ತನಗಾಗಿ ಜೀವತೆತ್ತ ಅಪ್ಪ: ಕೆಲಸಕ್ಕೆ ಹೋಗಲು ತಂದೆಗೆ ದುಬಾರಿ ಕವಾಸಕಿ ಬೈಕ್ ಗಿಫ್ಟ್ ಕೊಟ್ಟ ಖ್ಯಾತ ಕ್ರಿಕೆಟಿಗ!

ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ಆಗಿ ರಿಂಕು ಸಿಂಗ್ (Rinku Singh) ಗುರುತಿಸಿಕೊಂಡಿದ್ದಾರೆ. 2023ರ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್‌ನ ಯಶ್ ದಯಾಲ್ ಅವರ ಓವರ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಕಣಕ್ಕಿಳಿದಿದ್ದ ರಿಂಕು ಸಿಂಗ್, 5 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈ ಮೂಲಕ ರಾತ್ರೋರಾತ್ರಿ ಫುಲ್ ಫೇಮಸ್ ಆಗಿದ್ದರು. ಕಷ್ಟದಿಂದ ಮೇಲೆ ಬಂದಿದ್ದ ಅವರು, ಖ್ಯಾತ ಕ್ರಿಕೆಟಿಗರಾದ ಬಳಿಕ ದುಬಾರಿ ಬೆಲೆಯ ಕಾರುಗಳು ಹಾಗೂ ಹೊಸ ಮನೆಯನ್ನು ಖರೀದಿ ಮಾಡಿದ್ದರು. ಶೀಘ್ರದಲ್ಲೇ ಉ.ಪ್ರದೇಶ ಸಮಾಜವಾದಿ ಪಕ್ಷದ (ಎಸ್‌ಪಿ) ಸಂಸದೆ ಪ್ರಿಯಾ ಸರೋಜ್ ಅವರೊಂದಿಗೆ ಹಸೆಮಣೆ ಕೂಡ ಏರಲಿದ್ದಾರೆ.

ಇತ್ತೀಚೆಗೆ ರಿಂಕು ಸಿಂಗ್ ತಮ್ಮ ತಂದೆ ಖಂಚಂದ್ ಸಿಂಗ್‌ ಅವರಿಗೆ ನೂತನ ಐಷಾರಾಮಿ ಕವಾಸಕಿ ನಿಂಜಾ 400 ಸ್ಪೋರ್ಟ್ಸ್ (Kawasaki Ninja 400 sports) ಬೈಕ್‌ನ್ನು ಗಿಫ್ಟ್ ನೀಡಿದ್ದಾರೆ. ಖಂಚಂದ್ ಸಿಂಗ್‌ ಹೊಸ ಮೋಟಾರ್‌ಸೈಕಲ್ ಓಡಿಸಿಕೊಂಡು ಕೆಲಸಕ್ಕೆ ಹೋಗುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ. ಅವರು ವೃತ್ತಿಯಲ್ಲಿ ಗ್ಯಾಸ್ ಸಿಲಿಂಡರ್ ವಿತರಕರಾಗಿದ್ದಾರೆ.

Cricketer Rinku Singh Gifted To Kawasaki Ninja 400 Bike For His Father Details

ಕವಾಸಕಿ ನಿಂಜಾ 400 ಸ್ಪೋರ್ಟ್ಸ್ ಬೈಕ್‌ ವಿಶೇಷತೆಗಳೇನು: ಈ ಬೈಕ್ ರೂ.5.24 ಲಕ್ಷ (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಸದ್ಯ, ಈ ಮೋಟಾರ್‌ಸೈಕಲ್ ಮಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಕೆಲವೊಂದು ಡೀಲರ್‌ಶಿಪ್‌ಗಳಲ್ಲಿ ಮಾತ್ರ ಖರೀದಿಗೆ ದೊರೆಯುತ್ತದೆ ಎಂದು ತಿಳಿದುಬಂದಿದೆ. ಇದು ಮಲ್ಟಿ-ಫಂಕ್ಷನ್ ಎಲ್‌ಸಿಡಿ ಸ್ಕ್ರೀನ್ ಸೇರಿದಂತೆ ವಿವಿಧ ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಈ ಬೈಕ್, 399 ಸಿಸಿ ಪ್ಯಾರಲಲ್-ಟ್ವಿನ್ ಲಿಕ್ವಿಡ್-ಕೋಲ್ಡ್ ಪೆಟ್ರೋಲ್ ಎಂಜಿನ್ ಹೊಂದಿದೆ. 45.4 ಪಿಎಸ್ ಅಶ್ವ ಶಕ್ತಿ (ಹಾರ್ಸ್ ಪವರ್) ಮತ್ತು 37 ಎನ್ಎಂ (ನ್ಯೂಟನ್ ಮೀಟರ್) ಪೀಕ್ ಟಾರ್ಕ್ ಹೊರಹಾಕುತ್ತದೆ. 6-ಸ್ಪೀಡ್ ಮ್ಯೂನುವಲ್ ಗೇರ್‌ಬಾಕ್ಸ್‌ನ್ನು ಪಡೆದಿದೆ. 24.18 ಕೆಎಂಪಿಎಲ್‌ವರೆಗೆ ಮೈಲೇಜ್ ನೀಡುತ್ತದೆ.

