India
YouTube

ತಂದೆಗೆ ದುಬಾರಿ ಗಿಫ್ಟ್ ನೀಡಿ ಹಳೆಯ ದಿನಗಳನ್ನು ನೆನಪಿಸುವ ಫೋಟೊ ಹಂಚಿಕೊಂಡ 'ಪೃತ್ವಿ ಶಾ'

ಭಾರತದ ಖ್ಯಾತ ಕ್ರಿಕೆಟಿಗರಾದ ಪೃತ್ವಿಷಾ ತಮ್ಮ ತಂದೆಗೆ ದುಬಾರಿ ಬಿಎಂಡಬ್ಲ್ಯು ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಉಡುಗೊರೆ ನೀಡುವಾಗ ತೆಗೆದಿರುವ ಫೋಟೋವನ್ನು ಸಾಮಾಜಿಕ ಜಾಲತಾಣದದಲ್ಲಿ ಹಂಚಿಕೊಂಡಿದ್ದು, ಸದ್ಯ ಸಖತ್ ವೈರಲ್ ಆಗಿದೆ.

ತಂದೆಗೆ ದುಬಾರಿ ಗಿಫ್ಟ್ ನೀಡಿ ಹಳೆಯ ದಿನಗಳನ್ನು ನೆನಪಿಸುವ ಫೋಟೊ ಹಂಚಿಕೊಂಡ 'ಪೃತ್ವಿ ಶಾ'

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಐಷಾರಾಮಿ ವಾಹನ, ಮನೆ ಇತರ ವಸ್ತುಗಳನ್ನು ಕೊಂಡಾಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗು ತೋರಿಸಿ ಖುಷಿ ಪಡುತ್ತಿರುತ್ತಾರೆ. ಆದರೆ ಇಂತಹ ಪೋಸ್ಟ್‌ಗಳನ್ನು ಮಾಡಿದಾಗ ಕೆಲವರು ಸೆಲಬ್ರಿಟಿಗಳಿಗೆ ಮಾತ್ರ ಹೆಚ್ಚು ಕ್ರೇಜ್ ಇರುತ್ತದೆ. ಅಂದರೆ ಬಡತನದಿಂದ ಬಂದು ಸ್ವಯಂ ಕೃಷಿಯಿಂದ ಬೆಳೆದವರಿಗೆ ಜನರ ಮನ್ನಣೆ ಹೆಚ್ಚಾಗಿರುತ್ತದೆ.

ತಂದೆಗೆ ದುಬಾರಿ ಗಿಫ್ಟ್ ನೀಡಿ ಹಳೆಯ ದಿನಗಳನ್ನು ನೆನಪಿಸುವ ಫೋಟೊ ಹಂಚಿಕೊಂಡ 'ಪೃತ್ವಿ ಶಾ'

ಉದಾಹರಣೆಗೆ ಧೋನಿ, ಕೊಹ್ಲಿ, ಷಾರುಕ್ ಖಾನ್, ಯಷ್, ದುನಿಯಾ ವಿಜಯ್ ಸೇರಿದಂತೆ ಹಲವರು ಸಾಮಾನ್ಯ ಜೀವನ ನಡೆಸಿ ತಮ್ಮ ಟ್ಯಾಲೆಂಟ್‌ನಿಂದ ಬೆಳೆದವರು. ಇವರ ಪೋಸ್ಟ್‌ಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಬೆಂಬಲ ವ್ಯಕ್ತವಾಗುತ್ತಿರುತ್ತದೆ. ಇಂತಹ ಸೆಲಬ್ರಿಟಿಗಳ ಲಿಸ್ಟ್‌ನಲ್ಲಿ ಪೃತ್ವಿಷಾ ಕೂಡ ಒಬ್ಬರು, ತಮ್ಮ ಬಾಲ್ಯದಲ್ಲಿ ಮಧ್ಯಮ ವರ್ಗದ ಜೀವನವನ್ನು ಕಳೆದು ಇಂದು ಐಷಾರಾಮಿ ಜೀವನ ಸಾಗಿಸುತ್ತಿದ್ದಾರೆ.

