ಲಾಕ್‌ಡೌನ್‌ ಅವಧಿಯನ್ನು ವಿಶಿಷ್ಟವಾಗಿ ಕಳೆಯುತ್ತಿರುವ ಖ್ಯಾತ ಕ್ರಿಕೆಟಿಗ

ಭಾರತದ ಹಲವು ನಗರಗಳಲ್ಲಿ ಲಾಕ್‌ಡೌನ್ ಇನ್ನೂ ಜಾರಿಯಲ್ಲಿದೆ. ಜನರು ಲಾಕ್‌ಡೌನ್ ಅವಧಿಯಲ್ಲಿ ಹಲವಾರು ರೀತಿಯ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕ್ರಿಕೆಟ್ ಆಟಗಾರರು ಸಹ ಹಲವು ರೀತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಲಾಕ್‌ಡೌನ್‌ ಅವಧಿಯನ್ನು ವಿಶಿಷ್ಟವಾಗಿ ಕಳೆಯುತ್ತಿರುವ ಖ್ಯಾತ ಕ್ರಿಕೆಟಿಗ

ಕೆಲವು ದಿನಗಳ ಹಿಂದಷ್ಟೇ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂಎಸ್ ಧೋನಿ ಲಾಕ್‌ಡೌನ್‌ ಅವಧಿಯಲ್ಲಿ ಹೊಸ ಟ್ರಾಕ್ಟರ್ ಖರೀದಿಸಿ, ತಮ್ಮ ತೋಟದ ಮನೆಯಲ್ಲಿ ಚಾಲನೆ ಮಾಡುತ್ತಿರುವುದು ಕಂಡುಬಂದಿತ್ತು. ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಚೆನ್ನೈ ಸೂಪರ್ ಕಿಂಗ್ಸ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿತ್ತು. ಈ ವೀಡಿಯೊದಲ್ಲಿ ಧೋನಿರವರು ತಮ್ಮ ಹೊಸ ಟ್ರ್ಯಾಕ್ಟರ್ ಚಾಲನೆ ಮಾಡುವುದನ್ನು ಆನಂದಿಸುತ್ತಿದ್ದರು.

ಲಾಕ್‌ಡೌನ್‌ ಅವಧಿಯನ್ನು ವಿಶಿಷ್ಟವಾಗಿ ಕಳೆಯುತ್ತಿರುವ ಖ್ಯಾತ ಕ್ರಿಕೆಟಿಗ

ಈಗ ಮತ್ತೊಬ್ಬ ಕ್ರಿಕೆಟ್ ಆಟಗಾರ ಸಹ ಇದೇ ಹಾದಿಯನ್ನು ಹಿಡಿದಿದ್ದಾರೆ. ಅವರು ಟ್ರ್ಯಾಕ್ಟರ್ ಚಾಲನೆ ಮಾಡುತ್ತಿಲ್ಲ. ಬದಲಿಗೆ ತಮ್ಮ ಬಹು ಕೋಟಿ ಮೌಲ್ಯದ ಕಾರನ್ನು ತೊಳೆಯುತ್ತಿದ್ದಾರೆ. ಹೌದು ಕ್ರಿಕೆಟಿಗ ಸುರೇಶ್ ರೈನಾರವರು ತಮ್ಮ ಕಾರನ್ನು ತೊಳೆಯುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

MOST READ:ಒಂದು ಸಾವಿರ ರೂಪಾಯಿ ಪಾವತಿಸಿ ಈ ಸ್ಕೂಟರ್ ಬುಕ್ ಮಾಡಿ

ಲಾಕ್‌ಡೌನ್‌ ಅವಧಿಯನ್ನು ವಿಶಿಷ್ಟವಾಗಿ ಕಳೆಯುತ್ತಿರುವ ಖ್ಯಾತ ಕ್ರಿಕೆಟಿಗ

ಈ ವೀಡಿಯೊದಲ್ಲಿ ಅವರ ಇನ್ನಿತರ ಕಾರುಗಳಾದ ಹ್ಯುಂಡೈ ವರ್ನಾ, ಮಾರುತಿ ಸುಜುಕಿ ಸ್ವಿಫ್ಟ್ ಕಾರುಗಳನ್ನು ನಿಲ್ಲಿಸಿರುವುದನ್ನು ಕಾಣಬಹುದು. ಖುಷಿಯಿಂದ ಕಾರುಗಳನ್ನು ತೊಳೆಯುವುದರ ಜೊತೆಗೆ ತಮ್ಮ ಮೇಲೆ ನೀರು ಬಿಟ್ಟು ಕೊಂಡು ಮಸ್ತಿ ಮಾಡುತ್ತಿದ್ದಾರೆ.