Cricketer Rinku Singh Gifted To Kawasaki Ninja 400 Bike For His Father Details

ನೂತನ ಕವಾಸಕಿ ನಿಂಜಾ 400 ಮೋಟಾರ್‌ಸೈಕಲ್, ಮುಂಭಾಗ (ಫ್ರಂಟ್) ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗ (ರೇರ್) ಪ್ರಿಲೋಡ್ ಅಡ್ಜಸ್ಟಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಸವಾರರ ಸುರಕ್ಷತೆಗಾಗಿ ಡಬಲ್ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. ಜೊತೆಗೆ 17-ಇಂಚಿನ ಅಲಾಯ್‌ ವೀಲ್‌ಗಳನ್ನು ತನ್ನದಾಗಿಸಿಕೊಂಡಿದೆ.

ಕ್ರಿಕೆಟಿಗ ರಿಂಕು ಸಿಂಗ್ ಈ ಜನಪ್ರಿಯ ಕಾರುಗಳ ಮಾಲೀಕರು ಆಗಿದ್ದಾರೆ. ಅವರ ಬಳಿ ಮಹೀಂದ್ರಾ ಸ್ಕಾರ್ಪಿಯೋ ಎನ್ (Mahindra Scorpio N) ಎಸ್‌ಯುವಿ ಸಹ ಇದೆ. ಈ ಕಾರು, ರೂ.13.85 ಲಕ್ಷದಿಂದ ರೂ.24.54 ಲಕ್ಷ ಎಕ್ಸ್ ಶೋರೂಂ ದರವನ್ನು ಹೊಂದಿದೆ. ಇದು 2-ಲೀಟರ್ ಟರ್ಬೊ ಪೆಟ್ರೋಲ್ ಹಾಗೂ 2.2-ಲೀಟರ್ ಎಂಜಿನ್‌ನ್ನು ಪಡೆದಿದೆ. 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Cricketer Rinku Singh Gifted To Kawasaki Ninja 400 Bike For His Father Details

ರಿಂಕು ಸಿಂಗ್ ಜನಪ್ರಿಯ ಟೊಯೊಟಾ ಇನ್ನೋವಾ (Toyota Innova) ಎಂಪಿವಿಯ ಒಡೆಯರು ಆಗಿದ್ದಾರೆ. ಇದು ಹೈಕ್ರಾಸ್ ಮತ್ತು ಕ್ರಿಸ್ಟಾ ಎಂಬ ಎರಡು ವಿಧದಲ್ಲಿ ಖರೀದಿಗೆ ದೊರೆಯುತ್ತದೆ. ಇನ್ನೋವಾ ಹೈಕ್ರಾಸ್ ರೂ.19.94 ಲಕ್ಷದಿಂದ ರೂ.31.34 ಲಕ್ಷ ಹಾಗೂ ಇನ್ನೋವಾ ಕ್ರಿಸ್ಟಾ ರೂ.19.99 ಲಕ್ಷದಿಂದ ರೂ.26.55 ಲಕ್ಷ (ಎಕ್ಸ್ ಶೋರೂಂ) ದರವನ್ನು ಪಡೆದಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊ ಗಳನ್ನು ಪಡೆಯಲು ನಮ್ಮ ಫೇಸ್‌ ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, January 21, 2025, 12:19 [IST]
English summary
Cricketer rinku singh gifted to kawasaki ninja 400 bike for his father details
Read more on offbeat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+