ದುಬಾರಿ ಬೆಲೆಯ ಐಷಾರಾಮಿ ಜಾಗ್ವಾರ್ ಸ್ಪೋರ್ಟ್ಸ್ ಕಾರು ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಭಾರತ ಕಂಡ ಅತ್ಯುತ್ತಮ ವೇಗದ ಬೌಲರ್‌ಗಳ ಮೊಹಮ್ಮದ್ ಶಮಿ ಕೂಡ ಒಬ್ಬರು. ಮೊಹಮ್ಮದ್ ಶಮಿ ಅವರು ತಮ್ಮ ವೃತ್ತಿ ಜೀವನದಲ್ಲಿ ಹಲವು ಬಾರಿ ಟೀಂ ಇಂಡಿಯಾ ತಂಡದ ಗೆಲುವಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಇವರು ಒಟ್ಟು 9 ವಿಕೆಟ್ ಪಡೆದು ಗಮನಸೆಳೆದಿದ್ದರು.

ದುಬಾರಿ ಬೆಲೆಯ ಐಷಾರಾಮಿ ಜಾಗ್ವಾರ್ ಸ್ಪೋರ್ಟ್ಸ್ ಕಾರು ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ ಒನ್ ಡೇ ಮ್ಯಾಚ್ ನಲ್ಲಿ 50 ವಿಕೆಟ್ ಪಡೆದ ಎರಡನೇ ಅತಿ ವೇಗದ ಭಾರತೀಯ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ತಮ್ಮ ವೇಗದ ಬೌಲಿಂಗ್ ಮೂಲಕ ಹಲವು ದಾಖಲೆಗಳು ಮಾಡಿದ ಶಮಿ ಭಾರತ ತಂಡದ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರು. ಈ ಬಾರಿಯ ಐಪಿಎಲ್ ನಲ್ಲಿ ಇವರು ಗುಜರಾತ್‌ ಟೈಟನ್ಸ್ ತಂಡದ ಪರವಾಗಿ ಆಟವಾಡಿದ್ದಾರೆ. ಮೊಹಮ್ಮದ್ ಶಮಿ ಅವರು ಇತ್ತೀಚೆಗೆ ಹೊಸ ಹೊಚ್ಚ ಹೊಸ ಜಾಗ್ವಾರ್ ಎಫ್-ಟೈಪ್ ಐಷಾರಾಮಿ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ.

ದುಬಾರಿ ಬೆಲೆಯ ಐಷಾರಾಮಿ ಜಾಗ್ವಾರ್ ಸ್ಪೋರ್ಟ್ಸ್ ಕಾರು ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಕ್ರಿಕೆಟಿಗ ಇತ್ತೀಚೆಗೆ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಜೊತೆಗೆ ಚಿತ್ರವನ್ನು ಪೋಸ್ಟ್ ಮಾಡಿದ್ದರು ಮತ್ತು ಇದೀಗ ಹೊಸ ಸ್ಪೋರ್ಟ್ಸ್ ಕಾರು ತನ್ನ ಗ್ಯಾರೇಜ್ ಸೇರಿದೆ, ಈ ಹೊಸ ಜಾಗ್ವಾರ್ ಎಫ್-ಟೈಪ್ ಐಷಾರಾಮಿ ಸ್ಪೋರ್ಟ್ಸ್ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

ದುಬಾರಿ ಬೆಲೆಯ ಐಷಾರಾಮಿ ಜಾಗ್ವಾರ್ ಸ್ಪೋರ್ಟ್ಸ್ ಕಾರು ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಈ ಜನಪ್ರಿಯ ಜಾಗ್ವಾರ್ ಎಫ್-ಟೈಪ್ ಐಷಾರಾಮಿ ಸ್ಪೋರ್ಟ್ಸ್ ಕಾರಿನ ಬಗ್ಗೆ ಹೇಳುವುದಾದರೆ, ಜಾಗ್ವಾರ್ ಎಫ್-ಟೈಪ್ ಕಾರಿನಲ್ಲಿ 2.0-ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್‌ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 295 ಬಿಹೆಚ್‍ಪಿ ಪವರ್ ಮತ್ತು 400 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು . 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಜೊತೆಗೆ ಜೋಡಿಸಲಾಗಿದೆ.

ದುಬಾರಿ ಬೆಲೆಯ ಐಷಾರಾಮಿ ಜಾಗ್ವಾರ್ ಸ್ಪೋರ್ಟ್ಸ್ ಕಾರು ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ ಅವರ ಜಾಗ್ವಾರ್ ಎಫ್-ಟೈಪ್ ಹೊರತಾಗಿ ಒಂದು ಕೂಪ್ ಅಥವಾ ಕನ್ವರ್ಟಿಬಲ್ ಆಗಿ ಲಭ್ಯವಿರುವ ಕಾರಿನ ಇನ್ನೂ ಹೆಚ್ಚು ಶಕ್ತಿಶಾಲಿ ಆವೃತ್ತಿಯನ್ನು ಮಾರಾಟದಲ್ಲಿದೆ ಎಂದು ಗಮನಿಸಬೇಕಾದ ಅಂಶವಾಗಿದೆ ಇತರ ಆವೃತ್ತಿಯು ಅದರ ಶಕ್ತಿಯ ಮೂಲವಾಗಿ ಸೂಪರ್ಚಾರ್ಜ್ಡ್ 5.0-ಲೀಟರ್ ವಿ8 ಎಂಜಿನ್ ಅನ್ನು ಪಡೆಯುತ್ತದೆ.