ಲಾಕ್‌ಡೌನ್‌ ಅವಧಿಯನ್ನು ವಿಶಿಷ್ಟವಾಗಿ ಕಳೆಯುತ್ತಿರುವ ಖ್ಯಾತ ಕ್ರಿಕೆಟಿಗ

ಸುರೇಶ ರೈನಾ ಅವರ ಫೋರ್ಡ್ ಮಸ್ಟಾಂಗ್ ಕಾರು ಹಳದಿ ಬಣ್ಣದಲ್ಲಿ ಆಕರ್ಷಕವಾಗಿ ಕಾಣುತ್ತದೆ. ಈ ಕಾರು ಕಪ್ಪು ಬಣ್ಣದ ಅಲಾಯ್ ವ್ಹೀಲ್ ಗಳನ್ನು ಹೊಂದಿದೆ. ಇದರಿಂದ ಕಾರಿನ ಆಕರ್ಷಣೆ ಮತ್ತಷ್ಟು ಹೆಚ್ಚಾಗಿದೆ. ಈ ಕಾರುಗಳನ್ನು ಅವರು ತಮ್ಮ ಫಾರ್ಮ್ ಹೌಸ್‌ನಲ್ಲಿ ತೊಳೆಯುತ್ತಿದ್ದಾರೆ ಎಂದು ಹೇಳಲಾಗಿದೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಲಾಕ್‌ಡೌನ್‌ ಅವಧಿಯನ್ನು ವಿಶಿಷ್ಟವಾಗಿ ಕಳೆಯುತ್ತಿರುವ ಖ್ಯಾತ ಕ್ರಿಕೆಟಿಗ

ಫೋರ್ಡ್ ಮಸ್ಟಾಂಗ್ ಕಾರಿನ ಬಗ್ಗೆ ಹೇಳುವುದಾದರೆ ಈ ಕಾರಿನ ಆರಂಭಿಕ ಬೆಲೆ ಭಾರತದ ಎಕ್ಸ್ ಶೋ ರೂಂ ದರದಂತೆ ರೂ.74 ಲಕ್ಷಗಳಾಗಿದೆ. ಫೋರ್ಡ್ ಮಸ್ಟಾಂಗ್ ಕಾರು ಕೇವಲ 4 ಸೆಕೆಂಡುಗಳಲ್ಲಿ 0-60 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

ಲಾಕ್‌ಡೌನ್‌ ಅವಧಿಯನ್ನು ವಿಶಿಷ್ಟವಾಗಿ ಕಳೆಯುತ್ತಿರುವ ಖ್ಯಾತ ಕ್ರಿಕೆಟಿಗ

ಈ ಕಾರಿನಲ್ಲಿ ನಾರ್ಮಲ್, ಸ್ಪೋರ್ಟ್, ಸ್ಪೋರ್ಟ್ ಪ್ಲಸ್ ಹಾಗೂ ಸ್ನೋ /ವೇಟ್ ಎಂಬ ನಾಲ್ಕು ರೈಡಿಂಗ್ ಮೋಡ್ ಗಳಿವೆ. ಫೋರ್ಡ್ ಮಸ್ಟಾಂಗ್ ಕಾರು ಲೆಕ್ಟ್ರಾನಿಕ್ ಲೈನ್-ಲಾಕ್, 8-ಇಂಚಿನ ಸಿಂಕ್ 3 ಇನ್ಫೋಟೇನ್ ಮೆಂಟ್ ಸಿಸ್ಟಂ, ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಕನೆಕ್ಟಿವಿಟಿ, 9 ಸ್ಪೀಕರ್, ಹೆಚ್ಐಡಿ (ಹೈ ಇಂಟೆನ್ ಸಿಟಿ ಡಿಸ್ಚಾರ್ಜ್) ಪ್ರೊಜೆಕ್ಟರ್ ಹೆಡ್ ಲ್ಯಾಂಪ್ ಸೇರಿದಂತೆ ಹಲವಾರು ಫೀಚರ್ ಗಳನ್ನು ಹೊಂದಿದೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಫೋರ್ಡ್ ಮಸ್ಟಾಂಗ್ ಕಾರಿನಲ್ಲಿ 5.0-ಲೀಟರಿನ ಟಿ-ವಿಸಿಟಿ ವಿ8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 401 ಬಿಹೆಚ್‌ಪಿ ಪವರ್ ಹಾಗೂ 515 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು 6-ಸ್ಪೀಡಿನ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಲಾಕ್‌ಡೌನ್‌ ಅವಧಿಯನ್ನು ವಿಶಿಷ್ಟವಾಗಿ ಕಳೆಯುತ್ತಿರುವ ಖ್ಯಾತ ಕ್ರಿಕೆಟಿಗ

ಸುರಕ್ಷತೆಗಾಗಿ ಫೋರ್ಡ್ ಮಸ್ಟಾಂಗ್ ಕಾರಿನಲ್ಲಿ 8 ಏರ್‌ಬ್ಯಾಗ್, ಆಂಟಿಲಾಕ್ ಬ್ರೇಕಿಂಗ್ ಸಿಸ್ಟಂ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಐಎಸ್‌ಒಫಿಕ್ಸ್ ಚೈಲ್ಡ್ ಸೀಟ್ ಆಂಕರ್‌ನಂತಹ ಸುರಕ್ಷತಾ ಫೀಚರ್ ಗಳನ್ನು ನೀಡಲಾಗಿದೆ.

Article Published On: Wednesday, July 22, 2020, 10:31 [IST]
English summary
Cricketer Suresh Raina washing his Ford Mustang car. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+