Jonty Rhodes: ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ಮನಸೋತ ದ.ಆಫ್ರಿಕಾ ಕ್ರಿಕೆಟರ್!

ದಕ್ಷಿಣ ಆಫ್ರಿಕಾ ಕ್ರಿಕೆಟ್ ಆಟಗಾರ, ವೃತ್ತಿಪರ ಕೋಚ್ ಮತ್ತು ವೀಕ್ಷಕ ವಿವರಣೆಗಾರ ಜಾಂಟಿ ರೋಡ್ಸ್ (Jonty Rhodes) ಇತ್ತೀಚೆಗೆ ರಾಯಲ್ ಎನ್ಫೀಲ್ಡ್ ಹಿಮಾಲಯನ್ 452 ಅನ್ನು ಟೆಸ್ಟ್ ಡ್ರೈವ್ ಮಾಡಿದರು. ಈ ಜನಪ್ರಿಯ ಕ್ರಿಕೆಟಿಗ ಈಗ ಹೊಸ ಅಡ್ವೆಂಚರ್ ಮೋಟಾರ್ ಸೈಕಲ್ ಬಗ್ಗೆ ತಮ್ಮ ಆಲೋಚನೆಗಳನ್ನು ಕೂಡ ಹಂಚಿಕೊಂಡಿದ್ದಾರೆ.

ಅವರು ಇತ್ತೀಚೆಗೆ ಬಿಡುಗಡೆಯಾದ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ 452 (Royal Enfield Himalayan 452) ನಲ್ಲಿ ಕುಳಿತು ಪೋಸ್ ನೀಡುತ್ತಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಹಾಗೆಯೇ ರಾಯಲ್ ಎನ್‌ಫೀಲ್ಡ್ ಶಾಟ್‌ಗನ್ ಅನ್ನು ಸಹ ಟೆಸ್ಟ್ ಡ್ರೈವ್ ಮಾಡಿದರು. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಹೊಸ ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳ ಹಲವಾರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

cricketer-jonty-rhodes-test-rides-re-shotgun-650-and-himalayan-452

''ನಾನು ತಜ್ಞನಲ್ಲ, ಆದರೆ ವಾವ್, ತುಂಬಾ ಪ್ರಭಾವಶಾಲಿ. ಅಂತಿಮವಾಗಿ, ನನ್ನ ಸವಾರಿ ಕೌಶಲ್ಯದ ಕೊರತೆಯ ಹೊರತಾಗಿಯೂ ನದಿಗಳು ಮತ್ತು ಪರ್ವತಗಳನ್ನು ದಾಟುವ ಬೈಕು ಇದು'' ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಅವರು ರಾಯಲ್ ಎನ್‌ಫೀಲ್ಡ್ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಶಾಟ್‌ಗನ್ ಜೊತೆಗಿನ ಚಿತ್ರವನ್ನು ಸಹ ಹಂಚಿಕೊಂಡಿದ್ದಾರೆ.

ಜಾಂಟಿ ರೋಡ್ಸ್ ಮತ್ತು ರಾಯಲ್ ಎನ್ ಫೀಲ್ಡ್: ಜಾಂಟಿ ರೋಡ್ಸ್ ಅವರು ರಾಯಲ್ ಎನ್‌ಫೀಲ್ಡ್‌ ಬೈಕ್‌ಗಳಿಗೆ ಕಟ್ಟಾ ಅಭಿಮಾನಿಯಾಗಿದ್ದಾರೆ. ಹಾಗಾಗಿಯೇ ಜಾಂಟಿ ರೋಡ್ಸ್ ರಾಯಲ್ ಎನ್ಫೀಲ್ಡ್ ಮೋಟಾರ್‌ ಸೈಕಲ್‌ಗಳೊಂದಿಗಿನ ಹಲವು ಚಿತ್ರವನ್ನು ಹಂಚಿಕೊಂಡಿದ್ದಾರೆ. ಅವರು ಒಂದಲ್ಲ, ಎರಡೆರಡು ವಿಭಿನ್ನ ರಾಯಲ್ ಎನ್‌ಫೀಲ್ಡ್ ಮೋಟಾರ್‌ ಸೈಕಲ್‌ಗಳನ್ನು ಹೊಂದಿದ್ದಾರೆ.