ದುಬಾರಿ ಬೆಲೆಯ ಐಷಾರಾಮಿ ಜಾಗ್ವಾರ್ ಸ್ಪೋರ್ಟ್ಸ್ ಕಾರು ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಇದು 445 ಬಿಹೆಚ್‍ಪಿ ಪವರ್ ಮತ್ತು 580 ಎನ್ಎಂ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಈ ಎಂಜಿನ್ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ದುಬಾರಿ ಬೆಲೆಯ ಐಷಾರಾಮಿ ಜಾಗ್ವಾರ್ ಸ್ಪೋರ್ಟ್ಸ್ ಕಾರು ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ ಹೊಸ ಜಾಗ್ವಾರ್ ಎಫ್-ಟೈಪ್ ಖರೀದಿಸುವ ಸುದ್ದಿಯನ್ನು ಅಮಿತ್ ಗಾರ್ಗ್ ಅವರ ಖಾತೆಯಿಂದ ಲಿಂಕ್ಡ್‌ಇನ್ ಪೋಸ್ಟ್ ಮೂಲಕ ಹಂಚಿಕೊಳ್ಳಲಾಗಿದೆ. ಮೊಹಮ್ಮದ್ ಶಮಿ ಅವರು ಖರೀದಿಸಿದ ಜಾಗ್ವಾರ್ ಎಫ್-ಟೈಪ್ ಕಾರು ಕೆಂಪು ಬಣ್ಣವನ್ನು ಹೊಂದಿದೆ.

ದುಬಾರಿ ಬೆಲೆಯ ಐಷಾರಾಮಿ ಜಾಗ್ವಾರ್ ಸ್ಪೋರ್ಟ್ಸ್ ಕಾರು ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಜಾಗ್ವಾರ್ ಎಫ್-ಟೈಪ್ ಕಾರು ಯುಲಾಂಗ್ ವೈಟ್ ಮೆಟಾಲಿಕ್, ನಾರ್ವಿಕ್ ಬ್ಲಾಕ್, ಫ್ಯೂಜಿ ವೈಟ್, ಸ್ಯಾಂಟೋರಿನಿ ಬ್ಲ್ಯಾಕ್ ಮೆಟಾಲಿಕ್, ಇಂಡಸ್ ಸಿಲ್ವರ್, ಲೋಯಿರ್ ಬ್ಲೂ ಮೆಟಾಲಿಕ್, ಅಲ್ಟ್ರಾ ಬ್ಲೂ ಮೆಟಾ, ಬ್ರಿಟಿಷ್ ರೇಸಿಂಗ್ ಗ್ರೀನ್ ಮೆಟಾಲಿಕ್ ಮತ್ತು ಕೊರಿಸ್ ಗ್ರೇ ಮೆಟಾಲಿಕ್ ನಂತಹ ಹಲವಾರು ಬಣ್ಣ ಆಯ್ಕೆಗಳನ್ನು ಆಯ್ಕೆ ಮಾಡಬಹುದು.

ದುಬಾರಿ ಬೆಲೆಯ ಐಷಾರಾಮಿ ಜಾಗ್ವಾರ್ ಸ್ಪೋರ್ಟ್ಸ್ ಕಾರು ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಐಷಾರಾಮಿ ಕಾರು ತಯಾರಕ ಕಂಪನಿಯಾದ ಜಾಗ್ವಾರ್ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಎಕ್ಸ್ಎಫ್ ಐಷಾರಾಮಿ ಸೆಡಾನ್ ಅನ್ನು ಕಳೆದ ವರ್ಷ ಬಿಡುಗಡೆಗೊಳಿಸಿತ್ತು. ಹೊಸ ಜಾಗ್ವಾರ್ ಎಕ್ಸ್ಎಫ್ ಸೆಡಾನ್‌ನ ಫೇಸ್‌ಲಿಫ್ಟ್ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಆರ್-ಡೈನಾಮಿಕ್ ಮತ್ತು ಎಸ್ ಎಂದು ಕರೆಯಲ್ಪಡುವ ಎರಡು ರೂಪಂತರಗಳಲ್ಲಿ ಲಭ್ಯವಿರಲಿದೆ. ಈ ಜಾಗ್ವಾರ್ ಎಕ್ಸ್ಎಫ್ ಸೆಡಾನ್ 2.0-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಮುಂದುವರಿಯುತ್ತದೆ. ಈ ಎಂಜಿನ್ 247 ಬಿಹೆಚ್‍ಪಿ ಪವರ್ ಮತ್ತು 365 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಸೆಡಾನ್ 6.5 ಸೆಕೆಂಡ್‌ಗಳಲ್ಲಿ ಶೂನ್ಯದಿಂದ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಇನ್ನು ಈ ಸೆಡಾನ್ ಗಂಟೆಗೆ 250 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ.

