ರೂ.2.45 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ಕ್ರಿಕೆಟಿಗ ಶ್ರೇಯಸ್ ಅಯ್ಯರ್

ವಾಹನಗಳ ಬಗ್ಗೆ ಕ್ರೇಜ್ ಅನ್ನೋದು ಯಾರಿಗೆ ಇರಲ್ಲ ಹೇಳಿ, ಅದರಲ್ಲಿಯು ಸಿನಿಮಾ ಸೆಲಬ್ರಿಟಿಗಳಿಗೆ ಮತ್ತು ಕ್ರಿಕೆಟಿಗರಿಗೆ ಈ ಕ್ರೇಜ್ ಸ್ವಲ್ಪ ಹೆಚ್ಚು ಇರುತ್ತೆ. ತಾವು ಹೆಚ್ಚಾಗಿ ಐಷಾರಾಮಿ ಕಾರುಗಳಲ್ಲಿ ಓಡಾಡಲು ಇಷ್ಟ ಪಡುತ್ತಾರೆ. ಇದರಿಂದ ಮಾರುಕಟ್ಟೆಗೆ ಲಗ್ಗೆ ಇಡುವ ಹೊಸ ಐಷಾರಾಮಿ ಕಾರುಗಳನ್ನು ಖರೀದಿಸುವುದು ಸೆಲಬ್ರಿಟಿಗಳಿಗೆ ಒಂದು ಟ್ರೆಂಡ್ ಆಗಿದೆ.

ರೂ.2.45 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ಕ್ರಿಕೆಟಿಗ ಶ್ರೇಯಸ್ ಅಯ್ಯರ್

ಇತ್ತೀಚೆಗೆ ಕ್ರಿಕೆಟಿಗ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಹೊಸ ಮರ್ಸಿಡಿಸ್-ಎಎಂಜಿ ಜಿ63 ಎಸ್‌ಯುವಿಯನ್ನು ಅನ್ನು ಖರೀದಿಸಿದ್ದಾರೆ. ಇದರ ಬೆಲೆ ಎಕ್ಸ್ ಶೋ ರೂಂ ಪ್ರಕಾರ ಬರೋಬ್ಬರಿ ರೂ.2.45 ಕೋಟಿಯಾಗಿದೆ..ಶ್ರೇಯಸ್ ಅಯ್ಯರ್ ಖರೀದಿಸಿದ ಮರ್ಸಿಡಿಸ್-ಎಎಂಜಿ ಜಿ63 ಎಸ್‌ಯುವಿಯು ಸೆಲೆನೈಟ್ ಗ್ರೇ ಮೆಟಾಲಿಕ್ ಬಣ್ಣವನ್ನು ಹೊಂದಿದೆ. ಈ ಐಷಾರಾಮಿ ಎಸ್‍ಯುವಿಯು ಅನೇಕ ಸೆಲಬ್ರಿಟಿಗಳ ಮೆಚ್ಚಿನ ಆಯ್ಕೆಯಾಗಿದೆ.

ರೂ.2.45 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ಕ್ರಿಕೆಟಿಗ ಶ್ರೇಯಸ್ ಅಯ್ಯರ್

ಮರ್ಸಿಡಿಸ್ ಬೆಂಝ್ ಭಾರತ ಮಾತ್ರವಲ್ಲದೆ ಇಡೀ ವಿಶ್ವದಲ್ಲೇ ಅತಿ ದೊಡ್ಡ ಐಷಾರಾಮಿ ಕಾರು ಬ್ರಾಂಡ್‌ಗಳಲ್ಲಿ ಒಂದಾಗಿದೆ. ಅವರು ಇದೀಗ ಅನೇಕ ವಾಹನಗಳನ್ನು ಮಾರಾಟ ಮಾಡುತ್ತಿದ್ದಾರೆ. ಮರ್ಸಿಡಿಸ್ ಬೆಂಝ್ ಕಂಪನಿಯ ಜನಪ್ರಿಯ ಎಸ್‍ಯುವಿಗಳಲ್ಲಿ ಜಿ-ವ್ಯಾಗನ್. ಕೂಡ ಒಂದಾಗಿದೆ.

ರೂ.2.45 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ಕ್ರಿಕೆಟಿಗ ಶ್ರೇಯಸ್ ಅಯ್ಯರ್

ಮರ್ಸಿಡಿಸ್ ಬೆಂಝ್ ಜಿ-ವ್ಯಾಗನ್ ಅನೇಕ ವರ್ಷಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಆದರೆ ಕಂಪನಿಯು ಈ ಎಸ್‍ಯುವಿಯ ವಿನ್ಯಾಸವನ್ನು ಹೆಚ್ಚು ಬದಲಾಯಿಸಲಿಲ್ಲ. ಇದು ರೆಟ್ರೋದಂತೆ ಕಾಣುತ್ತದೆ ಆದರೆ ಪ್ರೀಮಿಯಂ ಲುಕ್ ಅನ್ನು ಹೊಂದಿದೆ,.