ತಂದೆಗೆ ದುಬಾರಿ ಗಿಫ್ಟ್ ನೀಡಿ ಹಳೆಯ ದಿನಗಳನ್ನು ನೆನಪಿಸುವ ಫೋಟೊ ಹಂಚಿಕೊಂಡ 'ಪೃತ್ವಿ ಶಾ'

ಇದೀಗ ಅವರ ತಂದೆಗೆ ಪೃಥ್ವಿ ಷಾ ದುಬಾರಿ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಿ ಅವರನ್ನು ಅಚ್ಚರಿಗೊಳಿಸಿದ್ದಾರೆ. BMW 6-ಸರಣಿಯ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ. ಈ ಮಾಹಿತಿಯನ್ನು ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ಮತ್ತೊಂದು ಸರ್ಪ್ರೈಸ್ ಇದೆ.

ತಂದೆಗೆ ದುಬಾರಿ ಗಿಫ್ಟ್ ನೀಡಿ ಹಳೆಯ ದಿನಗಳನ್ನು ನೆನಪಿಸುವ ಫೋಟೊ ಹಂಚಿಕೊಂಡ 'ಪೃತ್ವಿ ಶಾ'

ಅದೇನಂದರೆ ತಮ್ಮ ಬಾಲ್ಯ ಜೀವನವನ್ನು ಬಹಿರಂಗಪಡಿಸುವ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಪೃತ್ವಿಷಾ ಮತ್ತು ತನ್ನ ತಂದೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ಆ ಫೋಟೋದಲ್ಲಿ ಯಮಹಾ ಲಿಬೆರೊ ಮೋಟಾರ್‌ಸೈಕಲ್ ನಲ್ಲಿ ಇಬ್ಬರು ಕ್ರಿಕೆಟ್ ಕಿಟ್‌ವೊಂದನ್ನು ಇಟ್ಟುಕೊಂಡು ಪ್ರಯಾಣಿಸುತ್ತಿದ್ದಾರೆ.

ತಂದೆಗೆ ದುಬಾರಿ ಗಿಫ್ಟ್ ನೀಡಿ ಹಳೆಯ ದಿನಗಳನ್ನು ನೆನಪಿಸುವ ಫೋಟೊ ಹಂಚಿಕೊಂಡ 'ಪೃತ್ವಿ ಶಾ'

ಕ್ರಿಕೆಟಿಗ ಪೃಥ್ವಿ ತನ್ನ ಇಳಿವಯಸ್ಸಿನಲ್ಲಿ ಮಧ್ಯಮ ವರ್ಗದ ಬದುಕನ್ನು ಹೇಗೆ ಬದುಕಿದನೆಂಬುದನ್ನು ಈ ಚಿತ್ರ ತಿಳಿಸುತ್ತದೆ. ಈ ಜೀವನದಿಂದ ಪೃಥ್ವಿ ಷಾ ಈಗ ಬಿಎಂಡಬ್ಲ್ಯು ಐಷಾರಾಮಿ ಕಾರು ಬಳಸುವಷ್ಟು ಐಷಾರಾಮಿ ಜೀವನಕ್ಕೆ ಬದಲಾಗಿದ್ದಾರೆ. ಅವರ ಪರಿಶ್ರಮದಿಂದ ಈ ಸ್ಥಾನಕ್ಕೆ ತಲುಪಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್‌ಗಳನ್ನು ಮಾಡಿದ್ದಾರೆ.