ದುಬಾರಿ ಬೆಲೆಯ ಐಷಾರಾಮಿ ಜಾಗ್ವಾರ್ ಸ್ಪೋರ್ಟ್ಸ್ ಕಾರು ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಮೊಹಮ್ಮದ್ ಶಮಿ ಅವರು ಇತ್ತೀಚೆಗೆ ಹೊಸ ರಾಯಲ್ ಎನ್‌ಫೀಲ್ಡ್ ಕಾಂಟಿನೆಂಟಲ್ ಜಿಟಿ 650 ಬೈಕ್ ಅನ್ನು ಖರೀದಿಸಿದ್ದಾರೆ. ಮಿಸ್ಟರ್ ಕ್ಲೀನ್ ಎಂದು ಕರೆಯಲ್ಪಡುವ ಟಾಪ್-ಎಂಡ್ ರೂಪಾಂತರವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಜಿಟಿ 650 ಪ್ರಸ್ತುತ ರಾಯಲ್ ಎನ್‌ಫೀಲ್ಡ್‌ನ ಪ್ರಮುಖ ಮಾದರಿಯಾಗಿದೆ. ಜಿಟಿ 650 ಗಿಂತ ಮೊದಲು, ಜಿಟಿ 535 ರಾಯಲ್ ಎನ್‌ಫೀಲ್ಡ್‌ಗೆ ಪ್ರಮುಖ ಮೋಟಾರ್‌ಸೈಕಲ್ ಆಗಿತ್ತು. ಆದರೆ ನಂತರ ಜಿಟಿ 535 ಅನ್ನು ಸ್ಥಗಿತಗೊಳಿಸಲಾಗಿದೆ. ರಾಯಲ್ ಎನ್‌ಫೀಲ್ಡ್ ಹೊಸ ಫ್ಲ್ಯಾಗ್‌ಶಿಪ್ ಆಗಬಹುದಾದ ಹೆಚ್ಚಿನ ಹೊಸ ಮೋಟಾರ್‌ಸೈಕಲ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿದೆ.

ದುಬಾರಿ ಬೆಲೆಯ ಐಷಾರಾಮಿ ಜಾಗ್ವಾರ್ ಸ್ಪೋರ್ಟ್ಸ್ ಕಾರು ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಕೆಫೆ ರೇಸರ್ ವಿನ್ಯಾಸದ ಭಾಷೆಯಿಂದಾಗಿ ಕಾಂಟಿನೆಂಟಲ್ ಜಿಟಿ 650 ಅನ್ನು ಅತ್ಯಂತ ಸುಂದರವಾದ ಮೋಟಾರ್‌ಸೈಕಲ್‌ಗಳಲ್ಲಿ ಒಂದೆಂದು ಅನೇಕ ಜನರು ಪರಿಗಣಿಸುತ್ತಾರೆ. ಇತ್ತೀಚೆಗೆ ಅನೇಕ ದ್ವಿಚಕ್ರ ವಾಹನ ತಯಾರಕರು ಕೆಫೆ ರೇಸರ್ ಬೈಕ್ ಗಳನ್ನು ಬಿಡುಗಡೆಗೊಳಿಸುತ್ತಿಲ್ಲ. ಮೋಟಾರ್‌ಸೈಕಲ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು ಮತ್ತು ವೃತ್ತಾಕಾರದ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ರೇಸಿಂಗ್ ಕೌಲ್‌ನೊಂದಿಗೆ ಸಿಂಗಲ್-ಸೀಟ್, 12.5-ಲೀಟರ್ ಇಂಧನ ಟ್ಯಾಂಕ್ ಮತ್ತು ಬ್ಲ್ಯಾಕ್-ಔಟ್ ಸ್ಪೋಕ್ಡ್ ವೀಲ್‌ಗಳೊಂದಿಗೆ ಬರುತ್ತದೆ.

ದುಬಾರಿ ಬೆಲೆಯ ಐಷಾರಾಮಿ ಜಾಗ್ವಾರ್ ಸ್ಪೋರ್ಟ್ಸ್ ಕಾರು ಖರೀದಿಸಿದ ಕ್ರಿಕೆಟಿಗ ಮೊಹಮ್ಮದ್ ಶಮಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ ಅವರು ಹೊಸ ಹೊಚ್ಚ ಹೊಸ ಜಾಗ್ವಾರ್ ಎಫ್-ಟೈಪ್ ಐಷಾರಾಮಿ ಸ್ಪೋರ್ಟ್ಸ್ ಕಾರನ್ನು ಖರೀದಿಸಿದ್ದಾರೆ. ಈ ಹೊಸ ಜಾಗ್ವಾರ್ ಎಫ್-ಟೈಪ್ ಐಷಾರಾಮಿ ಸ್ಪೋರ್ಟ್ಸ್ ಕಾರು ಆಕರ್ಷಕ ವಿನ್ಯಾಸವನ್ನು ಹೊಂದಿದೆ.

Most Read Articles

Kannada
English summary
Cricketer mohammad shami buys new jaguar f type sports car details
Story first published: Friday, July 22, 2022, 17:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X