ಮಹಿಳೆಯ ಮೇಲೆ ಕಾರು ಹರಿಸಿದ ಕ್ರಿಕೆಟರ್ ಅಂಜಿಕ್ಯ ರಹಾನೆ ತಂದೆ ಅರೆಸ್ಟ್
ಅಜಿಂಕ್ಯ ರಹಾನೆ ತಂದೆ ಮಧುಕರ್ ಬಾಬು ರಾವ್ ರಹಾನೆ ಅವರನ್ನು ಅಪಘಾತ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಭಾರತದ ಟೆಸ್ಟ್ ಕ್ರಿಕೆಟರ್ ಅಜಿಂಕ್ಯ ರಹಾನೆ ತಂದೆ ಮಧುಕರ್ ಬಾಬು ರಾವ್ ರಹಾನೆ ಅವರನ್ನು ಅಪಘಾತ ಪ್ರಕರಣ ಒಂದಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು, ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಮಹಿಳೆಯು ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಮಹಿಳೆಯ ಮೇಲೆ ಕಾರು ಹರಿಸಿ ಆಕೆಯ ಸಾವಿಗೆ ಕಾರಣರಾದ ಆರೋಪದ ಮೇಲೆ ಭಾರತೀಯ ಟೆಸ್ಟ್ ಕ್ರಿಕೆಟಿಗ ಅಜಿಂಕ್ಯ ರಹಾನೆ ಅವರ ತಂದೆ ಮಧುಕರ್ ಬಾಬುರಾವ್ ರಹಾನೆ ಅವರನ್ನು ಕೊಲ್ಹಾಪುರ ಪೊಲೀಸರು ಬಂಧಿಸಿದ್ದಾರೆ. ರಹಾನೆ ಅವರ ತಂದೆ ತಮ್ಮ ಕುಟುಂಬದವರೊಂದಿಗೆ ಹ್ಯುಂಡೈ ಐ20 ಕಾರಿನಲ್ಲಿ ಚಲಾಯಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಈ ಘಟನೆ ನಡೆದಿದ್ದು, ಕಾಗಲ್ ಬಸ್ ನಿಲ್ದಾಣದ ಬಳಿ ರಸ್ತೆ ದಾಟುಲ ನಿಂತಿದ್ದ ಮಹಿಳೆಯ ಮೇಲೆ ವೇಗದಲ್ಲಿ ಬಂದ ಹ್ಯುಂಡೈ ಕಾರು ಡಿಕ್ಕಿ ಹೊಡೆದಿದೆ.
Recommended Video


67 ವರ್ಷದ ಆಶಾತಾಯಿ ಕಾಂಬ್ಳೆ ಮೃತ ದುರ್ದೈವಿಯಾಗಿದ್ದು, ಪೊಲೀಸರು ಮಧುಕರ್ ಅವರನ್ನ ಬಂಧಿಸಿ ವಿಚಾರಣೆ ನಡೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ರಹಾನೆಯ ತಂದೆ, ತಾಯಿ ಹಾಗೂ ಸಹೋದರಿ ಖಾಸಗಿ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದ್ದು, ಸದ್ಯ 54 ವರ್ಷದ ಮಧುಕರ್ ಬಾಬುರಾವ್ರನ್ನು ಬಂಧಿಸಿರುವ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ ಎನ್ನಲಾಗಿದೆ.

ಸುದ್ಧಿ ಮೂಲಗಳ ಪ್ರಕಾರ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ 304ಎ, 337, 338, 279 ಮತ್ತು 184ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಘಟನೆ ನಿಖರ ಕಾರಣ ಏನು ಎನ್ನುವ ಬಗ್ಗೆ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.

ಇನ್ನು ಅಜಿಂಕ್ಯ ರಹಾನೆ ಪ್ರಸ್ತುತ ಪ್ರವಾಸಿ ಶ್ರೀಲಂಕಾ ತಂಡದ ವಿರುದ್ಧದ ಏಕದಿನ ಸರಣಿಗೆ ವಿಶಾಖಪಟ್ಟಣದಲ್ಲಿ ಟೀಮ್ ಇಂಡಿಯಾ ಜತೆ ಇದ್ದು, ಘಟನೆ ಹಿನ್ನೆಲೆ ತಂದೆ ಬಾಬು ರಹಾನೆಯವರನ್ನು ಸದ್ಯದಲ್ಲೇ ಭೇಟಿಯಾಗುವ ಸಾಧ್ಯತೆಗಳಿವೆ.


Click it and Unblock the Notifications