ತಂದೆಗೆ ದುಬಾರಿ ಗಿಫ್ಟ್ ನೀಡಿ ಹಳೆಯ ದಿನಗಳನ್ನು ನೆನಪಿಸುವ ಫೋಟೊ ಹಂಚಿಕೊಂಡ 'ಪೃತ್ವಿ ಶಾ'

ಪೃಥ್ವಿಷಾ ಬಿಎಂಡಬ್ಲ್ಯು 6 ಸಿರೀಸ್ ಸೆಡಾನ್ ಜಿಟಿ ರೂಪಾಂತರವನ್ನು ಖರೀದಿಸಿದ್ದಾರೆ. ಈ ಕಾರು ರೂ. 70 ಲಕ್ಷಕ್ಕೂ ಅಧಿಕ ಬೆಲೆಯಲ್ಲಿ ಮಾರಾಟಕ್ಕೆ ಲಭ್ಯವಿದೆ. BMW ಈ ಕಾರನ್ನು ಆಧುನಿಕ ಸಮಕಾಲೀನರಿಗೆ ಆದರ್ಶ ವಾಹನವಾಗಿ ಅಭಿವೃದ್ಧಿಪಡಿಸಿದೆ. ಇದರ ಪವರ್, ಪರ್ಫಾಮೆನ್ಸ್‌, ಅತ್ಯಾಧುನಿಕ ತಂತ್ರಜ್ಞಾನ, ಆಕರ್ಷಣೀಯ ಲುಕ್‌ನೊಂದಿಗೆ ಜನಪ್ರಿಯತೆ ಪಡೆದುಕೊಂಡಿದೆ.

ತಂದೆಗೆ ದುಬಾರಿ ಗಿಫ್ಟ್ ನೀಡಿ ಹಳೆಯ ದಿನಗಳನ್ನು ನೆನಪಿಸುವ ಫೋಟೊ ಹಂಚಿಕೊಂಡ 'ಪೃತ್ವಿ ಶಾ'

6 ಸರಣಿಯ ಐಷಾರಾಮಿ ಕಾರು ಸುಂದರವಾದ ಮತ್ತು ಸೊಗಸಾದ LED DRL ಗಳನ್ನು ಹೊಂದಿದ್ದು ಅದು ಹಲವು ಪಟ್ಟು ಹೆಚ್ಚು ಆಕರ್ಷಣೀಯವಾಗಿ ಕಾಣುವಂತೆ ಮಾಡುತ್ತದೆ. ಕಾರಿನ ಒಳಭಾಗವೂ ಹೆಚ್ಚು ಆಕರ್ಷಕವಾಗಿದ್ದು, ಅದರಲ್ಲೂ ಈ ಕಾರಿನಲ್ಲಿ ತಾಂತ್ರಿಕ ಸೌಲಭ್ಯಗಳು ಪ್ರಯಾಣಿಕರಿಗೆ ಮತ್ತಷ್ಟು ಆಸಕ್ತಿ ಹೆಚ್ಚಿಸುತ್ತವೆ.

ತಂದೆಗೆ ದುಬಾರಿ ಗಿಫ್ಟ್ ನೀಡಿ ಹಳೆಯ ದಿನಗಳನ್ನು ನೆನಪಿಸುವ ಫೋಟೊ ಹಂಚಿಕೊಂಡ 'ಪೃತ್ವಿ ಶಾ'

ಹೊಸ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಪಾರ್ಕಿಂಗ್, ಝೋನ್ ಕ್ಲೈಮೇಟ್ ಕಂಟ್ರೋಲ್ ಸಿಸ್ಟಂ, ಎಲೆಕ್ಟ್ರಿಕಲ್ ಅಡ್ಜಸ್ಟ್ ಮಾಡಬಹುದಾದ ಫ್ರಂಟ್ ಸೀಟುಗಳು, ಹೆಡ್‌ರೆಸ್ಟ್‌ಗಳು, 360-ಡಿಗ್ರಿ ಪಾರ್ಕಿಂಗ್ ಕ್ಯಾಮೆರಾ ಮತ್ತು ದೊಡ್ಡ ಪನೋರಮಿಕ್ ಸನ್‌ರೂಫ್ ವೈಶಿಷ್ಟ್ಯಗಳನ್ನು ಈ ಐಷಾರಾಮಿ ಕಾರು ಒಳಗೊಂಡಿದೆ.

