ಬಯೋ ಬಬಲ್ ತಲುಪಿದ ಅನುಭವ ಬಿಚ್ಚಿಟ್ಟ ಖ್ಯಾತ ಸ್ಪಿನ್ನರ್

ಕರೋನಾ ವೈರಸ್ ಕಳೆದ ಒಂದೂವರೆ ವರ್ಷದಿಂದ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಈ ಮಹಾಮಾರಿ ವೈರಸ್'ಗೆ ಯಾವುದೇ ಲಸಿಕೆ ಕಂಡು ಹಿಡಿದಿಲ್ಲ. ಮುನ್ನೆಚ್ಚರಿಕೆ ವಹಿಸುವುದೇ ಸದ್ಯಕ್ಕೆ ಇದಕ್ಕಿರುವ ಮದ್ದು.

ಬಯೋ ಬಬಲ್ ತಲುಪಿದ ಅನುಭವ ಬಿಚ್ಚಿಟ್ಟ ಖ್ಯಾತ ಸ್ಪಿನ್ನರ್

ಜನರು ಮನೆಯಿಂದ ಹೊರಬರುವುದನ್ನು ತಡೆಯಲು ದೇಶದ ಹಲವು ರಾಜ್ಯಗಳಲ್ಲಿ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಇದರಿಂದ ಜನರು ಮನೆಯಲ್ಲಿಯೇ ಉಳಿಯುವಂತಾಗಿದೆ. ಆದರೆ ಕೆಲವು ವ್ಯಕ್ತಿಗಳಿಗೆ ಮನೆಯಿಂದ ಹೊರ ಬರಲೇ ಬೇಕಾದ ಅನಿವಾರ್ಯತೆ ಇರುತ್ತದೆ. ಭಾರತದಲ್ಲಿ ಕರೋನಾ ವೈರಸ್ ಹರಡಿದಾಗಿನಿಂದ ಎಲ್ಲಾ ರೀತಿಯ ಕ್ರಿಕೆಟ್ ಪಂದ್ಯಗಳನ್ನು ರದ್ದುಪಡಿಸಲಾಗಿದೆ.

ಬಯೋ ಬಬಲ್ ತಲುಪಿದ ಅನುಭವ ಬಿಚ್ಚಿಟ್ಟ ಖ್ಯಾತ ಸ್ಪಿನ್ನರ್

ಕ್ರಿಕೆಟ್ ಪಂದ್ಯಗಳನ್ನು ದೀರ್ಘಕಾಲದವರೆಗೆ ಮುಂದೂಡಲು ಬಯಸದ ಬಿಸಿಸಿಐ ಕೆಲವು ಕ್ರಿಕೆಟ್ ಪಂದ್ಯಗಳನ್ನು ಪುನರಾರಂಭಿಸಲು ನಿರ್ಧರಿಸಿತು. ಅದರಂತೆ ಕಳೆದ ವರ್ಷ ಏಪ್ರಿಲ್ ತಿಂಗಳಿನಲ್ಲಿ ನಡೆಯಬೇಕಾಗಿದ್ದ 2020ರ ಐಪಿಎಲ್ ಪಂದ್ಯಾವಳಿಯನ್ನು ಕಳೆದ ವರ್ಷ ನವೆಂಬರ್'ನಲ್ಲಿ ಯುಎಇಯಲ್ಲಿ ಆಯೋಜಿಸಲಾಗಿತ್ತು.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಬಯೋ ಬಬಲ್ ತಲುಪಿದ ಅನುಭವ ಬಿಚ್ಚಿಟ್ಟ ಖ್ಯಾತ ಸ್ಪಿನ್ನರ್

ಇದರ ನಂತರ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡಗಳು ಭಾರತದಲ್ಲಿ ನಡೆದ ಸರಣಿಗಳಲ್ಲಿ ಭಾಗವಹಿಸಿದ್ದವು. ಕರೋನಾ ವೈರಸ್‌ ಎರಡನೇ ಅಲೆಯಿಂದಾಗಿ 2021ರ ಐಪಿಎಲ್ ಪಂದ್ಯಾವಳಿಯನ್ನು ಅಮಾನತುಗೊಳಿಸಲಾಗಿದೆ.

ಬಯೋ ಬಬಲ್ ತಲುಪಿದ ಅನುಭವ ಬಿಚ್ಚಿಟ್ಟ ಖ್ಯಾತ ಸ್ಪಿನ್ನರ್

ವಿಶ್ವ ಚಾಂಪಿಯನ್‌ಶಿಪ್ ಟೆಸ್ಟ್ ಸರಣಿಯ ಫೈನಲ್‌ನಲ್ಲಿ ಆಡಲಿರುವ ಭಾರತೀಯ ಕ್ರಿಕೆಟ್ ತಂಡವು ಜೂನ್ 2ರಂದು ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸಲಿದೆ. ಅದಕ್ಕೂ ಮೊದಲು ಎಲ್ಲಾ ಕ್ರಿಕೆಟಿಗರನ್ನು 14 ದಿನಗಳ ಕಾಲ ಕ್ವಾರಂಟೈನ್'ನಲ್ಲಿಡಲು ಮುಂಬಯಿನಲ್ಲಿ ಬಯೋ ಬಬಲ್ ಸ್ಥಾಪಿಸಲಾಗಿದೆ.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಬಯೋ ಬಬಲ್ ತಲುಪಿದ ಅನುಭವ ಬಿಚ್ಚಿಟ್ಟ ಖ್ಯಾತ ಸ್ಪಿನ್ನರ್

ಬಯೋ ಬಬಲ್'ನಲ್ಲಿರಲು ದೇಶದ ವಿವಿಧ ಭಾಗಗಳಲ್ಲಿರುವ ಭಾರತೀಯ ಕ್ರಿಕೆಟಿಗರು ಚೆನ್ನೈ, ಹೈದರಾಬಾದ್ ಹಾಗೂ ಕೋಲ್ಕತ್ತಾದ 3 ಸ್ಥಳಗಳಿಂದ ಖಾಸಗಿ ವಿಮಾನಗಳಲ್ಲಿ ಮುಂಬೈ ತಲುಪಿದ್ದಾರೆ.