ರೂ.2.45 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ಕ್ರಿಕೆಟಿಗ ಶ್ರೇಯಸ್ ಅಯ್ಯರ್

ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿಯಲ್ಲಿ 4.0 ಲೀಟರ್ ವಿ8 ಬಿಟುರ್ಬೊ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 577 ಬಿಎಚ್‌ಪಿ ಪವರ್ ಮತ್ತು 850 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ರೂ.2.45 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ಕ್ರಿಕೆಟಿಗ ಶ್ರೇಯಸ್ ಅಯ್ಯರ್

ಇನ್ನು ಈ ಎಂಜಿನ್ ನೊಂದಿಗೆ 9-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಜೋಡಿಸಲಾಗಿದೆ. ಮರ್ಸಿಡಿಸ್-ಎಎಂಜಿ ಜಿ 63 ಎಸ್‍ಯುವಿಯು ಸಮರ್ಥ ಆಫ್-ರೋಡ್ ಎಸ್‍ಯುವಿಯಾಗಿದೆ. ಆಟೋ ತಯಾರಕರ 4 ಮ್ಯಾಟಿಕ್ ಆಲ್-ವೀಲ್-ಡ್ರೈವ್ ಸಿಸ್ಟಂ ಅನ್ನು ಹೊಂದಿದೆ.

ರೂ.2.45 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ಕ್ರಿಕೆಟಿಗ ಶ್ರೇಯಸ್ ಅಯ್ಯರ್

ಈ ಐಷಾರಾಮಿ ಎಸ್‍ಯುವಿಯು ವೃತ್ತಾಕಾರದ ಹೆಡ್‌ಲ್ಯಾಂಪ್‌ಗಳೊಂದಿಗೆ ಸಂಯೋಜಿತ ಎಲ್‌ಇಡಿ ಡಿಆರ್‌ಎಲ್‌ಗಳು, ಪನಾಮೆರಿಕಾನಾ ಗ್ರಿಲ್ ಮತ್ತು ನಾಲ್ಕು ದಶಕಗಳಿಂದ ಬದಲಾಯಿಸದ ಬಾಕ್ಸಿ ಸಿಲೂಯೆಟ್ ಅನ್ನು ಹೊಂದಿದೆ.

ರೂ.2.45 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ಕ್ರಿಕೆಟಿಗ ಶ್ರೇಯಸ್ ಅಯ್ಯರ್

ಮರ್ಸಿಡಿಸ್-ಎಎಂಜಿ ಜಿ63 ಎಸ್‌ಯುವಿ ಹೊರತಾಗಿ, ಜಿ-ಕ್ಲಾಸ್ ಜಿ350ಡಿಯ ಎಂಬ ಎಸ್‍ಯುವಿಯು ಮಾರಾಟವಾಗುತ್ತಿದೆ. ಇದರಲ್ಲಿ ಲೀಟರ್ ವಿ6 ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿನ್ 281 ಬಿಹೆಚ್‍ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಈ ಮರ್ಸಿಡಿಸ್ ಬೆಂಝ್ 350ಡಿ ಎಸ್‍ಯುವಿಯ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ,1.64 ಕೋಟಿಯಾಗಿದೆ

ರೂ.2.45 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ಕ್ರಿಕೆಟಿಗ ಶ್ರೇಯಸ್ ಅಯ್ಯರ್

ಈ 350 ಡಿ ಎಸ್‍‍ಯು‍ವಿ 241 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಮತ್ತು 700 ಎಂಎಂ ವಾಟರ್ ವೇಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಮರ್ಸಿಡಿಸ್ ಬೆಂಝ್ ಜಿ350ಡಿ ಎಸ್‍‍ಯು‍ವಿಯು ಬಾಕ್ಸೀ ಮತ್ತು ಐಕಾನಿಕ್ ವಿನ್ಯಾಸವನ್ನು ಹೊಂದಿದೆ. ಈ ಐಕಾನಿಕ್ ಆಫ್-ರೋಡರ್ ನಲ್ಲಿ ಸುರಕ್ಷತೆಗಾಗಿ 8 ಏರ್‍‍ಬ್ಯಾಗ್‍‍ಗಳು, ಇಎಸ್‍ಸಿ, ಎ‍ಬಿಎಸ್ ಜೊತೆ ಇ‍ಬಿಡಿ,ಬ್ರೇಕ್ ಅಸಿಸ್ಟ್, ಟ್ರ್ಯಾಕ್ಷನ್ ಕಂಟ್ರೋಲ್ ಮತ್ತು ಹಿಲ್-ಸ್ಟಾರ್ಟ್ ಅಸಿಸ್ಟ್ ಅನ್ನು ಒಳಗೊಂಡಿದೆ.

