌ ರೇಟಿಂಗ್‌ ಕಾರನ್ನು ಹೊರತರುವುದರಲ್ಲಿ ಒಂದು ಹೆಜ್ಜೆ ಮುಂದೆನೇ ಎಂದರೆ ತಪ್ಪಾಗಲಾರದು. ಇದರ ಜೊತೆಗೆ ಸ್ಕೋಡಾ ಮತ್ತು ಪೋಕ್ಸ್‌ವ್ಯಾಗನ್ ಕಂಪನಿಗಳೂ ಇದೆ. ಇದೀಗ ಇಲ್ಲೊಂದು ಅಪಘಾತದಲ್ಲಿ ಟಾಟಾ ಮತ್ತು ಫೋಕ್ಸ್‌ವ್ಯಾಗನ್‌ ಕಾರುಗಳ ನಡುವಿನ ರಿಸಲ್ಟ್‌ ಏನು ಎಂದು ನೋಡೋಣ.

Crash Between Five Star Rated Cars

ಇಲ್ಲೊಂದು ಕಡೆ ಟಾಟಾ ಆಲ್ಟ್ರೋಜ್‌‌ (Tata Altroz) ಮತ್ತು ಫೋಕ್ಸ್‌ವ್ಯಾಗನ್‌ ಟೈಗನ್‌ ನಡುವೆ ಅಪಘಾತ ಸಂಭವಿಸಿದ್ದು ಎರಡೂ ಸಹ ಬಲಿಷ್ಟವಾದ ಕಾರುಗಳಾಗಿವೆ. ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಎರಡೂ ಕಾರುಗಳು ಸಹ ಪ್ರಸಿದ್ದ ಗ್ಲೋಬಲ್ N-CAP ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್‌ ಪಡೆದ ಕಾರುಗಳಾಗಿವೆ.

ಇನ್ನು ಅಪಘಾತವನ್ನು ಗಮನಿಸಿದರೆ ಟಾಟಾ ಆಲ್ಟ್ರೋಝ್‌ ಕಾರು, ಫೋಕ್ಸ್‌ವ್ಯಾಗನ್‌ ಟೈಗುನ್ ಕಾರಿನ ಹಿಂಭಾಗಕ್ಕೆ ಬಂದು ಗಿದ್ದಿದ್ದು, ಟೈಗುನ್‌ ಹಿಂಭಾಗ ಮತ್ತು ಟಾಟಾ ಆಲ್ಟ್ರೋಜ್‌‌ ಮುಂಭಾಗ ಹೀಗೆ ನಡೆದ ಅಪಘಾತದಲ್ಲಿ ಎರಡೂ ಸಹ ಹಾನಿಗೆ ಒಳಗಾಗಿರುವುದನ್ನು ನಾವು ಕಾಣಬಹುದಾಗಿದೆ.

Crash Between Five Star Rated Cars

ಇನ್ನು ಎರಡೂ ವಾಹನಗಳು ಸಹ ಗ್ಲೋಬಲ್ N-CAP ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಇರುವುದರಿಂದ ಕಾರಿನೊಳಗಿದ್ದ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೇ ಕಾರಿನಿಂದ ಹೊರಬಂದಿದ್ದಾರೆ. ಜೊತೆಗೆ ಟಾಟಾ ಆಲ್ಟ್ರೋಜ್‌‌ ಬೋನೆಟ್ ಭಾಗ ಟೈಗನ್‌ ಕಾರಿಗಿಂತ ಕೊಂಚ ಹೆಚ್ಚು ಹಾನಿಗೊಳಗಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಇಲ್ಲಿ ಗಮನಿಸಬೇಕಾದ ಆಂಶವೆಂದರೆ ಇಲ್ಲಿ ಅಪಘಾತದಲ್ಲಿ ಒಳಗಾಗಿರುವ ಎರಡೂ ಕಾರುಗಳು ಸಹ ಬಲಿಷ್ಟವಾಗಿರುವುದರಿಂದ ಅಪಘಾತ ಇಲ್ಲಿಗೇ ಮುಕ್ತಾಯವಾಗಿದೆ. ಬಹುತೇಕ ಇಂತಹ ಅಪಘಾತಗಳಲ್ಲಿ ಒಂದು ಕಾರು ಇನ್ನೊಂದು ಕಾರಿಗೆ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದ್ದರೆ ಕಾರಿನ ಹಿಂಭಾಗ ಸಂಪೂರ್ಣವಾಗಿ ಜಖಂ ಆಗಿರುತ್ತಿತ್ತು.

ಟಾಟಾ ಆಲ್ಟ್ರೋಜ್‌‌ ಮತ್ತು ಫೋಕ್ಸ್‌ವ್ಯಾಗನ್‌ ಟೈಗನ್‌ ಭಾರತದ ಸೇಫೆಸ್ಟ್ ಕಾರುಗಳು. ಬಲಿಷ್ಟ ಉಕ್ಕುಗಳನ್ನು ಬಳಸಿ ಕಾರುಗಳನ್ನು ತಯಾರಿಸಲಾಗುತ್ತಿದ್ದು, ಇದರಲ್ಲಿ ಇತರ ಸೇಫ್ಟಿ ಮಾನದಂಡಗಳೂ ಇವೆ. ಏರ್ ಬ್ಯಾಗ್ಸ್‌, ಎಲೆಕ್ಟ್ರಾನಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ ಹೀಗೆ ಹಲವಾರು ಸೇಪ್ಟೀ ಫೀಚರ್‌ಗಳನ್ನು ನಾವು ಕಾರುಗಳಲ್ಲಿ ಕಾಣಬಹುದಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, July 7, 2023, 11:24 [IST]
English summary
Crash between five star rated cars tata altroz and vw taigun
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+