ತಂದೆಗೆ ದುಬಾರಿ ಗಿಫ್ಟ್ ನೀಡಿ ಹಳೆಯ ದಿನಗಳನ್ನು ನೆನಪಿಸುವ ಫೋಟೊ ಹಂಚಿಕೊಂಡ 'ಪೃತ್ವಿ ಶಾ'

ಈ ಕಾರು ವಿವಿಧ ಎಂಜಿನ್ ಆಯ್ಕೆಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. GT ಆವೃತ್ತಿಯು 2.0-ಲೀಟರ್ 4-ಸಿಲಿಂಡರ್ ಅನ್ನು ಬಳಸುತ್ತದೆ. ಈ ಮೋಟಾರ್ ಗರಿಷ್ಠ 258 PS ಮತ್ತು 480 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಅಲ್ಲದೇ 2.0 ಲೀಟರ್ ಡೀಸೆಲ್ ಎಂಜಿನ್ ರೂಪಾಂತರದಲ್ಲೂ ಲಭ್ಯವಿದೆ.

ತಂದೆಗೆ ದುಬಾರಿ ಗಿಫ್ಟ್ ನೀಡಿ ಹಳೆಯ ದಿನಗಳನ್ನು ನೆನಪಿಸುವ ಫೋಟೊ ಹಂಚಿಕೊಂಡ 'ಪೃತ್ವಿ ಶಾ'

ಈ ಮೋಟಾರ್ 190 PS ಮತ್ತು 400 Nm ಟಾರ್ಕ್ ಅನ್ನು ಹೊರಸೂಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಿನಲ್ಲಿ ಹೆಚ್ಚು ಶಕ್ತಿಶಾಲಿ ಎಂಜಿನ್ ಆಯ್ಕೆಯನ್ನು ಸಹ ನೀಡುತ್ತದೆ. 3.0-ಲೀಟರ್ 6-ಸಿಲಿಂಡರ್ ಡೀಸೆಲ್ ಮೋಟಾರ್ ಗರಿಷ್ಠ 265 PS ಮತ್ತು 620 Nm ಟಾರ್ಕ್ ಅನ್ನು ಹೊರ ಹಾಕುತ್ತದೆ.

ತಂದೆಗೆ ದುಬಾರಿ ಗಿಫ್ಟ್ ನೀಡಿ ಹಳೆಯ ದಿನಗಳನ್ನು ನೆನಪಿಸುವ ಫೋಟೊ ಹಂಚಿಕೊಂಡ 'ಪೃತ್ವಿ ಶಾ'

ಈ ಎಲ್ಲಾ ಮೋಟರ್‌ಗಳು 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಅನ್ನು ಹೊಂದಿವೆ. ಈ ಬಿಎಂಡಬ್ಲ್ಯು 6 ಸೀರಿಸ್ ಜಿಟಿ ಕಾರು ಸ್ಪೋರ್ಟಿಯರ್ ಎಂ ಸ್ಪೋರ್ಟ್ ರೂಪಾಂತರದಲ್ಲಿ ಬೋಲ್ಡರ್ ಸ್ಟೈಲಿಂಗ್ ಪ್ಯಾಕೇಜ್‌ ಅನ್ನು ಪಡೆಯುತ್ತದೆ. ಒಟ್ಟಾರೆಯಾಗಿ ಈ ಐಷಾರಾಮಿ ಕಾರು ಆಕರ್ಷಕ ಲುಕ್ ಅನ್ನು ಹೊಂದಿರುತ್ತದೆ.

Most Read Articles

Kannada
English summary
Cricketer prithvi shaw gifts bmw 6 series luxury car to dad
Story first published: Tuesday, May 17, 2022, 19:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X