cricketer-jonty-rhodes-test-rides-re-shotgun-650-and-himalayan-452

ಕಳೆದ ವರ್ಷ ಬಿಡುಗಡೆಯಾದ ಕಡಿಮೆ ಬೆಲೆಯ ಹಂಟರ್ 350 ಬೈಕ್ ಅನ್ನು ಸಹ ಅವರು ಹೊಂದಿದ್ದಾರೆ. ಕಳೆದ ವರ್ಷ ಈ ಮೋಟಾರ್ ಸೈಕಲ್‌ನ ಚಿತ್ರವನ್ನು ಹಂಚಿಕೊಂಡು ಹಾಸ್ಯಮಯ ಶೀರ್ಷಿಕೆಯನ್ನು ಸಹ ನಿಡಿದ್ದರು, ಅದರಲ್ಲಿ ಅವರು ದಕ್ಷಿಣ ಆಫ್ರಿಕಾದ ತಮ್ಮ ಮಾಜಿ ಕ್ರಿಕೆಟ್ ತಂಡವನ್ನು ಉಲ್ಲೇಖಿಸಿದ್ದರು. ಈ ಚಿತ್ರದಲ್ಲಿ, ಅವರ ಇಬ್ಬರು ಮಕ್ಕಳು ರಾಯಲ್‌ ಎನ್‌ಫೀಲ್ಡ್‌ ಹಂಟರ್ 350 ಅನ್ನು ತೊಳಿಯುತ್ತಿರುವುದನ್ನು ನೋಡಬಹುದು.

"ನಿನ್ನೆಯ @cricketworldcup ಪಂದ್ಯದ ನಂತರ ನನ್ನ ಈ @royalenfield #Hunter ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದೊಂದಿಗೆ ಸಾಕಷ್ಟು ಸಾಮ್ಯತೆಯನ್ನು ಹೊಂದಿದೆ ಎಂದು ನಾನು ಭಾವಿಸುತ್ತೇನೆ - ಚೆನ್ನಾಗಿ ಸ್ವಚ್ಛಗೊಳಿಸಲಾಗಿದೆ" ಎಂದು ಅವರು ಚಿತ್ರಕ್ಕೆ ಶೀರ್ಷಿಕೆ ನೀಡಿ ಹಂಚಿಕೊಂಡಿದ್ದಾರೆ. ಒಟ್ಟಾರೆ ಅವರು ರಾಯಲ್‌ ಎನ್‌ಫೀಲ್ಡ್‌ನ ಬಹುತೇಕ ಎಲ್ಲಾ ಮಾದರಿಗಳ ಬಗ್ಗೆ ತಿಳಿದುಕೊಂಡಿರುವುದು ಈ ಚಿತ್ರಗಳನ್ನು ನೋಡಿದ್ರೆ ತಿಳಿಯುತ್ತದೆ.

cricketer-jonty-rhodes-test-rides-re-shotgun-650-and-himalayan-452

ಜಾಂಟಿ ರೋಡ್ಸ್ ಅವರು ಪ್ರಿ - ಫೇಸ್ ಲಿಫ್ಟ್ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 500 ಬೈಕ್ ಅನ್ನು ಸಹ ಹೊಂದಿದ್ದಾರೆ. ಜಾಂಟಿ ಈ ಪವರ್‌ಫುಲ್ ಮೋಟಾರ್ ಸೈಕಲ್ ಅನ್ನು ಅನೇಕ ಸಂದರ್ಭಗಳಲ್ಲಿ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಬಹುಶಃ, ಇದು ಅವರ ಮೊದಲ ರಾಯಲ್ ಎನ್ಫೀಲ್ಡ್ ಮೋಟಾರ್‌ ಸೈಕಲ್ ಆಗಿರಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, March 29, 2024, 9:00 [IST]
English summary
Cricketer jonty rhodes test rides re shotgun 650 and himalayan 452
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+