ಮೈದಾನದ ಹೊರಗೂ ಮೊಹಮ್ಮದ್ ಶಮಿ ಹೀರೋ: ಅಪಘಾತಕ್ಕೀಡಾದವರ ರಕ್ಷಣೆ
ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ (Mohammed Shami). ಸೆಮಿಫೈನಲ್ ಪಂದ್ಯದಲ್ಲಿ 7 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು. ಈಗ ಕಾರು ಅಪಘಾತಕ್ಕೀಡಾಗಿ ಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡುವ ಮೂಲಕ ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಅವರು ಸುದ್ದಿಯಾಗಿದ್ದಾರೆ.
ಘಟನೆಯ ವಿಡಿಯೋವನ್ನು ಶಮಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಉತ್ತರಾಖಂಡದ ನೈನಿತಾಲ್ನ ಕಣಿವೆಯೊಂದರಲ್ಲಿ ಕಾರೊಂದು ಅಪಘಾತಕ್ಕೀಡಾಗಿದೆ. ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಟೀ ಇಂಡೀಯಾದ ಫಾಸ್ಟ್ ಬೌಲರ್ ಮೊಹಮ್ಮದ್ ಶಮಿ ಶಮಿ ಗಮನಿಸಿ ಕಾರು ನಿಲ್ಲಿಸಿಸಂಕಷ್ಟಕ್ಕೆ ಸಿಲುಕಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡು ಮೂಲಕ ಮಾನವೀಯತೆ ಮೆರೆದಿದ್ದಾರೆ
ರಸ್ತೆ ದಾಟಿ ಕಣಿವೆಗೆ ಬಿದ್ದ ಕಾರನ್ನು ವಿಡಿಯೋದಲ್ಲಿ ಕಾಣಬಹುದು. ಶಮಿ ಕಾರಲ್ಲಿದ್ದ ವ್ಯಕ್ತಿಯನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದು ಉಪಚರಿಸುತ್ತಿರುವುದೂ ವೀಡಿಯೊದಲ್ಲಿ ನೋಡಬಹುದು. ಆತ ತುಂಬಾ ಅದೃಷ್ಟಶಾಲಿ. ದೇವರು ಮರುಜನ್ಮ ನೀಡಿದ್ದಾನೆ. ನೈನಿತಾಲ್ ಬಳಿಯ ಕಣಿವೆಯಲ್ಲಿ ಕಾರು ಅಪಘಾತಕ್ಕೀಡಾಗಿತ್ತು. ನಾವು ಆತನನ್ನು ಸುರಕ್ಷಿತವಾಗಿ ಹೊರಗೆ ಕರೆತಂದೆವು' ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.

ಇನ್ನು ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಯುವ ಕ್ರಿಕೆಟಿಗರಿಗೆ ಪ್ರೇರಣೆಯಾಗಿರುವ ಮೊಹಮ್ಮದ್ ಶಮಿಗೆ ಅಮ್ರೋಹ ಜಿಲ್ಲೆಯ ಸಹಸಪುರ ಅಲಿನಗರ ಗ್ರಾಮದಲ್ಲಿ ಸಣ್ಣ ಕ್ರೀಡಾಂಗಣ ನಿರ್ಮಾಣ ಮಾಡಲು ಅನುಮೋದನೆ ಸಿಕ್ಕಿದೆ. ಸಹಸಪುರ ಅಲಿನಗರ ಗ್ರಾಮದ ಯುವಕರು, ಯುವ ಕ್ರಿಕೆಟಿಗರಿಗೆ ಮೊಹಮ್ಮದ್ ಶಮಿ ಪ್ರೇರಣೆಯಾಗಿದ್ದಾರೆ. ಈ ಗ್ರಾಮದಲ್ಲಿ ಕ್ರೀಡಾಂಗಣದಲ್ಲಿ ನಿರ್ಮಾಣ ಮಾಡುವುದರಿಂದ ಹೆಚ್ಚಿನ ಯುವ ಸಮೂಹ ಕ್ರೀಡೆಯಲ್ಲಿ ತೊಡಿಗಿಸಿಕೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಮತ್ತೊಂದು ವಿಶೇಷ ಅಂದರೆ ಶಮಿ ಗ್ರಾಮದಲ್ಲಿ ಕ್ರೀಡಾಂಗಣ ಹಾಗೂ ಜಿಮ್ ತೆರೆಯಲು ಇದೇ ಕ್ಷೇತ್ರದ ಸಂಸದ, ಆರ್‌ಎಲ್‌ಡಿ ಪಕ್ಷದ ನಾಯಕ ಜಯಂತ್ ಸಿಂಗ್ ತಮ್ಮ ಸಂಸದರ ನಿಧಿ ನೀಡುವುದಾಗಿ ಘೋಷಿಸಿದ್ದಾರೆ. ಅತೀ ವೇಗದಲ್ಲಿ ವಿಶ್ವಕಪ್ ಟೂರ್ನಿಯಲ್ಲಿ 50 ವಿಕೆಟ್ ಸಾಧನೆ ಮಾಡಿದ ವಿಶ್ವದ ಮೊದಲ ಕ್ರಿಕೆಟಿಗ ಅನ್ನೋ ದಾಖಲೆಯನ್ನು ಶಮಿ ಬರೆದಿದ್ದಾರೆ. ಶಮಿ 17 ಇನ್ನಿಂಗ್ಸ್‌ನಲ್ಲಿ 50 ವಿಕೆಟ್ ಸಾಧನೆ ಮಾಡಿದ್ದಾರೆ.