ರೂ.2.45 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ಕ್ರಿಕೆಟಿಗ ಶ್ರೇಯಸ್ ಅಯ್ಯರ್

ಭಾರತದ ಕೆಲವು ಪ್ರಸಿದ್ದ ಸೆಲಬ್ರಿಟಿಗಳಾದ ಜಿಮ್ಮಿ ಶೆರ್ಗಿಲ್, ಸಾರಾ ಅಲಿ ಖಾನ್, ಹಾರ್ದಿಕ್ ಪಾಂಡೆ, ಅಖಿಲ್ ಅಕ್ಕಿನೇನಿ, ರಣಬೀರ್ ಕಪೂರ್, ಅನಂತ್ ಅಂಬಾನಿ, ಪವನ್ ಕಲ್ಯಾಣ್, ದುಲ್ಕರ್ ಸಲ್ಮಾನ್ ಮತ್ತು ಆಸಿಫ್ ಅಲಿ ಜಿ-ವ್ಯಾಗನ್ ಎಸ್‍ಯುವಿಯನ್ನು ಹೊಂದಿದ್ದಾರೆ.

ರೂ.2.45 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ಕ್ರಿಕೆಟಿಗ ಶ್ರೇಯಸ್ ಅಯ್ಯರ್

ಆಡಿ ಎಸ್5

ಶ್ರೇಯಸ್ ಅಯ್ಯರ್ ವಾಹನ ಉತ್ಸಾಹಿಯಂತೆ ಕಾಣುತ್ತಾರೆ. ಅವರು ಆಡಿ ಎಸ್5 ಅನ್ನು ಸಹ ಹೊಂದಿದ್ದಾರೆ. ಈ ಕಾರು ನಾರ್ಡೊ ಗ್ರೇ ಮತ್ತು ಗೋಲ್ಡನ್ ಕಾಪರ್ ಬಣ್ಣದಲ್ಲಿದೆ. ಈ ಕಾರಿನಲ್ಲಿ 3.0-ಲೀಟರ್ ಟರ್ಬೋಚಾರ್ಜ್ಡ್ ವಿ6 ಎಂಜಿನ್‌ ಅನ್ನು ಹೊಂದಿದೆ.

ರೂ.2.45 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ಕ್ರಿಕೆಟಿಗ ಶ್ರೇಯಸ್ ಅಯ್ಯರ್

ಈ ಎಂಜಿನ್ 348 ಬಿಹೆಚ್‍ಪಿ ಪವರ್ ಮತ್ತು 500 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು ಗಂಟೆಗೆ 250 ಕಿಮೀ ವೇಗವನ್ನು ಹೊಂದಿದೆ ಮತ್ತು ಇದು 4.8 ಸೆಕೆಂಡುಗಳಲ್ಲಿ 100 ಕಿಮೀ ವೇಗವನ್ನು ಪಡೆದುಕೊಳ್ಳುತ್ತದೆ. ಆಡಿನ ಕ್ವಾಟ್ರೊ ಆಲ್-ವೀಲ್ ಡ್ರೈವ್ ಸಿಸ್ಟಮ್ ಅನ್ನು ಬಳಸಿಕೊಂಡು ಎಲ್ಲಾ ನಾಲ್ಕು ಚಕ್ರಗಳಿಗೆ ಪವರ್ ಕಳುಹಿಸುತ್ತದೆ. ಗೇರ್ ಬಾಕ್ಸ್ 8-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ಮಿಷನ್ ಆಗಿದೆ.

ರೂ.2.45 ಕೋಟಿ ಮೌಲ್ಯದ ಮರ್ಸಿಡಿಸ್-ಎಎಂಜಿ ಜಿ63 ಎಸ್‍ಯುವಿ ಖರೀದಿಸಿದ ಕ್ರಿಕೆಟಿಗ ಶ್ರೇಯಸ್ ಅಯ್ಯರ್

ಲ್ಯಾಂಬೂರ್ಗಿನಿ ಹುರಾಕನ್

ಶ್ರೇಯಸ್ ಅಯ್ಯರ್ ಕೂಡ ಲ್ಯಾಂಬೂರ್ಗಿನಿ ಹುರಾಕನ್ ಅನ್ನು ಹೊಂದಿದ್ದಾರೆ. ಅವರು ಯಾವ ರೂಪಾಂತರವನ್ನು ಆರಿಸಿಕೊಂಡರು ಎಂಬುದು ನಮಗೆ ತಿಳಿದಿಲ್ಲ. ಈ ಸ್ಪೋರ್ಟ್ಸ್ ಕಾರಿನ ಬೆಲೆ ಎಕ್ಸ್ ಶೋ ರೂಂ ಪ್ರಕಾರ ಸುಮಾರು ರೂ.3.2 ಕೋಟಿಯಾಗಿದೆ. ಈ ಖಾರಿನಲ್ಲಿ 5.2-ಲೀಟರ್, ನ್ಯಾಚುರಲ್ ಆಸ್ಪಿರೇಟೆಡ್ ಯುನಿಟ್ ಅನ್ನು ಹೊಂದಿದೆ. ಈ ಎಂಜಿನ್ 630 ಬಿಹೆಚ್‍ಪಿ ಪವರ್ ಮತ್ತು 600 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Most Read Articles

Kannada
English summary
Cricketer shreyas iyer buys new mercedes amg g63 suv price details
Story first published: Thursday, June 2, 2022, 19:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X