ಬಯೋ ಬಬಲ್ ತಲುಪಿದ ಅನುಭವ ಬಿಚ್ಚಿಟ್ಟ ಖ್ಯಾತ ಸ್ಪಿನ್ನರ್

ಇದರ ಬಗ್ಗೆ ಖ್ಯಾತ ಆಫ್ ಸ್ಪಿನ್ನರ್ ಆರ್ ಅಶ್ವಿನ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ವಿವಿಧ ನಗರಗಳಲ್ಲಿರುವ ಕ್ರಿಕೆಟಿಗರಿಗೆ ಚೆನ್ನೈ, ಹೈದರಾಬಾದ್ಹಾಗೂ ಕೋಲ್ಕತ್ತಾದಿಂದ ಮಾತ್ರ ಪ್ರತ್ಯೇಕ ವಿಮಾನಗಳನ್ನು ವ್ಯವಸ್ಥೆ ಮಾಡಲಾಗಿತ್ತು.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಬಯೋ ಬಬಲ್ ತಲುಪಿದ ಅನುಭವ ಬಿಚ್ಚಿಟ್ಟ ಖ್ಯಾತ ಸ್ಪಿನ್ನರ್

ಈ ಮೂರು ನಗರಗಳನ್ನು ಕ್ರಿಕೆಟಿಗರು ಹಲವು ಗಂಟೆಗಳ ಕಾಲ ಕಾರಿನಲ್ಲಿ ಪ್ರಯಾಣಿಸಿದ ಬಳಿಕ ತಲುಪಿದ್ದಾರೆ. ಕ್ರಿಕೆಟಿಗರಿದ್ದ ವಿಶೇಷ ವಿಮಾನವು ಚೆನ್ನೈನಿಂದ ಹೈದರಾಬಾದ್'ಗೆ ತಲುಪಿ, ಅಲ್ಲಿಂದ ಕೋಲ್ಕತ್ತಾಗೆ ಹೊರಟು ಕ್ರಿಕೆಟಿಗರನ್ನು ಹೊತ್ತು ಸಂಜೆ 6 ಗಂಟೆಗೆ ಮುಂಬೈ ವಿಮಾನ ನಿಲ್ದಾಣವನ್ನು ತಲುಪಿತು.

ಬಯೋ ಬಬಲ್ ತಲುಪಿದ ಅನುಭವ ಬಿಚ್ಚಿಟ್ಟ ಖ್ಯಾತ ಸ್ಪಿನ್ನರ್

ಕೆಲವೇ ಗಂಟೆಗಳಲ್ಲಿ ಮುಗಿಯ ಬಹುದಾಗಿದ್ದ ಪ್ರಯಾಣಕ್ಕೆ ಬಹುತೇಕ ಒಂದು ದಿನ ಹಿಡಿದಿದೆ. ನಾವು ಮುಂಬೈ ವಿಮಾನ ನಿಲ್ದಾಣವನ್ನು ತಲುಪಿದರೂ ನಾವಿದ್ದ ವಿಮಾನವು ರನ್ ವೇನಲ್ಲಿ ಸಿಲುಕಿದ್ದ ಕಾರಣಕ್ಕೆ ಕೂಡಲೇ ವಿಮಾನದಿಂದ ಹೊರಹೋಗಲು ನಮಗೆ ಅವಕಾಶ ನೀಡಲಿಲ್ಲ ಎಂದು ಆರ್ ಅಶ್ವಿನ್ ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಬಯೋ ಬಬಲ್ ತಲುಪಿದ ಅನುಭವ ಬಿಚ್ಚಿಟ್ಟ ಖ್ಯಾತ ಸ್ಪಿನ್ನರ್

ಕ್ರಿಕೆಟಿಗರು ಮುಂಬೈ ತಲುಪಿದಾಗ ತೌಕ್ತೆ ಚಂಡಮಾರುತವು ಅದರ ತೀವ್ರತೆಯನ್ನು ತೋರಿಸುತ್ತಿತ್ತು. ಇದರಿಂದಾಗಿ ವಿಮಾನದಲ್ಲಿದ್ದ ಹಲವು ಕ್ರಿಕೆಟಿಗರು ವಿಮಾನ ನಿಲ್ದಾಣದಲ್ಲಿಯೇ ಹಲವು ಗಂಟೆಗಳ ಕಾಲ ಕಾಯುವಂತಾಗಿತ್ತು.

Most Read Articles

Kannada
English summary
Cricketer R Ashwin shares his experience on reaching bio bubble in Mumbai. Read in Kannada.
Story first published: Friday, May 28, 2021, 20:47 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X