ಇನ್ನು ಇತ್ತೀಚಿನ ದಿನಗಳಲ್ಲಿ, ಸರ್ಕಾರವು ರಸ್ತೆ ಅಪಘಾತ ಸಂತ್ರಸ್ತರಿಗೆ ಸಹಾಯ ಮಾಡುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ, ಕಾನೂನು ತೊಡಕುಗಳನ್ನು ತೆಗೆದುಹಾಕಿದೆ. ಈ ಹಿಂದೆ ಕಠಿಣ ಕನೂನು ಇದ್ದ ಕಾರಣ ಅನೇಕರನ್ನು ಸಹಾಯ ಮಾಡಲು ಹಿಂದೆ ಮುಂದೆ ನೋಡುತ್ತಿದ್ದರು. ಭಾರತದಾದ್ಯಂತ '108' ನಂತಹ ತುರ್ತು ಆಂಬ್ಯುಲೆನ್ಸ್ ಸೇವೆಗಳು ಲಭ್ಯವಿರುವುದರಿಂದ, ಹತ್ತಿರದ ವೈದ್ಯಕೀಯ ಸೌಲಭ್ಯಗಳಿಗೆ ಸಂತ್ರಸ್ತರನ್ನು ತಕ್ಷಣ ಆಸ್ಪತ್ರೆಗೆ ರವಾನಿಸಲು ಸುಲಭವಾಗಿದೆ.
ಕಿರಿದಾದ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ನೀಡುವ ಥ್ರಿಲ್ ಮತ್ತು ಮರೆಯಲಾಗದ ದೃಶ್ಯಾವಳಿಗಳ ಹೊರತಾಗಿಯೂ, ಅವು ಮೂಲಭೂತವಾದ ರಸ್ತೆ ಸುರಕ್ಷತೆ ನಿಯಮಗಳಿಗೆ ಎಚ್ಚರಿಕೆ ಮತ್ತು ಅನುಸರಣೆ ಅಗತ್ಯವಿರುವ ಅಪಾಯಗಳನ್ನು ಉಂಟುಮಾಡುತ್ತವೆ. ಮಾರಣಾಂತಿಕ ಅಪಘಾತವನ್ನು ತಪ್ಪಿಸಲು ನಿಮ್ಮ ಲೇನ್‌ನಲ್ಲಿ, ನಿಯಮಿತ ವೇಗದಲ್ಲಿ ಎಚ್ಚರದಿಂದ ವಾಹನಗಳನ್ನು ಚಲಾಯಿಸಿ.

ವಿಶೇಷವಾಗಿ ಕಾಣದ ಕಾರ್ನರ್ ಗಳಲ್ಲಿ ಸುತ್ತಲೂ, ಸುರಕ್ಷಿತ ಪರ್ವತ ಚಾಲನೆಯ ಮತ್ತೊಂದು ಪ್ರಮುಖ ಅಂಶವಾಗಿದೆ. ವಿಶೇಷವಾಗಿ ಪರ್ವತ ಪ್ರದೇಶಗಳಂತಹ ಭೂಪ್ರದೇಶಗಳಲ್ಲಿ ವಾಹನ ಚಾಲವಣೆಯು ಸವಾಲು ಆಗಿದೆ. ಜವಾಬ್ದಾರಿಯುತ ಚಾಲನೆಯ ಸುರಕ್ಷತೆಯನ್ನು ಖಾತ್ರಿಪಡಿಸುವಲ್ಲಿ ನಾವು ವಹಿಸಬಹುದಾದ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದರಿಂದ ಎಲ್ಲಾರೂ ತಪ್ಪದೆ ರಸ್ತೆ ನಿಯಮಗಳನ್ನು ಪಾಲಿಸಿ ವಾಹನ ಚಾಲನೆ ಮಾಡಬೇಕು.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications